ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ED Raid: 50 ಕೋಟಿ ರೂ. ಪಾವತಿಸಿ ಶ್ವಾನ ಖರೀದಿಸಿದ್ದಾಗಿ ಘೋಷಿಸಿದ್ದ ಬೆಂಗಳೂರು ವ್ಯಕ್ತಿಗೆ ಇಡಿ ಶಾಕ್‌; ಮನೆ ಮೇಲೆ ದಾಳಿ

Cadabomb Okami: ಸುಮಾರು 50 ಕೋಟಿ ರೂ. ಪಾವತಿಸಿ ಅಪರೂಪದ ಶ್ವಾನತಳಿ ವುಲ್ಫ್‌ಡಾಗ್‌ ಅನ್ನು ಖರೀದಿಸಿದ್ದಾಗಿ ಹೇಳಿಕೊಂಡಿದ್ದ ಬೆಂಗಳೂರಿನ ಎಸ್‌.ಸತೀಶ್‌ಗೆ ಜಾರಿ ನಿರ್ದೇಶನಾಲಯ ಶಾಕ್‌ ನೀಡಿದೆ. ಅವರ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದೆ.

50 ಕೋಟಿ ರೂ. ಪಾವತಿಸಿ ಶ್ವಾನ ಖರೀದಿಸಿದ ವ್ಯಕ್ತಿಗೆ ಇಡಿ ಶಾಕ್‌

Profile Ramesh B Apr 17, 2025 9:54 PM

ಬೆಂಗಳೂರು: ಸುಮಾರು 50 ಕೋಟಿ ರೂ. ಪಾವತಿಸಿ ಅಪರೂಪದ ಶ್ವಾನತಳಿ ವುಲ್ಫ್‌ಡಾಗ್‌ (Wolfdog) ಅನ್ನು ಖರೀದಿಸಿದ್ದಾಗಿ ಹೇಳಿಕೊಂಡಿದ್ದ ಬೆಂಗಳೂರಿನ ಎಸ್‌.ಸತೀಶ್‌ಗೆ ಜಾರಿ ನಿರ್ದೇಶನಾಲಯ (Enforcement Directorate) ಶಾಕ್‌ ನೀಡಿದೆ. ಗುರುವಾರ (ಏ. 17) ಜೆಪಿ ನಗರ 3ನೇ ಹಂತದಲ್ಲಿರುವ ಸತೀಶ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು (ED Raid), ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಯ ಬೆಲೆ 50 ಕೋಟಿ ರೂ. ಎನ್ನುವುದು ಸುಳ್ಳು ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ. ಸದ್ಯ ಇಡಿ ಅಧಿಕಾರಿಗಳು ಸತೀಶ್​ನನ್ನು ವಶಕ್ಕೆ ಪಡೆದಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆಯ ಸಾಧ್ಯತೆಯನ್ನು ಪತ್ತೆಹಚ್ಚಲು ಇಡಿ ಈ ಪರಿಶೀಲನೆ ನಡೆಸಿದೆ.

ʼʼಸತೀಶ್‌ ಅವರ ಮನೆಗೆ ದಾಳಿ ನಡೆಸಿ ತನಿಖೆ ನಡೆಸಿದ್ದೇವೆʼʼ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಸತೀಶ್‌ ಫೆಬ್ರವರಿಯಲ್ಲಿ ಕಡಬಾಮ್ ಒಕಾಮಿ (Cadabomb Okami) ಎಂದು ಕರೆಯಲ್ಪಡುವ ಅಪರೂಪದ ತೋಳ ನಾಯಿಯನ್ನು ವಿದೇಶದಿಂದ ಖರೀದಿಸಿದ್ದರು. ಈ ವೇಳೆ ಅವರು ಇದನ್ನು ಖರೀದಿಸಲು ಸುಮಾರು 50 ಕೋಟಿ ರೂ. ಖರ್ಚು ಮಾಡಿದ್ದಾಗಿ ಹೇಳಿಕೊಂಡಿದ್ದರು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

50 ಕೋಟಿ ರೂ. ಬೆಲೆಯದ್ದು ಎನ್ನಲಾದ ಶ್ವಾನದ ವಿಡಿಯೊ ನೋಡಿ:

ದಾಳಿ ವೇಳೆ ಸತೀಶ್‌ ಅವರ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ʼʼಶ್ವಾನ ಖರೀದಿಯ ವೇಳೆ ಸತೀಶ್‌ ಖಾತೆಯಿಂದ ದೊಡ್ಡ ಮೊತ್ತ ವರ್ಗಾವಣೆಯಾಗಿರುವುದು ಕಂಡುಬಂದಿಲ್ಲ'' ಎಂದು ತಿಳಿಸಿದ್ದಾರೆ. ಹೀಗಾಗಿ ಶ್ವಾನ ಖರೀದಿಗೆ ಇಷ್ಟೊಂದು ಮೊತ್ತ ಪಾವತಿಸಿರುವುದು ಸುಳ್ಳು ಎನ್ನುವುದು ಸಾಬೀತಾಗಿದೆ. ʼʼಇಷ್ಟು ದೊಡ್ಡ ಮೊತ್ತ ಪಾವತಿಸಿದ್ದಾಗಿ ಯಾರಾದರೂ ಘೋಷಿಸಿದರೆ ಅಕ್ರಮ ಹಣಕಾಸು ಚಟುಚಟಿಕೆ ನಡೆದಿರುವ ಶಂಕೆ ವ್ಯಕ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದೇವೆʼʼ ಎಂದು ಅವರು ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Dodda Alada Mara: ಬೆಂಗಳೂರಿನಲ್ಲಿದೆ ದೇಶದ 4ನೇ ದೊಡ್ಡ ಆಲದ ಮರ; ಪ್ರಕೃತಿಪ್ರಿಯರು ಭೇಟಿ ನೀಡಲೇಬೇಕಾದ ಜಾಗ ಇದು

ಸತೀಶ್‌ ಹೇಳುವಂತೆ ಈ ಶ್ವಾನ ವಿದೇಶಿ ತಳಿ ಅಲ್ಲ ಎನ್ನುವ ಮಾತೂ ಇದೀಗ ಕೇಳಿ ಬಂದಿದೆ. ʼʼಇದು ಭಾರತೀಯ ತಳಿಯ ಶ್ವಾನ. ಅದಾಗ್ಯೂ ಈ ಬಗ್ಗೆ ಪರಿಶೋಧನೆ ನಡೆಸುತ್ತಿದ್ದೇವೆ. ಸತೀಶ್‌ ಅವರ ವಿಚಾರಣೆ ಮುಂದುವರಿದಿದೆʼʼ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನ್ಯೂಯಾರ್ಕ್‌ ಪೋಸ್ಟ್‌ ವರದಿ ಪ್ರಕಾರ ಭಾರತೀಯ ಶ್ವಾನ ತಳಿಯಗಳ ಸಂಸ್ಥೆಯ ಅಧ್ಯಕ್ಷ ಸತೀಶ್‌ ಅವರು ಈ ನಾಯಿಯನ್ನು ಖರೀದಿಸಲು ಸುಮಾರು 50 ಕೋಟಿ (5.7 ಮಿಲಿಯನ್ ಡಾಲರ್‌) ಪಾವತಿಸಿದ್ದಾರೆ. ಈ ಅಪರೂಪದ ಶ್ವಾನ ತಳಿ ವುಲ್ಫ್‌ ಮತ್ತು ಕಾಕೇಶಿಯನ್ ಶೆಫರ್ಡ್ ತಳಿಗಳ ಮಿಶ್ರಣವಾಗಿದ್ದು, ಈ ತಳಿಯಲ್ಲಿ ಇದು ಮೊದಲನೆಯದ್ದು. ಇದನ್ನು ಪ್ರಪಂಚದ ಅತ್ಯಂತ ದುಬಾರಿ ತಳಿಯ ಸ್ವಾನ ಎಂದು ಪರಿಗಣಿಸಲಾಗುತ್ತದೆಯಂತೆ. ಅಮೆರಿಕದಲ್ಲಿ ಜನಿಸಿದ ಈ 8 ತಿಂಗಳ ಶ್ವಾನ ಬರೋಬ್ಬರಿ 5 ಕೆಜಿ ಭಾರ ಹೊಂದಿದೆ. ಇದಕ್ಕೆ ಪ್ರತಿದಿನ ಸುಮಾರು 3 ಕೆಜಿ ಮಾಂಸ ಬೇಕು ಎಂದಿದೆ.

ಬೆಂಗಳೂರು ಮೂಲದ ಸತೀಶ್‌ ಹಲವು ಶ್ವಾನ ತಳಿ ಸಂಘಗಳನ್ನು ಮುನ್ನಡೆಸುತ್ತಿದ್ದಾರೆ. ಸದ್ಯ ಅವರು ಶ್ವಾನಕ್ಕೆ 50 ಕೋಟಿ ರೂ. ಪಾವತಿಸಿದ್ದಾಗಿ ಹೇಳಿದ್ದು ಸುಳ್ಳೆಂದು ಸಾಬೀತಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.