Accidental Inventions: ಫೊಟೇಟೋ ಚಿಪ್ಸ್ನಿಂದ ಹಿಡಿದು ವಯಾಗ್ರದವರೆಗೆ! ಆಕಸ್ಮಿಕವಾಗಿ ಆವಿಷ್ಕಾರಗೊಂಡು ಜಗತ್ತಿನಲ್ಲಿ ಕ್ರಾಂತಿ ಮಾಡಿದ ವಸ್ತುಗಳು ಯಾವುವು ಗೊತ್ತಾ?
ಇಂದು ಬಹುತೇಕ ಸಂಶೋಧನೆಗಳು ಬಹುಕಾಲದ ಪ್ರಯೋಗದಿಂದ ಯಶಸ್ವಿಯಾಗಿದ್ದನ್ನು ನಾವು ಕಾಣಬಹುದು. ಆದರೆ ಸಂಶೋಧನೆ ಮಾಡುವ ಯಾವುದೇ ಉದ್ದೇಶ ಇಲ್ಲದೆ ಬೇರೆ ಏನೊ ಮಾಡಲು ಹೋಗಿ ಹೊಸ ಆವಿಷ್ಕಾರ ಆಗುವುದು ಇದೆ. ಈ ತರಹ ಅನಿರೀಕ್ಷಿತ ಆವಿಷ್ಕಾರಗಳೇ ಸಂಶೋಧನೆಯ ಫಲವಾಗಿ ಹೊಸ ವಸ್ತುಗಳು ಪತ್ತೆ ಆಗಿವೆ. ಇಂದು ಇಂತಹ ಅನೇಕ ವಸ್ತುಗಳನ್ನು ನಿತ್ಯ ನಾವು ಬಳಕೆ ಮಾಡುತ್ತಿದ್ದೇವೆ. ಪ್ರಪಂಚದಲ್ಲಿ ಇಂತಹ ವಸ್ತುಗಳು ಊಹಿಸಲು ಸಾಧ್ಯವಾಗದ ಮಟ್ಟಿಗೆ ಕ್ರಾಂತಿಕಾರಿ ಬದಲಾವಣೆ ತಂದಿದೆ.



ಮೈಕ್ರೋವೇವ್ ಓವನ್: ಇಂದು ಬಹುತೇಕ ಮನೆಯಲ್ಲಿ ಈ ಮೈಕ್ರೋ ಓವನ್ ಇದ್ದೇ ಇರುತ್ತದೆ. ಆದರೆ ಇದು ಕೂಡ ಆಕಸ್ಮಿಕ ಆವಿಷ್ಕಾರದಿಂದ ಬಂದ ವಸ್ತು ಆಗಿದೆ. ಆಹಾರವನ್ನು ಬಿಸಿಮಾಡಲು ವಿದ್ಯುತ್ಕಾಂತೀಯ ತರಂಗಗಳನ್ನು ಬಳಸುವ ಸಾಧನ ವಾದ ಮೈಕ್ರೋ ಮೈಕ್ರೋ ಓವನ್ 1946 ರಲ್ಲಿ ಸಂಶೋಧಿಸಲಾಗಿದೆ. ಪರ್ಸಿ ಸ್ಪೆನ್ಸರ್ ಅವರು ಮ್ಯಾಗ್ನೆಟಿಕ್ ಸರ್ಕ್ಯೂಟ್ ಬ್ರೇಕರ್ ಅನ್ನು ಪರೀಕ್ಷಿಸುತ್ತಿದ್ದಾಗ ಅವರ ಜೇಬಿನಲ್ಲಿದ್ದ ಚಾಕೊಲೇಟ್ ಬಾರ್ ಕರಗಿರುವು ದನ್ನು ಗಮನಿಸಿದರು. ಈ ಅನಿರೀಕ್ಷಿತ ಘಟನೆಯು ಮೊದಲ ಮೈಕ್ರೋವೇವ್ ಓವನ್ನ ಅಭಿವೃದ್ಧಿಗೆ ಕಾರಣವಾಯಿತು.

ಡೈನಮೈಟ್: 1866 ರಲ್ಲಿ ಆಲ್ಫ್ರೆಡ್ ನೊಬೆಲ್ ಕಂಡುಹಿಡಿದ ಒಂದು ರೀತಿಯ ಸ್ಫೋಟಕವೇ ಈ ಡೈನಮೈಟ್ ಆಗಿದೆ. ಸಿಲಿಕಾ ಜೊತೆ ಸ್ಪೋಟಕ ಬೆರೆಸಿದಾಗ ಅದು ಶಕ್ತಿಯುತ ಸ್ಫೋಟಕವಾಗಿ ರೂಪುಗೊಳ್ಳುತ್ತದೆ ಎಂದು ಆಕಸ್ಮಿಕವಾಗಿ ನೊಬೆಲ್ ಕಂಡುಹಿಡಿದರು. ಇದೇ ಆವಿಷ್ಕಾರವು ಗಣಿಗಾರಿಕೆಯಂತಹ ಕೈಗಾರಿಕೆಗಳಲ್ಲಿ ಅಪಾರ ಉಪಯುಕ್ತವಾಯಿತು. ಅಷ್ಟು ಮಾತ್ರವಲ್ಲದೆ ಯುದ್ಧಗಳು, ಇತರ ಸಂಘರ್ಷಗಳಲ್ಲಿ ಸಹ ಬಳಕೆಯಾಗಲ್ಪಟ್ಟಿದೆ..

ಆಲೂ ಚಿಪ್ಸ್: ಆಲೂ ಗಡ್ಡೆ ಚಿಪ್ಸ್ ಎಂದರೆ ಬಹುತೇಕರಿಗೆ ಇಷ್ಟ. 1853 ರಲ್ಲಿ ಜಾರ್ಜ್ ಕ್ರಮ್ ತನ್ನ ರೆಸ್ಟೋರೆಂಟ್ನಲ್ಲಿ ಹೊಸ ಪ್ರಯೋಗ ಮಾಡುವಾಗ ಆಲೂಗಡ್ಡೆಯನ್ನು ತೆಳುವಾಗಿ ಕತ್ತರಿಸಿ ಗರಿಗರಿಯಾಗುವ ವರೆಗೆ ಹುರಿದರು. ಉದ್ದೇಶ ಪೂರ್ವಕವಾಗಿ ಇದನ್ನು ಮಾಡಿದ್ದು ಅಲ್ಲದೆ ಹೋದರು ಆಲೂಗಡ್ಡೆ ಚಿಪ್ಸ್ನ ತನಕ ಜನಪ್ರಿಯ ತಿಂಡಿಯನ್ನು ಸೃಷ್ಟಿಸಿದರು. ಇದು ಇಂದು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಆಹಾರವಾಗಿದೆ...

ಪ್ಲಾಸ್ಟಿಕ್: ಇಂದು ಪ್ಲಾಸ್ಟಿಕ್ ಅನ್ನು ನಿತ್ಯ ಬಳಕೆ ಮಾಡುತ್ತಲೇ ಇದ್ದೇವೆ. ಆದರೆ ಈ ಪ್ಲಾಸ್ಟಿಕ್ ಅನಿರೀಕ್ಷಿತ ಆವಿಷ್ಕಾರ ಎಂದರೆ ನಿಮಗೂ ಅಚ್ಚರಿ ಎನಿಸಬಹುದು. 1907 ರಲ್ಲಿ ಲಿಯೋ ಬೇಕ್ಲ್ಯಾಂಡ್ ಸಂಶ್ಲೇಷಿತ ರಾಸಾಯನಿಕಗಳನ್ನು ರಚಿಸಲು ಪ್ರಯತ್ನಿ ಸುವಾಗ ಆಕಸ್ಮಿಕವಾಗಿ ಪ್ಲಾಸ್ಟಿಕ್ ಅನ್ನು ಕಂಡುಹಿಡಿದರು. ಇಂದು ನಿತ್ಯ ಅನೇಕ ತರನಾಗಿ ಈ ಪ್ಲಾಸ್ಟಿಕ್ ಬಳಕೆ ಮಾಡುತ್ತಲೇ ಪರಿಸರದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಕಳವಳಗಳ ವ್ಯಕ್ತವಾಗುತ್ತಿದೆ.

ಬೆಂಕಿ ಪೊಟ್ಟಣ: 1826 ರಲ್ಲಿ ಸಂಶೋಧಕ ಜಾನ್ ವಾಕರ್ ಅವರು ಹೊಸ ರೀತಿಯ ಸ್ಫೋಟಕ ಅಂಟನ್ನು ರಚಿಸಲು ಪ್ರಯತ್ನಿ ಸುತ್ತಿದ್ದರು. ಇದುವೆ ಬೆಂಕಿ ಪೊಟ್ಟಣ ಸೃಷ್ಟಿಗೆ ಕಾರಣವಾಯಿತು. ಆಕಸ್ಮಿಕವಾಗಿ ಅಂಟನ್ನು ಮೇಲ್ಮೈಗೆ ಉಜ್ಜಿದಾಗ ಉರಿ ಯುತ್ತಿದ್ದವು. ಇದುವೆ ಕಾಲ ಕ್ರಮೇಣ ಬೆಂಕಿಪೊಟ್ಟಣ, ಸೀಸರ್ ಲೈಟ್ ಇತ್ಯಾದಿಗಳ ಉಪ ಸಂಶೋಧನೆಗೂ ಪ್ರೇರಣೆ ಯಾಯಿತು.

ಕಾರ್ನ್ ಫ್ಲೇಕ್ಸ್: ಇದು ಕೂಡ ಆಕಸ್ಮಿಕ ಆವಿಷ್ಕಾರದ ಫಲವಾಗಿದೆ. 1894 ರಲ್ಲಿ ಜಾನ್ ಹಾರ್ವೆ ಕೆಲ್ಲಾಗ್ ಆರೋಗ್ಯಕರ ಉಪಹಾರವನ್ನು ತಯಾರು ಮಾಡಲು ಹೊಸ ಪ್ರಯೋಗ ಮಾಡಿದರು. ಈ ಆಕಸ್ಮಿಕ ಆವಿಷ್ಕಾರವು ಕಾರ್ನ್ಫ್ಲೇಕ್ಸ್ಗಳ ಅಭಿವೃದ್ಧಿಗೆ ಕಾರಣವಾಯಿತು.

ಕೋಕಾ-ಕೋಲಾ: ಇಂದು ಕೋಕಾ ಕೋಲಾ ಕೂಲ್ ಡ್ರಿಂಕ್ಸ್ ವಿಶ್ವದಾದ್ಯಂತ ದೊಡ್ಡ ಬ್ರ್ಯಾಂಡ್ ಎಂಬ ಖ್ಯಾತಿ ಪಡೆದಿದೆ. ಇದು ಪ್ರಪಂಚದಾದ್ಯಂತ ಜನರು ಇಷ್ಟಪಡುವ ತಂಪು ಪಾನೀಯವಾಗಿದೆ. 1886 ರಲ್ಲಿ ಜಾನ್ ಪೆಂಬರ್ಟನ್ ತಲೆನೋವಿಗೆ ಪರಿಹಾರವನ್ನು ಹುಡುಕಲು ಜ್ಯೂಸ್ ಮಾಡುತ್ತಾರೆ. ಕೋಕಾ ಎಲೆಗಳು ಮತ್ತು ಕೋಲಾ ಬೀಜಗಳನ್ನು ಕಾರ್ಬೊನೇಟೆಡ್ ನೀರಿನೊಂದಿಗೆ ಬೆರೆಸಿ ರಿಫ್ರೆಶ್ ಪಾನೀಯವನ್ನು ತಯಾರಿಸಿದರು. ಈ ಆಕಸ್ಮಿಕ ಆವಿಷ್ಕಾರವು ಅಂದಿನಿಂದ ಜಾಗತಿಕ ಮಟ್ಟದಲ್ಲಿ ಪ್ರಮುಖ ತಂಪು ಪಾನೀಯವಾಗಿ ಇಂದಿಗೂ ಗುರುತಿಸಿಕೊಂಡಿದೆ.

ವಯಾಗ್ರ ಆವಿಷ್ಕಾರ: ಪುರುಷರ ಲೈಂಗಿಕ ದುರ್ಬಲತೆಗೆ ಚಿಕಿತ್ಸೆ ನೀಡುವ ಔಷಧವಾಗಿದೆ. ಎದೆನೋವಿಗೆ ಚಿಕಿತ್ಸೆಯಾಗಿ ವಿಜ್ಞಾನಿಗಳು ಈ ಔಷಧ ಕಂಡುಹಿಡಿದರು. 1990 ರ ದಶಕದಲ್ಲಿ ಪರೀಕ್ಷಿಸಿದಾಗ ಇದು ಅಡ್ಡಪರಿಣಾಮವಾಗಿ, ಇದು ಪುರುಷರ ಲೈಂಗಿಕ ಬಯಕೆಯನ್ನು ಹೆಚ್ಚಿಸಿತು. ಇದು ವಯಾಗ್ರದ ಬೆಳವಣಿಗೆಗೆ ಕಾರಣವಾಯಿತು.

ಎಕ್ಸ್ ರೇ ಕಿರಣಗಳು: ಎಕ್ಸ್ ರೆ ಕಿರಣಗಳು ಇಂದು ವೈದ್ಯಕೀಯ ರಂಗದಲ್ಲಿ ಮಹತ್ವದ ಸುಧಾರಣೆಯಾಗಿದೆ. ಇದನ್ನು 1895 ರಲ್ಲಿ ವಿಲ್ಹೆಲ್ಮ್ ಕಾನ್ರಾಡ್ ರೋಂಟ್ಜೆನ್ ಅವರು ಕ್ಯಾಥೋಡ್ ಕಿರಣ ಪ್ರಯೋಗಗಳನ್ನು ನಡೆಸುವಾಗ ಎಕ್ಸ್ ರೇ ಕಿರಣಗಳನ್ನು ಆವಿಷ್ಕಾರ ಮಾಡಿದರು. ಇದೇ ಆಕಸ್ಮಿಕ ಆವಿಷ್ಕಾರದಿಂದಾಗಿ ಅನೇಕ ರೋಗಗಳು ಪತ್ತೆಯಾಗಿ ಜೀವಗಳನ್ನು ಉಳಿಸಲಾಗುತ್ತಿದೆ.

ಪೆನ್ಸಿಲಿನ್: ಅಲೆಕ್ಸಾಂಡರ್ ಫ್ಲೆಮಿಂಗ್ 1928 ರಲ್ಲಿ ಆಕಸ್ಮಿಕವಾಗಿ ಬ್ಯಾಕ್ಟೀರಿಯಾದ ಪಾತ್ರೆಯನ್ನು ಮುಚ್ಚಿದ್ದ ಸಂದರ್ಭದಲ್ಲಿ ಪೆನ್ಸಿಲಿನ್ ಆವಿಷ್ಕಾರ ಆಯಿತು. ಇಂದು ಇದೇ ಪೆನ್ಸಿಲಿನ್ ಅಸಂಖ್ಯಾತ ಜೀವಗಳನ್ನು ಉಳಿಸುವಲ್ಲಿ ಪ್ರಧಾನ ಪಾತ್ರವಹಿಸಲಿದೆ.