Sub Registrar Office: ಗುಡ್ ನ್ಯೂಸ್; ಇನ್ಮುಂದೆ ರಜಾ ದಿನಗಳಲ್ಲೂ ತೆರೆದಿರಲಿವೆ ಸಬ್ ರಿಜಿಸ್ಟ್ರಾರ್ ಕಚೇರಿಗಳು!
Sub Registrar Office: ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿಗಳು ಜೂನ್ 1ರಿಂದ ಡಿ. 28 ವರೆಗೆ ಬರುವ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳ ರಜಾದಿನಗಳಂದು ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ರಜಾದಿನಗಳಂದು ಕರ್ತವ್ಯ ನಿರ್ವಹಿಸುವ ಒಂದು ಉಪನೋಂದಣಿ ಕಚೇರಿಗೆ ಮಂಗಳವಾರದ ದಿನವನ್ನು ರಜಾ ದಿನವೆಂದು ಘೋಷಿಸಲಾಗಿದೆ.


ಬೆಂಗಳೂರು: ಆಸ್ತಿ ನೋಂದಣಿ ಸೇರಿ ಇತರ ದಾಖಲೆಗಳನ್ನು ಮಾಡಿಸಲು ಸಾರ್ವಜನಿಕರಿಗೆ ಅನುಕೂಲವಾಗಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ನುಮುಂದೆ ಉಪನೋಂದಣಿ ಕಚೇರಿಗಳು (Sub Registrar Office) 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳ ರಜಾದಿನಗಳಂದು ಕಾರ್ಯನಿರ್ವಹಿಸಲಿದ್ದು, ಈ ಸಂಬಂಧ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸುತ್ತೋಲೆ ಹೊರಡಿಸಿದೆ.
ಇನ್ನು ಸರ್ಕಾರದ ಅಧಿಸೂಚನೆ ಪತ್ರದಲ್ಲಿ ಸೂಚಿಸಿರುವಂತೆ ರಾಜ್ಯದ ಪ್ರತಿಯೊಂದು ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳ ರಜಾದಿನಗಳಂದು ಕರ್ತವ್ಯ ನಿರ್ವಹಿಸುವ ಒಂದು ಉಪನೋಂದಣಿ ಕಚೇರಿಗೆ ಮಂಗಳವಾರದ ದಿನವನ್ನು ರಜಾ ದಿನವೆಂದು ಘೋಷಿಸಲಾಗಿದೆ.
ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿಗಳು ಜೂನ್ 1ರಿಂದ ಡಿ. 28 ವರೆಗೆ ಬರುವ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳ ರಜಾದಿನಗಳಂದು ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಇನ್ನು ನಿಗದಿಪಡಿಸಿದ ದಿನಾಂಕಗಳಂದು ಕರ್ತವ್ಯ ನಿರ್ವಹಿಸಿದ ಉಪನೋಂದಣಾಧಿಕಾರಿಗಳು, ರಜಾ ದಿನದಲ್ಲಿ ಕಚೇರಿ ಕಾರ್ಯನಿರ್ವಹಿಸಿದ ಕಚೇರಿಗಳಿಗೆ ಮುಂದಿನ ಮಂಗಳವಾರ ದಿನ ರಜಾ ನೀಡಲು ಸೂಚಿಸಲಾಗಿದೆ.

ಬೆಂಗಳೂರಿನ ಬಸವನಗುಡಿ ಉಪ ನೋಂದಣಾಧಿಕಾರಿಗಳ ಕಚೇರಿ, ಗಾಂಧಿನಗರ, ಜಯನಗರ, ರಾಜಾಜಿನಗರದ ಮಾದನಾಯಕನಹಳ್ಳಿ, ಶಿವಾಜಿನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕಚೇರಿ ಕೆಲಸದ ದಿನ ಮತ್ತು ರಜಾ ದಿನಗಳಂದೂ ಕಾರ್ಯ ನಿರ್ವಹಿಸಲಿವೆ.
ಈ ಸುದ್ದಿಯನ್ನೂ ಓದಿ | Covid-19 Test: ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲು ಆರೋಗ್ಯ ಇಲಾಖೆ ಸೂಚನೆ
ಜತೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಾದ ಚಿತ್ರದುರ್ಗ ಉಪನೋಂದಣಾಧಿಕಾರಿಗಳ ಕಚೇರಿ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ದಾವಣಗೆರೆ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಯ ಕುಣಿಗಲ್ ಕಚೇರಿ, ಕೋಲಾರ, ಬೆಳಗಾವಿ ಜಿಲ್ಲೆಯ ಮೂಡಲಗಿ ಕಚೇರಿ, ಬಾಗಲಕೋಟೆ ಜಿಲ್ಲೆಯ ಇಳಕಲ್ ಕಚೇರಿ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಉತ್ತರ ಉಪ ನೋಂದಣಿ ಕಚೇರಿ, ಗದಗ ಜಿಲ್ಲೆಯ ಗಜೇಂದ್ರಗಢ ಕಚೇರಿ, ಕಾರವಾರ/ ಉತ್ತರ ಕನ್ನಡದ ಕುಮಟಾ ಕಚೇರಿ, ಹಾವೇರಿ, ವಿಜಯಪುರ, ಚಾಮರಾಜನಗರ ಜಿಲ್ಲೆಯ ಕುದೇರು ಕಚೇರಿ, ಹಾಸನ ಜಿಲ್ಲೆಯ ಸಕಲೇಶಪುರ ಕಚೇರಿ, ಕೊಡಗು ಜಿಲ್ಲೆಯ ಮಡಿಕೇರಿ ಉಪ ನೋಂದಣಿ ಕಚೇರಿ, ಚಿಕ್ಕಮಗಳೂರು ಉಪ ನೋಂದಣಿ ಕಚೇರಿ, ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಸಿಟಿ ಉಪನೋಂದಣಾಧಿಕಾರಿಗಳ ಕಚೇರಿ, ಮಂಡ್ಯ ಜಿಲ್ಲೆಯ ಮಳವಳ್ಳಿ, ಮೈಸೂರು ಜಿಲ್ಲೆಯ ಮೈಸೂರು ದಕ್ಷಿಣ ಉಪ ನೋಂದಣಿ ಕಚೇರಿ, ಉಡುಪಿ, ಕೊಪ್ಪಳ ಜಿಲ್ಲೆಯ ಗಂಗಾವತಿ, ಬೀದರ್, ಗುಲ್ಬರ್ಗಾ, ರಾಯಚೂರು ಕಚೇರಿ, ಯಾದಗಿರಿ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಕಚೇರಿಗಳು ರಜಾದಿನಗಳಂದು ಕಾರ್ಯನಿರ್ವಹಿಸಲಿವೆ.