ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಸಾಮಾನ್ಯ ತಪ್ಪು ತಿಳಿವಳಿಕೆಗಳು

ಜಪಾನಿನಲ್ಲಿ ಎಲ್ಲ ಕಡೆಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಸ್ವೀಕರಿಸಲಾಗುತ್ತದೆ ಎಂದು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು. ಸುಧಾರಿತ, ಆಧುನಿಕ ತಂತ್ರಜ್ಞಾನಕ್ಕೆ ಹೆಸರಾದ ಜಪಾನಿನಲ್ಲಿ ಹೆಚ್ಚಿನ ತಾಣಗಳಲ್ಲಿ ನಗದು ಮಾತ್ರ (cash only) ಕೌಂಟರುಗಳನ್ನು ಕಾಣಬಹುದು. ಜಪಾನಿನಲ್ಲಿ ವಯಸ್ಸಾದವರು ಹೆಚ್ಚಿರುವುದರಿಂದ, ಅವರು ಇನ್ನೂ ಕ್ರೆಡಿಟ್ ಕಾರ್ಡ್ ಬದಲಿಗೆ ನಗದು ಬಳಸಲು ಬಯಸುತ್ತಾರೆ

ಸಾಮಾನ್ಯ ತಪ್ಪು ತಿಳಿವಳಿಕೆಗಳು

ಸಂಪಾದಕರ ಸದ್ಯಶೋಧನೆ

ಕೆಲವೊಮ್ಮೆ ನಾವು ವಿದೇಶಗಳಲ್ಲಿ ಪ್ರಯಾಣಿಸುವಾಗ, ನಮ್ಮ ದೇಶದಲ್ಲಿ ಸರಿಯಾಗಿರುವುದು, ನಾವು ಭೇಟಿ ನೀಡುವ ದೇಶದಲ್ಲಿ ಸರಿಯಲ್ಲವೇನೋ ಎಂಬ ಸಂದೇಹ ಕಾಡುತ್ತಿರುತ್ತದೆ. ನಮ್ಮ ಹಾವ-ಭಾವ, ನಡೆ, ವರ್ತನೆ ಸರಿಯಾಗಿದೆಯಾ ಎಂದು ನಮ್ಮನ್ನೇ ಕೇಳಿಕೊಳ್ಳುತ್ತಿರುತ್ತೇವೆ. ಎಷ್ಟೆಂದರೂ ನಾವು ಅಲ್ಲಿನ ಸಂಸ್ಕೃತಿಗೆ ಹೊಸಬರು. ಅಲ್ಲಿನ ಸಂಪ್ರದಾಯ, ಆಚರಣೆ ನಮಗೆ ಸರಿಯಾಗಿ ಗೊತ್ತಿರು ವುದಿಲ್ಲ. ಉದಾಹರಣೆಗೆ, ನೀವು ಜಪಾನಿಗೆ ಮೊದಲ ಬಾರಿಗೆ ಹೋಗಿದ್ದೀರಿ, ಅಲ್ಲಿನ ಸ್ಥಳೀಯ ರೊಬ್ಬರು ನಿಮ್ಮನ್ನು ಅವರ ಮನೆಗೆ ಆಹ್ವಾನಿಸಿದ್ದಾರೆ, ಆಗ ನೀವು ಅಭ್ಯಾಸಬಲದಿಂದ ಬೂಟು ಅಥವಾ ಚಪ್ಪಲಿ ಧರಿಸಿಯೇ ಮನೆಯೊಳಗೆ ಪ್ರವೇಶಿಸಿದಿರಿ ಎನ್ನಿ. ಅದನ್ನು ಅವರು ಯಾವ ಕಾರಣ ಕ್ಕೂ ಸಹಿಸುವುದಿಲ್ಲ. ನಿಮ್ಮ ಬೂಟನ್ನು ಹೊರಗೆ ಬಿಟ್ಟು, ಅಲ್ಲಿಯೇ ಇಟ್ಟಿರುವ ಚಪ್ಪಲಿ ಧರಿಸಿ ಒಳಬರಬೇಕು.

ಇದು ಮನೆಗೆ ಮಾತ್ರ ಸೀಮಿತವಲ್ಲ. ಕೆಲವು ಆಫೀಸುಗಳಲ್ಲೂ ಕಡ್ಡಾಯ. ಮನೆ ಅಥವಾ ಆಫೀಸಿನ ಹೊರಗೆ ಅತಿಥಿಗಳಿಗೆ ಚಪ್ಪಲಿ ಇಟ್ಟಿದ್ದಾರೆಂದರೆ, ನಮ್ಮದನ್ನು ಹೊರಗೆ ಕಳಚಿಡಬೇಕು ಎಂದರ್ಥ. ನಿಮ್ಮ ಬೂಟುಗಳನ್ನು ತೆಗೆಯಬೇಕಾದ ಪರಿಸ್ಥಿತಿಯಲ್ಲಿ, ತಮ್ಮ ಅತಿಥಿಗಳು ಬರಿಗಾಲಿನಲ್ಲಿ ನಡೆಯುವುದನ್ನು ಅವರು ಬಯಸುವುದಿಲ್ಲ.

ಇದನ್ನೂ ಓದಿ: Vishweshwar Bhat Column: ಜಪಾನಿನ ಯಶಸ್ಸಿಗೆ ನೈತಿಕ ಬೋಧೆಯೇ ಮುಖ್ಯ ಕಾರಣ

ನೀವು ಬೂಟುಗಳನ್ನು ತೆಗೆದ ನಂತರ ಯಾವಾಗಲೂ ನಿಮಗಾಗಿ ಒಂದು ಜೋಡಿ ಚಪ್ಪಲಿಗಳು ಕಾಯುತ್ತಿರುತ್ತವೆ. ಅತಿಥಿಗಳಿಗೆ ಮನೆಯೊಳಗೇ ಧರಿಸುವ ಚಪ್ಪಲಿಗಳನ್ನು ಒದಗಿಸುವುದು ಅಲ್ಲಿ ಸಾಮಾನ್ಯ. ನೀವು ಅಂಗಡಿ, ಮಾಲ್‌, ಹೋಟೆಲ್‌ಗೆ ಹೋದಾಗ, ಕ್ಯಾಷಿಯರ್ ಕೈಯಲ್ಲಿ ಹಣವನ್ನು ಇಡುವುದನ್ನು ಅವರು ಇಷ್ಟಪಡುವುದಿಲ್ಲ. ನೀವು ಜಪಾನ್‌ನಲ್ಲಿ ಹಣ ಪಾವತಿಸಲು ಕೌಂಟರ್‌ನಲ್ಲಿ ಒಂದು ಟ್ರೇ ಇಟ್ಟಿರುವುದನ್ನು ಗಮನಿಸುತ್ತೀರಿ.

ನೀವು ಹಣವನ್ನು ಇಡುವ ಸ್ಥಳ ಅದು. ನೀವು ಟ್ರೇ ಅನ್ನು ನಿರ್ಲಕ್ಷಿಸಿ ನಿಮ್ಮ ಹಣವನ್ನು ಕೌಂಟರ್‌ ನಲ್ಲಿ ಇಡಲು ನಿರ್ಧರಿಸಿದರೆ ಅದನ್ನು ತುಸು ಅಸಭ್ಯವೆಂದು ಪರಿಗಣಿಸಲಾಗುತ್ತದೆ ಅಥವಾ ನೀವು ಕ್ಯಾಷಿಯರ್ ಕೈಯಲ್ಲಿ ಹಣವನ್ನು ಇಡಲು ಪ್ರಯತ್ನಿಸಿದರೆ ಅದನ್ನು ವಿಚಿತ್ರವೆಂದು ಪರಿಗಣಿಸ ಲಾಗುತ್ತದೆ. ನೀವು ಟ್ರೇ ಅನ್ನು ನೋಡಿದರೆ, ಹಣವನ್ನು ಅದರಲ್ಲಿಯೇ ಇಡಬೇಕೆಂದರ್ಥ. ಇದು ಒಂದು ಉತ್ತಮ ವ್ಯವಸ್ಥೆ.

ಏಕೆಂದರೆ ಕ್ಯಾಷಿಯರ್ ಟ್ರೇಯಿಂದ ಹಣವನ್ನು ತೆಗೆದು ಒಳಗೆ ಹಾಕುವ ಮೊದಲು, ನಿಮಗೆ ಚಿಲ್ಲರೆ ಹಣವನ್ನು ನೀಡುತ್ತಾನೆ. ನಿಮಗೆ ನೀಡಬೇಕಾದ ಹಣದಲ್ಲಿ ವ್ಯತ್ಯಾಸ ಕಂಡುಬಂದರೆ, ಅದಕ್ಕೆ ನಿಮ್ಮ ಕಣ್ಣೆದುರೇ ಪುರಾವೆ ಸಿಗುತ್ತದೆ. ನೀವು ಹೋಟೆಲಿಗೆ ಹೋದಾಗ, ಅದರ ಬದಲು ಇದನ್ನು ಕೊಡಿ ಎಂದು ಕೇಳುವುದನ್ನು ಅಥವಾ ನಿಮ್ಮ ಊಟವನ್ನು ಕಸ್ಟಮೈಸ್ ಮಾಡುವುದನ್ನು ಅವರು ಇಷ್ಟ ಪಡುವುದಿಲ್ಲ.

ನೀವು ಬದಲಿಗಳನ್ನು ಕೇಳಲು ಪ್ರಾರಂಭಿಸಿದಾಗ ಅವರು ಇಲ್ಲ ಎಂದು ಹೇಳಿದರೆ ಅಥವಾ ನಿಮ್ಮೆ ಡೆಗೆ ಖಾಲಿ ನೋಟ ಬೀರಿದರೆ ಆಶ್ಚರ್ಯಪಡಬೇಡಿ, ಜಪಾನಿ ರೆಸ್ಟೋರೆಂಟ್‌ಗಳು ವಿಶೇಷ ವಿನಂತಿ ಗಳನ್ನು ವಿರಳವಾಗಿ ಪೂರೈಸುತ್ತವೆ, ಆದರೆ ಚಿಂತಿಸಬೇಡಿ. ನಿಮ್ಮ ನೆಚ್ಚಿನ ವಸ್ತುಗಳನ್ನು ಸೇರಿಸಲು ಆಯ್ಕೆಗಳನ್ನು ನೀಡುವ ಸಾಕಷ್ಟು ಭಕ್ಷ್ಯಗಳು ಇರುತ್ತವೆ.

ಜಪಾನಿನಲ್ಲಿ ಎಲ್ಲ ಕಡೆಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಸ್ವೀಕರಿಸಲಾಗುತ್ತದೆ ಎಂದು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು. ಸುಧಾರಿತ, ಆಧುನಿಕ ತಂತ್ರಜ್ಞಾನಕ್ಕೆ ಹೆಸರಾದ ಜಪಾನಿನಲ್ಲಿ ಹೆಚ್ಚಿನ ತಾಣ ಗಳಲ್ಲಿ ನಗದು ಮಾತ್ರ (cash only) ಕೌಂಟರುಗಳನ್ನು ಕಾಣಬಹುದು. ಜಪಾನಿನಲ್ಲಿ ವಯಸ್ಸಾ ದವರು ಹೆಚ್ಚಿರುವುದರಿಂದ, ಅವರು ಇನ್ನೂ ಕ್ರೆಡಿಟ್ ಕಾರ್ಡ್ ಬದಲಿಗೆ ನಗದು ಬಳಸಲು ಬಯಸು ತ್ತಾರೆ.

ಸಣ್ಣ-ಪುಟ್ಟ ಅಂಗಡಿಗಳಲ್ಲಿ, ದರ್ಶಿನಿ ಥರದ ಹೊಟೇಲುಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಸ್ವೀಕರಿಸು ವುದಿಲ್ಲ. ಹೀಗಾಗಿ ಜಪಾನಿನಲ್ಲಿ ಓಡಾಡುವಾಗ ಕಿಸೆಯಲ್ಲಿ ಕ್ಯಾಶ್ ಇಟ್ಟುಕೊಳ್ಳುವುದನ್ನು ಮರೆಯ ಬಾರದು. ಜಪಾನಿನಲ್ಲಿ ಸ್ನಾನದ ಆಚರಣೆ ಸ್ವಲ್ಪ ವಿಭಿನ್ನ. ಕೆಲವೆಡೆ ಶವರ್ ಮತ್ತು ಬಾತ್ ಟಬ್ ಎರಡೂ ಇರುವುದು ಸಾಮಾನ್ಯ. ಹಾಗಿzಗ ಶವರ್ ಮಾಡಿ ನಂತರ ಟಬ್‌ಗೆ ಇಳಿಯಬೇಕು ಎಂದರ್ಥ. ಜಪಾನಿನ ಸ್ನಾನಗೃಹ ಹೈಟೆಕ್.

ಇದು ಶ್ರೀಮಂತರಿಗೆ ಮಾತ್ರ ಸಾಧ್ಯ ಎಂದು ಭಾವಿಸಬೇಕಿಲ್ಲ. ಅಲ್ಲಿನ ಸ್ನಾನಗೃಹಗಳು ಇರುವುದೇ ಹಾಗೆ. ಜಪಾನ್ ವಿಭಿನ್ನ ಆಹಾರ ಸಂಸ್ಕೃತಿ ಇರುವ ದೇಶ. ಉದಾಹರಣೆಗೆ, ಸುಶಿ, ರೇಮನ್, ಒಕೋ ನೋಮಿಯಾಕಿ, ಟಾಕೋಯಾಕಿ ಮುಂತಾದವು. ಕೆಲವರು ಪ್ರಜ್ಞಾಪೂರ್ವಕವಾಗಿ ಅಥವಾ ಅಜ್ಞಾನ ದಿಂದ ಸ್ಥಳೀಯ ಆಹಾರಗಳನ್ನು ತಿರಸ್ಕರಿಸುತ್ತಾರೆ. ಇದು ನೈಜ ಜಪಾನಿ ಅನುಭವದಿಂದ ದೂರ ವಾದಂತೆ. ಅರ್ಥವಾಗದ ಹೆಸರುಗಳೆಂದು ಬಿಡುವ ಬದಲು, ಫೋಟೋ ನೋಡಿ ಆಯ್ಕೆ ಮಾಡ ಬಹುದು.