Deepika Padukone: ಪ್ರೆಗ್ನೆನ್ಸಿ ದಿನಗಳು ಕಷ್ಟದಿಂದ ಕೂಡಿತ್ತು ಎಂದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ಮಗಳು ಹುಟ್ಟಿದ ಮೇಲೆ ಚಿತ್ರರಂಗದಿಂದ ಕೊಂಚ ಬಿಡುವು ಪಡೆದು ಕೊಂಡಿದ್ದ ನಟಿ ದೀಪಿಕಾ ಪಡುಕೋಣೆ ಇದೀಗ ಮತ್ತೆ ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಈ ನಡುವೆ ನಟಿ ಹೆರಿಗೆಯಾದ ಸುಮಾರು 8 ತಿಂಗಳ ನಂತರ, ತಮ್ಮ ಪ್ರೆಗ್ನೆನ್ಸಿ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ದೀಪಿಕಾ ತನ್ನ ಗರ್ಭಧಾರಣೆಯ ಒಂಬತ್ತು ತಿಂಗಳು ಸುಲಭವಾಗಿ ಸಾಗುತ್ತಿರಲಿಲ್ಲ, ಹೆರಿಗೆಯಲ್ಲಿ ಬಹಳಷ್ಟು ಕಷ್ಟ ಅನುಭವಿಸಿದ್ದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.


ನವದೆಹಲಿ: ಬಾಲಿವುಡ್ ನ ಕ್ಯೂಟ್ ದಂಪತಿಗಳಾಗಿರುವ ರಣವೀರ್ ಸಿಂಗ್ (Ranveer Singh) ಹಾಗೂ ದೀಪಿಕಾ ಪಡುಕೋಣೆ (Deepika Padukone) ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳು ಹುಟ್ಟಿದ ಮೇಲೆ ಚಿತ್ರರಂಗದಿಂದ ಕೊಂಚ ಬಿಡುವು ಪಡೆದುಕೊಂಡಿದ್ದ ನಟಿ ದೀಪಿಕಾ ಪಡುಕೋಣೆ ಇದೀಗ ಮತ್ತೆ ಶಾರುಖ್ ಖಾನ್ ನಟನೆಯ ಕಿಂಗ್’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ನಡುವೆ ನಟಿ ಹೆರಿಗೆ ಯಾದ ಸುಮಾರು 8 ತಿಂಗಳ ನಂತರ, ತಮ್ಮ ಪ್ರೆಗ್ನೆನ್ಸಿ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ದೀಪಿಕಾ ತನ್ನ ಗರ್ಭಧಾರಣೆಯ ಒಂಬತ್ತು ತಿಂಗಳುಗಳು ಸುಲಭವಾಗಿ ಸಾಗುತ್ತಿರಲಿಲ್ಲ, ಹೆರಿಗೆಯಲ್ಲಿ ಬಹಳಷ್ಟು ಕಷ್ಟ ಅನುಭವಿಸಿದ್ದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಮುಂಬೈನ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಸೆಪ್ಟೆಂ ಬರ್-8 ರಂದು ದೀಪಿಕಾಗೆ ಹೆಣ್ಣು ಮಗು ಜನಿಸಿದೆ. ಇದೀಗ ನಟಿ ಸಂದರ್ಶನವೊಂದರಲ್ಲಿ ಗರ್ಭಧಾರಣೆಯ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭ ಮಾತನಾಡಿದ ದೀಪಿಕಾ, ತನ್ನ ಗರ್ಭಧಾರಣೆ ಕಷ್ಟದಿಂದ ಕೂಡಿತ್ತು ಎಂದು ಬಹಿರಂಗ ಪಡಿಸಿದ್ದಾರೆ. ನಾನು ಪ್ರೆಗ್ನೆನ್ಸಿ ಸಮಯದಲ್ಲಿ ಕೊನೆಯ ಎರಡು ತಿಂಗಳು ಮತ್ತು ಹೆರಿಗೆಯಲ್ಲಿ ಬಹಳಷ್ಟು ಕಷ್ಟ ಅನುಭವಿಸಿದ್ದು ಸ್ನೇಹಿತರು ಮತ್ತು ಕುಟುಂಬದವರ ಬೆಂಬಲ ದೊಂದಿಗೆ ಪ್ರೆಗ್ನೆನ್ಸಿ ಪ್ರಯಾಣವನ್ನು ಸ್ವಲ್ಪ ಸುಲಭಗೊಳಿಸಿದೆ ಎಂದು ತಿಳಿಸಿದ್ದಾರೆ.
ಪೋಷಕರ ವಿಚಾರಕ್ಕೆ ಬಂದಾಗ ತಾನು ಮತ್ತು ರಣವೀರ್ ದುವಾಳ ಪ್ರತಿಯೊಂದು ಅವಶ್ಯಕತೆಗೂ ಬೆಂಬಲ ನೀಡುತ್ತೇವೆ. ಎಲ್ಲದಕ್ಕಿಂತ ಹೆಚ್ಚಾಗಿ ಅವಳ ಜೊತೆ ನಾವಿದ್ದು ಬಾಲ್ಯವನ್ನು ಅನುಭವಿಸಲು ಹೆಚ್ಚು ಪ್ರೇರಣೆ ನೀಡುತ್ತೇವೆ ಅದರ ಜೊತೆ ಹೊಸ ಜಗತ್ತನ್ನು ನೋಡಲು ಅವಕಾಶ ನೀಡುತ್ತೇವೆ ಎಂದರು. ತನ್ನ ಮಗಳನ್ನು ತೋಳುಗಳಲ್ಲಿ ಎತ್ತಿಕೊಂಡು ಮುದ್ದಾಡುವ ಖುಷಿ ಜೀವನದ ಪ್ರಮುಖ ಕ್ಷಣವಾಗಿತ್ತು ಎಂದು ಅನುಭವ ಹಂಚಿಕೊಂಡಿದ್ದಾರೆ.
ಇದನ್ನು ಓದಿ: Deepika Padukone: ಚಿಕ್ಕ ಬ್ರೇಕ್ ಬಳಿಕ ಚಿತ್ರರಂಗದಲ್ಲಿ ಬ್ಯುಸಿಯಾದ ದೀಪಿಕಾ; ಮತ್ತೊಂದು ತೆಲುಗು ಚಿತ್ರಕ್ಕೆ ಸಹಿ
ದುವಾ ಹೆಸರಿನ ಬಗ್ಗೆ ಮಾತನಾಡುತ್ತಾ, ಆ ಹೆಸರನ್ನು ಮೊದಲು ಬಳಸಿದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ದೀಪಿಕಾ ಹಾಗೂ ರಣವೀರ್ ಮಗುವಿಗೆ ದುವಾ ಎಂದು ಹೆಸರು ಇಟ್ಟಿದ್ದಾರೆ. ರಣವೀರ್ ಸಿಂಗ್ ಶೂಟಿಂಗ್ ಸೆಟ್‌ನಲ್ಲಿದ್ದಾಗ ಆ ಹೆಸರಿ ನೊಂದಿಗೆ ಸಂದೇಶವನ್ನು ಕಳುಹಿಸಿದ್ದನ್ನು ನೆನೆಸಿಕೊಂಡಿದ್ದಾರೆ. ದುವಾ ಎಂದರೆ ಪ್ರಾರ್ಥನೆ ಎಂದರ್ಥ. 'ಅವಳು ನಮ್ಮ ಪ್ರಾರ್ಥನೆಯ ಫಲ, ಆದ್ದರಿಂದ ನಾವು ಅವಳಿಗೆ ದುವಾ ಎಂದು ಹೆಸರಿಸಿದ್ದೇವೆ ಎಂದು ನಟಿ ದೀಪಿಕಾ ಮಗಳಿನ ಹೆಸರಿನ ಅರ್ಥದ ಬಗ್ಗೆಯು ಮಾತನಾಡಿದರು.
ದೀಪಾವಳಿ ಸಂದರ್ಭ ತಮ್ಮ ಮಗಳ ಹೆಸರನ್ನು ರಿವೀಲ್ ಮಾಡಿದರು. ಸೋಷಿಯಲ್ ಮೀಡಿಯಾದಲ್ಲಿ ಕಂದಮ್ಮನ ಪುಟ್ಟ ಪಾದಗಳ ಫೋಟೋ ಹಂಚಿಕೊಂಡ ದಂಪತಿ, "ದುವಾ ಪಡುಕೋಣೆ ಸಿಂಗ್" ಎಂಬ ಕ್ಯಾಪ್ಷನ್ ಕೊಟ್ಟು ಗಮನ ಸೆಳೆದಿದ್ದರು. ರಣವೀರ್ ಫರ್ಹಾನ್ ಅಖ್ತರ್ ಅವರ ಡಾನ್ 3 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಶಾರುಖ್ ಜೊತೆ ಕಿಂಗ್ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನಟಿ ಅಧಿಕೃತವಾಗಿ ದೃಢೀಕರಿಸಿಲ್ಲ. ಸದ್ಯ ದೀಪಿಕಾ ಮಗುವಿನ ಲಾಲನೆಯಲ್ಲಿ ತೊಡಗಿಕೊಂಡಿದ್ದಾರೆ.