Mothers Day Special: ಮದರ್ಸ್ ಡೇ ಶಾಪಿಂಗ್‌ಗೆ 5 ಸಿಂಪಲ್ ಐಡಿಯಾ
Mothers Day Special: ಮದರ್ಸ್ ಡೇಗಾಗಿ ಶಾಪಿಂಗ್ ಮಾಡುತ್ತೀದ್ದೀರಾ? ನಿಮ್ಮ ಅಮ್ಮನಿಗೆ ಟ್ರೆಂಡಿ ಸೀರೆ ಅಥವಾ ಫ್ಯಾಷನ್‌ವೇರ್ಸ್ ಇಲ್ಲವೇ ಜ್ಯುವೆಲರಿಗಳನ್ನು ಖರೀದಿಸುತ್ತೀದ್ದೀರಾ? ಹಾಗಾದಲ್ಲಿ, ನಿಮ್ಮ ತಾಯಿಗೆ ಇಷ್ಟವಾಗುವಂತಿರುವುದನ್ನೇ ಖರೀದಿಸಲು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ಸ್.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವೀಕೆಂಡ್‌ನಲ್ಲಿ ಮದರ್ಸ್ ಡೇ ಶಾಪಿಂಗ್ ಹೆಚ್ಚಾಗಿದೆ. ಮಾಡರ್ನ್ ಮಮ್ಮಿಯಾಗಬಹುದು, ಟ್ರೆಡಿಷನಲ್ ಅಮ್ಮನಾಗಬಹುದು, ಇಲ್ಲವೇ ಅಲ್ಟ್ರಾ ಮಾಡರ್ನ್ ಕಾರ್ಪೋರೇಟ್ ತಾಯಿಯಾಗಿರಬಹುದು. ಆಯಾ ಮಹಿಳೆಯ ವ್ಯಕ್ತಿತ್ವ ಹಾಗೂ ಲೈಫ್‌ಸ್ಟೈಲ್‌ಗೆ ತಕ್ಕಂತೆ ಮದರ್ಸ್ ಡೇ ಶಾಪಿಂಗ್ ಮಾಡುವುದು ಇಂದು ಸಾಮಾನ್ಯವಾಗಿದೆ. ಮದರ್ಸ್ ಡೇ (Mothers Day Special) ಎಂದಾಕ್ಷಣ ಅದು ವೆಸ್ಟರ್ನ್ ಕಲ್ಚರ್ ಆಗಬಹುದು, ನಮ್ಮ ಸಂಸ್ಕೃತಿಯಲ್ಲಿ ಇಲ್ಲದಿರಬಹುದು. ಆ ಭಾವನಾತ್ಮಕ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ, ಇಂದು ಎಲ್ಲರೂ ಕೂಡ ತಮ್ಮ ತಾಯಂದಿರಿಗಾಗಿ ಶಾಪಿಂಗ್ ಮಾಡುವುದು ಸಾಮಾನ್ಯವಾಗಿದೆ. ಅಂತಹವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ, ನೀವು ನೀಡುವ ಕೊಡುಗೆ ಸದುಪಯೋಗಬಹುದು ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ಸ್.

ಅಮ್ಮನ ಅಭಿರುಚಿ ತಿಳಿದುಕೊಂಡು ಫ್ಯಾಷನ್‌ವೇರ್ಸ್ ಖರೀದಿಸಿ
ನಿಮ್ಮ ತಾಯಿಯ ಅಭಿರುಚಿಗೆ ತಕ್ಕಂತೆ ಔಟ್‌ಫಿಟ್‌ಗಳನ್ನು ಖರೀದಿಸಿ. ಅವರು ಹೆಚ್ಚಾಗಿ ಇಷ್ಟಪಡುವಂತಹ ಉಡುಗೆಗಳಾದಲ್ಲಿ ಅದು ಮೂಲೆಗೆ ಸೇರದು. ಹಾಗಾಗಿ ಆದಷ್ಟೂ ಟ್ರೆಂಡಿಯಾಗಿರುವಂತದ್ದನ್ನು ಮೊದಲೇ ತಿಳಿದುಕೊಂಡು ಖರೀದಿಸಿ.

ಸೀರೆಯಾದಲ್ಲಿ ಸೂಕ್ತ ಆಯ್ಕೆ ಮಾಡಿ
ನೀವು ಅಮ್ಮನಿಗೆ ಸೀರೆ ಖರೀದಿಸುವುದಾದಲ್ಲಿ ಆದಷ್ಟೂ ಅವರು ಇಷ್ಟ ಪಡುವಂತಹ ಕಲರ್ ಡಿಸೈನ್ ಹಾಗೂ ಫ್ಯಾಬ್ರಿಕ್‌ನದ್ದನ್ನು ಆಯ್ಕೆ ಮಾಡಿ. ಯಾವ ಬಗೆಯ ಸೀರೆಯನ್ನು ಮುಂದೊಮ್ಮೆ ಕೊಳ್ಳಲು ಬಯಸುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡು, ಕೊಂಡು, ಸರ್ಪೈಸ್ ಮಾಡಿ.
ಉದ್ಯೋಗಸ್ಥ ಅಮ್ಮಂದಿರ ಲೈಫ್‌ಸ್ಟೈಲ್‌ಗೆ ತಕ್ಕಂತೆ ಖರೀದಿಸಿ
ಉದ್ಯೋಗಸ್ಥ ಅಮ್ಮಂದಿರ ಲೈಫ್‌ಸ್ಟೈಲ್‌ಗೆ ಹೊಂದುವಂತಹ ಔಟ್‌ಫಿಟ್ ಇಲ್ಲವೇ ಪ್ರತಿದಿನ ಬಳಕೆಗೆ ಬರುವ ವಸ್ತು ಅಥವಾ ಮೊಬೈಲ್ ಹೀಗೆ ಸದುಪಯೋಗವಾಗುವಂತಹದ್ದನ್ನು ಖರೀದಿಸಿ. ನೀಡಿ.

ಜ್ಯುವೆಲರಿ ಆಯ್ಕೆ ಹೀಗಿರಲಿ
ಅಮ್ಮಂದಿರಿಗೆ ಬಂಗಾರದ ಜ್ಯುವೆಲರಿಯೇ ಕೊಡಬೇಕೆಂಬುದಿಲ್ಲ! ಅವರು ಹೆಚ್ಚು ಧರಿಸಲು ಇಷ್ಟಪಡುವ ವಿನ್ಯಾಸದ ಆಭರಣಗಳನ್ನು ಆಯ್ಕೆ ಮಾಡಿ ಖರೀದಿಸಿ. ಉದಾಹರಣೆಗೆ ಅದು ಫ್ಯಾಷನ್ ಜ್ಯುವೆಲರಿಯಾಗಬಹುದು, ಇಲ್ಲವೇ ಅಪರೂಪಕ್ಕೆ ಧರಿಸುವ ಆಂಟಿಕ್ ಆಭರಣಗಳಾಗಬಹುದು.

ಈ ಸುದ್ದಿಯನ್ನೂ ಓದಿ | Summer Fashion: ಸಮ್ಮರ್ ಗ್ಲಾಮರಸ್ ಲುಕ್‌ಗಾಗಿ ಬಾರ್ಡಟ್ ಸ್ಟೈಲಿಂಗ್‌ಗೆ ಸೈ ಎಂದ ಯುವತಿಯರು!
ಗೃಹೋಪಯೋಗಿ ಸಾಮಗ್ರಿಗಳನ್ನು ನೀಡಿ
ಅಡುಗೆ ಮನೆಯಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಅಮ್ಮಂದಿರಿಗೆ ತೀರಾ ಅಗತ್ಯವಿರುವ ಅಪ್‌ಡೇಟೆಡ್ ಕಿಚನ್ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿ. ಅವರ ಕೆಲಸ ಕಡಿಮೆ ಗೊಳಿಸಿ. ಇದು ಅವರಿಗೆ ಖುಷಿ ತರುತ್ತದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)