Star Summer Lifestyle: ಐವತ್ತಾದರೂ ಅತ್ಯಾಕರ್ಷಕವಾಗಿ ಕಾಣಿಸುವ ನಟಿ ಯಮುನಾ ಶ್ರೀನಿಧಿಯವರ ಬ್ಯೂಟಿ ಸೀಕ್ರೇಟ್
Star Summer Lifestyle: ಪ್ರತಿಭಾನ್ವಿತ ನಟಿ & ಸಮಾಜ ಸೇವಕಿ ಯಮುನಾ ಶ್ರೀನಿಧಿ ಅವರದ್ದು ನ್ಯಾಚುರಲ್ ಬ್ಯೂಟಿ. ವಯಸ್ಸು ಐವತ್ತಾದರೂ ಒಂಚೂರು ಮಾಸದ ಅವರ ಸೌಂದರ್ಯದ ಸೀಕ್ರೇಟ್ ಏನು ಗೊತ್ತೇ? ಈ ಕುರಿತಂತೆ ಅವರೇ ವಿಶ್ವವಾಣಿ ನ್ಯೂಸ್‌ನೊಂದಿಗೆ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ಜತೆಗೆ ತಮ್ಮ ಸಮ್ಮರ್ ಲೈಫ್‌ಸ್ಟೈಲ್ & ಫ್ಯಾಷನ್ ಬಗ್ಗೆಯೂ ತಿಳಿಸಿದ್ದಾರೆ. ಫಾಲೋವರ್ಸ್‌ಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.

ಚಿತ್ರಗಳು: ಯಮುನಾ ಶ್ರೀನಿಧಿ, ನಟಿ/ಸಮಾಜ ಸೇವಕಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಯಮುನಾ ಶ್ರೀನಿಧಿಯವರಿಗೆ ಇದೀಗ 50ರ ವಸಂತ ತುಂಬಿದೆ. ಆದರೂ ಇನ್ನು ಯಂಗ್ ಲುಕ್ ಕಾಪಾಡಿಕೊಂಡಿರುವ ಇವರ ಸೌಂದರ್ಯದ ಗುಟ್ಟೇನು ಗೊತ್ತೇ! ಅವರೇ ಹೇಳುವಂತೆ, ಅವರು ಪಾಲಿಸುವ ನೈಸರ್ಗಿಕ ಸೌಂದರ್ಯ ಸಂರಕ್ಷಣಾ ಕ್ರಮಗಳು. ಹೌದು, ಇದನ್ನು ಈಗಾಗಲೇ ಅವರು ವಿಶ್ವವಾಣಿ ನ್ಯೂಸ್‌ನ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದರೊಂದಿಗೆ ಅವರು ಈ ಸಮ್ಮರ್ ಸೀಸನ್‌ನಲ್ಲಿ (Star Summer Lifestyle) ಬದಲಾಗುವ ಅವರ ಲೈಫ್‌ಸ್ಟೈಲ್, ಫ್ಯಾಷನ್ ಹಾಗೂ ಬ್ಯೂಟಿ ಸೀಕ್ರೇಟ್ ಬಗ್ಗೆಯೂ ಹಂಚಿಕೊಂಡಿದ್ದಾರೆ. ಓದುಗರಿಗೂ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.

ವಿಶ್ವವಾಣಿ ನ್ಯೂಸ್: ಸೀಸನ್‌ಗೆ ತಕ್ಕಂತೆ ನಿಮ್ಮ ಲೈಫ್‌ಸ್ಟೈಲ್ ಬದಲಾಗುತ್ತದೆಯೇ?
ಯಮುನಾ ಶ್ರೀನಿಧಿ: ಯೆಸ್! ಆಯಾ ಸೀಸನ್‌ಗೆ ತಕ್ಕಂತೆ ಆರೋಗ್ಯಕರ ಲೈಫ್‌ಸ್ಟೈಲ್ ಫಾಲೋ ಮಾಡುತ್ತೇವೆ. ಉದಾಹರಣೆಗೆ., ಅದು ಸೇವಿಸುವ ಆಹಾರವಾಗಬಹುದು. ಇಲ್ಲವೇ, ದಿನಚರಿಯಾಗಬಹುದು.
ವಿಶ್ವವಾಣಿ ನ್ಯೂಸ್: ಸಮ್ಮರ್ ಸೀಸನ್‌ನಲ್ಲಿ ನಿಮ್ಮ ಲಿಸ್ಟ್‌ನಲ್ಲಿರುವ ಫ್ಯಾಷನ್ ಬಗ್ಗೆ ಹೇಳಿ?
ಯಮುನಾ ಶ್ರೀನಿಧಿ: ಸಮ್ಮರ್ ಸೀಸನ್‌ಗೆ ತಕ್ಕಂತೆ ನಾನು ಆದಷ್ಟೂ ಸಿಂಪಲ್ ಆಗಿರುವಂತಹ ಕಾಟನ್ ಸೀರೆಗಳನ್ನು ಉಡುತ್ತೇನೆ. ಕಂಫರ್ಟಬಲ್ ಕ್ಲಾತಿಂಗ್‌ಗೆ ಪ್ರಾಮುಖ್ಯತೆ ನೀಡುತ್ತೇನೆ.

ವಿಶ್ವವಾಣಿ ನ್ಯೂಸ್: ಐವತ್ತಾದರೂ ನಳನಳಿಸುವ ನಿಮ್ಮ ಸೌಂದರ್ಯದ ಸೀಕ್ರೇಟ್ ಏನು ?
ಯಮುನಾ ಶ್ರೀ ನಿಧಿ: ನಾನು ಮುಖಕ್ಕೆ ಯಾವುದೇ ಬಗೆಯ ಕೆಮಿಕಲ್ ಅಂಶವಿರುವಂತಹದ್ದನ್ನು ಬಳಸುವುದಿಲ್ಲ! ಏನಿದ್ದರೂ ಎಲ್ಲವೂ ನೈಸರ್ಗಿಕವಾಗಿ ದೊರಕುವಂತದ್ದನ್ನು ಉಪಯೋಗಿಸುತ್ತೇನೆ. ಇನ್ನು ನೋನಿ ಹಣ್ಣನ್ನು ಸಾಬೂನಿನ ಬದಲು ಬಳಸುತ್ತೇನೆ.

ವಿಶ್ವವಾಣಿ ನ್ಯೂಸ್: ನಿಮ್ಮ ಫಾಲೋವರ್ಸ್‌ಗೆ ನೀವು ನೀಡುವ ಬ್ಯೂಟಿ ಟಿಪ್ಸ್ ಏನು?
ಯಮುನಾ ಶ್ರೀನಿಧಿ: ಆದಷ್ಟೂ ಮುಖಕ್ಕೆ ಯಾವುದೇ ಹಾನಿಯುಂಟು ಮಾಡುವ ಕೆಮಿಕಲ್ ಮಿಕ್ಸ್ ಇರುವಂತಹ ಸೌಂದರ್ಯವರ್ಧಕಗಳನ್ನು ಬಳಸಬೇಡಿ. ಅಡುಗೆ ಮನೆಯಲ್ಲೆ ದೊರಕುವ ಹಣ್ಣು-ತರಕಾರಿಗಳಿಂದಲೇ ಸೌಂದರ್ಯ ಹೆಚ್ಚಿಸಿಕೊಳ್ಳಿ. ಉದಾಹರಣೆಗೆ., ಕತ್ತರಿಸಿದ ಹಣ್ಣಿನ ಹಾಗೂ ತರಕಾರಿಯ ರಸವನ್ನು ಮುಖಕ್ಕೆ ಲೇಪಿಸಿಕೊಳ್ಳಿ. ಜತೆಗೆ ಬಳಸಿದ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಾಡದೇ ಅದನ್ನು ಪೌಡರ್ ಮಾಡಿ ಮುಖಕ್ಕೆ ಸ್ಕ್ರಬ್‌ನಂತೆ ಬಳಸಿ. ಇದು ಮುಖದ ಕಾಂತಿ ಹೆಚ್ಚಿಸುತ್ತದೆ. ಇದು ಎಲ್ಲಾ ಸೀಸನ್‌ಗೂ ಹೊಂದುತ್ತದೆ.

ವಿಶ್ವವಾಣಿ ನ್ಯೂಸ್: ಓದುಗರಿಗೆ ನೀವು ನೀಡುವ ಡಯಟ್ ಹಾಗೂ ಫಿಟ್ನೆಸ್ ಟಿಪ್ಸ್ ಏನು?
ಯಮುನಾ ಶ್ರೀನಿಧಿ: ಸಮ್ಮರ್‌ನಲ್ಲಿ ಆದಷ್ಟೂ ಆರೋಗ್ಯಕರ ಮನೆಯೂಟಕ್ಕೆ ಪ್ರಾಮುಖ್ಯತೆ ನೀಡಿ. ಜಂಕ್ ಫುಡ್ ಬೇಡ. ಹಣ್ಣು-ತರಕಾರಿಗಳ ಸೇವನೆ ಹೆಚ್ಚಿರಲಿ. ಜಿಮ್ ಹೋಗಲಾಗದಿದ್ದಲ್ಲಿ, ಮನೆಯ ಎಲ್ಲಾ ಕೆಲಸಗಳನ್ನು ಖುಷಿಪಟ್ಟು ಮಾಡಿ. ಇದು ನಿಮ್ಮ ಫಿಟ್ನೆಸ್ ಹೆಚ್ಚಿಸುವುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Summer Fashion: ಸಮ್ಮರ್ ಗ್ಲಾಮರಸ್ ಲುಕ್‌ಗಾಗಿ ಬಾರ್ಡಟ್ ಸ್ಟೈಲಿಂಗ್‌ಗೆ ಸೈ ಎಂದ ಯುವತಿಯರು!