The Royals: ವಾರ್ಡ್ ರೋಬ್ಗೂ ಸೈ ಜೀನತ್ ಈ ರಾಯಲ್ಸ್ ಲುಕ್
ಫ್ಯಾಷನ್ ಲೋಕದಲ್ಲಿ ಕೆಲವೊಮ್ಮೆ ಹಳೆಯದು ಮರುಕಳಿಸುತ್ತದೆ. ಇದರಲ್ಲಿ ಹೆಚ್ಚಾಗಿ ರಾಯಲ್ಸ್ ಲುಕ್ ಕೊಡುವ ಉಡುಗೆಗಳೂ ಸೇರಿರುತ್ತವೆ. ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುತ್ತಿರುವ ʼದಿ ರಾಯಲ್ಸ್ʼ ವೆಬ್ ಸರಣಿಯಲ್ಲಿ ಬಾಲಿವುಡ್ ನ ಹಿರಿಯ ನಟಿ ಜೀನತ್ ಅಮನ್ ತಮ್ಮ ಧಿರಿಸಿನ ಮೂಲಕ ಪುರಾತನ ಸಂಸ್ಕೃತಿಯ ಸೊಬಗಿಗೆ ಮರು ವ್ಯಾಖ್ಯಾನ ನೀಡಿದ್ದಾರೆ.



ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುತ್ತಿರುವ ʼದಿ ರಾಯಲ್ಸ್ʼ ವೆಬ್ ಸಿರೀಸ್ನಲ್ಲಿ ಬಾಲಿವುಡ್ನ ಹಿರಿಯ ನಟಿ ಜೀನತ್ ಸಾಂಪ್ರದಾಯಿಕತೆಯಿಂದ ಆಧುನಿಕತೆವರೆಗಿನ ಫ್ಯಾಷನ್ ಉಡುಗೆಯಲ್ಲಿ ಮಿಂಚಿದ್ದಾರೆ. ʼದಿ ರಾಯಲ್ಸ್ʼನಲ್ಲಿ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜೀನತ್ ರಾಯಲ್ಸ್ ಲುಕ್ನ ಉಡುಗೆಯಲ್ಲಿ ಮಿಂಚಿದ್ದಾರೆ.

ಸಾಂಪ್ರದಾಯಿಕ ಧಿರಿಸನ್ನು ಇಷ್ಟಪಡುವವರು ರಾಯಲ್ಸ್ನಲ್ಲಿ ಹಿರಿಯ ನಟಿ ಜೀನತ್ ಅಮನ್ ಅನುಕರಿಸಿರುವ ಫ್ಯಾಷನ್ ಅನುಸರಿಸಬಹುದು. ಸಾಂಪ್ರದಾಯಿಕತೆಯಿಂದ ಅಧುನಿಕತೆಗೂ ಸರಿಹೊಂದುವಂತ ಈ ಉಡುಗೆಗಳು ವಾರ್ಡ್ ರೋಬ್ನಲ್ಲಿದ್ದರೆ ವಿಶೇಷ ಸಂದರ್ಭಗಳಲ್ಲಿ ಕ್ಲಾಸಿಕ್ ರೂಪದಲ್ಲಿ ಮಿಂಚಬಹುದು.

ʼರಾಯಲ್ಸ್ʼನಲ್ಲಿ ಹಿರಿಯ ನಟಿ ಜೀನತ್ ಕಿತ್ತಳೆ ಬಣ್ಣದ ಲೆಹೆಂಗಾದೊಂದಿಗೆ ಸಾಂಪ್ರದಾಯಿಕ ಶೈಲಿಯ ಆಭರಣಗಳು ಮತ್ತು ಅದಕ್ಕೆ ಸರಿ ಹೊಂದುವ ಚೋಲಿಯನ್ನು ಧರಿಸಿದ್ದರು. ಕುತ್ತಿಗೆ ಮತ್ತು ತಲೆಯ ಸುತ್ತಲೂ ಅರೆಪಾರದರ್ಶಕ ದುಪಟ್ಟಾವನ್ನು ಸುತ್ತಿ ಸಾಂಪ್ರದಾಯಿಕ ಲುಕ್ ನೀಡಿದ್ದಾರೆ.

ಇನ್ನೊಂದು ಲುಕ್ನಲ್ಲಿ ನಟಿ ಜೀನತ್ ವೆಲ್ವೆಟ್ ಕಫ್ತಾನ್ನಲ್ಲಿ ತಮ್ಮ ಸೊಬಗನ್ನು ಪ್ರದರ್ಶಿಸಿದ್ದಾರೆ. ಮುತ್ತು ಮತ್ತು ಪಚ್ಚೆ ಎಳೆ ಹಾರ, ಕಿವಿಯೋಲೆಗಳು, ಉಂಗುರ ಮತ್ತು ಬಳೆಗಳೊಂದಿಗೆ ಮಿಂಚಿದ್ದು,ಇದರಲ್ಲಿ ಅವರು ಬ್ರಿಟಿಷ್ ರಾಣಿಯಂತೆ ಕಂಗೊಳಿಸುತ್ತಿದ್ದಾರೆ.

ಉದ್ದವಾದ ಗುಲಾಬಿ ಬಣ್ಣದ ಜಾಕೆಟ್ನೊಂದಿಗೆ ಜೋಡಿಯಾಗಿರುವ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡಿರುವ ನಟಿ ಜೀನತ್ ಸೀರೆಯಲ್ಲಿ ಚಿನ್ನದ ಬಣ್ಣದ ಜರಿಯೊಂದಿಗೆ ಅಗಲವಾದ ಹೂವಿನ ಚಿತ್ರಗಳನ್ನು ಹೊಂದಿದೆ. ಇದು ಅವರಿಗೆ ರಾಜಮನೆತನದ ಲುಕ್ ಅನ್ನು ನೀಡಿದೆ. ಇದಕ್ಕೆ ತಕ್ಕುದಾದ ಆಭರಣವನ್ನು ಅವರು ಧರಿಸಿದ್ದಾರೆ.

ಇನ್ನೊಂದು ದೃಶ್ಯದಲ್ಲಿ ಹೂವಿನ ಚಿತ್ರದ ಜಾಕೆಟ್ ನಲ್ಲಿ ಮಿಂಚಿರುವ ನಟಿ ಜೀನತ್ ಕಪ್ಪು ಬಣ್ಣದ ಸೀರೆಯೊಂದಿಗೆ ತಮ್ಮ ಲುಕ್ ಅನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕೆ ತಕ್ಕುದಾಗಿ ಆಭರಣ, ಸನ್ ಗ್ಲಾಸ್ ಮತ್ತು ಚಿನ್ನದ ವಾಕಿಂಗ್ ಸ್ಟಿಕ್ ಮೂಲಕ ಮಿಂಚುತ್ತಿದ್ದಾರೆ.

ಮತ್ತೊಂದು ದೃಶ್ಯದಲ್ಲಿ ನಟಿ ಜೀನತ್ ಅವರು ಗುಲಾಬಿ ಬಣ್ಣದ ಕಫ್ತಾನ್ನಲ್ಲಿ ತಮ್ಮ ಚೆಲುವನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕೆ ತಕ್ಕುದಾಗಿ ಹಸಿರು ಆಭರಣಗಳು ಮತ್ತು ಸಿಗ್ನೇಚರ್ ಗ್ಲಾಸ್ಗಳನ್ನು ಧರಿಸಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದಾರೆ.

ನಟಿ ಜೀನತ್ ಇನ್ನೊಂದುʼ ರಾಯಲ್ಸ್ʼ ಲುಕ್ನಲ್ಲಿ ಸಂಪೂರ್ಣ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಸ್ಟೈಲಿಶ್ ಆಭರಣಗಳಿಂದ ತಮ್ಮ ಲುಕ್ ಅನ್ನು ಪೂರ್ಣಗೊಳಿಸಿದ್ದಾರೆ. ಮತ್ತೊಂದು ದೃಶ್ಯದಲ್ಲಿ ಬಿಳಿ ಬಣ್ಣದ ಉಡುಗೆಗೆ ಭುಜದ ಮೇಲೆ ಗುಲಾಬಿ ಗರಿಗಳನ್ನು ನೀಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಇನ್ನೊಂದು ದೃಶ್ಯದಲ್ಲಿ ಕಫ್ತಾನ್ ಲುಕ್ ಅವರ ಸೌಂದರ್ಯವನ್ನು ಹೆಚ್ಚುವಂತೆ ಮಾಡಿದೆ.