Summer Fashion: ಸಮ್ಮರ್ ಗ್ಲಾಮರಸ್ ಲುಕ್‌ಗಾಗಿ ಬಾರ್ಡಟ್ ಸ್ಟೈಲಿಂಗ್‌ಗೆ ಸೈ ಎಂದ ಯುವತಿಯರು!
Summer Fashion: ಸಮ್ಮರ್ ಸೀಸನ್‌ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಯುವತಿಯರು ಬಾರ್ಡಟ್ ಸ್ಟೈಲಿಂಗ್‌ಗೆ ಸೈ ಎಂದಿದ್ದಾರೆ. ಇಂದು ಬಾರ್ಡಟ್ ಸ್ಟೈಲಿಂಗ್‌ಗೆ ಸಾಥ್ ನೀಡುವ ಡಿಸೈನರ್‌ವೇರ್‌ಗಳು ಹಾಲಿವುಡ್, ಬಾಲಿವುಡ್ ತಾರೆಯರನ್ನು ಮಾತ್ರ ಸೆಳೆದಿಲ್ಲ! ಬದಲಿಗೆ ಸಾಮಾನ್ಯ ಯುವತಿಯರನ್ನು ಆಕರ್ಷಿಸಿವೆ. ಏನಿದು ಬಾರ್ಡಟ್ ಫ್ಯಾಷನ್? ಸ್ಟೈಲಿಂಗ್ ಹೇಗೆ? ಈ ಎಲ್ಲದರ ಕುರಿತಂತೆ ಸ್ಟೈಲಿಸ್ಟ್‌ಗಳು ಸಿಂಪಲ್ಲಾಗಿ ಉತ್ತರಿಸಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಗ್ಲಾಮರಸ್ ಲುಕ್‌ಗಾಗಿ (Summer Fashion) ಇದೀಗ ಬಾರ್ಡಟ್ ಸ್ಟೈಲಿಂಗ್‌ಗೆ ಸೈ ಎನ್ನುವವರ ಸಂಖ್ಯೆ ಹೆಚ್ಚಾಗಿದೆ. ಇವರಲ್ಲಿ ಟೀನೇಜ್ ಹುಡುಗಿಯರೇ ಹೆಚ್ಚಾಗಿದ್ದಾರೆ. ಹೌದು, ಇಂದು ಬಾರ್ಡಟ್ ಸ್ಟೈಲಿಂಗ್‌ಗೆ ಸಾಥ್ ನೀಡುವ ಡಿಸೈನರ್‌ವೇರ್‌ಗಳು ಹಾಲಿವುಡ್, ಬಾಲಿವುಡ್ ತಾರೆಯರನ್ನು ಮಾತ್ರ ಸೆಳೆದಿಲ್ಲ! ಬದಲಿಗೆ ಸಾಮಾನ್ಯ ಯುವತಿಯರನ್ನು ಆಕರ್ಷಿಸಿವೆ. ನಿಮಗೆ ಗೊತ್ತೇ! ಹಾಲಿವುಡ್‌ನ ಏಂಜಲೀನಾ, ಕೇಟ್, ಜೆನಿಫರ್, ಮಾ ವಾಟ್ಸಾನ್, ಜೆಸ್ಸಿಕಾ, ಆ್ಯಮಿ ಬಾಲಿವುಡ್‌ನ ಸೋನಂ, ಕರೀನಾ, ಅದಿತಿ, ಶ್ರದ್ಧಾ, ದಿಶಾ, ಅನನ್ಯಾ ಸೇರಿದಂತೆ ಸಾಕಷ್ಟು ತಾರೆಯರು ಬಾರ್ಡಟ್ ಡ್ರೆಸ್ ಪ್ರೇಮಿಗಳು. ರೆಡ್ ಕಾರ್ಪೆಟ್ ಸಮಾರಂಭಗಳಲ್ಲಿ ಮಾತ್ರವಲ್ಲ, ನಾರ್ಮಲ್ ರುಟೀನ್‌ನಲ್ಲೂ ಇವುಗಳನ್ನು ಧರಿಸುವುದು ಹೆಚ್ಚಾಗಿದೆ. ಸೋಷಿಯಲ್ ಮಿಡಿಯಾದಲ್ಲೂ ಈ ಡಿಸೈನರ್‌ವೇರ್‌ನಲ್ಲಿನ ಫೋಟೋಗಳು ಕಾಣಿಸುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರೀಟಾ.

ಏನಿದು ಬಾರ್ಡಟ್ ಡ್ರೆಸ್?
ಆಫ್ ಶೋಲ್ಡರ್‌ನ ಪ್ರತಿ ರೂಪವೇ ಬಾರ್ಡಟ್ ಡ್ರೆಸ್. ಭುಜವನ್ನು ಎಕ್ಸ್‌ಪೋಸ್ ಮಾಡುವಂತಹ ಡ್ರೆಸ್ ಅಥವಾ ಟಾಪ್‌ಗಳಿವು.
ಸ್ಕರ್ಟ್ಸ್ ಜತೆ ಬಾರ್ಡಟ್ಸ್ ಸ್ಟೈಲಿಂಗ್
ಲಾಂಗ್ ಸ್ಕರ್ಟ್ಸ್ ಜತೆ ಬಾರ್ಡಟ್ಸ್ ಧರಿಸುವುದಾದಲ್ಲಿ ಆದಷ್ಟೂ ಟ್ರೆಂಡಿ ಶೇಡ್‌ನದ್ದನ್ನು ಚೂಸ್ ಮಾಡಿ. ಸ್ಕರ್ಟ್ಸ್ ಜತೆ ಇದು ಕ್ಲಾಸಿ ಲುಕ್ ನೀಡುತ್ತವೆ. ಸ್ಟ್ರೈಫ್ಸ್, ಪ್ರಿಂಟ್ಸ್ ವಿನ್ಯಾಸ ಕೂಡ ಓಕೆ. ನೋಡಲು ಟ್ರೆಂಡಿಯಾಗಿ ಕಾಣುತ್ತದೆ ಎನ್ನುತ್ತಾರೆ ಡಿಸೈನರ್ ಚೇತು.

ಸೀರೆಗೂ ಬಂತು ಬಾರ್ಡಟ್ ಬ್ಲೌಸ್
ಸೀರೆಯನ್ನು ಇದೀಗ ನಾನಾ ಬಗೆಯ ವೆಸ್ಟರ್ನ್ ಟಾಪ್‌ಗಳು ಲಗ್ಗೆ ಇಟ್ಟಿವೆ. ಅದರಲ್ಲಿ ಇದೀಗ ಬಾರ್ಡಟ್ ಟಾಪ್‌ಗಳು ಬ್ಲೌಸ್‌ನ ರೂಪವನ್ನು ಪಡೆದಿವೆ. ನೋಡಲು ಇವು ಕೊಂಚ ಗ್ಲಾಮರಸ್ ಲುಕ್ ನೀಡುತ್ತವೆ. ಸೀರೆಗೆ ಬಾರ್ಡಟ್ ಟಾಪ್ ಧರಿಸಿದಲ್ಲಿ ಅದು ಫಂಕಿಲುಕ್ ನೀಡುತ್ತದೆ. ಫಂಕಿ ಲುಕ್ ಬೇಡವಾದಲ್ಲಿ ಕಾಟನ್ ಸೀರೆಯೊಂದಿಗೆ ಕಾಂಬಿನೇಷನ್ ಮಾಡಬಹುದು. ಇದೀಗ ಪೇಜ್3ಯವರು ಮಾತ್ರವಲ್ಲ, ಟೀನೇಜ್ ಹುಡುಗಿಯರು ಕೂಡ ಬಾರ್ಡಟ್ ಬ್ಲೌಸ್ ರೀತಿಯ ಟಾಪ್ ಧರಿಸಲಾರಂಭಿಸಿದ್ದಾರೆ.

ಸ್ಲಿಮ್ ಇರುವವರಿಗೆ ಬೆಸ್ಟ್ ಚಾಯ್ಸ್
ಸ್ಲಿಮ್ ಇರುವವರಿಗೆ ಹಾಗೂ ಕೊಂಚ ಹೆಲ್ತಿ ಬಾಡಿ ಹೊಂದಿರುವವರಿಗೆ ಬಾರ್ಡಟ್ ಹೇಳಿ ಮಾಡಿಸಿದಂತಿರುತ್ತದೆ. ತೀರಾ ದಪ್ಪಗಿರುವವರಿಗೆ ನಾಟ್ ಓಕೆ. ಉದ್ದಗಿರುವವರಿಗೂ ಚೆನ್ನಾಗಿ ಕಾಣುತ್ತದೆ. ಕಾಲರ್ ಬೋನ್ ಹೈಲೈಟಾಗುತ್ತದೆ. ಹಾಗೆಂದು ತೀರಾ ಒಣಗಿಕೊಂಡು ಇರುವವರಿಗೆ ಇದು ನೋಡಲು ಚೆನ್ನಾಗಿ ಕಾಣುವುದಿಲ್ಲ ಎನ್ನುತ್ತಾರೆ ಡಿಸೈನರ್ಸ್.

ಬಾರ್ಡಾಟ್ ಡ್ರೆಸ್ ಪ್ರಿಯರಿಗೆ ಸಲಹೆಗಳು
- ಬಾರ್ಡಟ್ ಟಾಪ್‌ಗಾದಲ್ಲಿ ಆದಷ್ಟೂ ಕ್ಯೂಲ್ಲೊಟ್ಸ್ ಆಯ್ಕೆ ಮಾಡಬಹುದು.
- ಮಿಡಿ ಸ್ಕರ್ಟ್ಸ್, ಲೂಸರ್ಸ್, ಫ್ರಿಲ್ಲರ್ಸ್ ಜತೆ ಮ್ಯಾಚ್ ಮಾಡಬಹುದು.
- ಟಾರ್ನ್ ಜೀನ್ಸ್‌ಗೆ ಧರಿಸಿದಲ್ಲಿ ಸೀಸನ್‌ಗೆ ಸೂಟ್ ಆಗುತ್ತದೆ. ಫಂಕಿ ಲುಕ್ ನೀಡಬಹುದು.
- ಬಾರ್ಡಟ್ ಡ್ರೆಸ್‌ಗಳನ್ನು ಕೊಳ್ಳುವಾಗ ಆದಷ್ಟೂ ಫಿಟ್ಟಿಂಗ್ ಇರುವಂತದ್ದನ್ನೇ ಖರೀದಿಸಬೇಕು.
- ದೊಗಲೆಯಿದ್ದಲ್ಲಿ ಜಾರಿ ಬೀಳಬಹುದು. ನೋಡಲು ಅಸಹ್ಯಕರವಾಗಿ ಕಾಣಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Metgala Fashion: ಮೆಟ್‌ಗಾಲಾದಲ್ಲಿ ಫ್ಯಾಷನ್ ಪ್ರಿಯರನ್ನು ಆಕರ್ಷಿಸಿದ ಬಾಲಿವುಡ್ ಸೆಲೆಬ್ರೆಟಿಗಳ ಫ್ಯಾಷನ್‌ವೇರ್ಸ್