ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mothers Day: ತನ್ನ ಮಳಿಗೆಗಳಲ್ಲಿ ಪರ್ಫ್ಯೂಮ್ ತಯಾರಿಕಾ ಕಾರ್ಯಕ್ರಮ ಆಯೋಜಿಸುವ ಮೂಲಕ ಅದ್ದೂರಿಯಾಗಿ ಅಮ್ಮಂದಿರ ದಿನ ಆಚರಿಸಲಿರುವ ಟೈಟಾನ್ ವರ್ಲ್ಡ್‌

ಅಮ್ಮಂದಿರನ್ನು ಆ ದಿನ ಮಳಿಗೆಗೆ ಕರೆದುಕೊಂಡು ಬಂದು ಆಕೆಗೆ ಅವಿಸ್ಮರಣೀಯ ಉಡುಗೊರೆ ನೀಡಲು ಸಂಸ್ಥೆಯು ಆಹ್ವಾನ ನೀಡಿದೆ. ಮೇ 10 ಮತ್ತು 11ರಂದು ಭಾರತದಾದ್ಯಂತ ಇರುವ 163ಕ್ಕೂ ಹೆಚ್ಚು ಟೈಟಾನ್ ವರ್ಲ್ಡ್ ಮಳಿಗೆಗಳಿಗೆ ಗ್ರಾಹಕರು ತಮ್ಮ ತಾಯಂದಿರೊಂದಿಗೆ ಆಗಮಿಸಿ ಅಲ್ಲಿ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿಕೊಳ್ಳಬಹುದಾಗಿದೆ. ಚಿರ ಬಾಂಧವ್ಯವನ್ನು ಸಂಭ್ರಮಿಸಲು ಸಂಸ್ಥೆಯು ವಿಶೇಷ ಪರ್ಫ್ಯೂಮ್ ತಯಾರಿಕಾ ಕಾರ್ಯಕ್ರಮವನ್ನು ಆಯೋಜಿಸಿದೆ

ಟೈಟಾನ್ ಮಳಿಗೆಗಳಲ್ಲಿ ಉಡುಗೊರೆ ಸಂಭ್ರಮ ಆಚರಿಸಿ, ಅಚ್ಚರಿಪಡಿ

Profile Ashok Nayak May 9, 2025 5:22 PM

ಬೆಂಗಳೂರು: ಪರಿಮಳಕ್ಕೆ ಹಳೆಯ ಮಧುರ ನೆನಪುಗಳನ್ನು ಜಾಗೃತಗೊಳಿಸುವ ಶಕ್ತಿ ಇದೆ ಮತ್ತು ಬಹುತೇಕರಿಗೆ ಅಮ್ಮನ ಪರಿಮಳವು ಅತ್ಯಂತ ನೆಮ್ಮದಿಯನ್ನು, ಶಾಂತಿಯನ್ನು, ಸಮಾಧಾನವನ್ನು ಹಾಗೂ ಆನಂದವನ್ನು ಒದಗಿಸುತ್ತದೆ. ಅದಕ್ಕೆ ಪೂರಕವಾಗಿ ಟೈಟಾನ್ ವರ್ಲ್ಡ್‌ ಸಂಸ್ಥೆಯು ಅಮ್ಮನ ಜೊತೆಗಿನ ಬಾಂಧವ್ಯವನ್ನು ಸಂಭ್ರಮಿಸಲು ಈ ವರ್ಷದ ಅಮ್ಮಂದಿರ ದಿನದ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ಇರುವ ಎಲ್ಲಾ ಮಳಿಗೆಗಳಲ್ಲಿಯೂ ಪರ್ಫ್ಯೂಮ್ ತಯಾರಿಕಾ ಕಾರ್ಯಕ್ರಮ ವನ್ನು ಆಯೋಜಿಸಿದೆ.

ಅಮ್ಮಂದಿರನ್ನು ಆ ದಿನ ಮಳಿಗೆಗೆ ಕರೆದುಕೊಂಡು ಬಂದು ಆಕೆಗೆ ಅವಿಸ್ಮರಣೀಯ ಉಡುಗೊರೆ ನೀಡಲು ಸಂಸ್ಥೆಯು ಆಹ್ವಾನ ನೀಡಿದೆ. ಮೇ 10 ಮತ್ತು 11ರಂದು ಭಾರತದಾದ್ಯಂತ ಇರುವ 163ಕ್ಕೂ ಹೆಚ್ಚು ಟೈಟಾನ್ ವರ್ಲ್ಡ್ ಮಳಿಗೆಗಳಿಗೆ ಗ್ರಾಹಕರು ತಮ್ಮ ತಾಯಂದಿರೊಂದಿಗೆ ಆಗಮಿಸಿ ಅಲ್ಲಿ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿಕೊಳ್ಳಬಹುದಾಗಿದೆ. ಚಿರ ಬಾಂಧವ್ಯವನ್ನು ಸಂಭ್ರಮಿಸಲು ಸಂಸ್ಥೆಯು ವಿಶೇಷ ಪರ್ಫ್ಯೂಮ್ ತಯಾರಿಕಾ ಕಾರ್ಯಕ್ರಮವನ್ನು ಆಯೋಜಿಸಿದೆ.

ಇದನ್ನೂ ಓದಿ: IPL 2025: ʻಒಂದು ವಾರದ ಬಳಿಕ ಐಪಿಎಲ್‌ ಪಂದ್ಯಗಳು ಪುನಾರಂಭʼ-ಬಿಸಿಸಿಐ ಸ್ಪಷ್ಟನೆ!

ಈ ಕಾರ್ಯಕ್ರಮದಲ್ಲಿ ಗ್ರಾಹಕರು ಆಯ್ದ ಸುಗಂಧ ತೈಲಗಳನ್ನು ಬಳಸಿ 50 ಎಂಎಲ್ ನಷ್ಟು ವೈಯಕ್ತಿಕ ಪರ್ಫ್ಯೂಮ್ ಅನ್ನು ತಯಾರಿಸಬಹುದು. ಈ ಮೂಲಕ ಅತಿಥಿಗಳು ಸುಗಂಧ ತಯಾರಿಕೆ ಯ ಕಲೆಯನ್ನು ಕಲಿಯಬಹುದಾಗಿದೆ. ಈ ಕಾರ್ಯಕ್ರಮವನ್ನು ತಾಯಿ- ಮಕ್ಕಳು ಒಟ್ಟಿಗೆ ಪರ್ಫ್ಯೂ ಮ್ ರಚಿಸುವ ಆನಂದಕರ ಅನುಭವ ಎಂದೋ ಅಥವಾ ತಾಯಿಗಾಗಿ ಆಶ್ಚರ್ಯಕರ ಉಡುಗೊರೆ ನೀಡುವ ಸಿಹಿಯಾದ ಅಚ್ಚರಿ ಎಂದೋ ಕರೆಯಬಹುದಾದರೂ ಎಲ್ಲಕ್ಕಿಂತ ಹೆಚ್ಚಾಗಿ ಈ ಕಾರ್ಯ ಕ್ರಮವು ಹಳೆಯ ನೆನಪನ್ನು, ಮಧುರ ಕ್ಷಣಗಳನ್ನು ಸಂಭ್ರಮಿಸುವ ಕ್ಷಣವಾಗಿದೆ ಮತ್ತು ಬಾಂಧವ್ಯ ವನ್ನು ಮತ್ತಷ್ಟು ಆಹ್ಲಾದಕರಗೊಳಿಸುವ ವಿಶೇಷ ಸಂದರ್ಭವಾಗಿದೆ.

ಅಮ್ಮ ಮತ್ತು ಮಕ್ಕಳು ಜೊತೆಯಾಗಿ ಕಳೆಯಬಹುದಾದ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಟೈಟಾನ್‌ ಸಂಸ್ಥೆಯು ಗ್ರಾಹಕರಿಗೆ ಸಾಂಪ್ರದಾಯಿಕ ಶಾಪಿಂಗ್‌ ಗಿಂತ ಭಿನ್ನವಾದ, ಸಂತೋಷಕರವಾದ, ಸಂವಾದಾತ್ಮಕ ಅನುಭವವನ್ನು ಒದಗಿಸುವ ಉದ್ದೇಶಕ್ಕೆ ಪೂರಕವಾಗಿ ಆಯೋಜನೆಯಾಗಿದೆ. ವಿಶೇಷವಾಗಿ ಗ್ರಾಹಕರಿಗೆ ಉತ್ತಮ ಅನುಭವ ಒದಗಿಸುವ ಬ್ರಾಂಡ್ ನ ಹೊಸ ವಿಧಾನಕ್ಕೆ ಇದು ಉತ್ತಮ ಪುರಾವೆಯಾಗಿದೆ.

ಈ ಅಮ್ಮಂದಿರ ದಿನದ ವಿಶೇಷ ಕಾರ್ಯಕ್ರಮದ ಕುರಿತು ಮಾತನಾಡಿರುವ ಟೈಟಾನ್ ಕಂಪನಿ ಲಿಮಿಟೆಡ್ ನ ವಾಚಸ್ ಮತ್ತು ವೇರೇಬಲ್ಸ್‌ ನ ಚೀಫ್ ಸೇಲ್ಸ್ ಅಂಡ್ ಮಾರ್ಕೆಟಿಂಗ್ ಆಫೀಸರ್ ಮತ್ತು ವೈಸ್ ಪ್ರೆಸಿಡೆಂಟ್ ಶ್ರೀ ರಾಹುಲ್ ಶುಕ್ಲಾ ಅವರು, "ಟೈಟಾನ್‌ ಸಂಸ್ಥೆಯು ಸಂಬಂಧ, ಬಾಂಧವ್ಯಗಳು ಬಹಳ ಮುಖ್ಯ ಎಂದು ನಂಬುತ್ತದೆ ಮತ್ತು ನಾವು ಯಾವಾಗಲೂ ಸಂಬಂಧಗಳನ್ನು ಸಂಭ್ರಮಿಸುವ ಕಡೆಗೆ ಗಮನ ಹರಿಸುತ್ತೇವೆ. ಈ ವಿಶಿಷ್ಟ ಪರ್ಫ್ಯೂಮ್ ತಯಾರಿಕಾ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ನಾವು ಗ್ರಾಹಕರಿಗೆ ಕೇವಲ ಉಡುಗೊರೆ ನೀಡುವ ಅವಕಾಶ ಮಾತ್ರವೇ ಅಲ್ಲ, ಅಮ್ಮನ ಜೊತೆಗೆ ಶಾಶ್ವತವಾದ, ಆಹ್ಲಾದಕರ, ಭಾವನಾತ್ಮಕ ನೆನಪನ್ನು ಸೃಷ್ಟಿಸುವ ವಿಶೇಷವಾದ, ಆಪ್ತವಾದ ಮತ್ತು ತೀರಾ ವೈಯಕ್ತಿಕವಾದ ಅವಕಾಶವನ್ನು ಒದಗಿಸು ತ್ತಿದ್ದೇವೆ. ಈ ಕಾರ್ಯಕ್ರಮವು ಅರ್ಥಪೂರ್ಣ ಕ್ಷಣಗಳು ಮತ್ತು ಶಾಶ್ವತ ಬಾಂಧವ್ಯ ಎಂಬ ಟೈಟಾನ್‌ ನ ಮೌಲ್ಯಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ," ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮಕ್ಕಾಗಿಯೇ ಟೈಟಾನ್ ವರ್ಲ್ಡ್ ಮಳಿಗೆಗಳಲ್ಲಿ ವಿಶೇಷ ವಲಯಗಳನ್ನು ಸ್ಥಾಪಿಸ ಲಾಗಿದ್ದು, ತಜ್ಞರ ಮಾರ್ಗದರ್ಶನದಲ್ಲಿ ಗ್ರಾಹಕರು ಅಲ್ಲಿನ ಸುಗಂಧ ದ್ರವ್ಯಗಳ ವಿವಿಧ ಗುಣ ಲಕ್ಷಣಗಳನ್ನು ಅರಿತು, ತಮ್ಮದೇ ಆದ ವಿಶಿಷ್ಟ ಸಂಯೋಜನೆಯ ಪರ್ಫ್ಯೂಮ್ ಅನ್ನು ರಚಿಸ ಬಹುದು. ಹಾಗೆ ತಾವೇ ತಯಾರಿಸಿದ ಪರ್ಫ್ಯೂಮ್‌ ಅನ್ನು ಉನ್ನತ ಗುಣಮಟ್ಟದ ಬಾಟಲಿಯಲ್ಲಿ ಹಾಕಿ ಕೊಂಡೊಯ್ಯಬಹುದು. ಇದು ಅಮ್ಮಂದಿರ ದಿನಕ್ಕೆ ಅತ್ಯುತ್ತಮವಾದ ಮತ್ತು ಶಾಶ್ವತವಾಗಿ ನೆನಪಲ್ಲಿ ಉಳಿಯುವ ಶಾಶ್ವತ ಸ್ಮರಣಿಕೆಯಾಗಲಿದೆ.

ಬೆಂಗಳೂರಿನ ಬಸವನಗುಡಿ, ಸರ್ಜಾಪುರ, ಯಲಹಂಕ, ಆರ್.ಟಿ.ನಗರ, ಇಂದಿರಾ ನಗರ, ಕೆಂಗೇರಿ, ಜಯನಗರ, ನ್ಯೂ ಬೆಲ್ ರೋಡ್, ಮಾರತ್ತಹಳ್ಳಿ, ಎಚ್‌ಆರ್‌ಬಿಆರ್ ಲೇಔಟ್, ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ ರೋಡ್, ಮಲ್ಲೇಶ್ವರಂ, ಮತ್ತು ರಾಜಾಜಿನಗರಗಳಲ್ಲಿ ಇರುವ ಟೈಟಾನ್ ವರ್ಲ್ಡ್ ಮಳಿಗೆಗಳಲ್ಲಿ ಗ್ರಾಹಕರು ಈ ವಿಶೇಷ ಅನುಭವವನ್ನು ಹೊಂದಬಹುದು.