ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Summer Tips: ಬೇಸಿಗೆಯಲ್ಲಿ ಹಾರ್ಮೋನ್ ಅಸಮತೋಲನ ಸಮಸ್ಯೆಗೆ ಈ ಫುಡ್‌ ಸೇವಿಸಿ

ದೇಹದ ದೈಹಿಕ ಮಾನಸಿಕ ಆರೋಗ್ಯಕ್ಕೆ ಒತ್ತು ನೀಡುವಂತೆ ಹಾರ್ಮೋನುಗಳು ಸಮತೋಲನಗೊಳಿಸುವ ಅಂಶಗಳ ಮೇಲೂ ಗಮನ ಹರಿಸುವುದು ಅತ್ಯವಶ್ಯಕವಾಗಿದೆ‌. ದೇಹದ ಹಾರ್ಮೋನುಗಳ ಮೇಲೆ ಆಹಾರ ಕ್ರಮ ಪ್ರಭಾವ ಬೀರಲಿದೆ. ಅದರಲ್ಲಿಯೂ ಬೇಸಿಗೆಯಲ್ಲಿ ಹಾರ್ಮೋನುಗಳ ಆರೋಗ್ಯ ವೃದ್ಧಿಗಾಗಿ ಉತ್ತಮ ಆಹಾರ ಸೇವಿಸಬೇಕಾಗುತ್ತದೆ..

ಹಾರ್ಮೋನ್ ಅಸಮತೋಲನಕ್ಕೆ ಪರಿಹಾರ ಕ್ರಮ ಇಲ್ಲಿದೆ

Profile Pushpa Kumari May 10, 2025 7:30 AM

ನವದೆಹಲಿ: ಪ್ರತಿಯೊಬ್ಬರ ದೇಹದ ಆರೋಗ್ಯದ ಮೇಲೆ ಹಾರ್ಮೋನುಗಳು ಮಹತ್ವದ ಪರಿಣಾಮ ಬೀರಲಿದೆ. ನಮ್ಮ ಮನಸ್ಥಿತಿಯಿಂದ ಹಿಡಿದು ನಮ್ಮ ದೇಹದ ಚಯಾಪಚಯ ಕ್ರಿಯೆವರೆಗೂ ಹಾರ್ಮೋನುಗಳು ಪ್ರಭಾವ ಬೀರುತ್ತದೆ. ಹೀಗಾಗಿ ದೇಹದ ದೈಹಿಕ ಮಾನಸಿಕ ಆರೋಗ್ಯಕ್ಕೆ ಒತ್ತು ನೀಡುವಂತೆ ಹಾರ್ಮೋನುಗಳು ಸಮತೋಲನಗೊಳಿಸುವ ಅಂಶಗಳ ಮೇಲೂ ಗಮನ ಹರಿಸುವುದು ಅತ್ಯವಶ್ಯಕವಾಗಿದೆ‌. ದೇಹದ ಹಾರ್ಮೋನುಗಳ ಮೇಲೆ ಆಹಾರ ಕ್ರಮ ಪ್ರಭಾವ ಬೀರಲಿದೆ. ಅದರಲ್ಲಿಯೂ ಬೇಸಿಗೆಯಲ್ಲಿ (Summer Tips) ಹಾರ್ಮೋನುಗಳ ಆರೋಗ್ಯ ವೃದ್ಧಿಗಾಗಿ ಉತ್ತಮ ಆಹಾರ ಸೇವಿಸಬೇಕಾಗುತ್ತದೆ.

ಜಲ್ಜೀರಾ ಸೇವನೆ

ಬೇಸಿಗೆ ಕಾಲದಲ್ಲಿ ದೇಹ ಹೆಚ್ಚು ತಂಪಾಗಿರಲು ದ್ರವ ಆಹಾರಗಳಿಗೆ ಅಧಿಕ ಒತ್ತು ನೀಡಬೇಕು. ಜಲ್ಜೀರಾ ಸೇವಿಸು ವುದರಿಂದ ಹೊಟ್ಟೆಯ ಗ್ಯಾಸ್ಟ್ರಿಕ್‌, ಅಸಿಡಿಟಿ ಸಮಸ್ಯೆ ಪರಿಹಾರವಾಗಲಿದೆ. ಜೀರಿಗೆ, ಪುದೀನ ಮಿಕ್ಸ್ ಜಲ್ ಜೀರಾ ಸೇವಿಸಿದರೆ ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆ ಸಮಸ್ಯೆ ನಿವಾರಣೆ ಆಗಲಿದೆ. ಬೇಸಿಗೆ ಕಾಲಕ್ಕೆ ಜಲ್ಜೀರಾ ಸೇವನೆ ಮಾಡಿದರೆ ನಿಮ್ಮ ಕರುಳು ಮತ್ತು ಹಾರ್ಮೋನ್ ಆರೋಗ್ಯ ವೃದ್ಧಿ ಆಗಲಿದೆ.

ಗೊಂಡ್ ಕಟೀರ

ದೇಹವನ್ನು ಸದಾ ಕಾಲ ನೈಸರ್ಗಿಕವಾಗಿ ತಂಪಾಗಿಸುವ ಅಂಶವು ಗೊಂಡ್ ಕಟೀರದಲ್ಲಿದ್ದು ಇದನ್ನು ಬೇಸಿಗೆ ಕಾಲದಲ್ಲಿ ನಿಯಮಿತವಾಗಿ ಸೇವಿಸುವುದರಿಂದ ಹಾರ್ಮೋನುಗಳ ಆರೋಗ್ಯವೃದ್ಧಿಯಾಗಲಿದೆ.ಬೇಸಿಗೆ ಕಾಲದಲ್ಲಿ ನಮ್ಮ ದೇಹದ ಉಷ್ಣತೆ ನಿಯಂತ್ರಿಸಿ, ಉರಿಯೂತ, ತಲೆಸುತ್ತು ಇತ್ಯಾದಿ ಅಸ್ವಸ್ಥತೆ ಸಮಸ್ಯೆ ನಿವಾರಣೆ ಮಾಡಲಿದೆ.

ಜೋಳ

ಜೋಳ ಸೇವಿಸುವುದನ್ನು ಬಹುತೇಕರು ಇಷ್ಟಪಡುತ್ತಾರೆ. ಜೋಳದ ಸೇವನೆ ಬಾಯಿಗೆ ರುಚಿಕೊಡುವುದು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಕಾರಿ ಆಗಲಿದೆ. ಇದರಲ್ಲಿ ಪ್ರೋಟೀನ್ ಮತ್ತು ಫೈಬರ್‌ನ ಅಂಶ ಹೇರಳ ವಾಗಿದೆ. ಇದು ನಿಮಗೆ ಹಾರ್ಮೋನು ಅಸಮತೋಲನ ಸಮಸ್ಯೆಗಳನ್ನು ನಿವಾರಿಸಲಿದೆ. ಚಯಾಪಚಯ ಕ್ರಿಯೆಯನ್ನು ಬೆಂಬಲಿಸುತ್ತದೆ - ಇದು ಇನ್ಸುಲಿನ್ ಪ್ರತಿರೋಧ ಅಥವಾ ಥೈರಾಯ್ಡ್ ಸಮಸ್ಯೆಗಳಿರುವ ಜನರಿಗೆ ಮುಖ್ಯವಾಗಿದೆ.

ಕಲ್ಲಂಗಡಿ

ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಯಥೇಚ್ಛವಾಗಿದ್ದು ಇದರ ಸೇವನೆ ಮಾಡುವುದರಿಂದ ಸುಸ್ತು, ಬಾಯಾರಿಕೆ, ತಲೆ ಸುತ್ತು ಇತ್ಯಾದಿ ಸಮಸ್ಯೆ ನಿವಾರಣೆ ಆಗಲಿದೆ ಅದರ ಜೊತೆಗೆ ದೇಹದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗಲಿದೆ. ಬೇಸಿಗೆ ಕಾಲದಲ್ಲಿ ಕಂಡು ಬರುವ ಅಲರ್ಜಿ, ತ್ವಚೆಯ ಶುಷ್ಕತೆ, ಹಾರ್ಮೋನ್ ಅಸಮತೋಲನ ಇತ್ಯಾದಿ ಸಮಸ್ಯೆ ಕೂಡ ಕಲ್ಲಂಗಡಿ ಹಣ್ಣಿನ ಸೇವನೆ ಮಾಡುವುದರಿಂದ ಪರಿಹಾರ ಕಾಣಲಿದೆ.

ನೇರಳೆ ಹಣ್ಣು

ನೇರಳೆ ಹಣ್ಣು ಎನ್ನುವುದು ಬಹುತೇಕರಿಗೆ ಬಹಳ ಇಷ್ಟ. ಇದನ್ನು ಬ್ಲ್ಯಾಕ್ ಬೆರಿ ಎಂದು ಸಹ ಕರೆಯುತ್ತಾರೆ. ನೇರಳೆ ಹಣ್ಣಿನಲ್ಲಿ ಕಡಿಮೆ ಗ್ಲೈಸೆಮಿಕ್ ಅಂಶವಿದ್ದು ದೇಹದ ಆರೋಗ್ಯಕ್ಕೆ ಬಹಳ ಅನುಕೂಲಕರ ಪೋಚಕಾಂಶ ಈ ಹಣ್ಣಿನಲ್ಲಿ ಇರಲಿದೆ. ಇನ್ಸೂಲಿನ್ ಮಟ್ಟ ಬಹಳ ಕಡಿಮೆ ಇದ್ದು ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು ನೇರಳೆ ಹಣ್ಣು ಬಹಳ ಸಹಕಾರಿ ಆಗಲಿದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಹಾರ್ಮೋನುಗಳ ಅಸ್ವಸ್ಥತೆ ಸಮಸ್ಯೆ ನಿವಾರಣೆ ಮಾಡಲಿದೆ.

ತುಳಸಿ ಬೀಜ

ತುಳಸಿಯಲ್ಲಿ ಅನೇಕ ತರನಾದ ನೈಸರ್ಗಿಕ ಔಷಧೀಯ ಮೌಲ್ಯಗಳಿವೆ. ತುಳಸಿ ಬೀಜದಲ್ಲಿ ನಾರಿನಂಶ ಹೇರಳವಾಗಿದ್ದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುವ ಜೊತೆಗೆ ಮಲಬದ್ಧತೆ ಸಮಸ್ಯೆ ನಿವಾರಣೆ ಆಗಲಿದೆ. ತುಳಸಿ ಬೀಜದಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ, ಹೀಗಾಗಿ ಹಾರ್ಮೋನ್ ಆರೋಗ್ಯ ವೃದ್ಧಿಗೆ ಸಹಕಾರಿ ಆಗಲಿದೆ. ಹಾರ್ಮೋನ್ ಅಸಮತೋಲನದಿಂದ ಉಂಟಾಗುವ ಮೊಡವೆ, ಪಿಸಿಓಎಸ್ ಇತರ ಸಮಸ್ಯೆಗಳು ಕೂಡ ಪರಿಹಾರವಾಗಲಿದೆ.

ಗುಲ್ಕಂದ್

ಗುಲಾಬಿ ದಳದಿಂದ ಮಾಡುವ ಗುಲ್ಕಂದ್ ತಿನ್ನಲು ಎಷ್ಟು ರುಚಿಯಾಗಿರುತ್ತದೆಯೊ ಹಾಗೆ ಅದರಲ್ಲಿಯೂ ದೇಹದ ಆರೋಗ್ಯಕ್ಕೆ ಪೂರಕವಾಗುವ ಅನೇಕ ಅಂಶಗಳಿವೆ. ಹಾರ್ಮೋನ್ ಅಸಮತೋಲನದ ಒತ್ತಡ ಸಮಸ್ಯೆ ನಿವಾರಣೆ ಆಗಲಿದೆ. ಹಾರ್ಮೋನುಗಳನ್ನು ನೈಸರ್ಗಿಕವಾಗಿ ಸಮತೋಲನದಲ್ಲಿರಿಸಲು , ದೇಹ ತಂಪಾಗಿರಿಸಲು ಗುಲ್ಕಂದ್ ಸೇವನೆ ಬಹಳ ಪರಿಣಾಮಕಾರಿಯಾಗಲಿದೆ.

ಮಾವಿನ ಹಣ್ಣು

ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಪ್ರಮಾಣ ಹೇರಳವಾಗಿರುತ್ತದೆ. ಇದು ಹಾರ್ಮೋನ್ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ಚರ್ಮದ ಆರೋಗ್ಯ ವೃದ್ಧಿಗೂ ಸಹಕಾರಿ ಆಗಲಿದೆ. ಮಾವಿನ ಹಣ್ಣಿನಲ್ಲಿ ಫೈಬರ್ ಕೂಡ ಇದ್ದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಇದನ್ನು ಓದಿ: Health Tips: ಬಾಟಲಿಯ ಹಣ್ಣಿನ ರಸಗಳು ಏಕೆ ಬೇಡ?

ಲಿಂಬೆ ರಸ

ಲಿಂಬೆರಸದಲ್ಲಿ ಇರುವ ಸಿಟ್ರಿಕ್ ಅಂಶ ದೇಹದ ಹಾರ್ಮೋನ್ ಸಮತೋಲನದಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಅದು ದೇಹದಲ್ಲಿ ಆಮ್ಲೀಯತೆಯನ್ನು ಕಡಿಮೆ ಮಾಡಿ ಸುಸ್ತು, ಅಸ್ವಸ್ಥತೆ ಸಮಸ್ಯೆ ನಿವಾರಣೆ ಮಾಡಲಿದೆ. ಲಿಂಬು ಜ್ಯೂಸ್ ಅಥವಾ ಲಿಂಬು ರಸ ಬೆರೆಸಿದ್ದ ನೀರಿನ ಸೇವನೆ ಮಾಡಿದರೂ ಕೂಡ ಬೇಸಿಗೆ ಕಾಲದಲ್ಲಿ ಉಂಟಾಗುವ ಹಾರ್ಮೋನ್ ಇಮ್ ಬ್ಯಾಲೆನ್ಸ್ ಸಮಸ್ಯೆ ನಿವಾರಣೆ ಆಗಲಿದೆ.

ಮಜ್ಜಿಗೆ

ಬೇಸಿಗೆ ಕಾಲಕ್ಕೆ ಮಜ್ಜಿಗೆ ಸೇವಿಸುವುದರಿಂದ ದೇಹ ಸದಾ ಕಾಲ ತಂಪಾಗಿ ಇರಲಿದೆ. ಒಂದು ಲೋಟ ಮಜ್ಜಿಗೆ ಕುಡಿ ಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಕರುಳಿನ ಆರೋಗ್ಯ ಮತ್ತು ಹಾರ್ಮೋನ್ ನಿಯಂತ್ರಣವು ಒಟ್ಟಿಗೆ ಆಗುತ್ತದೆ..