ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುಂಬೈ ಫಿಲ್ಮ್ ಸಿಟಿಯ 'ಅನುಪಮಾ' ಸೀರಿಯಲ್‌ ಶೂಟಿಂಗ್ ಸೆಟ್‌ನಲ್ಲಿ ಭಾರಿ ಅಗ್ನಿ ಅವಘಡ

ಮುಂಬೈಯ ಗೋರೆಗಾಂವ್ ಪೂರ್ವದ ಫಿಲ್ಮ್ ಸಿಟಿಯಲ್ಲಿ ಜನಪ್ರಿಯ ಧಾರಾವಾಹಿ 'ಅನುಪಮಾ' ಶೂಟಿಂಗ್ ಸೆಟ್‌ನಲ್ಲಿ ಸೋಮವಾರ ಬೆಳಗ್ಗೆ ಅಗ್ನಿ ಅವಘಾಡ ಸಂಭವಿಸಿದೆ. ಮರಾಠಿ ಬಿಗ್ ಬಾಸ್ ಸೆಟ್ ಹಿಂದಿನ ಟೆಂಟ್‌ನಲ್ಲಿ ಬೆಂಕಿ ಆರಂಭವಾಗಿದೆ. ತಕ್ಷಣ ಸ್ಪಂದಿಸಿದ ಮುಂಬೈ ಅಗ್ನಿಶಾಮಕ ದಳ ಸ್ಥಳಕ್ಕೆ ಹಲವು ಅಗ್ನಿಶಾಮಕ ಘಟಕಗಳನ್ನು ಕಳುಹಿಸಿತು. ಸದ್ಯ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ.

'ಅನುಪಮಾ' ಸೀರಿಯಲ್‌ ಶೂಟಿಂಗ್ ಸೆಟ್‌ನಲ್ಲಿ ಅಗ್ನಿ ಅವಘಡ

Profile Sushmitha Jain Jun 23, 2025 4:59 PM

ಮುಂಬೈ: ಮುಂಬೈಯ (Mumbai) ಗೋರೆಗಾಂವ್ ಪೂರ್ವದ (Goregaon East) ಫಿಲ್ಮ್ ಸಿಟಿಯಲ್ಲಿರುವ (Film City) ಜನಪ್ರಿಯ ಧಾರಾವಾಹಿ 'ಅನುಪಮಾ' (Anupamaa) ಶೂಟಿಂಗ್ ಸೆಟ್‌ನಲ್ಲಿ ಸೋಮವಾರ ಬೆಳಗ್ಗೆ (Fire) ಅಗ್ನಿ ಅವಘಾಡ ಸಂಭವಿಸಿದೆ. ಮರಾಠಿ ಬಿಗ್ ಬಾಸ್ ಸೆಟ್ ಹಿಂದಿನ ಟೆಂಟ್‌ನಲ್ಲಿ ಬೆಂಕಿ ಆರಂಭವಾಗಿದೆ. ತಕ್ಷಣ ಸ್ಪಂದಿಸಿದ ಮುಂಬೈ ಅಗ್ನಿಶಾಮಕ ದಳ ಹಲವು ಅಗ್ನಿಶಾಮಕ ಘಟಕಗಳನ್ನು ಸ್ಥಳಕ್ಕೆ ಕಳುಹಿಸಿತು. ಬೆಳಗ್ಗೆ 6 ಗಂಟೆ ಸುಮಾರಿಗೆ ಆರಂಭವಾದ ಬೆಂಕಿಯನ್ನು ಇದೀಗ ಸಂಪೂರ್ಣ ನಿಯಂತ್ರಣಕ್ಕೆ ತರಲಾಗಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಸೋಮವಾರ ಬೆಳಗ್ಗೆ ಬೆಂಕಿಯ ವರದಿಯಾಗಿದ್ದು, 6:26ಕ್ಕೆ ಇದನ್ನು ಲೆವೆಲ್-1 ಘಟನೆ ಎಂದು ಘೋಷಿಸಲಾಯಿತು. ತುರ್ತು ಸೇವೆಗಳು ತಕ್ಷಣ ಕಾರ್ಯಪ್ರವೃತ್ತವಾಗಿ, ನಾಲ್ಕು ಅಗ್ನಿಶಾಮಕ ವಾಹನಗಳು ಮತ್ತು ನಾಲ್ಕು ಜಂಬೋ ಟ್ಯಾಂಕರ್‌ಗಳನ್ನು ಸ್ಥಳಕ್ಕೆ ಕಳುಹಿಸಿದವು" ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ಹೇಳಿದರು.

ಈ ಸುದ್ದಿಯನ್ನೂ ಓದಿ: Virat Kohli: ವಿರಾಟ್ ಕೊಹ್ಲಿ-ನಟಿ ಜೆನಿಲಿಯಾ ಅಭಿನಯದ ಆ ಜಾಹೀರಾತು ಪ್ರಸಾರವಾದ ತಕ್ಷಣಕ್ಕೆ ಬ್ಯಾನ್ ಆಯ್ತು; ಕಾರಣ ಏನು?



ಅಧಿಕೃತ ಹೇಳಿಕೆಯಲ್ಲಿ ಬೆಂಕಿಯಿಂದ ವಿದ್ಯುತ್ ತಂತಿಗಳು, ಪ್ಲಾಸ್ಟಿಕ್ ವಸ್ತುಗಳು, ಕಬ್ಬಿಣದ ವಸ್ತುಗಳು, ಅಲಂಕಾರಿಕ ವಸ್ತುಗಳು, ಕ್ಯಾಮೆರಾಗಳು, ವೇಷಭೂಷಣಗಳು ಮತ್ತು ಇತರ ಸ್ಟುಡಿಯೋ ಉಪಕರಣಗಳಿಗೆ ಹಾನಿಯಾಗಿದೆ ಎಂದು ದೃಢಪಡಿಸಲಾಗಿದೆ.

ಒಟ್ಟು 5,000 ಚದರ ಅಡಿ ಪ್ರದೇಶವು ಈ ಬೆಂಕಿಯಿಂದ ಹಾನಿಗೊಳಗಾಗಿದ್ದು, ಪ್ರಮುಖವಾಗಿ 'ಅನುಪಮಾ' ಸ್ಟುಡಿಯೋ ವಲಯಕ್ಕೆ ತಗುಲಿದೆ. ಫಿಲ್ಮ್ ಸಿಟಿ ರಸ್ತೆಯ ಸಮೀಪದಲ್ಲಿ ಹೆಚ್ಚುವರಿ ಹಾನಿಯಾಗಿದೆ. ಬೆಂಕಿಯ ನಿಖರ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ಶೂಟಿಂಗ್ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಪೂರ್ಣ ಸುರಕ್ಷತಾ ತಪಾಸಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.