ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Adavi Siddharama Swamiji: ಅಡವಿಸಿದ್ದೇಶ್ವರ ಮಠದಲ್ಲಿ ಮಹಿಳೆ ಜೊತೆಗಿದ್ದ ಸ್ವಾಮೀಜಿಗೆ ಹಲ್ಲೆ, ಮಠದಿಂದ ಉಚ್ಛಾಟನೆ

Adavi Siddharama Swamiji: ಬಾಗಲಕೋಟೆ ಮೂಲದ ಮಹಿಳೆ ಮತ್ತು ಮಗಳು ಮಠಕ್ಕೆ ಬಂದಿದ್ದು, ರಾತ್ರಿ ಮಠದಲ್ಲೇ ತಂಗಿದ್ದಾರೆ. ಮಹಿಳೆಯೊಂದಿಗೆ ಸ್ವಾಮೀಜಿ ಇದ್ದಾರೆಂದು ಆರೋಪಿಸಿ ಸ್ಥಳೀಯರು ಮಠಕ್ಕೆ ನುಗ್ಗಿದ್ದರು. ಈ ವೇಳೆ ಸ್ವಾಮೀಜಿ, ‌ಮಹಿಳೆ ಮತ್ತು ಬಾಲಕಿ ಒಂದೇ ರೂಮ್​ನಲ್ಲಿರುವುದು ಕಂಡುಬಂದಿದೆ.

ಮಹಿಳೆ ಜೊತೆಗಿದ್ದ ಅಡವಿ ಸಿದ್ದರಾಮ ಸ್ವಾಮೀಜಿಗೆ ಹಲ್ಲೆ, ಮಠದಿಂದ ಉಚ್ಛಾಟನೆ

ಅಡವಿ ಸಿದ್ದರಾಮ ಸ್ವಾಮೀಜಿ

ಹರೀಶ್‌ ಕೇರ ಹರೀಶ್‌ ಕೇರ Jun 23, 2025 12:09 PM

ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದ ಅಡವಿಸಿದ್ದೇಶ್ವರ ಮಠದಲ್ಲಿ ಸ್ವಾಮೀಜಿಯಿಂದ (Adavisidddrama Swamiji) ಅನಾಚಾರ (immoral activity) ನಡೆಯುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಮಠಕ್ಕೆ ನುಗ್ಗಿ ದಾಂಧಲೆ ನಡೆಸಿ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿದ್ದಾರೆ. ಅನೈತಿಕ ಕೆಲಸ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸ್ವಾಮೀಜಿಯನ್ನು ಮಠದಿಂದಲೇ ಉಚ್ಚಾಟನೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಅಲ್ಲಿದ್ದ ಮಹಿಳೆ ಹಾಗೂ ಆಕೆ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಕೂಡ ಹಲ್ಲೆ ಮಾಡಲಾಗಿದೆ.

ಬಾಗಲಕೋಟೆ ಮೂಲದ ಮಹಿಳೆ ಮತ್ತು ಮಗಳು ಮಠಕ್ಕೆ ಬಂದಿದ್ದು, ರಾತ್ರಿ ಮಠದಲ್ಲೇ ತಂಗಿದ್ದಾರೆ. ಮಹಿಳೆಯೊಂದಿಗೆ ಸ್ವಾಮೀಜಿ ಇದ್ದಾರೆಂದು ಆರೋಪಿಸಿ ಸ್ಥಳೀಯರು ಮಠಕ್ಕೆ ನುಗ್ಗಿದ್ದರು. ಈ ವೇಳೆ ಸ್ವಾಮೀಜಿ, ‌ಮಹಿಳೆ ಮತ್ತು ಬಾಲಕಿ ಒಂದೇ ರೂಮ್​ನಲ್ಲಿರುವುದು ಕಂಡುಬಂದಿದೆ. ಆಗ ಸ್ಥಳೀಯರು ಸ್ವಾಮೀಜಿ ಮೇಲೆ ಹಲ್ಲೆ ಮಾಡಿದ್ದಾರೆ. ಇದೇ ವೇಳೆ ಸ್ಥಳೀಯರ ಜೊತೆಗಿದ್ದ ಕೆಲವರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಮಹಿಳೆಯ ಮಗಳ ಬಟ್ಟೆ ಹರಿದು ಎಳೆದಾಡಿದ್ದಾರೆ. ಅಪ್ರಾಪ್ತ ಮಗಳ ಜೊತೆಗೆ ಯುವಕರು ಅಸಭ್ಯವಾಗಿ ವರ್ತಿಸಿದ್ದಾರೆ. ರಕ್ಷಣೆಗೆ ನಿಂತ ಸ್ವಾಮೀಜಿಗೆ ಯುವಕರು ಕಪಾಳಮೋಕ್ಷ ಮಾಡಿದ್ದಾರೆ.

ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದು, ಮಹಿಳೆಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಗ್ರಾಮಸ್ಥರು ರಾತ್ರಿಯೇ ಅಡವಿಸಿದ್ದರಾಮ ಸ್ವಾಮೀಜಿಯನ್ನು ಹೊರಹಾಕಿದ್ದಾರೆ. ಸದ್ಯ ಸ್ವಾಮೀಜಿ ಬೆಳಗಾವಿ ಜಿಲ್ಲೆಯ ಗೋಕಾಕ್​ನಲ್ಲಿದ್ದಾರೆ.

ಅಪ್ರಾಪ್ತ ಬಾಲಕಿ ಕಿಡ್ನ್ಯಾಪ್, ಅತ್ಯಾಚಾರ: ಸ್ವಯಂಘೋಷಿತ ಸ್ವಾಮಿ ಅರೆಸ್ಟ್

ಇತ್ತೀಚೆಗೆ ಜಿಲ್ಲೆಯ ರಾಯಬಾಗ ತಾಲೂಕಿನ ಮೇಕಳಿ ಗ್ರಾಮದಲ್ಲಿ ರಾಮ ಮಂದಿರದ ಮಠ ಕಟ್ಟಿಕೊಂಡು ವಾಸವಿದ್ದ ಹಠಯೋಗಿ ಲೋಕೇಶ್ವರ ಸ್ವಾಮೀಜಿ ಅಪ್ರಾಪ್ತ ಬಾಲಕಿಯನ್ನು ಕಿಡ್ನ್ಯಾಪ್​ ಮಾಡಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆದಿತ್ತು. ಬಳಿಕ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದರು.

ಮೇ 13ರಂದು ಸೋದರ ಮಾವನ ಮನೆಗೆ ಹೋಗಿ ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ ನಂಬಿಸಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಆಕೆಯನ್ನು ರಾಯಚೂರಿನ ಲಾಡ್ಜ್‌ ಕರೆದುಕೊಂಡು ಹೋಗಿ ಎರಡು ದಿನ ಜೊತೆಗೆಯಲ್ಲಿ ಇರಿಸಿಕೊಂಡು ಅತ್ಯಾಚಾರ ಎಸಗಿದ್ದರು. ಬಳಿಕ ಬಾಗಲಕೋಟೆಗೆ ಕರೆದುಕೊಂಡು ಬಂದು ಅಲ್ಲಿಯೂ ದೌರ್ಜನ್ಯ ಎಸಗಿದ್ದರು. ಇಷ್ಟೇಲ್ಲಾ ಆದ ಮೇಲೆ ಬಾಲಕಿಗೆ ಧಮ್ಕಿ ಹಾಕಿ, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಈ ಬಗ್ಗೆ ಬಾಲಕಿ ಫೋಷಕರು ದೂರು ನೀಡಿದ್ದರು.

ಇದನ್ನೂ ಓದಿ: Child Rescued: 2ನೇ ಮದುವೆಗಾಗಿ ಮಗನನ್ನೇ ಅಡವಿಟ್ಟ ತಂದೆ; ರಾಜಸ್ಥಾನದಲ್ಲೊಂದು ಅಮಾನವೀಯ ಘಟನೆ