ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nee Iralu Joteyalli Serial: ಸೊಕ್ಕಿನ ಊರ್ಮಿಳೆಯ ಗರ್ವವನ್ನ ಮುರಿಯೋಕೆ ಬರ್ತಿದ್ದಾನೆ ಮುದ್ದು ಕೃಷ್ಣ!

ಸ್ಟಾರ್ ಸುವರ್ಣದಲ್ಲಿ ಸದ್ಯದಲ್ಲೇ ಹೊಸ ಧಾರಾವಾಹಿ ಬರುತ್ತಿದೆ. ಇದರ ಪ್ರೊಮೋ ಬಿಡುಗಡೆ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಈ ಹೊಸ ಧಾರಾವಾಹಿಯ ಹೆಸರು "ನೀ ಇರಲು ಜೊತೆಯಲ್ಲಿ". ಪ್ರೋಮೋದಲ್ಲಿ ಊರ್ಮಿಳಾ ದಿವಾನ್ ಪಾತ್ರದ ಪರಿಚಯ ಮಾಡಲಾಗಿದೆ.

ಊರ್ಮಿಳೆಯ ಗರ್ವ ಮುರಿಯೋಕೆ ಬರ್ತಿದ್ದಾನೆ ಮುದ್ದು ಕೃಷ್ಣ

Nee Iralu Joteyalli

Profile Vinay Bhat Jul 14, 2025 3:30 PM

ಕನ್ನಡದ ಪ್ರಸಿದ್ಧ ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರ ಆಗುವ ಧಾರಾವಾಹಿಗಳಿಗೆ ವಿಶೇಷ ಅಭಿಮಾನಿ ಬಳಗವಿದೆ. ಇತರೆ ಚಾನೆಲ್​ಗಳಿಗೆ ಹೋಲಿಸಿದರೆ ಇದರಲ್ಲಿ ಪ್ರಸಾರ ಆಗುವ ಸೀರಿಯಲ್​ಗಳ ಸಂಖ್ಯೆ ಕಡಿಮೆ.. ಆದರೆ, ಟೆಲಿಕಾಸ್ಟ್ ಕಾಣುವ ಧಾರಾವಾಹಿಗಳಿಗೆ ಉತ್ತಮ ವೀಕ್ಷಕರಿದ್ದಾರೆ. ಆಸೆ, ನಿನ್ನ ಜೊತೆ ನನ್ನ ಕಥೆ, ರೇಣುಕಾ ಯಲ್ಲಮ್ಮ, ಇತ್ತೀಚೆಗಷ್ಟೆ ಶುರುವಾದ ಶಾರದೆ ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿವೆ.

ಇದೀಗ ಈ ಸಾಲಿಗೆ ಮತ್ತೊಂದು ಧಾರಾವಾಹಿ ಸೇರುವ ಎಲ್ಲ ಲಕ್ಷಣ ಕಾಣುತ್ತಿದೆ. ಹೌದು, ಸ್ಟಾರ್ ಸುವರ್ಣದಲ್ಲಿ ಸದ್ಯದಲ್ಲೇ ಹೊಸ ಧಾರಾವಾಹಿ ಬರುತ್ತಿದೆ. ಇದರ ಪ್ರೊಮೋ ಬಿಡುಗಡೆ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಈ ಹೊಸ ಧಾರಾವಾಹಿಯ ಹೆಸರು "ನೀ ಇರಲು ಜೊತೆಯಲ್ಲಿ". ಪ್ರೋಮೋದಲ್ಲಿ ಊರ್ಮಿಳಾ ದಿವಾನ್ ಪಾತ್ರದ ಪರಿಚಯ ಮಾಡಲಾಗಿದೆ. ಈ ಒಂದು ಪಾತ್ರವನ್ನ ಅಮೃತವರ್ಷಿಣಿ ಸೀರಿಯಲ್‌ನ ನಟಿ ರಜಿನಿ ಮಾಡಿದ್ದಾರೆ.

ಈ ಧಾರಾವಾಹಿ ಮೂಲಕ ಬಹಳ ದಿನಗಳ ಬಳಿಕ ಸ್ಟಾರ್ ಸುವರ್ಣ ವಾಹಿನಿಯ ಸೀರಿಯಲ್​ನಲ್ಲಿ ರಜಿನಿ ಅಭಿನಯಿಸಿದ್ದಾರೆ. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ರಜಿನಿ ಈ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಜಿನಿ ಈ ಹಿಂದೆ ಸ್ಟಾರ್ ಸುವರ್ಣದ ಬ್ಲಾಕ್‌ಬಸ್ಟರ್ ಧಾರಾವಾಹಿ ಅಮೃತವರ್ಷಿಣಿಯಲ್ಲಿ ಅಮೃತ ಪಾತ್ರದ ಮೂಲಕ ಎಲ್ಲರ ಮನಗೆದ್ದಿದ್ದರು. ಆ ಪಾತ್ರದ ಮುಗ್ಧತೆ, ಕಷ್ಟ ಮತ್ತು ಸವಾಲುಗಳು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿವೆ. ಆದರೆ, ನೀ ಇರಲು ಜೊತೆಯಲ್ಲಿ ಧಾರಾವಾಹಿಯಲ್ಲಿ ರಜಿನಿ ಸಂಪೂರ್ಣ ತದ್ವಿರುದ್ಧವಾದ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಊರ್ಮಿಳಾ ದಿವಾನ್​ನದ್ದು ಸೊಕ್ಕಿನ ಪಾತ್ರ ಅನ್ನೋದು ಪ್ರೋಮೋ ನೋಡಿದ್ರೇನೆ ತಿಳಿಯುತ್ತದೆ. ಈ ಪಾತ್ರ ಎಲ್ಲರ ಗಮನ ಕೂಡ ಸೆಳೆಯುವಂತ ಕಾಣಿಸುತ್ತದೆ. ಆದರೆ, ನಾಯಕನ ಎದುರು ಈ ಪಾತ್ರದ ಆಟ ಏನೂ ನಡೆಯೋದಿಲ್ಲ ಅನ್ನೋದು ಕೂಡ ಈಗೀನ ಪ್ರೋಮೋದಲ್ಲಿಯೇ ರಿವೀಲ್ ಆಗಿದೆ. ತನ್ನ ಪ್ರಾಪರ್ಟಿಯನ್ನ ಸೇಲ್ ಮಾಡಲು ಊರ್ಮಿಳ ಮುಂದಾಗುತ್ತಾಳೆ. ಆದರೆ, ಇದಕ್ಕೆ ಮನೆಯವರ ಸಹಿ ಕೂಡ ಅಗತ್ಯವಿರುತ್ತದೆ. ಆದರೆ, ನಾಯಕ ಕೃಷ್ಣ ಮಾತ್ರ ಇದು ನಮ್ಮ ಘನತೆಯ ಮನೆ ಇದನ್ನ ಸೇಲ್ ಮಾಡೋಕೆ ನಾನು ಬಿಡಲ್ಲ ಎಂದು ಸವಾಲ್ ಹಾಕುವುದನ್ನು ಪ್ರೊಮೋದಲ್ಲಿ ತೋರಿಸಲಾಗಿದೆ.

Bhagya Lakshmi Serial: ಮದುವೆ ನಿಲ್ಲಿಸಲು ಬಂದ ತಾಂಡವ್​ನ ರೂಮ್ ಒಳಗೆ ಕಟ್ಟಿ ಹಾಕಿದ ವೈಷ್ಣವ್-ಕುಸುಮಾ

ನೀ ಇರಲು ಜೊತೆಯಲ್ಲಿ ಸೀರಿಯಲ್ ಕೆಲವೇ ದಿನಗಳಲ್ಲಿ ಶುರುವಾಗಲಿ. ಸದ್ಯ ಪ್ರೋಮೋಗಳು ಒಂದೊಂದಾಗಿಯೇ ರಿಲೀಸ್ ಆಗುತ್ತಿವೆ. ಧರಣಿ ಜಿ.ರಮೇಶ್ ಈ ಸೀರಿಯಲ್ ಡೈರೆಕ್ಷನ್ ಮಾಡಿದ್ದಾರೆ. ಇವರ ಹೊಸ ನಿರ್ಮಾಣ ಸಂಸ್ಥೆ ಮೂಲಕವೇ ಈ ಸೀರಿಯಲ್ ಬರ್ತಿದೆ. ಹಾಗೆ ಪವನ್ ರವೀಂದ್ರ ಈ ಒಂದು ಸೀರಿಯಲ್ ಅಲ್ಲಿ ನಾಯಕರಾಗಿದ್ದಾರೆ. ಸಲೋಮಿ ಇಲ್ಲಿ ನಾಯಕಿ ಆಗಿದ್ದಾರೆ.