ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mock Drill: ದೇಶಭಕ್ತಿ ಅಂದ್ರೆ ಇದಪ್ಪಾ! ಮಾಕ್‌ ಡ್ರಿಲ್‌ಗಾಗಿ ಮದುವೆಯನ್ನೇ ಮುಂದೂಡಿದ ವರ!

ಬಿಹಾರದ ವರನೊಬ್ಬ ದಿಬ್ಬಣದೊಂದಿಗೆ ಮದುವೆಯಾಗಲು ವಧುವಿನ ಮನೆಗೆ ಹೋಗಬೇಕಿತ್ತು. ಆದರೆ ಆತ ಹೋಗಿದ್ದು ಭದ್ರತಾ ಕವಾಯತಿನಲ್ಲಿ ಭಾಗವಹಿಸಲು. ಇದಕ್ಕಾಗಿ ಮದುವೆಯನ್ನು ಕೆಲವು ಗಂಟೆಗಳ ಕಾಲ ಮುಂದೂಡಿದ. ಈ ಕುರಿತು ಪ್ರತಿಕ್ರಿಯಿಸಿರುವ ಆತ ದೇಶ ಮೊದಲು. ಬಾಕಿ ಎಲ್ಲ ಆಮೇಲೆ ಎಂದು ಹೇಳಿ ತನ್ನ ದೇಶಪ್ರೇಮವನ್ನು ತೋರ್ಪಡಿಸಿಕೊಂಡಿದ್ದಾನೆ.

ದೇಶ ಮೊದಲು ಮದುವೆ ಆಮೇಲೆ ಮದ್ವೆ ಎಂದ ವರ!

ಪಟನಾ: ದೇಶಾದ್ಯಂತ ಬುಧವಾರ ನಡೆದ ನಾಗರಿಕ ರಕ್ಷಣಾ ಕವಾಯತು (Mock Drill) ಹಲವಾರು ವಿಶೇಷ ಘಟನೆಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಬಿಹಾರದ (Bihar) ಈ ಘಟನೆಯೂ ಒಂದು. ಇಲ್ಲಿ ವರನೊಬ್ಬ ದಿಬ್ಬಣದೊಂದಿಗೆ ಮದುವೆಯಾಗಲು ವಧುವಿನ ಮನೆಗೆ ಹೋಗಬೇಕಿತ್ತು. ಆದರೆ ಆತ ಹೋಗಿದ್ದು ಭದ್ರತಾ ಕವಾಯತಿನಲ್ಲಿ (security drill) ಭಾಗವಹಿಸಲು. ಇದಕ್ಕಾಗಿ ಮದುವೆಯನ್ನು ಕೆಲವು ಗಂಟೆಗಳ ಕಾಲ ಮುಂದೂಡಿದ. ಈ ವಿಷಯ ಈಗ ರಾಜ್ಯಾದ್ಯಂತ ಹಬ್ಬಿದ್ದು ಆತನಿಗೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಆತ ದೇಶ ಮೊದಲು. ಬಾಕಿ ಎಲ್ಲ ಆಮೇಲೆ ಎಂದು ಹೇಳಿ ತನ್ನ ದೇಶಪ್ರೇಮವನ್ನು ತೋರ್ಪಡಿಸಿಕೊಂಡಿದ್ದಾನೆ.

ಬಿಹಾರದಲ್ಲಿ ನಡೆದ ಭದ್ರತಾ ಕವಾಯತಿನಲ್ಲಿ ಸೇರಲು ಪುರ್ನಿಯಾ ಜಿಲ್ಲೆಯ ಸುಶಾಂತ್ ಕುಶ್ವಾಹ ಎಂಬವರು ತಮ್ಮ ಮದುವೆಯನ್ನೇ ಕೆಲವು ಗಂಟೆಗಳ ಕಾಲ ನಿಲ್ಲಿಸಿದ್ದಾರೆ. ಬುಧವಾರ ಸಂಜೆ 6 ಗಂಟೆಗೆ ಸುಶಾಂತ್ ಕುಶ್ವಾಹ ದಿಬ್ಬಣದೊಂದಿಗೆ ಅರಾರಿಯಾದಲ್ಲಿ ಅಂದರೆ ಅವರ ಮನೆಯಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ವಧುವಿನ ಮನೆಗೆ ಹೊರಡಬೇಕಿತ್ತು. ಆದರೆ ಅವರು ಭದ್ರತಾ ಕವಾಯತಿನಲ್ಲಿ ಪಾಲ್ಗೊಳ್ಳುವುದು ಮುಖ್ಯವೆಂದು ಭಾವಿಸಿ ಅದಕ್ಕೆ ತೆರಳಿದ್ದಾರೆ. ಇದಕ್ಕಾಗಿ ಅವರು ಯಾವುದೇ ಹಿಂಜರಿಕೆಯನ್ನು ಮಾಡದೆ ತಮ್ಮ ಕುಟುಂಬ, ಸಂಬಂಧಿಕರು, ಸ್ನೇಹಿತರು ಮತ್ತು ವಧುವನ್ನು ಎರಡು ಗಂಟೆಗಳ ಕಾಲ ಕಾಯುವಂತೆ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸುಶಾಂತ್, ನಾನು ಸಂತೋಷಪಡಲು ಮದುವೆಯೊಂದೇ ಕಾರಣವಲ್ಲ. ಇಂದು ಭಾರತೀಯ ಸೇನೆಯು ಪಾಕಿಸ್ತಾನವನ್ನು ಪ್ರವೇಶಿಸಿ ಅವರ ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಕೇಂದ್ರ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ದೇಶದ 244 ಜಿಲ್ಲೆಗಳಲ್ಲಿ ನಡೆದ ಭದ್ರತಾ ಕವಾಯತಿನಲ್ಲಿ ನಾನು ಭಾಗವಹಿಸಲು ಸಾಧ್ಯವಾಗುತ್ತಿರುವುದು ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Arshad Warsi: ಗೋವಾದಲ್ಲಿದೆ ಅರ್ಷದ್ ವಾರ್ಸಿಯವರ 150 ವರ್ಷ ಹಳೆಯದಾದ ಪೋರ್ಚುಗೀಸ್ ಬಂಗಲೆ! ವಿಡಿಯೋ ನೋಡಿ

ಈ ತರಬೇತಿಯಲ್ಲಿ ಪಾಲ್ಗೊಳ್ಳಲು ನಿಶ್ಚಿಯಿಸಿದ ಕ್ಷಣವೇ ಕುಟುಂಬಕ್ಕೆ ತಿಳಿಸಿದೆ. ತರಬೇತಿ ಕವಾಯತು ಮುಗಿಸಿ ಅಂತಿಮವಾಗಿ ರಾತ್ರಿ 8 ಗಂಟೆಗೆ ದಿಬ್ಬಣದೊಂದಿಗೆ ವಧುವಿನ ಮನೆಗೆ ಹೊರಟೆವು. ಸೈನಿಕರು ಆಗಾಗ್ಗೆ ತಮ್ಮ ವಿವಾಹವನ್ನು ಬಿಟ್ಟು ಗಡಿಗಳಲ್ಲಿ ಹೋರಾಡಲು ಹೋಗುತ್ತಾರೆ. ಪರಿಸ್ಥಿತಿ ಅಗತ್ಯವಿದ್ದರೆ ನಾವು ಸಹ ಹಾಗೆ ಮಾಡುತ್ತೇವೆ ಎಂದಿದ್ದಾರೆ ಕುಶ್ವಾಹ.

ದೇಶಾದ್ಯಂತ ಬುಧವಾರ ನಡೆದ ನಾಗರಿಕ ರಕ್ಷಣಾ ಕವಾಯತಿನಲ್ಲಿ ವಾಯುದಾಳಿಗಳು, ಬಹು ಅಗ್ನಿಶಾಮಕ ತುರ್ತು ಪರಿಸ್ಥಿತಿಗಳು ಮತ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಂತಹ ವಿವಿಧ ಅಭ್ಯಾಸಗಳನ್ನು ನಡೆಸಲಾಯಿತು ಇದು ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಯುಟಿಗಳು) ನಡೆದ ರಾಷ್ಟ್ರವ್ಯಾಪಿ ಮೆಗಾ ನಾಗರಿಕ ರಕ್ಷಣಾ ತರಬೇತಿ 'ಆಪರೇಷನ್ ಅಭ್ಯಾಸ್' ನ ಭಾಗವಾಗಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತೀಯ ಸೇನೆಯು ಬಲವಾದ ಪ್ರತಿಕ್ರಿಯೆ ನೀಡಿದ ಬಳಿಕ ದೇಶಾದ್ಯಂತ ಈ ಕಾರ್ಯಕ್ರಮ ನಡೆದಿದೆ.