Katrina Kaif: ನಟಿ ಕತ್ರಿನಾ ಕೈಫ್ಗೆ 42ರ ಹುಟ್ಟುಹಬ್ಬದ ಸಂಭ್ರಮ; ಇವರ ಸೂಪರ್ ಹಿಟ್ ಸಿನಿಮಾಗಳಿವು
ʼಏಕ್ ಥಾ ಟೈಗರ್ʼ, ʼಬೂಮ್ʼ, ʼಅಪ್ನೆʼ, ʼರೇಸ್ʼ, ʼಹಲ್ಲೋʼ, ʼಧೂಮ್ 3ʼ, ʼಝಿರೋʼ, ʼಟೈಗರ್ 3ʼ, ʼಮೇರಿ ಕ್ರಿಸ್ಮಸ್ʼ ಸಿನಿಮಾ ಮೂಲಕ ಅಭಿಮಾನಿಗಳ ಮನಸ್ಸು ಕದ್ದ ನಟಿ ಕತ್ರಿನಾ ಕೈಫ್ ಅವರಿಗೆ ಇಂದು (ಜು. 16) 42ನೇ ಜನ್ಮದಿನದ ಸಂಭ್ರಮ. ಕಳೆದ ಎರಡು ದಶಕಗಳಿಂದಲೂ ಬಾಲಿವುಡ್ನಲ್ಲಿ ಸಕ್ರಿಯರಾಗಿರುವ ಕತ್ರಿನಾ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಕೆಲವು ಸಿನಿಮಾಗಳು ಹಿಟ್ ಲಿಸ್ಟ್ ಸೇರಿದ್ದು ಅವರ ವೃತ್ತಿ ಬದುಕಿನಲ್ಲೇ ಮೈಲುಗಲ್ಲಿನಂತಿವೆ. ಆ ಕುರಿತಾದ ವಿವರ ಇಲ್ಲಿದೆ.

Katrina Kaif


ʼಏಕ್ ಥಾ ಟೈಗರ್ʼ
ಕತ್ರಿನಾ ಈ ಸಿನಿಮಾದಲ್ಲಿ ಜೋಯಾ ಪಾತ್ರವನ್ನು ನಿರ್ವಹಿಸಿದ್ದಾರೆ. ಪಾಕಿಸ್ತಾನಿ ಐಎಸ್ಐ ಏಜೆಂಟ್ ಆಗಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು, ಬಾಲಿವುಡ್ನ ಆ್ಯಕ್ಷನ್ ಸಿನಿಮಾಗಳ ಸಾಲಿನಲ್ಲಿ ʼಏಕ್ ಥಾ ಟೈಗರ್ʼ ಹಿಟ್ ಲಿಸ್ಟ್ ಸೇರಿದೆ. ಸಲ್ಮಾನ್ ಖಾನ್ ಈ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.

ʼನಮಸ್ತೆ ಲಂಡನ್ʼ
ಕತ್ರಿನಾ ಅಭಿನಯದ 'ನಮಸ್ತೆ ಲಂಡನ್' ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ. ಈ ಸಿನಿಮಾವು ಕಾಮಿಡಿ ಸಿಕ್ವೇನ್ಸ್ ಆಗಿದ್ದು ನಟ ಅಕ್ಷಯ್ ಕುಮಾರ್ಗೆ ನಾಯಕಿಯಾಗಿ ಕತ್ರಿನಾ ಜಸ್ಮೀತ್ ಅಲಿಯಾಸ್ ಜಾಝ್ ಪಾತ್ರವನ್ನು ನಿರ್ವಹಿಸಿದರು. ಆಧುನಿಕ ಕಾಲ ಘಟ್ಟದಲ್ಲಿ ಸಾಂಪ್ರದಾಯಿಕ ಮೌಲ್ಯಗಳ ನಡುವೆ ಸಿಲುಕಿಕೊಂಡು ಬ್ರಿಟಿಷ್-ಭಾರತೀಯ ಹುಡುಗಿಯ ಈ ಪಾತ್ರಕ್ಕೆ ಕತ್ರಿನಾ ಜೀವ ತುಂಬಿದ್ದಾರೆ. ಅವರ ಅಭಿನಯ ಮತ್ತು ಭಾವನಾತ್ಮಕ ಸನ್ನಿವೇಶಗಳು ಪ್ರೇಕ್ಷಕರ ಮನ ಗೆದ್ದಿತ್ತು.

'ಮೇರೆ ಬ್ರದರ್ ಕಿ ದುಲ್ಹಾನ್ʼ
2011ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ 'ಡಿಂಪಲ್ ದೀಕ್ಷಿತ್' ಆಗಿ ನಟಿ ಕತ್ರಿನಾ ತೆರೆ ಮೇಲೆ ಮಿಂಚಿದರು. ಕಾಮಿಡಿ ಚಿತ್ರ ಸಿನಿಮಾ ಇದಾಗಿದ್ದು ಇವರ ಸೆನ್ಸ್ ಆಫ್ ಹ್ಯೂಮರ್ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸುವಂತೆ ಮಾಡಿತು. ಈ ಸಿನಿಮಾದ ಅವರ ಅಭಿನಯವು ಬಹುಮುಖ ಪ್ರತಿಭೆಗೆ ಬೆಳಕು ಚೆಲ್ಲಿದಂತಿದೆ.

ʼರಾಜನೀತಿʼ
'ರಾಜನೀತಿ' ಸಿನಿಮಾದಲ್ಲಿ ನಟಿ ಕತ್ರಿನಾ ಅವರು ಇಂದು ಪ್ರತಾಪ್ ಪಾತ್ರವನ್ನು ನಿರ್ವಹಿಸಿದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಂದ ಸ್ಫೂರ್ತಿ ಪಡೆದು ಇಂದು ಪ್ರತಾಪ್ ಪಾತ್ರದಲ್ಲಿ ಅವರು ಗ್ಲಾಮರಸ್ ಲುಕ್ನಿಂದ ಹೊರ ಬಂದು ರಾಜಕೀಯ ಧೋರಣೆ ಉಳ್ಳ ನಾಯಕಿಯಾಗಿ ಅಭಿನಯಿಸಿದರು. ಈ ಸಿನಿಮಾವು ಹಿಟ್ ಆಗಿತ್ತು. ಈ ಚಿತ್ರದಲ್ಲಿ ಅಭಿನಯಿಸುವ ಸಲುವಾಗಿ ಅವರು ಪ್ರಿಯಾಂಕಾ ಗಾಂಧಿಯೊಂದಿಗೆ ಸಾಕಷ್ಟು ಸಮಯ ಕಳೆದಿದ್ದು ಈ ಮೂಲಕ ಅಭಿನಯ ಶೈಲಿ ವಿಭಿನ್ನವಾಗಿ ಮೂಡಿ ಬರುವಂತೆ ಮಾಡಿದರು.

ʼಅಜಬ್ ಪ್ರೇಮ್ ಕಿ ಗಜಬ್ ಕಹಾನಿʼ
2009ರಲ್ಲಿ ತೆರೆ ಕಂಡ 'ಅಜಬ್ ಪ್ರೇಮ್ ಕಿ ಗಜಬ್ ಕಹಾನಿ' ಸಿನಿಮಾದಲ್ಲಿ ನಟಿ ಕತ್ರಿನಾ ಅವರು ಜೆನ್ನಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕತ್ರಿನಾ ಅವರ ಐಕಾನಿಕ್ ಪಾತ್ರಗಳ ಸಾಲಿನಲ್ಲಿ ಈ ಸಿನಿಮಾ ಕೂಡ ಸೇರುತ್ತದೆ. ಜೆನ್ನಿಯ ಮುಗ್ಧತೆ, ಕಾಮಿಡಿ ಪಂಚ್ ಎಲ್ಲವೂ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ನಟ ರಣಬೀರ್ ಕಪೂರ್ಗೆ ಜೋಡಿಯಾಗಿರುವ ಈ ಪಾತ್ರವನ್ನು ಈಗಲೂ ಬಹುತೇಕರಿಗೆ ನೆನಪಿಸಿಕೊಳ್ಳುತ್ತಾರೆ.