ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Drugs Ban: ರಾಜ್ಯದಲ್ಲಿ 15 ಔಷಧ, ಸೌಂದರ್ಯವರ್ಧಕಗಳ ಬಳಕೆಗೆ ನಿರ್ಬಂಧ ವಿಧಿಸಿ ಸರ್ಕಾರ ಆದೇಶ

ಗುಣಮಟ್ಟ ಪರೀಕ್ಷೆಯಲ್ಲಿ ಪೋಮೋಲ್​-650 (ಪ್ಯಾರಾಸಿಟಮೋಲ್), ಮೈಸೂರಿನ ಸೈಕಲ್‌ ಬ್ರ್ಯಾಂಡ್‌ ಕಂಪನಿಯ ಓ ಶಾಂತಿ ಗೋಲ್ಡ್ ಕುಂಕುಮ್, ವಿವಿಧ ಕಂಪನಿಗಳ ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​​ ಇನ್​ಜೆಕ್ಷನ್​ ಐಪಿ(ರಿಂಗರ್‌ ಲ್ಯಾಕ್ಟೇಟ್ ಸಲ್ಯೂಷನ್) ಸೇರಿ 15 ಔಷಧ ಹಾಗೂ ಸೌಂದರ್ಯವರ್ಧಕಗಳು ಅಸುರಕ್ಷಿತ ಎಂದು ವರದಿ ಬಂದಿದೆ.

ರಾಜ್ಯದಲ್ಲಿ 15 ಔಷಧ, ಸೌಂದರ್ಯವರ್ಧಕಗಳ ಬಳಕೆ ನಿಷೇಧ

Profile Prabhakara R Jun 25, 2025 8:53 PM

ಬೆಂಗಳೂರು: ಕರ್ನಾಟಕದ ಔಷಧ ಪರೀಕ್ಷಾ ಪ್ರಯೋಗಾಲಯವು ವಿವಿಧ ಕಂಪನಿಗಳ 15 ಔಷಧ, ಸೌಂದರ್ಯವರ್ಧಕಗಳು 'ಪ್ರಮಾಣೀಕೃತ ಗುಣಮಟ್ಟದಲ್ಲಿಲ್ಲ' ಎಂದು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಈ ಔಷಧಗಳ ಬಳಕೆಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ನಿರ್ಬಂಧಿತ ಔಷಧ ಮತ್ತು ಕಾಂತಿವರ್ಧಕಗಳನ್ನು (Drugs Ban) ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್​ಹೋಂನವರು ದಾಸ್ತಾನು ಮಾಡುವುದು, ಮಾರಾಟ ಮಾಡುವುದು ಅಥವಾ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ ಎಂದು ಉಪ ಔಷಧ ನಿಯಂತ್ರಕರು ಮತ್ತು ನಿಯಂತ್ರಣಾಧಿಕಾರಿ ಬಿ.ಪಿ.ಅರುಣ್‌ ತಿಳಿಸಿದ್ದಾರೆ.

ಗುಣಮಟ್ಟ ಪರೀಕ್ಷೆಯಲ್ಲಿ ಪೋಮೋಲ್​-650 (ಪ್ಯಾರಾಸಿಟಮೋಲ್), ಮೈಸೂರಿನ ಸೈಕಲ್‌ ಬ್ರ್ಯಾಂಡ್‌ ಕಂಪನಿಯ ಓ ಶಾಂತಿ ಗೋಲ್ಡ್ ಕುಂಕುಮ್, ವಿವಿಧ ಕಂಪನಿಗಳ ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​​ ಇನ್​ಜೆಕ್ಷನ್​ ಐಪಿ(ರಿಂಗರ್‌ ಲ್ಯಾಕ್ಟೆಟ್ ಸಲ್ಯೂಷನ್ ಫಾರ್‌ ಇಂಜೆಕ್ಷನ್ ) ಸೇರಿ 15 ಔಷಧ ಹಾಗೂ ಸೌಂದರ್ಯವರ್ಧಕಗಳು ಅಸುರಕ್ಷಿತ ಎಂದು ವರದಿ ಬಂದಿದೆ. ರಾಜ್ಯ, ಹೊರ ರಾಜ್ಯದ ಔಷಧ ತಯಾರಿಕಾ ಕಂಪನಿಗಳು ಈ ಪಟ್ಟಿಯಲ್ಲಿವೆ. ಹೀಗಾಗಿ ಅಸುರಕ್ಷಿತ ಔಷಧ ಬಳಕೆ ಮತ್ತು ಮಾರಾಟ ಮಾಡದಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಯಾವೆಲ್ಲ ಔಷಧಗಳಿಗೆ ನಿರ್ಬಂಧ:

  1. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​​ ಇನ್​ಜೆಕ್ಷನ್​ ಐಪಿ – ಮೆ. ಅಲ್ಟ್ರಾ ಲ್ಯಾಬೋರೇಟರಿಸ್​ ಪ್ರೈ. ಲಿಮಿಟೆಡ್​.
  2. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​ ಇನ್​ಜೆಕ್ಷನ್​ ಐಪಿ – ಮೇ. ಟಾಮ್​ ಬ್ರಾನ್​ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್​.
  3. ಪೋಮೋಲ್​-650 (ಪ್ಯಾರಾಸಿಟಮೋಲ್​ ಟ್ಯಾಬ್ಲೆಟಸ್​ ಐ.ಪಿ 650 ಎಂಜಿ)- ಮೇ. ಅಬಾನ್​ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್.
  4. ಮಿಟು ಕ್ಯೂ7 ಸಿರಪ್​ – ಮೆ. ಬಯೋನ್​ ಥೆರಾಪ್ಯಾಟಿಕ್ಸ್​ ಇಂಡಿಯಾ ಪ್ರೈ. ಲಿಮಿಟೆಡ್​
  5. ಸ್ಟೈರಲ್​ ಡಿಲ್ಯೈಯಂಟ್​ ಪಾರ್ ರೆಕಾನೋಸ್ಟಿಟಿಶ್ಯೂನ್​ ಆಪ್​ ಎನ್​ಡಿ, ಐಬಿ, ಐಬಿಡಿ ಆ್ಯಂಡ್​ ಕಾಂಬಿನೇಷನ್​ ವ್ಯಾಕ್ಸಿನ್ಸ್​ ಫಾರ್​ ಪೌಲ್ಟ್ರೀ (ವೆಟರ್​ನರಿ) ಮಲ್ಟಿ ಡೋಸ್​ ವಿಲಾ 200 ಎಂಲ್​ – ಮೇ. ಸೇಫ್​ ಪೇರೆಂಟರಲ್ಸ್​ ಪ್ರೈ. ಲಿಮಿಟೆಡ್.
  6. ಸ್ಪಾನ್​ಪ್ಲಾಕ್ಸ್​-ಓಡ್​ ಟ್ಯಾಬ್ಲೆಟ್ಸ್​ (ಓಪ್ಲಾಕ್ಸಸಿನ್​ & ಓರ್ನಿಡಜೋಲ್ ಟ್ಯಾಬ್ಲೆಟ್ಸ್​ ಐಪಿ) – ಮೆ. ಇಂಡೋರಾಮ ಹೇಲ್ತ್​ ಕೇಸ್​ ಪ್ರೈ ಲಿಮಿಟಿಡ್​.
  7. ಪ್ಯಾಂಟೋಕೋಟ್​-ಡಿಎಸ್​ಆರ್​ (ಪ್ಯಾಂಟೋಫ್ರಜೋಲ್​ ಗ್ಯಾಸ್ಟ್ರೋ-ರಿಜಿಸ್ಟೆಂಟ್​ & ಡೋಮ್​ಫೆರಿಡನ್​ ಪ್ರೋಕಾಂಗಡ್​ ರಿಲಿಸ್​​ ಕ್ಯಾಪ್ಸೂಲ್ಸ್​ ಐಪಿ – ಮೇ. ಸ್ವೆಫ್ನೆ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್​.
  8. ಸೋಡಿಯಂ ಕ್ಲೋರೈಡ್​ ಇನ್​ಜೆಕ್ಷನ್​ ಐಪಿ 0.9% ಡಬ್ಲ್ಯೂ/ವಿ (ಎನ್​ಎಸ್​) – ಮೆ. ಪುನಿಷ್ಕ ಇನ್​ಜೆಕ್ಟಬಲ್​ ಪ್ರೈ. ಲಿಮಿಟೆಡ್​
  9. ಸೋಡಿಯಂ ಕ್ಲೋರೈಡ್​ ಇನ್​ಜೆಕ್ಷನ್​ ಐಪಿ 0.9% ಡಬ್ಲ್ಯೂ/ವಿ (ಎನ್​ಎಸ್​) – ಮೆ. ಪುನಿಷ್ಕ ಇನ್​ಜೆಕ್ಟಬಲ್​ ಪ್ರೈ. ಲಿಮಿಟೆಡ್​.
  10. ಅಲ್ಪಾ ಲಿಪೋಯಿಕ್​ ಆಸಿಡ್​, ಪೋಲಿಕ್​ ಆಸಿಡ್​, ಮಿಥೈಲ್​ ಕೋಬಾಲಮಿನ್, ವಿಟಮಿನ್​ ಬಿ6 & ವಿಟಮಿನ್​ ಡಿ3ಟ್ಯಾಬ್ಲೆಟ್ಸ್​ – ಮೇ. ಇಸ್ಟ್​ ಆಪ್ರಿಕನ್​ (ಇಂಡಿಯಾ) ಓವರ್​ಸಿಸ್​.
  11. ಓ ಶಾಂತಿ ಗೋಲ್ಡ್ ಕ್ಲಾಸ್​ ಕುಂಕುಮ್​ – ಮೇ. ಎನ್​. ರಂಗರಾವ್​ & ಸನ್ಸ್​ ಪ್ರೈ ಲಿಮಿಟೆಡ್​.
  12. ಪಿರಾಸಿಡ್​-ಓ ಸಸ್​ಪೆನ್​ಶನ್​ (ಸಲ್ಕ್ರಾಲ್ಫೇಟ್​ & ಆಕ್ಸೆಟಾಕೈನ್​ ಸಸ್​ಪೆನ್​ಶನ್​) – ಮೆ. ರೆಡ್ನಕ್ಸ್ ಫಾರ್ಮಾಸ್ಯೂಟಿಕಲ್ಸ್​ ಪ್ರೈ ಲಿಮಿಟೆಡ್​.
  13. ಗ್ಲಿಮಿಜ್​-2 (ಗ್ಲಿಮಿಫೆರೈಡ್​ ಟ್ಯಾಬ್ಲೆಟ್ಸ್​ ಐಪಿ 2ಎಂಜಿ) – ಮೆ. ಕೆಎನ್​ಎಂ ಫಾರ್ಮಾ ಪ್ರೈ. ಲಿಮಿಟೆಡ್​.
  14. ಐರನ್​ ಸುಕ್ರೋಸ್​ ಇನ್​ಜೆಕ್ಷನ್​ ಯುಎಸ್​ಪಿ 100ಎಂಜಿ (ಐರೋಗೈನ್​) – ಮೆ. ರೀಗೈನ್​ ಲ್ಯಾಬೋರೇಟರಿಸ್​
  15. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​ ಇನ್​ಜೆಕ್ಷನ್​ ಐಪಿ (ರಿಂರ್ಗ ಲ್ಯಾಕ್ಟೆಟ್ ಸಲೂಷನ್​ ಪಾರ್​ ಇನ್​ಜೆಕ್ಷನ್​ ಆರ್​ಎಲ್​ – ಮೇ. ಒಟ್ಸುಕಾ ಫಾರ್ಮಾಸ್ಯೂಟಿಕಲ್ಸ್​ ಇಂಡಿಯಾ



ಈ ಸುದ್ದಿಯನ್ನೂ ಓದಿ | Building Plan: ಇನ್ನುಮುಂದೆ ಕಟ್ಟಡ ನಕ್ಷೆ ಅನುಮತಿ ಇಲ್ಲದೆ ಯಾರೂ ಮನೆ ಕಟ್ಟುವಂತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ: ಆರೋಗ್ಯ ಸಚಿವ

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಪ್ರತಿಕ್ರಿಯಿಸಿ, ಕರ್ನಾಟಕದ ಔಷಧ ಪರೀಕ್ಷಾ ಪ್ರಯೋಗಾಲಯವು 15 ಔಷಧಗಳು/ಸೌಂದರ್ಯವರ್ಧಕಗಳನ್ನು 'ಪ್ರಮಾಣೀಕೃತ ಗುಣಮಟ್ಟದಲ್ಲಿಲ್ಲ' ಎಂದು ಅಭಿಪ್ರಾಯಪಟ್ಟಿದೆ. ಎಲ್ಲಾ ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಈ ಉತ್ಪನ್ನಗಳನ್ನು ಸಂಗ್ರಹಿಸುವುದು/ಮಾರಾಟ ಮಾಡುವುದು/ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಆಸ್ಪತ್ರೆ, ಔಷಧ ಮಳಿಗೆಗಳಲ್ಲಿ ಯಾವುದೇ ಸಂಗ್ರಹ ಇದ್ದರೆ, ನಿಮ್ಮ ಸ್ಥಳೀಯ ಔಷಧ ನಿರೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರಿಗೆ ತಕ್ಷಣವೇ ತಿಳಿಸಬೇಕು.

ನಿಮ್ಮ ಸುರಕ್ಷತೆ ನಮ್ಮ ಆದ್ಯತೆ. ದಯವಿಟ್ಟು ಪಟ್ಟಿಯಲ್ಲಿರುವ ಬ್ಯಾಚ್‌ನ ಔಷಧಗಳು/ಸೌಂದರ್ಯವರ್ಧಕಗಳನ್ನು ಬಳಸಬೇಡಿ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.