ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Arshad Warsi: ಗೋವಾದಲ್ಲಿದೆ ಅರ್ಷದ್ ವಾರ್ಸಿಯವರ 150 ವರ್ಷ ಹಳೆಯದಾದ ಪೋರ್ಚುಗೀಸ್ ಬಂಗಲೆ! ವಿಡಿಯೋ ನೋಡಿ

ಚಲನಚಿತ್ರ ನಟ ಅರ್ಶದ್ ವಾರ್ಸಿ ತಮ್ಮ 150 ವರ್ಷ ಹಳೆಯದಾದ ಪೋರ್ಚುಗೀಸ್ ಶೈಲಿಯ ಆಸ್ತಿಯ ಅಪರೂಪದ ಚಿತ್ರವನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಗೋವಾದ ಸಲೀಗಾವ್ ಎಂಬ ಹಳ್ಳಿಯಲ್ಲಿರುವ ಈ ಐದು ಕೊಠಡಿಗಳ ಮನೆಗೆ ಕಾಸಾ ಝೆನ್ ಎಂದು ಹೆಸರಿಡಲಾಗಿದೆ.

ಗೋವಾದಲ್ಲಿದೆ ಅರ್ಷದ್ ವಾರ್ಸಿಯವರ 150 ವರ್ಷ ಹಳೆಯದಾದ ಪೋರ್ಚುಗೀಸ್ ಬಂಗಲೆ

Profile Vishakha Bhat May 8, 2025 5:24 PM

ಪಣಜಿ: ಚಲನಚಿತ್ರ ನಟ ಅರ್ಷದ್‌ ವಾರ್ಸಿ (Arshad Warsi) ತಮ್ಮ 150 ವರ್ಷ ಹಳೆಯದಾದ ಪೋರ್ಚುಗೀಸ್ ಶೈಲಿಯ ಆಸ್ತಿಯ ಅಪರೂಪದ ಚಿತ್ರವನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಗೋವಾದ ಸಲೀಗಾವ್ ಎಂಬ ಹಳ್ಳಿಯಲ್ಲಿರುವ ಐದು ಕೊಠಡಿಗಳ ಮನೆಗೆ ಕಾಸಾ ಝೆನ್ ಎಂದು ಹೆಸರಿಡಲಾಗಿದೆ. ಪೂರ್ತಿಯಾಗಿ ಪುನಃಸ್ಥಾಪನೆಯಾದ ಈ ಮನೆ ಪುರಾತನ ಶೈಲಿಯಲ್ಲಿಯೇ ಆಧುನಿಕ ಸೌಂದರ್ಯವನ್ನು ಹೊಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವಾರ್ಸಿ ಹಂಚಿದ ವಿಡಿಯೋದಲ್ಲಿ ತಮ್ಮ ಮನೆಯ ಶಾಂತ ದೈನಂದಿನ ಜೀವನಶೈಲಿಯನ್ನು ತೋರಿಸಿದ್ದಾರೆ.

ವಿಡಿಯೋ ಹಂಚಿಕೊಂಡಿದ್ದು, ಮನೆ ಹಾಗೂ ಸುತ್ತಲಿನ ಹಸಿರು ಸೌಂದರ್ಯವನ್ನು ಮನಮೋಹಕವಾಗಿ ಹಿಡಿದಿಟ್ಟಿದೆ. ವಿಡಿಯೋದಲ್ಲಿ ಅವರು ಬಿಳಿಯಾದ ಮನೆಗೆ ಕಂದು ಬಣ್ಣದ ಅಲಂಕಾರಗಳಿರುವ ಭವ್ಯ ಬಹಿರಂಗ ದ್ವಾರವಿದೆ. ನಡೆಯಲು ಹೊಸ ತಾಣ ಸಿಕ್ಕಂತಾಗಿದೆ ಎಂದು ವಾರ್ಸಿ ವಿಡಿಯೋದಲ್ಲಿ ಹೇಳಿದ್ದಾರೆ. ಮನೆಯ ಒಳಗೆ ಪುರಾತನ ಮತ್ತು ಆಧುನಿಕ ಪೀಠೋಪಕರಣಗಳ ಸುಂದರ ಮಿಶ್ರಣ ಇದೆ. ಆರಾಮದಾಯಕ ಸೋಫಾಗಳು ಆಕರ್ಷಕ ಊಟದ ಮೇಜುಗಳು ಮತ್ತು ಹಳೆಯ ಶೈಲಿಯ ಕುರ್ಚಿಗಳಿವೆ.

ಚಲನಚಿತ್ರ ನಟ ಅರ್ಷದ್‌ ವಾರ್ಸಿಯ ಮನೆಯ ಆವರಣದಲ್ಲಿ ಮಾವಿನ ಮರಗಳು ಗಮನ ಸೆಳೆಯುತ್ತವೆ ಇಂದು ನಾನು ಮನೆಯ ಹೊರಗೆ ಈ ತೋಟದಲ್ಲಿ ಕುಳಿತುಕೊಂಡು ತುಂಬಾ ಆನಂದಮಯವಾಗಿ ಸಮಯ ಕಳೆದಿದ್ದೇನೆ. ಹಸಿರಿನಿಂದ ಕೂಡಿದ ಮರದಲ್ಲಿ ಮಾವುಗಳಿವೆ. ಇಲ್ಲಿ ಕುಳಿತು ವಿಶ್ರಾಂತಿ ಪಡೆಯಲು ಮತ್ತು ನನಗೆ ಇಂತಹ ಸುಂದರ ಜೀವನವನ್ನು ಕಲ್ಪಿಸಿ ಕೊಟ್ಟ ಎಲ್ಲರಿಗೂ ಧನ್ಯವಾದ ಹೇಳಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ. ಪೋರ್ಚುಗೀಸ್ ಶೈಲಿಯಲ್ಲಿನ ಈ ವಿಲ್ಲಾಗೆ ಎತ್ತರದ ಮೆಟ್ಟಿಲುಗಳು, ವೃತ್ತಾಕಾರದ ಬಾಗಿಲುಗಳು ಮತ್ತು ಮರದ ಚೌಕಾಕಾರದ ಕಿಟಕಿಗಳು ವಿಶೇಷತೆಯಿಂದ ಕೂಡಿವೆ. ಜೊತೆಗೆ, ದಂಪತಿಗಳು ಆಯ್ದ ಬಣ್ಣಗಳನ್ನ ಹಾಗೂ ಹಸಿರು ಸಸ್ಯಗಳಿಂದ ಅದಕ್ಕೆ ಹೊಸ ಆಯಮ ನೀಡಿದ್ದಾರೆ. ಕಾಡು ಥೀಮ್ ಅಡಿಗೃಹ, ಹಸಿರು ನೀಲಿ ಬಣ್ಣದ ಕ್ಯಾಬಿನೆಟ್ ಮತ್ತು ಆಕರ್ಷಕ ನೀಲಿ ಬಾಗಿಲು ಗಮನ ಸೆಳೆಯುವ ವೈಶಿಷ್ಟ್ಯಗಳು ಮತ್ತು ಅಲಂಕಾರಿಕ ವಸ್ತುಗಳು ಮನೆಗೆ ಇನ್ನಷ್ಟೂ ಶೋಭೆ ನೀಡಿವೆ.

ಈ ಸುದ್ದಿಯನ್ನೂ ಓದಿ: Vastu Tips: ಮನೆಗೆ ಬರುವ ನಕಾರಾತ್ಮಕ ಶಕ್ತಿಯನ್ನು ಮನೆ ಬಾಗಿಲಿನಲ್ಲೇ ತಡೆಯಿರಿ

ಗೋವಾ ಪ್ರವಾಸದ ಆಸಕ್ತರಿಗೆ, ಕಾಸಾ ಝೆನ್ ವಿಲ್ಲಾವನ್ನು ರಜೆಗೆ ಬಾಡಿಗೆಗೆ ಪಡೆಯಬಹುದು. ವೈಲ್ಡ್‌ಫ್ಲವರ್ ವಿಲ್ಲಾಸ್ ನಿರ್ವಹಿಸುವ ಈ ಸಂಪೂರ್ಣ ಸ್ಥಳವನ್ನು ರಾತ್ರಿ ರೂ. 75,000 ಯಲ್ಲಿ ಬುಕ್ ಮಾಡಬಹುದು.ಇತ್ತೀಚಿನ ವೃತ್ತಿಪರ ಬೆಳವಣಿಗೆಯನ್ನ ನೋಡಿದರೆ, ಅರ್ಷದ್ ವಾರ್ಸಿ ಮುಂದಿನ ದಿನಗಳಲ್ಲಿ ಬ್ಯುಸಿಯಾಗುವರು ಅನಿಸುತ್ತಿದೆ ಅವರು ಅಕ್ಷಯ್ ಕುಮಾರ್ ಜೊತೆ ಜಾಲಿ ಎಲ್‌ಎಲ್‌ಬಿ 3 ಸಿನಿಮಾದಲ್ಲಿ ಮತ್ತೆಸೇರಲಿದ್ದು, ಸುಭಾಷ್ ಕಪೂರ್ ನಿರ್ದೇಶನದಲ್ಲಿ ಈ ಚಿತ್ರವು 2025 ಸೆಪ್ಟೆಂಬರ್ 19ರಂದು ಬಿಡುಗಡೆಯಾಗಲಿದೆ. ಜೊತೆಗೆ ಅವರು ಸ್ಟಾರ್ ನಟರೊಂದಿಗೆ ಇರುವ ಹಾಸ್ಯಭರಿತ ವೆಲ್ಕಮ್ ಟು ದಿ ಜಂಗಲ್ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಜಾಕಿ ಶ್ರಾಫ್, ಸುನಿಲ್ ಶೆಟ್ಟಿ, ಪರೇಶ್ ರಾವಲ್, ತುಶಾರ್ ಕಪೂರ್, ಶ್ರೇಯಸ್ ತಲ್ಪಡೆ, ಆಫ್ತಾಬ್ ಶಿವದಾಸಾನಿ, ರವೀನಾ ಟಂಡನ್, ಲಾರಾ ದತ್ತಾ, ದಿಶಾ ಪಟಾನಿ, ಜಾನಿ ಲೀವರ್ ಮತ್ತು ರಾಜಪಾಲ್ ಯಾದವ್ ಅವರ ಈ ಚಿತ್ರದಲ್ಲಿದಲ್ಲಿಕಾಣಿಸಿಕೊಳ್ಳಲಿದ್ದಾರೆ.