ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಲಾಹೋರ್ ದಾಳಿಯಲ್ಲಿ ಬಿದ್ದಿದ್ದ ಭಾರತದ ಡ್ರೋನ್ ತುಣಕನ್ನು ಕದ್ದೊಯ್ಯುತ್ತಿರುವ ಯುವಕರು.. ವಿಡಿಯೊ ವೈರಲ್

ಆಪರೇಷನ್ ಸಿಂದೂರ್ (operation sindoor) ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪಾಕಿಸ್ತಾನದ (Pakistan) ಮೇಲೆ ಭಾರತಿಯ ಸೇನೆಯು ಮೇ 9 ಮತ್ತು 10ರಂದು ಮಧ್ಯರಾತ್ರಿ ಕನಿಷ್ಠ ಎಂಟು ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಿದೆ. ಭಾರತದ ಈ ದಾಳಿಯ ಬಳಿಕ ಲಾಹೋರ್‌ನಲ್ಲಿ ಯುವಕನೊಬ್ಬ ಭಾರತೀಯ ಡ್ರೋನ್‌ನ (Indian Drone) ಭಾಗವನ್ನು ಕೆಲವರು ಕದ್ದೊಯ್ಯುತ್ತಿರುವುದಾಗಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಡ್ರೋನ್ ತುಣುಕು ಕದ್ದೊಯ್ಯುತ್ತಿರುವ ಪಾಕ್ ಯುವಕರು

ಲಾಹೋರ್: ಕಾಶ್ಮೀರದ (Jammu-Kashmir) ಪಹಲ್ಗಾಮ್ (Pahalgam Terror Attack) ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿರುವ ಆಪರೇಷನ್ ಸಿಂದೂರ್ (operation sindoor) ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪಾಕಿಸ್ತಾನದ (Pakistan) ಮೇಲೆ ಭಾರತ ಪದೇ ಪದೇ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು (Air strikes) ನಡೆಸಿತ್ತು. ಮೇ 9 ಮತ್ತು 10ರಂದು ಮಧ್ಯರಾತ್ರಿ ಕನಿಷ್ಠ ಎಂಟು ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಲಾಗಿದೆ. ಭಾರತದ ಈ ದಾಳಿಯ ಬಳಿಕ ಲಾಹೋರ್‌ನಲ್ಲಿ ಯುವಕನೊಬ್ಬ ಭಾರತೀಯ ಡ್ರೋನ್‌ನ (Indian Drone) ಒಂದು ಭಾಗವನ್ನು ಕದ್ದೊಯ್ಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ವೈರಲ್‌ ವಿಡಿಯೊ ಇಲ್ಲಿದೆ



ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವು ಯುವಕರು ಸೇರಿ ಡ್ರೋನ್‌ನ ಒಂದು ಭಾಗವನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಇನ್ನೊಂದು ವಿಡಿಯೋದಲ್ಲಿ ಒಬ್ಬ ಯುವಕ ಬೈಕ್ ನಲ್ಲಿ ಡ್ರೋನ್ ನ ಒಂದು ಭಾಗವನ್ನು ತೆಗೆದುಕೊಂಡು ಓಡಿಹೋದನೆಂದು ಹೇಳುವುದನ್ನು ಕೇಳಬಹುದು. ಹಿಂಬದಿ ಸವಾರ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ಆದರೆ ಬೈಕ್ ಚಲಾಯಿಸುತ್ತಿದ್ದ ಯುವಕ ಡ್ರೋನ್‌ನ ಭಾಗವನ್ನು ಬೈಕ್‌ನ ಟ್ಯಾಂಕ್‌ನ ಮೇಲೆ ಇಟ್ಟುಕೊಂಡು ಸ್ಥಳದಿಂದ ಪಲಾಯನ ಮಾಡಿದ್ದಾನೆ ಎಂದು ವ್ಯಕ್ತಿಯೊಬ ಹೇಳಿದ್ದಾನೆ. ಈ ಘಟನೆ ಶುಕ್ರವಾರ ರಾತ್ರಿ ಲಾಹೋರ್‌ನ ಡಿಎಚ್‌ಎ ಹಂತ 6 ರಲ್ಲಿ ನಡೆದಿದೆ ಎನ್ನಲಾಗಿದೆ.

ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ನಡೆದ ಈ ಘಟನೆಯ ವಿಡಿಯೋವನ್ನು ಸಾಕಷ್ಟು ನೆಟಿಜನ್‌ಗಳು ಪಾಕಿಸ್ತಾನವನ್ನು ಟ್ರೋಲ್ ಮಾಡಲು ಬಳಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಒಬ್ಬ ಬಳಕೆದಾರ, ಬಹುಶ ಅವರು ಇದನ್ನು ಮಾರಿ ಗೋಧಿ ಹಿಟ್ಟು ಮತ್ತು ಅಕ್ಕಿಯನ್ನು ಖರೀದಿಸುತ್ತಾರೆ ಎಂದು ಹೇಳಿದ್ದಾರೆ.

ಮತ್ತೊಬ್ಬರು ಪಾಕಿಸ್ತಾನದ ಕಳಪೆ ವಾಯು ರಕ್ಷಣಾ ವ್ಯವಸ್ಥೆಯನ್ನು ಟೀಕಿಸಿದ್ದು, ಪಾಕಿಸ್ತಾನ ಅತ್ಯುತ್ತಮ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ ನೋಡಿ ಎಂದಿದ್ದಾರೆ.ಇನ್ನೊಬ್ಬರು ಪಾಕಿಸ್ತಾನದ ಜನಪ್ರಿಯ ಬೈಕ್ ಹೋಂಡಾ ಸಿಜಿ 125 ಬೈಕ್‌ನಲ್ಲಿ ಭಾರತದ ಡ್ರೋನ್ ನ ತುಣುಕನ್ನು ಕದ್ದೊಯ್ಯಲಾಗಿದೆ ಎಂದು ವ್ಯಂಗ್ಯ ಮಾಡಿ ಕಾಮೆಂಟ್ ಮಾಡಿದ್ದಾರೆ.



ವೈರಲ್ ಆಗಿರುವ ಇನ್ನೊಂದು ವಿಡಿಯೋದಲ್ಲಿ ಪಾಕಿಸ್ತಾನಿ ಯುವಕರು ಡ್ರೋನ್‌ನ ಭಾಗಗಳನ್ನು ಕದ್ದೊಯ್ಯುತ್ತಿದ್ದು, ಇದರಲ್ಲಿ ಪಾಕಿಸ್ತಾನದ ಸೇನಾ ಸಿಬ್ಬಂದಿಯೂ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: Operation Sindoor : ʼಕಾಶ್ಮೀರದಲ್ಲಿ ನನ್ನ ತಂದೆಯನ್ನು ಭಯೋತ್ಪಾದಕರು ಹತ್ಯೆ ಮಾಡಿದರುʼ; ಭಾವುಕ ಕ್ಷಣಗಳು ಹಂಚಿಕೊಂಡ ನಟಿ

ಮೇ 9 ಮತ್ತು 10ರಂದು ಭಾರತೀಯ ಸೇನೆಯು ಆರು ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ನಿಖರವಾಗಿ ದಾಳಿ ಮಾಡಿದೆ. ಇದರಿಂದ ಪಾಕಿಸ್ತಾನದ ಸೇನಾ ನೆಲೆಗಳಿಗೆ ಅಪಾರ ಹಾನಿಯಾಗಿದೆ. ರಫೀಕಿ, ಮುರಿಯದ್, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್‌ನಲ್ಲಿರುವ ಪಾಕಿಸ್ತಾನಿ ಸೇನಾ ನೆಲೆಗಳನ್ನು ಮೇಲೆ ದಾಳಿ ನಡೆಸಲಾಗಿದೆ. ಈ ಕಾರ್ಯಾಚರಣೆ ವೇಳೆ ಭಾರತವು ಕನಿಷ್ಠ ಹಾನಿ ಮಾಡಿರುವುದನ್ನು ಖಚಿತಪಡಿಸಿಕೊಂಡಿದೆ ಎಂದು ಭಾರತದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.