ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fraud Case: ಇವ್ರು ಅಂತಿಂಥಾ ಸಹೋದರಿಯರಲ್ಲ... ಸರ್ಕಾರಕ್ಕೆ 1.5 ಕೋಟಿ ರೂ. ಪಂಗನಾಮ ಹಾಕಿದ ಕಿಲಾಡಿ ಟ್ವಿನ್‌ ಸಿಸ್ಟರ್ಸ್‌

ಮಧ್ಯಪ್ರದೇಶದ (Madhya Pradesh) ದಾಮೋಹ್ ಜಿಲ್ಲೆಯಲ್ಲಿ ಅವಳಿ ಸಹೋದರಿಯರಿಬ್ಬರು ಒಂದೇ ಗುರುತು ಮತ್ತು ಅಂಕಪಟ್ಟಿಗಳನ್ನು ಬಳಸಿಕೊಂಡು 18 ವರ್ಷಗಳ ಕಾಲ ಬೇರೆಬೇರೆ ಶಾಲೆಗಳಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿ ಸಂಬಳ ಪಡೆದಿದ್ದಾರೆ. ಆದರೆ ಅವರು ವರ್ಗಾವಣೆ ಕೇಳಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಸಹೋದರಿಯರ ಈ ಹಗರಣದಿಂದ ರಾಜ್ಯ ಖಜಾನೆಗೆ 1.5 ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ.

ಸರ್ಕಾರಕ್ಕೆ 1.5 ಕೋಟಿ ರೂ. ಪಂಗನಾಮ ಹಾಕಿದ ಕಿಲಾಡಿ ಟ್ವಿನ್‌ ಸಿಸ್ಟರ್ಸ್‌

ಮಧ್ಯಪ್ರದೇಶ: ಅವಳಿ ಸಹೋದರಿಯರಿಬ್ಬರು (Twin Sisters) ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ವಂಚಿಸಿರುವ (Fraud Case) ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ (Madhya Pradesh) ದಾಮೋಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅವಳಿ ಸಹೋದರಿಯರಿಬ್ಬರು ಒಂದೇ ಗುರುತು ಮತ್ತು ಅಂಕಪಟ್ಟಿಗಳನ್ನು ಬಳಸಿಕೊಂಡು 18 ವರ್ಷಗಳ ಕಾಲ ಬೇರೆಬೇರೆ ಶಾಲೆಗಳಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿ ಸಂಬಳ ಪಡೆದಿದ್ದಾರೆ. ಆದರೆ ಅವರು ವರ್ಗಾವಣೆ ಕೇಳಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಸಹೋದರಿಯರ ಈ ಹಗರಣದಿಂದ ರಾಜ್ಯ ಖಜಾನೆಗೆ 1.5 ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ದಾಮೋಹ್ ಜಿಲ್ಲೆಯಲ್ಲಿ ರಶ್ಮಿ ಎಂಬ ಹೆಸರಿನಲ್ಲಿ ಇಬ್ಬರು ಮಹಿಳೆಯರು ಒಂದೇ ರೀತಿಯ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಬಳಸಿ ಪ್ರತ್ಯೇಕ ಸಂಬಳ ಪಡೆಯುತ್ತಿದ್ದರು. ಆದರೆ ಇವರು ಒಂದೇ ಶಾಲೆಗೆ ವರ್ಗಾವಣೆ ವಿನಂತಿಗಳನ್ನು ಸಲ್ಲಿಸುವ ಮೂಲಕ ಸಿಕ್ಕಿಬಿದ್ದಿದ್ದಾರೆ. ಇವರ ವರ್ಗಾವಣೆ ಅರ್ಜಿಗಳ ಬಗ್ಗೆ ಅನುಮಾನಗೊಂಡು ತನಿಖೆ ಪ್ರಾರಂಭಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅವಳಿ ಸಹೋದರಿಯರು ಸಲ್ಲಿಸಿದ್ದ ಅರ್ಜಿಗಳು ಬಹುತೇಕ ಒಂದೇ ರೀತಿ ಇದ್ದವು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಅವರ ಹೆಸರು, ಪದವಿ ಪ್ರಮಾಣಪತ್ರಗಳು ಮತ್ತು ವಿಷಯವಾರು ಅಂಕಗಳು ಸಹ ಸಂಪೂರ್ಣವಾಗಿ ಹೊಂದಿಕೆಯಾಗುತ್ತಿರುವುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ.

ಬಳಿಕ ನಡೆದ ತನಿಖೆಯಲ್ಲಿ ಅವಳಿ ಸಹೋದರಿಯರಲ್ಲಿ ಒಬ್ಬಳು ಮಾತ್ರ ಕಾನೂನುಬದ್ಧವಾಗಿ ಪದವಿಯನ್ನು ಗಳಿಸಿದ್ದಾಳೆ. ಇನ್ನೊಬ್ಬಳು ತನ್ನ ಸಹೋದರಿಯ ಅಂಕಪಟ್ಟಿಗಳ ನಕಲಿ ದಾಖಲೆಗಳನ್ನು ಬಳಸಿಕೊಂಡು ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾಳೆ. ಯಾರಿಗೂ ತಿಳಿಯದಂತೆ ಅವರಿಬ್ಬರು ಬರೋಬ್ಬರಿ 18 ವರ್ಷಗಳ ಕಾಲ ಕೆಲಸ ಮಾಡಿ ಸಂಬಳವನ್ನು ಪಡೆದಿದ್ದಾರೆ. ಈ ಬಗ್ಗೆ ಶಾಲಾ ಆಡಳಿತಾಧಿಕಾರಿಗಳು ಅಥವಾ ಜಿಲ್ಲಾ ಅಧಿಕಾರಿಗಳಿಗೂ ಅನುಮಾನ ಬಂದಿರಲಿಲ್ಲ.

ನಕಲಿ ದಾಖಲೆ ಬಳಸಿ ಓರ್ವ ಮಹಿಳೆ 80 ಲಕ್ಷ ರೂ.ಗಳಿಗೂ ಹೆಚ್ಚು ಹಣ ಪಡೆದಿದ್ದಾಳೆ. ಇವರಿಬ್ಬರ ವಂಚನೆ ಬೆಳಕಿಗೆ ಬಂದ ತಕ್ಷಣ ಒಬ್ಬಳು ರಾಜೀನಾಮೆ ನೀಡಿದರೆ, ಇನ್ನೊಬ್ಬಳು ಹುದ್ದೆಯನ್ನು ತ್ಯಜಿಸಿದ್ದಾಳೆ. ಈ ಬಗ್ಗೆ ದಮೋಹ್‌ನ ಜಿಲ್ಲಾ ಶಿಕ್ಷಣ ಅಧಿಕಾರಿ ಎಸ್‌.ಕೆ. ನೇಮಾ ಅವರು ದೃಢಪಡಿಸಿದ್ದಾರೆ.

ಇದನ್ನೂ ಓದಿ: Operation Sindoor 2.0: ಪಾಕಿಸ್ತಾನಿಗಳನ್ನು ಭಾರತೀಯ ಸೇನೆಯಿಂದ ದಯವಿಟ್ಟು ರಕ್ಷಿಸಿ; ಪಾರ್ಲಿಮೆಂಟಿನಲ್ಲಿ ಗೋಳಾಡಿದ ಸಂಸದ!

ಈ ಪ್ರಕರಣದಿಂದ ಮತ್ತೊಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಶಿಕ್ಷಣ ಇಲಾಖೆ ನಡೆಸಿದ ತನಿಖೆ ವೇಳೆ ಜಿಲ್ಲೆಯಲ್ಲಿ ಕನಿಷ್ಠ 19 ಸರ್ಕಾರಿ ಶಾಲಾ ಶಿಕ್ಷಕರು ನಕಲಿ ದಾಖಲೆಗಳನ್ನು ಬಳಸಿ ನೇಮಕಗೊಂಡಿರುವುದು ತಿಳಿದುಬಂದಿದೆ. ಇದರಲ್ಲಿ ಈವರೆಗೆ ಕೇವಲ ಮೂವರನ್ನು ಮಾತ್ರ ವಜಾಗೊಳಿಸಲಾಗಿದೆ.