Lauren Gottlieb: ಹನಿಮೂನ್ ಟ್ರಿಪ್ನಲ್ಲಿ ಸಖತ್ ಸೆಕ್ಸಿಯಾಗಿ ಕಾಣಿಸಿಕೊಂಡ ನಟಿ ಲಾರೆನ್ ಗಾಟ್ಲೀಬ್
ಅಮೆರಿಕದ ಜನಪ್ರಿಯ ಡ್ಯಾನ್ಸರ್ಗಳಲ್ಲಿ ಒಬ್ಬರಾಗಿರುವ ಲಾರೆನ್ ಗಾಟ್ಲೀಬ್ ಇತ್ತೀಚೆಗಷ್ಟೇ ಬಹು ಕಾಲದ ಗೆಳೆಯ ಟೋಬಿಯಾಸ್ ಜೋನ್ಸ್ ಅವರನ್ನು ವಿವಾಹವಾಗಿದ್ದಾರೆ. ಇವರ ಮದುವೆ ಸಮಾರಂಭವು ಇಟಲಿಯ ಟಸ್ಕನಿಯಲ್ಲಿ ಜೂನ್ 11ರಂದು ನಡೆಯಿತು. ಇದೀಗ ಈ ಜೋಡಿ ಇಂಡೋನೇಷ್ಯಾದ ಬಾಲಿಗೆ ಹನಿಮೂನ್ಗೆ ತೆರಳಿದ್ದಾರೆ.

Lauren Gottlieb


ಲಾರೆನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹನಿಮೂನ್ ಟ್ರಿಪ್ ಎಂಜಾಯ್ ಮಾಡಿದ ಹಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಬಾಲಿಯಲ್ಲಿ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿ ಕೊಂಡಿದ್ದಾರೆ. ಇದೀಗ ನಟಿಯ ಅತ್ಯಂತ ಸೆಕ್ಸಿಯೆಸ್ಟ್ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತಮ್ಮ ಬೋಲ್ಡ್ ಸ್ಟೈಲ್ನಿಂದ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಲಾರೆನ್ಗೆ ಸೋಶಿಯಲ್ ಮೀಡಿಯಾದಲ್ಲೂ ಬಹಳಷ್ಟು ಫ್ಯಾನ್ಸ್ ಇದ್ದಾರೆ. ಫೋಟೊದಲ್ಲಿ ನಟಿ ಪ್ರಿಂಟೆಡ್ ಬಿಕಿನಿ ತೊಟ್ಟು ಈಜುಕೊಳದ ಬಳಿ ಮಾದಕವಾಗಿ ಪೋಸ್ ನೀಡಿದ್ದಾರೆ.

ನಟಿ ಮೆರೊನ್ ಪ್ರಿಂಟೆಡ್ ಬಿಕಿನಿಯಲ್ಲಿ ತಮ್ಮ ಫಿಟ್ ಫಿಗರ್ ತೋರಿಸಿದ್ದಾರೆ. ಹೂವಿನಿಂದ ವಿನ್ಯಾಸಗೊಳಿಸಿರುವ ಬಾತ್ ಟಬ್ನಲ್ಲಿ ನಟಿ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಸ್ಲಿಮ್ ಬ್ಯೂಟಿಯ ಅಂದವನ್ನು ನೋಡಿ ಹುಡುಗರು ವ್ಹಾವ್ ಎಂದು ಹುಬ್ಬೇರಿಸುತ್ತಿದ್ದಾರೆ.

ಹಾಸಿಗೆ ಮೇಲೆ ಟವಲ್ ಡೆಕೋರ್ ಜೊತೆಗೆ ನಟಿ ಸೆಕ್ಸಿ ಪೋಸ್ ಕೊಟ್ಟಿದ್ದಾರೆ. ಇದೀಗ ನಟಿಯ ಮೈಮಾಟ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಲಾರೆನ್ ಭಾರತದ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ʼಝಲಕ್ ದಿಕ್ಲಾಜಾʼದಲ್ಲಿ 2013ರಲ್ಲಿ ಭಾಗ ವಹಿಸಿ ರನ್ನರ್ ಅಪ್ ಆಗಿದ್ದರು. ಹಿಂದಿಯ ʼಎಬಿಸಿಡಿʼ ಸುಶಾಂತ್ ರಜಪೂತ್ ನಟಿಸಿದ್ದ ʼಡಿಟೆಕ್ಟಿವ್ ಬ್ಯೂಮಕೇಶ ಬಕ್ಷಿʼ, ವರುಣ್ ಧವನ್ ನಟನೆಯ ʼಎಬಿಸಿಡಿ 2ʼ, ಪಂಜಾಬಿ ಸಿನಿಮಾ ʼಅಂಬರಸರಿಯಾʼ, ನವಾಜುದ್ದೀನ್ ಸಿದ್ಧಿಕಿ ನಟನೆಯ ʼಗೂಮ್ಕೇತುʼ ಸಿನಿಮಾಗಳ ಹಾಡುಗಳಲ್ಲಿ ಸೊಂಟ ಬಳುಕಿಸಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.