Bhagya Lakshmi Serial: ಪೂಜಾ-ಕಿಶನ್ ಮದುವೆಗೆ ಸಿಕ್ತು ಗ್ರೀನ್ ಸಿಗ್ನಲ್: ಎಲ್ಲರ ಕಣ್ಣು ತಾಂಡವ್ ಮೇಲೆ
ಕುಸುಮಾ ಮತ್ತು ಭಾಗ್ಯ, ಕಿಶನ್ ವಿಚಾರವನ್ನು ಪೂಜಾ ಮುಂದೆ ಪ್ರಸ್ತಾಪ ಮಾಡಿದ್ದಾರೆ. ನೀವು ತೋರಿಸುವ ಹುಡುಗನನ್ನೇ ಮದುವೆ ಆಗುವುದಾಗಿ ಪೂಜಾ ಹೇಳಿದ್ದರಿಂದ, ಕಿಶನ್ ನಿನಗೆ ಹೇಳಿ ಮಾಡಿಸಿದ ಜೋಡಿ ಎಂದಿದ್ದಾರೆ. ಇವರಿಬ್ಬರ ಮಾತಿಗೆ ಪೂಜಾ ಸಹ ಖುಷಿಯಾಗಿದ್ದಾಳೆ.

Bhagya Lakshmi Serial

‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಸದ್ಯದಲ್ಲೇ ಪೂಜಾಳ ಮದುವೆ ಎಪಿಸೋಡ್ ಗ್ರ್ಯಾಂಡ್ ಆಗಿ ನಡೆಯುವುದರಲ್ಲಿದೆ. ಪೂಜಾ ಹಾಗೂ ಕಿಶನ್ಗೆ ಮದುವೆ ಮಾಡಿಸಲು ಹೊರಟಿದ್ದಾರೆ ಭಾಗ್ಯ ಹಾಗೂ ಕುಸುಮಾ. ಕಿಶನ್ ಒಳ್ಳೆಯವನ ಅಥವಾ ಕೆಟ್ಟವನ, ಪೂಜಾಳಿಗೆ ಸರಿಯಾದ ಜೋಡಿಯ ಎಂಬುದನ್ನು ತಿಳಿಯಲು ಸ್ವತಃ ಕುಸುಮಾ ಅವರೇ ಕಿಶನ್ ನಡೆಸುತ್ತಿರುವ ಜಿಮ್‌ಗೆ ಹೋಗಿ ಪರಿಶೀಲಿಸಿದ್ದಾಳೆ. ನಾನೂ ಜಿಮ್‌ಗೆ ಸೇರಬೇಕು ಎಂದು ಸೀರೆಯಲ್ಲಿಯೇ ಕುಸುಮಾ ಜಿಮ್‌ಗೆ ಬಂದು ಕಿಶನ್ ಬಗ್ಗೆ ತಿಳಿದುಕೊಂಡಿದ್ದಾಳೆ.
ಜಿಮ್‌ನಲ್ಲಿ ಕಿಶನ್‌ನ ನೋಡ್ತಿದ್ದಂತೆ ಕುಸುಮಾಗೆ ಆ ಹುಡುಗ ಇಷ್ಟವಾಗಿದ್ದಾನೆ. ಆತ ವರ್ತಿಸಿದ ರೀತಿಗೆ, ಲವ್ ಬಗೆಗಿನ ಆತನ ಮಾತು.. ಹೀಗೆ ಎಲ್ಲವನ್ನೂ ಕಂಡು ಫಿದಾ ಆಗಿದ್ದಾಳೆ ಕುಸುಮಾ. ಜಿಮ್‌ನಲ್ಲಿ ಹೆವಿ ವೇಟ್ ಎತ್ತುವ ಭರದಲ್ಲಿ ಕುಸುಮಾ ಕೆಳಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಾಗ, ಕಿಶನ್ ತೋರಿದ ಕಾಳಜಿಗೂ ಕುಸುಮಾ ಖುಷಿಯಾಗಿದ್ದಾಳೆ. ಇದೆಲ್ಲವನ್ನು ಮನೆಗೆ ಬಂದು ಭಾಗ್ಯ ಬಳಿಯೂ ಹೇಳಿಕೊಂಡಿದ್ದಾಳೆ. ಕುಸುಮಾ ಮಾತು ಕೇಳಿ ಭಾಗ್ಯಾಗೂ ಖುಷಿ ಆಗುತ್ತದೆ.
ಬಳಿಕ ಕುಸುಮಾ ಮತ್ತು ಭಾಗ್ಯ, ಕಿಶನ್ ವಿಚಾರವನ್ನು ಪೂಜಾ ಮುಂದೆ ಪ್ರಸ್ತಾಪ ಮಾಡಿದ್ದಾರೆ. ನೀವು ತೋರಿಸುವ ಹುಡುಗನನ್ನೇ ಮದುವೆ ಆಗುವುದಾಗಿ ಪೂಜಾ ಹೇಳಿದ್ದರಿಂದ, ಕಿಶನ್ ನಿನಗೆ ಹೇಳಿ ಮಾಡಿಸಿದ ಜೋಡಿ ಎಂದಿದ್ದಾರೆ. ಇವರಿಬ್ಬರ ಮಾತಿಗೆ ಪೂಜಾ ಸಹ ಖುಷಿಯಾಗಿದ್ದಾಳೆ.
ಮತ್ತೊಂದೆಡೆ ತಾಂಡವ್-ಶ್ರೇಷ್ಠಾ ಭಾಗ್ಯಾಗೆ ಮತ್ತೆ ಕೇಡು ಬಯಸಲು ಪ್ಲ್ಯಾನ್ ಮಾಡುತ್ತಿದ್ದಾರೆ. ನನ್ನ ಮನಃಶಾಂತಿಯನ್ನೇ ಆಕೆ ಕಿತ್ತುಕೊಂಡಿದ್ದಾಳೆ ಎಂದು ಶ್ರೇಷ್ಠಾ ಮುಂದೆ ತಾಂಡವ್ ಹೇಳುತ್ತಾನೆ. ಆ ಭಾಗ್ಯಾಳ ನೆಮ್ಮದಿ ಹಾಳಾಗಬೇಕು, ಆವಾಗಲೇ ನನ್ನ ಮನಸ್ಸು ಸಮಾಧಾನ ಆಗೋದು ಎಂದಿದ್ದಾನೆ. ಆಕೆಯ ನೆಮ್ಮದಿಯನ್ನ ನಾನೇ ಹಾಳು ಮಾಡ್ತಿನಿ ಎಂದು, ನೇರವಾಗಿ ಭಾಗ್ಯಾಗೆ ಫೋನ್ ಮಾಡಿದ್ದಾಳೆ ಶ್ರೇಷ್ಠಾ. ಪೂಜಾ ಯಾರ್ಯಾರೋ ಜೊತೆ ಓಡಾಡ್ತಿದ್ದಾಳಂತೆ. ಅವಳಿಗೆ ಸ್ವಲ್ಪ ಡಿಸೆಂಟ್ ಆಗಿರಲು ಹೇಳು. ಸುಮ್ಮನೆ ಮನೆ ಮರ್ಯಾದೆ ಹಾಳು ಎಂದಿದ್ದಾಳೆ ಶ್ರೇಷ್ಠಾ.
ಶ್ರೇಷ್ಠಾ ಮಾತಿಗೆ ತಲೆಕೊಡದ ಭಾಗ್ಯ ಅವಳಿಗೆ ಮೈಚಳಿ ಬಿಡಿಸಿದ್ದಾಳೆ. ನನ್ನ ತಂಗಿನೇನು ನೀನು ಅಂದುಕೊಂಡಿದ್ದೀಯಾ. ಮನೆ ಮರ್ಯಾದೆನಾ ಬೀದೀಲಿ ಹರಾಜು ಹಾಕೋಕೆ. ನಾಚಿಕೆ ಮಾನ ಮರ್ಯಾದೆ ಇಲ್ಲದೆ ಇನ್ನೊಬ್ಬರ ಮನೆ ಹಾಳು ಮಾಡುವವಳು ನೀನು. ನಿನ್ನ ಬಳಿ ಬುದ್ದಿ ಹೇಳಿಸಿಕೊಳ್ಳುವ ದರ್ದು ನನಗಿಲ್ಲ. ನೀನ್ಯಾರೋ ಗುಣ ಸರಿ ಇಲ್ಲದಿರೋನನ್ನು ಒಪ್ಪಿಕೊಂಡಿದ್ದೀಯಾ ಅಂತ ನಮ್ಮ ಪೂಜಾ ಹಾಗೆ ಮಾಡ್ತಾಳಾ? ಎಂದು ಹೇಳಿದ್ದಾಳೆ.
ಭಾಗ್ಯಾಳ ಈ ಮಾತು ಕೇಳಿ ಶ್ರೇಷ್ಠಾಗೂ ಕೋಪ ಬಂದಿದೆ. ಅತ್ತ ಭಾಗ್ಯ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಸದ್ಯ ಈ ಮದುವೆಯನ್ನು ತಪ್ಪಿಸಲು ತಾಂಡವ್-ಶ್ರೇಷ್ಠಾ ಪ್ಲ್ಯಾನ್ ಮಾಡುವುದು ಖಚಿತ. ಇವರಿಬ್ಬರು ಅದೇನು ಪ್ಲ್ಯಾನ್ ಮಾಡುತ್ತಾರೆ?, ಪೂಜಾ-ಕಿಶನ್ ಮದುವೆ ನಿಲ್ಲುತ್ತ ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
Bro Gowda Marriage: ಶಮಂತ್ ಮದುವೆ ಡೇಟ್ ಅನೌನ್ಸ್: ಮೇ 21ಕ್ಕೆ ಬ್ರೋ ಗೌಡ ಮ್ಯಾರೇಜ್