Indo-Bangladesh Border: ಭಾರತ- ಬಾಂಗ್ಲಾ ಗಡಿಯಲ್ಲಿ ಅನುಮಾನಾಸ್ಪದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ
ಭಾರತ ಮತ್ತು ಬಾಂಗ್ಲಾದೇಶದ ಗಡಿ ಭಾಗವಾದ ಅಸ್ಸಾಂನ ಶ್ರೀಭೂಮಿ ಜಿಲ್ಲೆಯ ಚೋರಕುರಿ ಪ್ರದೇಶದ ಮನೆಯೊಂದರ ಮೇಲೆ ಬುಧವಾರ ಸಂಜೆ ಡ್ರೋನ್ ಒಂದು ಪತ್ತೆಯಾಗಿದೆ. ಇದು ಸ್ಥಳೀಯರಲ್ಲಿ ಆತಂಕವನ್ನು ಉಂಟು ಮಾಡಿದೆ. ಈ ಡ್ರೋನ್ ಚೀನಾದಲ್ಲಿ ತಯಾರಿಸಲಾಗಿದೆ ಎನ್ನಲಾಗಿದೆ. ಇದನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಗುವಾಹಟಿ: ಭಾರತ ಮತ್ತು ಬಾಂಗ್ಲಾದೇಶದ ಗಡಿಯ (Indo-Bangladesh Border) ಬಳಿ ಬುಧವಾರ ಸಂಜೆ ಅನುಮಾನಾಸ್ಪದ ಡ್ರೋನ್ (Suspicious Drone) ಪತ್ತೆಯಾಗಿದೆ. ಅಸ್ಸಾಂನ (Assam) ಶ್ರೀಭೂಮಿ ಜಿಲ್ಲೆಯಲ್ಲಿ ಈ ಡ್ರೋನ್ ಪತ್ತೆಯಾಗಿದೆ. ಕುಶಿಯಾರ ನದಿಯಿಂದ ಕೇವಲ 50 ಮೀಟರ್ ದೂರದಲ್ಲಿರುವ ಚೋರಕುರಿ ಪ್ರದೇಶದ ಮನೆಯೊಂದರ ಮೇಲೆ ಕಪ್ಪು ಬಣ್ಣದ ಡ್ರೋನ್ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದೆ. ಚೀನಾದಲ್ಲಿ ತಯಾರಿಸಲಾಗಿರುವ ಈ ಡ್ರೋನ್ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಶ್ರೀಭೂಮಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥ ಪ್ರತಿಮ್ ದಾಸ್ ತಿಳಿಸಿದ್ದಾರೆ.
ಅಸ್ಸಾಂನ ಶ್ರೀಭೂಮಿ ಜಿಲ್ಲೆಯ ಚೋರಕುರಿ ಪ್ರದೇಶದ ಮನೆಯೊಂದರ ಮೇಲೆ ಬುಧವಾರ ಸಂಜೆ ಡ್ರೋನ್ ಒಂದು ಪತ್ತೆಯಾಗಿದೆ. ಇದು ಸ್ಥಳೀಯರಲ್ಲಿ ಆತಂಕವನ್ನು ಉಂಟು ಮಾಡಿದೆ. ಈ ಡ್ರೋನ್ ಚೀನಾದಲ್ಲಿ ತಯಾರಿಸಲಾಗಿದೆ ಎನ್ನಲಾಗಿದೆ. ಇದನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಶ್ರೀಭೂಮಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥ ಪ್ರತಿಮ್ ದಾಸ್, ಡ್ರೋನ್ ಭಾರತದ ಗಡಿಯನ್ನು ದಾಟಿ ಬಂದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಚೋರಕುರಿ ಪ್ರದೇಶದಲ್ಲಿರುವ ಮನೆಯ ಮೇಲ್ಭಾಗದಲ್ಲಿ ಕಪ್ಪು ಬಣ್ಣದ ಡ್ರೋನ್ ಪತ್ತೆಯಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ ಎಂದು ಹೇಳಿದರು.
ಪೊಲೀಸರು ಸ್ಥಳಕ್ಕೆ ತಲುಪಿ ಡ್ರೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಡ್ರೋನ್‌ನಲ್ಲಿ ಚೀನಾದಲ್ಲಿ ತಯಾರಿಸಲಾಗಿದೆ ಎಂದು ಬರೆಯಲಾಗಿದೆ. ಅದು ಗಡಿಯನ್ನು ದಾಟಿ ಬಂದಿರುವ ಬಗ್ಗೆ ಅನುಮಾನವಿದೆ. ಹೀಗಾಗಿ ಈಗ ಡ್ರೋನ್ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು. ಅಕ್ರಮವಾಗಿ ರಾಜ್ಯಕ್ಕೆ ನುಸುಳಲು ಯತ್ನಿಸಿದ ಆರು ಬಾಂಗ್ಲಾದೇಶಿ ವ್ಯಕ್ತಿಗಳನ್ನು ಬಂಧಿಸಿರುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಏಪ್ರಿಲ್ 26 ರಂದು ತಿಳಿಸಿದ್ದಾರೆ.
ಇದನ್ನೂ ಓದಿ: Operation Sindoor: ʼಎಲ್ಲರೂ ಒಗ್ಗಟ್ಟಿನಿಂದಿರಬೇಕುʼ ; ಸರ್ವ ಪಕ್ಷ ಸಭೆಯಲ್ಲಿ ಮೋದಿ ಮನವಿ
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಶರ್ಮಾ ಅವರು, ಅನಧಿಕೃತ ಗಡಿ ದಾಟುವಿಕೆಗಳ ಮೇಲಿನ ಕ್ರಮದ ಭಾಗವಾಗಿ ವ್ಯಕ್ತಿಗಳ ಒಳನುಸುಳುವಿಕೆ ಪ್ರಯತ್ನವನ್ನು ಅಸ್ಸಾಂನ ಶ್ರೀಭೂಮಿ ಪೊಲೀಸರು ವಿಫಲಗೊಳಿಸಿದ್ದಾರೆ ಎಂದು ಹೇಳಿದ್ದಾರೆ. ಬಂಧಿತರನ್ನು ಎಂಡಿ ಮೋನಿರ್, ಎಂಡಿ ಅಹಿದುಲ್ ಶೇಖ್, ಅಜೀಜುಲ್ ಶೇಖ್, ರೋಕಿಯಾ ಬೀಬಿ, ಎಂಎಚ್. ಅಹಾಶನ್ ಉಲ್ಲಾ ಮತ್ತು ಎಂಡಿ ಹರೇಶ್ ಎಂದು ಗುರುತಿಸಲಾಗಿದೆ. ಒಳನುಸುಳುವಿಕೆಯನ್ನು ತಡೆಯಲು ಅಸ್ಸಾಂ ದೃಢವಾಗಿ ನಿಂತಿದೆ. ಯಾವುದೇ ಒಳನುಸುಳುವಿಕೆಯನ್ನು ಸಹಿಸಲಾಗುವುದಿಲ್ಲ. ನಿರ್ಣಾಯಕ ಕಾರ್ಯಾಚರಣೆಯಲ್ಲಿ ಶ್ರೀಭೂಮಿ ಪೊಲೀಸರು ಅಕ್ರಮವಾಗಿ ಗಡಿ ದಾಟಲು ಯತ್ನಿಸಿದ ಆರು ನುಸುಳುಕೋರರನ್ನು ಬಂಧಿಸಿದರು.ಎಲ್ಲರನ್ನೂ ಬಂಧಿಸಿ ತಕ್ಷಣವೇ ಹಿಂದಕ್ಕೆ ಕಳುಹಿಸಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.