ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shah Rukh Khan: ಶಾರುಖ್ ಮೋಸ ಮಾಡಿದರೆ…? ಗೌರಿ ಖಾನ್‌ ಎನ್‌ ಹೇಳಿದ್ರು?

ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ (ಹಾಗೂ ಗೌರಿ ಖಾನ್‌ ಅವರು ಹಲವು ವರ್ಷಗಳಿಂದ ಸುಖ ಸಂಸಾರ ನಡೆಸುತ್ತಿದ್ದಾರೆ. 1991ರ ಅಕ್ಟೋಬರ್ 25ರಂದು ವಿವಾಹ ಆದರು. ಧರ್ಮ ಬೇರೆ ಬೇರೆಯಾದರೂ ಇಬ್ಬರ ನಡುವೆ ಅನ್ಯೋನ್ನತೆ ಇದೆ. ಇದೀಗ ಶಾರುಖ್ ಖಾನ್ ಅವರು ಎಂದಿಗೂ ಗೌರಿಗೆ ಮೋಸ ಮಾಡಿಲ್ಲ. ಒಂದೊಮ್ಮೆ ಮಾಡಿಬಿಟ್ಟರೆ..............

ಶಾರುಖ್ ಮೋಸ ಮಾಡಿದರೆ....ಗೌರಿ ಖಾನ್‌ ಏನ್‌ ಹೇಳಿದ್ರು ಗೊತ್ತಾ?

Profile Vishakha Bhat May 8, 2025 6:47 PM

ಮುಂಬೈ: ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ (Shah Rukh Khan) ಹಾಗೂ ಗೌರಿ ಖಾನ್‌ ಅವರು ಹಲವು ವರ್ಷಗಳಿಂದ ಸುಖ ಸಂಸಾರ ನಡೆಸುತ್ತಿದ್ದಾರೆ. 1991ರ ಅಕ್ಟೋಬರ್ 25ರಂದು ವಿವಾಹ ಆದರು. ಧರ್ಮ ಬೇರೆ ಬೇರೆಯಾದರೂ ಇಬ್ಬರ ನಡುವೆ ಅನ್ಯೋನ್ನತೆ ಇದೆ. ಇದೀಗ ಶಾರುಖ್ ಖಾನ್ ಅವರು ಎಂದಿಗೂ ಗೌರಿಗೆ ಮೋಸ ಮಾಡಿಲ್ಲ. ಒಂದೊಮ್ಮೆ ಮಾಡಿಬಿಟ್ಟರೆ? ಎಂಬ ಪ್ರಶ್ನೆ ವೈರಲ್‌ ಆಗಿದೆ. 2005ರಲ್ಲಿ ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದರು ಗೌರಿ ಖಾನ್. ಈ ವೇಳೆ ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಯಿತು. ಗೌರಿ ಖಾನ್, ಶಾರುಖ್‌ ಖಾನ್ ವಂಚನೆ ಮಾಡಿದರೆ ತಾನು ಏನು ಮಾಡುತ್ತೇನೆಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

ಹೀರೋಗಳ ಮೇಲೆ ಸಾಕಷ್ಟು ಜನರ ಕಣ್ಣಿರುತ್ತದೆ. ನಿಮಗೆ ಇದಕ್ಕೆ ಏನಾದರೂ ಇನ್​ಸೆಕ್ಯೂರ್ ಭಾವನೆ ಕಾಡುತ್ತದೆಯೇ’ ಎನ್ನುವ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದರು. ‘ನನಗೆ ಈ ಪ್ರಶ್ನೆಗಳ ಬಗ್ಗೆ ಅಸಹ್ಯವಿದೆ. ಜನರು ಈ ಪ್ರಶ್ನೆಗಳನ್ನು ಕೇಳಲು ಬಯಸಿದಾಗ ನಾನು ಬ್ಲ್ಯಾಂಕ್ ಆಗುತ್ತೇನೆ. ನನಗೆ ನಿಜವಾಗಿಯೂ ಕಿರಿಕಿರಿಯಾಗುತ್ತದೆ. ಒಂದೊಮ್ಮೆ ಶಾರುಖ್ ನನ್ನ ಜೊತೆ ಇರಲೇ ಬಾರದು ಎಂದು ಹಣೆಯಲ್ಲಿ ಬರೆದುಕೊಂಡಿದ್ದರೆ ನನಗೆ ಬೇರೊಬ್ಬರನ್ನು ಹುಡುಕಿ ಕೊಡು ಎಂದು ನಾನು ಪ್ರತಿದಿನ ದೇವರನ್ನು ಪ್ರಾರ್ಥಿಸುತ್ತೇನೆ. ಅವನು ಸುಂದರವಾಗಿ ಇರಬೇಕು ಎಂದು ನಾನು ಬಯಸುತ್ತೇನೆ’ ಎಂದಿದ್ದರು ಅವರು.

ಈ ಸುದ್ದಿಯನ್ನೂ ಓದಿ: Met Gala 2025: ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಶಾರುಖ್‌ಗಾಗಿ ಕಾದು ಕುಳಿತ ಪಾಕಿಸ್ತಾನಿ ಅಭಿಮಾನಿ; ವಿಡಿಯೊ ಇಲ್ಲಿದೆ

ಆದರೆ, ಶಾರುಖ್ ಖಾನ್ ಆ ರೀತಿ ಅಲ್ಲ. ತನ್ನನ್ನು ನಂಬಿ ಬಂದ ಪತ್ನಿಯನ್ನು ಅವರು ಕೈ ಬಿಡಲೇ ಇಲ್ಲ. ಈ ದಂಪತಿಗೆ ಆರ್ಯನ್ ಖಾನ್, ಸುಹಾನಾ ಖಾನ್ ಹಾಗೂ ಅಬ್​ರಾಮ್ ಖಾನ್ ಹೆಸರಿನ ಮಕ್ಕಳು ಇದ್ದಾರೆ. ಶಾರುಖ್ ಖಾನ್ ಹಾಗೂ ಗೌರಿ ಖಾನ್ ಪ್ರೀತಿಸಿ ಮದುವೆ ಆದವರು. ಇವರ ವಿವಾಹಕ್ಕೆ ವಿರೋಧ ಇತ್ತು. ಇದಲ್ಲದೆ, ಶಾರುಖ್ ಖಾನ್ ಅವರು ಶೀಘ್ರದಲ್ಲೇ ಸಿದ್ಧಾರ್ಥ್ ಆನಂದ್ ನಿರ್ದೇಶನದ ಕಿಂಗ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸುಹಾನಾ ಖಾನ್ ಮೊದಲ ಬಾರಿಗೆ ತೆರೆ ಮೇಲೆ ಅಭಿನಯಿಸಲಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಅಭಯ್ ವರ್ಮಾ ಕೂಡ ಚಿತ್ರದಲ್ಲಿದ್ದಾರೆ. ದೀಪಿಕಾ ಪಡಕೋಣೆಯೂ ಚಿತ್ರದಲ್ಲಿ ಭಾಗಯಾಗಲಿದ್ದಾರೆ ಎಂಬ ವರದಿಗಳಿದ್ದು, ಅಧಿಕೃತ ಘೋಷಣೆ ಇನ್ನೂ ಬಾಕಿಯಿದೆ.