Bhagya Lakshmi Serial: ಮದುವೆ ನಿಲ್ಲಿಸಲು ಬಂದ ತಾಂಡವ್ನ ರೂಮ್ ಒಳಗೆ ಕಟ್ಟಿ ಹಾಕಿದ ವೈಷ್ಣವ್-ಕುಸುಮಾ
ಭಾಗ್ಯ ತಾಂಡವ್ಗೆ ಕಟ್ಟಿದ ಬಳ್ಳಿ ಬಿಚ್ಚಿ ದೊಡ್ಡ ತಪ್ಪು ಮಾಡಿದ್ದಾಳೆ.. ತಾಂಡವ್ ನಿಜಕ್ಕೂ ಮದುವೆ ನಿಲ್ಲಿಸುತ್ತಾನಾ?, ಅತ್ತ ಮೀನಾಕ್ಷಿ-ಕನ್ನಿಕಾ ಪ್ಲ್ಯಾನ್ ಏನಾಗಿದೆ?, ತಾಂಡವ್ಗೆ ಅಡ್ಡಲಾಗಿ ಪುನಃ ವೈಷ್ಣವ್ ಬರುತ್ತಾನ ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಸದ್ಯ ಭಾಗ್ಯಾ ತಂಗಿ ಪೂಜಾ ಕಲ್ಯಾಣೋತ್ಸವ ಭರ್ಜರಿ ಆಗಿ ನಡೆಯುತ್ತಿದೆ. ಎಲ್ಲ ಅಡೆತಡೆ ದಾಟಿ ಭಾಗ್ಯಾ-ಕುಸುಮಾ ಹೇಗಾದರು ಮಾಡಿ ಪೂಜಾ ಮದುವೆ ಮಾಡಿಸಿಯೇ ಬಿಡಬೇಕೆಂದು ಪಣತೊಟ್ಟಿದ್ದಾಳೆ. ವಿಪರ್ಯಾಸ ಎಂದರೆ ಮದುವೆ ದಿನ ಕೂಡ ಭಾಗ್ಯ ಮನೆಯವರಿಗೆ ಸಂಕಷ್ಟ ಎದುರಾಗದೆ ಇರಲಿಲ್ಲ. ಒಂದುಕಡೆ ಈ ಮದುವೆ ನಿಲ್ಲಿಸಲು ಮೀನಾಕ್ಷಿ ಹಾಗೂ ಕನ್ನಿಕಾ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದರೆ ಮತ್ತೊಂದೆಡೆ, ಭಾಗ್ಯ ಪತಿ ತಾಂಡವ್ ಕೂಡ ಹಾಲ್ಗೆ ಬಂದು ಮದುವೆ ನಿಲ್ಲಿಸಲು ಮುಂದಾಗಿದ್ದಾನೆ.
ಮೊದಲಿಗೆ ಈ ಮದುವೆಗೆ ತಾಂಡವ್ ನನ್ನು ಇನ್ವೈಟ್ ಮಾಡಲು ಭಾಗ್ಯಾ ಮುಂದಾಗಿದ್ದಳು. ಆದ್ರೆ ಕುಸುಮಾ ಇದಕ್ಕೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿ, ಈ ಮದುವೆಗೆ ಆತನನ್ನು ಕರೆಯೋದು ಬೇಡ ಎಂದಿದ್ದಳು. ಆದರೆ, ಇನ್ವಿಟೇಷನ್ ಇರದೆಯೂ ಈ ಮದುವೆಗೆ ತಾಂಡವ್ ಎಂಟ್ರಿಯಾಗಿದ್ದಾನೆ. ಈ ಮದುವೆ ಅದು ಹೇಗೆ ನಡೆಯುತ್ತೆ ಅಂತ ನಾನೂ ನೋಡ್ತೇನೆ ಎಂದು ನಿಲ್ಲಿಸಲು ತಾಂಡವ್ ಪಣ ತೊಟ್ಟಿದ್ದಾನೆ.
ತಾಂಡವ್ ಬರುವುದನ್ನು ಗಮನಿಸಿದ ಕುಸುಮಾ, ತಾಂಡವ್ನನ್ನು ಎಳೆದುಕೊಂಡು ಒಂದು ರೂಮ್ಗೆ ಬಂದು ಹೊರಟು ಹೋಗು ಇಲ್ಲಿಂದ ಎಂದಿದ್ದಾಳೆ. ಆದ್ರೆ, ಇದಕ್ಕೆ ಒಪ್ಪದ ತಾಂಡವ್, ನೀನು ಇವತ್ತು ಎಷ್ಟೇ ಕಷ್ಟ ಪಟ್ಟರೂ ನಾನು ಈ ಮದುವೆಯನ್ನ ನಿಲ್ಲಿಸಿಯೇ ನಿಲ್ಲಿಸುತ್ತೇನೆ ಎಂದು ಹೊರಡುತ್ತಾನೆ. ಕುಸುಮಾ ಎಷ್ಟೇ ಬೈದರು ತಾಂಡವ್ ಕೇಳುವುದಿಲ್ಲ. ಹೀಗೆ ಮದುವೆ ನಿಲ್ಲಿಸಲು ತಾಂಡವ್ ಹೊರಟಾಗ ಅಲ್ಲಿಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ವೈಷ್ಣವ್ ಬಂದಿದ್ದಾನೆ. ತಾಂಡವ್ ದಾರಿಗೆ ಅಡ್ಡಲಾಗಿ ವೈಷ್ಣವ್ ನಿಂತಿದ್ದಾನೆ.
ವೈಷ್ಣವ್ನನ್ನು ಕಂಡು ಕಿಂಚಿತ್ತು ಮರಿಯಾದೆ ಕೊಡದ ತಾಂಡವ್, ನೀನೇನೋ ಮಾಡ್ತಾ ಇದ್ದೀಯಾ ಇಲ್ಲಿ?, ನನ್ನ ದಾರಿಗೆ ಅಡ್ಡ ಬರಬೇಡ.. ಇದು ನಿನಗೆ ಸಂಬಂಧ ಪಟ್ಟ ವಿಷಯ ಅಲ್ಲ ಎಂದಿದ್ದಾನೆ. ಇದಕ್ಕೆ ತಕ್ಕ ಉತ್ತರ ಕೊಟ್ಟ ವೈಷ್ಣವ್, ನೀನೇನು ಮಾಡೋಕೆ ಹೊರಿಟಿದ್ದೀಯಾ ಅಣ್ಣ.. ಇದು ನಿನಗೆ ಸಂಬಂಧ ಪಟ್ಟ ಮದುವೆ.. ನೀನೇ ಮುಂದೆ ನಿಂತು ಈ ಮದುವೆನ ಮಾಡಿಸಬೇಕು.. ಅದುಬಿಟ್ಟು ಮದುವೆನ ನಿಲ್ಲಿಸಲು ಹೊರಟಿದ್ದಿ ಅಲ್ವಾ ನೀನು.. ಇದು ಒಳ್ಳೆಯದಲ್ಲ ಎಂದು ಹೇಳಿದ್ದಾನೆ.
ವೈಷ್ಣವ್ ಮಾತಿಗೆ ಕಿವಿಗೊಡದ ತಾಂಡವ್, ನೋಡು ವೈಷ್ಣವ್ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಅಂತ ನನ್ಗೆ ನಿನ್ನಿಂದ ಕಲಿಯೋ ಅವಶ್ಯಕತೆಯಿಲ್ಲ.. ಸುಮ್ನೆ ಬಾಯಿ ಮುಚ್ಕೊಂಡು ಸೈಡ್ಗೆ ಹೋಗೋ ಎಂದು ಗದರಿಸುತ್ತಾನೆ. ಆಗ ಕುಸುಮಾ, ಬಾ ವೈಷ್ಣವ್ ಹಿಡ್ಕೋ ಇವನ್ನ.. ಕಟ್ಟಿ ಹಾಕೋಣ ಅದು ಹೇಗೆ ಮದುವೆ ನಿಲ್ಲಿಸುತ್ತಾನೊ ನಾನು ನೋಡ್ತೇನೆ ಎಂದು ತಾಂಡವ್ನನ್ನು ಕುಸುಮಾ-ವೈಷ್ಣವ್ ಕುರ್ಚಿಯಲ್ಲಿ ಬಳ್ಳಿಯಿಂದ ಕಟ್ಟಿ ಹಾಕುತ್ತಾರೆ.
ಆದರೆ, ಇಲ್ಲಿ ಟ್ವಿಸ್ಟ್ ಏನಪ್ಪ ಅಂದ್ರೆ.. ತಾಂಡವ್ನನ್ನು ವೈಷ್ಣವ್-ಕುಸುಮಾ ರೂಮ್ ಒಂದರಲ್ಲಿ ಕಟ್ಟಿ ಹಾಕಿ ಮದುವೆ ಕಾರ್ಯಕ್ಕೆ ತೆರಳಿದ್ದಾರೆ. ಈ ಯಾವುದೇ ವಿಚಾಯ ಭಾಗ್ಯಾಗೆ ತಿಳಿದಿಲ್ಲ.. ಸ್ವಲ್ಪ ಸಮಯದ ಬಳಿಕ ಅದೇ ರೂಮ್ಗೆ ಏನೋ ಐಟಮ್ ಬೇಕೆಂದು ಭಾಗ್ಯ ಬಂದಿದ್ದಾಳೆ. ಇಲ್ಲಿ ತಾಂಡವ್ನನ್ನು ಕಟ್ಟಿ ಹಾಕಿರುವುದನ್ನು ಗಮನಿಸಿ ಅಯ್ಯೋ ನಿಮ್ಮನ್ನ ಯಾರು ಕಟ್ಟಿ ಹಾಕಿದ್ದು ಎಂದು ಬಳ್ಳಿ ಬಿಚ್ಚಿದ್ದಾಳೆ. ಬಳ್ಳಿ ಬಿಚ್ಚಿದೊಡನೆ.. ನನ್ನನ್ನೆ ಕಟ್ಟು ಹಾಕೋಕೆ ಹೇಳ್ತೀಯಾ..?. ಇದೆಲ್ಲ ನಿನ್ನದೆ ನಾಟಕ ಅಂತ ಗೊತ್ತು ನನ್ಗೆ.. ಯಾವುದೇ ಕಾರಣಕ್ಕೂ ಈ ಮದುವೆ ಆಗಲು ನಾನು ಬಿಡುವುದಿಲ್ಲ ಎಂದು ತಾಂಡವ್ ಮಂಟಪದ ಕಡೆ ಹೋಗಿದ್ದಾನೆ.
ಸದ್ಯ ಭಾಗ್ಯ ತಾಂಡವ್ಗೆ ಕಟ್ಟಿದ ಬಳ್ಳಿ ಬಿಚ್ಚಿ ದೊಡ್ಡ ತಪ್ಪು ಮಾಡಿದ್ದಾಳೆ.. ತಾಂಡವ್ ನಿಜಕ್ಕೂ ಮದುವೆ ನಿಲ್ಲಿಸುತ್ತಾನಾ?, ಅತ್ತ ಮೀನಾಕ್ಷಿ-ಕನ್ನಿಕಾ ಪ್ಲ್ಯಾನ್ ಏನಾಗಿದೆ?, ತಾಂಡವ್ಗೆ ಅಡ್ಡಲಾಗಿ ಪುನಃ ವೈಷ್ಣವ್ ಬರುತ್ತಾನ ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
Aishwarya-Shishir: ನಿಮ್ಮ ಪ್ರೇಮಿನ ಟ್ಯಾಗ್ ಮಾಡಿ ಎಂದು ಬರೆದು ಶಿಶಿರ್ ಜೊತೆ ವಿಡಿಯೋ ಹಂಚಿಕೊಂಡ ಐಶ್ವರ್ಯಾ