ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kriti Sanon Complex: ಕೃತಿ ಸನೋನ್‌, ಜಾವೆದ್‌ ಜಾಫ್ರಿ ವಾಸವಿರುವ ಅಪಾರ್ಟ್‌ಮೆಂಟ್‌ಗೆ ಆಗಂತುಕನ ಎಂಟ್ರಿ-ಲಿಫ್ಟ್‌ ಡ್ಯಾಮೇಜ್‌!

ಮುಂಬೈನ ದುಬಾರಿ ಪಾಲಿ ಹಿಲ್ ಪ್ರದೇಶದ ವಸತಿ ಕಟ್ಟಡವೊಂದರಲ್ಲಿ ವ್ಯಕ್ತಿಯೊಬ್ಬ ಲಿಫ್ಟ್ ಕಾರ್ಯಾಚರಣೆಗೆ ಭಾರೀ ಕಲ್ಲುಗಳನ್ನು ಇರಿಸಿ ಅಡ್ಡಿಪಡಿಸಿದ ಆರೋಪ ಕೇಳಿಬಂದಿದೆ. ಬಾಂದ್ರಾ ಪಶ್ಚಿಮದಲ್ಲಿರುವ ಬಹುಮಹಡಿ ಕಟ್ಟಡವಾದ ಸಂಧು ಪ್ಯಾಲೇಸ್‌ನಲ್ಲಿ ಈ ಘಟನೆ ಸಂಭವಿಸಿದೆ, ಸೆಲೆಬ್ರಿಟಿಗಳಾದ ಕೃತಿ ಸನೋನ್ ಮತ್ತು ಜಾವೇದ್ ಜಾಫ್ರಿ ಸೇರಿದಂತೆ ಹಲವಾರು ಪ್ರಮುಖ ಬಾಲಿವುಡ್ ಸೆಲೆಬ್ರಿಟಿಗಳಿ ಇಲ್ಲಿ ವಾಸವಾಗಿದ್ದಾರೆ

ಕೃತಿ ಸನೋನ್‌ ಅಪಾರ್ಟ್‌ಮೆಂಟ್‌ಗೆ ಆಗಂತುಕನ ಎಂಟ್ರಿ!

Profile Rakshita Karkera Jul 16, 2025 10:06 AM

ಮುಂಬೈ: ಕೃತಿ ಸನೋನ್‌(Kriti Sanon), ಜಾವೇದ್‌ ಜಾಫ್ರಿಯಂತಹ(Javed Jaffrey) ಬಾಲಿವುಡ್‌ನ ಖ್ಯಾತ ನಟ-ನಟಿಯರು ವಾಸವಾಗಿರುವ ಮುಂಬೈನ ಅಪಾರ್ಟ್‌ಮೆಂಟ್‌ವೊಂದಕ್ಕೆ ಆಗಂತುಕನೊಬ್ಬ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿ ಆತಂಕ ಸೃಷ್ಟಿಸಿರುವ ಘಟನೆ ವರದಿಯಾಗಿದೆ. ಮುಂಬೈನ ದುಬಾರಿ ಪಾಲಿ ಹಿಲ್ ಪ್ರದೇಶದ ವಸತಿ ಕಟ್ಟಡವೊಂದರಲ್ಲಿ ವ್ಯಕ್ತಿಯೊಬ್ಬ ಲಿಫ್ಟ್ ಕಾರ್ಯಾಚರಣೆಗೆ ಭಾರೀ ಕಲ್ಲುಗಳನ್ನು ಇರಿಸಿ ಅಡ್ಡಿಪಡಿಸಿದ ಆರೋಪ ಕೇಳಿಬಂದಿದ್ದು, ಸ್ಥಳೀಯ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದಾರೆ.

ಬಾಂದ್ರಾ ಪಶ್ಚಿಮದಲ್ಲಿರುವ ಬಹುಮಹಡಿ ಕಟ್ಟಡವಾದ ಸಂಧು ಪ್ಯಾಲೇಸ್‌ನಲ್ಲಿ ಈ ಘಟನೆ ಸಂಭವಿಸಿದೆ, ಇದು ನಟರಾದ ಕೃತಿ ಸನೋನ್ ಮತ್ತು ಜಾವೇದ್ ಜಾಫ್ರಿ ಸೇರಿದಂತೆ ಹಲವಾರು ಪ್ರಮುಖ ಬಾಲಿವುಡ್ ಸೆಲೆಬ್ರಿಟಿಗಳಿ ಇಲ್ಲಿ ವಾಸವಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನು ಪೊಲೀಸರ ಮಾಹಿತಿ ಪ್ರಕಾರ ಆ ವ್ಯಕ್ತಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಹಳದಿ ಕಾರಿನಲ್ಲಿ ಬಂದು 17 ನೇ ಮಹಡಿಯಲ್ಲಿರುವ ಫ್ಲಾಟ್‌ಗೆ ಭೇಟಿ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಮೊದಲಿಗೆ ವಾಶ್‌ ರೂಂ ಬಳಸಲು ಅನುಮತಿ ಕೊಡಿ ಎಂದು ವಾಚ್‌ಮ್ಯಾನ್‌ಗೆ ಮನವಿ ಮಾಡಿದ್ದ. ಅಲ್ಲಿಂದ ವಾಪಾಸ್‌ ಬಂದ ನಂತರ 14 ನೇ ಮಹಡಿಗೆ ಹೋಗುತ್ತಿರುವುದಾಗಿ ಹೇಳಿದ್ದ. ಆಗ ವಾಚ್‌ಮ್ಯಾನ್‌ ಇಂಟರ್‌ಕಾಮ್ ಮೂಲಕ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಬರದಿರಲಿಲ್ಲ. ಆಗ ತಕ್ಷಣ ಆ ವ್ಯಕ್ತಿ ತಾನು 17 ನೇ ಮಹಡಿಗೆ ಹೋಗುತ್ತಿದ್ದೇನೆ ಎಂದು ಮಾತು ಬದಲಿಸಿದ್ದ.

ಈ ಸುದ್ದಿಯನ್ನೂ ಓದಿ: Star Summer Fashion: ನಟಿ ಕೃತಿ ಸನೋನ್‌ ಸಮ್ಮರ್‌ ಫ್ಯಾಷನ್‌ ಲವ್‌

ಸಂದರ್ಶಕರನ್ನು ನೇರವಾಗಿ ಒಳಗೆ ಬಿಡಬೇಕೆಂದು ಫ್ಲಾಟ್ ಮಾಲೀಕರೊಂದಿಗೆ ಖಚಿತಪಡಿಸಿಕೊಂಡ ನಂತರ ಕಾವಲುಗಾರರು ಅವರಿಗೆ ಪ್ರವೇಶವನ್ನು ಅನುಮತಿಸಿದರು. ಆರಂಭದಲ್ಲಿ ಅವರನ್ನು ಬೇಸ್‌ಮೆಂಟ್ 2 ರಲ್ಲಿ ನಿಲ್ಲಿಸಲು ನಿರ್ದೇಶಿಸಲಾಯಿತು, ಮೊದಲು ಅವರ ಕಾರನ್ನು ಬೇಸ್‌ಮೆಂಟ್ 1 ರಲ್ಲಿ ಬಿಟ್ಟು ನಂತರ ಮರುನಿರ್ದೇಶಿಸಲಾಯಿತು. ಆಗ ವಾಚ್‌ಮ್ಯಾನ್‌ ಆತನನ್ನು ಅಲ್ಲಿಂದ ಹೋಗುವಂತೆ ಗದರಿಸಿದ್ದ. ಆದರೆ ಮರುದಿನ ಲಿಫ್ಟ್‌ ಕಾರ್ಯನಿರ್ವಹಿಸದೇ ಇರುವಾಗ ಈತನ ಕೃತ್ಯ ಬೆಳೆಕಿಗೆ ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆ ವ್ಯಕ್ತಿ ಲಿಫ್ಟ್ ಕ್ಯಾಬಿನ್ ಒಳಗೆ ದೊಡ್ಡ ಕಲ್ಲುಗಳನ್ನು ಇರಿಸಿ ಭದ್ರತಾ ಕ್ಯಾಮೆರಾದ ಕಡೆಗೆ ಅನುಚಿತ ಸನ್ನೆಗಳನ್ನು ಮಾಡಿದ್ದಾನೆ ಎಂದು ತಿಳಿದುಬಂದಿದೆ. ಶೌಚಾಲಯಕ್ಕೆ ಭೇಟಿ ನೀಡುವ ನೆಪದಲ್ಲಿ, ಈ ಕೃತ್ಯ ಎಸಗಲಾಗಿದೆ.

ವಾಹನದ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು, ಪೊಲೀಸರು ಆ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಯಿತು. ಪ್ರಾಥಮಿಕ ಸಂಶೋಧನೆಗಳು ಆ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿರಬಹುದು ಪೊಲೀಸರು ಶಂಕಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಆತನನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಗಿದೆ.