Chikkaballapur News: ಕನ್ನಡ ಭವನ ಲೋಕಾರ್ಪಣೆ, ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಒಲಿದು ಬರದ ಶುಭ ಮುಹೂರ್ತ
ಬರೋಬ್ಬರಿ 13 ವರ್ಷಗಳ ಹಿಂದೆ ಡಾ.ಕೆ.ಸುಧಾಕರ್ ಶಾಸಕರಾಗಿ ವೀರಪ್ಪ ಮೊಯಿಲಿ ಕೇಂದ್ರ ಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರಾರಂಭವಾದ ರಂಗಮಂದಿರದ ಕಾಮಗಾರಿ ಅಂದು ಕೊಂಡಂತೆ ಆಗಿದಿದ್ದರೆ ಜನಬಳಕೆಗೆ ಬಂದು ದಶಕವೇ ಕಳೆಯುತ್ತಿತ್ತು.ಆದರೆ ರಾಜಕೀಯ ಇಚ್ಛಾಶಕ್ತಿ, ಅನುದಾನದ ಕೊರತೆ ಜನಪ್ರತಿನಿಧಿಗಳ ಪ್ರತಿಷ್ಟೆಗಳ ನಡುವೆ ಸದ್ಯ ಕಾಮಗಾರಿ ಪೂರ್ಣ ಗೊಂಡು ಲೋಕಾರ್ಪಣೆಗೆ ಸಜ್ಜಾಗುವ ವೇಳೆಗೆ ಭರ್ತಿ 12 ವರ್ಷಗಳು ಕಳೆದಿವೆ ಎಂದರೆ ಆಶ್ಚರ್ಯ ವಾಗುತ್ತದೆ


ಮುನಿರಾಜು ಎಂ ಅರಿಕೆರೆ
ಪೋಪ್ ಪ್ರಾನ್ಸಿಸ್ ನಿಧನದ ಕಾರಣ ಏ 23ರ ನಿಗದಿತ ಕಾರ್ಯಕ್ರಮ ಎರಡನೇ ಬಾರಿ ಮುಂದೂಡಿಕೆ
ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಕಲೆ ಸಾಹಿತ್ಯ ಸಂಸ್ಕೃತಿಯ ಪೋಷಣೆಗೆ ಮಹಾಮನೆಯಾಗಲಿರುವ ಕನ್ನಡ ಭವನದ ಲೋಕಾರ್ಪಣೆ ಮತ್ತು 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಎರಡಕ್ಕೂ ಯಾಕೋ ಶುಭಮಹೂರ್ತ ಕೂಡಿ ಬರದಿರುವುದು ಸಾರ್ವಜನಿಕ ವಲಯದಲ್ಲಿ ಥರಾವರಿ ಚರ್ಚೆ ಗಳಿಗೆ ವೇದಿಕೆಯನ್ನು ಒದಗಿಸಿದೆ. ಹೌದು. ಬರೋಬ್ಬರಿ 13 ವರ್ಷಗಳ ಹಿಂದೆ ಡಾ.ಕೆ.ಸುಧಾಕರ್ ಶಾಸಕರಾಗಿ ವೀರಪ್ಪ ಮೊಯಿಲಿ ಕೇಂದ್ರ ಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರಾರಂಭವಾದ ರಂಗಮಂದಿರದ ಕಾಮಗಾರಿ ಅಂದು ಕೊಂಡಂತೆ ಆಗಿದಿದ್ದರೆ ಜನಬಳಕೆಗೆ ಬಂದು ದಶಕವೇ ಕಳೆಯುತ್ತಿತ್ತು.ಆದರೆ ರಾಜಕೀಯ ಇಚ್ಚಾ ಶಕ್ತಿ, ಅನುದಾನದ ಕೊರತೆ ಜನಪ್ರತಿನಿಧಿಗಳ ಪ್ರತಿಷ್ಟೆಗಳ ನಡುವೆ ಸದ್ಯ ಕಾಮಗಾರಿ ಪೂರ್ಣ ಗೊಂಡು ಲೋಕಾರ್ಪಣೆಗೆ ಸಜ್ಜಾಗುವ ವೇಳೆಗೆ ಭರ್ತಿ 12 ವರ್ಷಗಳು ಕಳೆದಿವೆ ಎಂದರೆ ಆಶ್ಚರ್ಯ ವಾಗುತ್ತದೆ.
ಈ 12 ವರ್ಷಗಳ ಸುದೀರ್ಘ ಪಯಣದ ನಡುವೆ ರಾಜಕಾರಣ ಮತ್ತು ರಾಜಕಾರಣಿಗಳ ವರಸೆ ಬದಲಾದಂತೆ ಕನ್ನಡ ಭವನದ ಚಹರೆಯೂ ಬದಲಾಗಿದೆ. ಕಾಮಗಾರಿಯ ವೆಚ್ಚವೂ ಏರಿಕೆ ಯಾದಂತೆ ಅದನ್ನೆಲ್ಲಾ ಸರಿದೂಗಿಸಿ ಮುನ್ನಡೆಸಲು ಒಬ್ಬ ಸಮರ್ಥ ದಂಡನಾಯಕನ ಅಗತ್ಯ ವನ್ನು ಕಾಲವೇ ಬಯಸಿತ್ತು ಎಂಬಂತೆ ಸಚಿವ ಡಾ.ಎಂ.ಸಿ.ಸುಧಾಕರ್ ಮೂಲಕ ದಶಕಕ್ಕೂ ಮೀರಿದ ಕನಸಿಗೆ ಜೀವಂತಿಕೆ ಬಂದು, ರಂಗಮಂದಿರದ ಪಾಳುಬಂಗಲೆ ಕನ್ನಡ ಭವನವಾಗಿ ನವವಧುವಿನಂತೆ ಮೈಕೊಡವಿ ಎದ್ದು ನಿಂತಿದೆ.
ಇದನ್ನೂ ಓದಿ: China Visa: 85 ಸಾವಿರಕ್ಕೂ ಹೆಚ್ಚು ಭಾರತೀಯರಿಗೆ ಚೀನಾ ವೀಸಾ
ನಿಜ ಯುಧರ್ಮದಾಟದ ಸೂತ್ರದಾರಿಗಳೆಂಬಂತೆ ಚಿಕ್ಕಬಳ್ಳಾಪುರಕ್ಕೆ ನೂತನ ಶಾಸಕರು ಬಂದAತೆ ಜಿಲ್ಲಾ ಉಸ್ತುವಾರಿ ಸಚಿವರೂ ಬದಲಾದರು.ಇದಾದ ಮೇಲೆ ಮಂದಿರ ನಿರ್ಮಾಣಕ್ಕಿದ್ಧ ಅಡೆತಡೆ ಗಳು ಮಂಜಿನಂತೆ ಕರಗಿ ಕನ್ನಡ ಭವನ ನಿರ್ಮಾಣದ ಕಾಮಗಾರಿ ಮುಗಿದು ಏ23ಕ್ಕೆ ಉದ್ಘಾಟನೆ ಆಗಬೇಕಿತ್ತು.
ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯಭಾರ ಬಂತಲ್ಲ ಎಂಬ ಮಾತಿನಂತೆ ಕನ್ನಡ ಭವನದ ಲೋಕಾರ್ಪಣೆಗೆ ಶುಭ ಮಹೂರ್ತ ಕೂಡಿಬಂತಲ್ಲ ಎಂದು ಜನತೆ ನಿಟ್ಟುಸಿರು ಬಿಟ್ಟು, ಲೋಕಾ ರ್ಪಣೆಯೊಂದಿಗೆ 10ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡುವ ತಯಾರಿಯಲ್ಲಿ ಎಲ್ಲರೂ ಮುಳುಗಿ ದ್ದರು.

ಇದರ ಭಾಗವಾಗಿ ಜವಾಬ್ದಾರಿಯ ಹಂಚಿಕೆ ಹೂಗಳ ಖರೀದಿ, ತರಕಾರಿ ಖರೀದಿ, ದಿನಸಿ ಖರೀದಿ ಮುಗಿದಿದ್ದು ಅಡುಗೆ ಭಟ್ಟರ ತಂಡವೂ ಒಕ್ಕಲಿಗರ ಕಲ್ಯಾಣ ಮಂಟಪಕ್ಕೆ ಬಂದು ಬೀಡು ಬಿಟ್ಟಿತ್ತು. ಹಾಲಿಗೆ ಆರ್ಡರ್ ಮಾಡಿದ್ದು ಡೇರಿಯಿಂದ ತರಬೇಕಿತ್ತು.ಜಿಲ್ಲಾ ಕೇಂದ್ರವೂ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಮ್ಮೇಳನದ ಬ್ಯಾನರ್‌ಗಳು ರಾರಾಜಿಸಿದ್ದವು.
ಜಿಲ್ಲಾಧಿಕಾರಿಗಳು, ಕಸಾಪ ಪದಾಧಿಕಾರಿಗಳು, ಸದಸ್ಯರು,ಕನ್ನಡಪರ ಸಂಘಟನೆಗಳ ಪದಾಧಿಕಾರಿ ಗಳು, ಆಹ್ವಾನ ಪತ್ರಿಕೆಗಳನ್ನು ಹಂಚಿ, ಕನ್ನಡಧ್ವಜಗಳನ್ನು ಸಿದ್ಧಪಡಿಸಿದ್ದರು. ಶಾಲಾ ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಸಕಾಲಕ್ಕೆ ಬರಲು ತಿಳಿಸಿ ಶಿಸ್ತಿನ ಪಾಠ ಮಾಡಿದ್ದರು. ಈ ಎಲ್ಲಾ ಚಟವಟಿಕೆಗಳಿಗೆ ಈಗ ಬ್ರೇಕ್ ಬಿದ್ದಿದೆ.
ಕಾರಣ ಜಾಗತಿಕ ಶಾಂತಿದೂತ ಅಜಾತ ಶತೃ ಕ್ರಿಶ್ಚಿಯನ್ ಧರ್ಮಗುರು ೮೮ ವರ್ಷದ ಪೋಪ್ ಪ್ರಾನ್ಸಿಸ್ ನಿಧನರಾಗಿರುವ ಸುದ್ಧಿ ಹೊರಬಂದಿದೆ. ಇವರ ಗೌರವಾರ್ಥವಾಗಿ ಏ.೨೩,೨೪ ಎರಡು ದಿನಗಳ ಕಾಲ ಭಾರತ ಸರಕಾರ ದೇಶಾದ್ಯಂತ ಶೋಕಾಚರಣೆ ಮಾಡಲು ನಿಧರಿಸಿದೆ. ಈ ಅವಧಿ ಯಲ್ಲಿ ಯಾವುದೇ ಅಧಿಕೃತ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸದಂತೆ ನಿಷೇಧಿಸ ಲಾಗಿದೆ.ಇದೇ ಕಾರಣವಾಗಿ ಭವನದ ಲೋಕಾರ್ಪಣೆಗೆ ತಡೆಬಿದ್ದಿದೆ.
ಅಂದರೆ ಹಿಂದೆಯೂ ಇದೇ ಏಪ್ರಿಲ್ ೮,೯ರಂದು ಈ ಕಾರ್ಯಕ್ರಮ ನಡೆಯಬೇಕಾಗಿತ್ತು. ಆಗಲೂ ಇದೇ ರೀತಿ ಎಲ್ಲಾ ಚಟವಟಿಕೆಗಳು ಗರಿಗೆದರಿದ್ದವು.ಆದರೆ ಕನ್ನಡ ಭವನದ ನಿರ್ಮಾಣಕ್ಕೆ ಬೇಕಾದ ಹಣಕಾಸಿನ ಸಮಸ್ಯೆಯನ್ನು ಪರಿಹರಿಸಿ ಭವನ ಸುಂದರವಾಗಿ ಮೂಡಿಬರಲು ನೆರವು ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರ ಕೈಯಿಂದಲೇ ಉದ್ಘಾಟನೆ ಮಾಡಿಸುವ ಮನಸ್ಸು ಹೊಂದಿದ್ದ ಉಸ್ತುವಾರಿ ಸಚಿವರು ಈ ದಿನಗಳಲ್ಲಿ ಅವರ ಸಮಯ ಹೊಂದಾಣಿಕೆಯಾಗದ ಕಾರಣ ಮೊದಲ ಬಾರಿಗೆ ಮುಂದೂಡಿಕೆ ಮಾಡಲಾಗಿತ್ತು.
ಈಗ ಪೋಪ್ ಅವರ ನಿಧನದ ಕಾರಣ ಮುಂದೂಡುವಂತಾಗಿದ್ದು ಮುಂದಿನ ದಿನಾಂಕ ಪ್ರಕಟಿ ಸುವುದಾಗಿ ಕನ್ನಡ ಸಂಸ್ಕೃತಿ ಇಲಾಖೆ, ಮತ್ತು ಜಿಲ್ಲಾ ಕಸಾಪ, ಜಿಲ್ಲಾಡಳಿತ ಅಧಿಸೂಚನೆ ಹೊರಡಿಸಿವೆ.
ಈ ನಡುವೆ ಅನೇಕ ರೀತಿಯ ಚರ್ಚೆಗಳು ಮುನ್ನೆಲೆಗೆ ಬಂದಿವೆ.ಅದರಲ್ಲಿ ಮುಖ್ಯ 13 ವರ್ಷಗಳ ಹಿಂದೆ ಕನ್ನಡ ಭವನದ ಶಂಕುಸ್ಥಾಪನೆ ಒಳ್ಳೆಯ ಮಹೂರ್ತದಲ್ಲಿ ಆಗಿಲ್ಲ.ಅಲ್ಲದೆ ಇದಕ್ಕೆ ಕಾರಣ ಕರ್ತರಾದ ನಾಯಕರೂ ಕೂಡ ಶುಭ ವೇಳೆಯಲ್ಲಿ ಬಂದು ಭೂಮಿಪೂಜೆ ನೆರವೇರಿಸಿಲ್ಲ. ಇದಕ್ಕಾ ಗಿಯೇ ಉದ್ಘಾಟನೆ ವೇಳೆಗೆ ಹೀಗೆ ಅಡ್ಡಿ ಆತಂಕಗಳು ಎದುರಾಗುತ್ತಿವೆ. ಕಳೆದ ವಾರ ಕನ್ನಡ ಭವನ ಪಕ್ಕದ ಕಲ್ಯಾಣಿಗೆ ಒಬ್ಬ ಸುಮಂಗಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೆಲ್ಲಾ ಜನತೆ ಮಾತಾಡಿಕೊಳ್ಳುತ್ತಿದ್ದಾರೆ.
ಏನೇ ಆಗಲಿ ಕನ್ನಡ ಭವನದ ಲೋಕಾರ್ಪಣೆಯ ದಿನಾಂಕ ಮುಂದೆ ಮುಂದೆ ಹೋಗುತ್ತಿರುವು ದಕ್ಕೂ, ಇದರ ಹಿನ್ನೆಲೆಯಲ್ಲಿ ಘಟಿಸುತ್ತಿರುವ ಘಟನಾವಳಿಗೂ ಸಂಬಂಧವೇ ಇಲ್ಲ. ಇಂತಹ ಕಾಗಕ್ಕನ ಗೂಬಕ್ಕನ ಕಥೆಗಳಿಗೆ ಈ ಆಧುನಿಕ ಕಾಲದಲ್ಲಿ ಕವಡೆಕಾಸಿನ ಬೆಲೆಯಿಲ್ಲದಿದ್ದರೂ ಇಂತಹ ಸಂದರ್ಭಗಳಲ್ಲಿ ಮಾತ್ರ ಜನರ ನಂಬಿಕೆಯ ಮೇಲೆ ಈ ಅಂತೆ ಕಂತೆಗಳೇ ನೇರ ಪ್ರಭಾವ ಉಂಟು ಮಾಡುತ್ತಿರುವುದು ಸುಳ್ಳಲ್ಲ.
ಇದನ್ನು ಮನಗಂಡು ಜಿಲ್ಲಾಡಳಿತ ಮತ್ತು ಘನ ಸರಕಾರ ಮುಂದಿನ ಸಾರಿ ನಿಗದಿ ಮಾಡುವ ದಿನಾಂಕದಲ್ಲಿಯೇ ಭವನದ ಉದ್ಘಾಟನೆ ಮತ್ತು 10 ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಿರ್ವಿಘ್ನ ವಾಗಿ ನಡೆಸಲು ಕ್ರಮವಹಿಸುವಂತಾಗಲಿ ಎನ್ನುವುದೇ ಪ್ರಜ್ಞಾವಂತರ ಅಭಿಪ್ರಾಯವಾಗಿದೆ.