ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor 2.0: ಭಾರತೀಯ ಸೇನೆ ಪಾಕ್‌ನ ಏರ್‌ ಡಿಫೆನ್ಸ್‌ ಸಿಸ್ಟಮ್‌ ಮೇಲೆ ದಾಳಿ ನಡೆಸಿದ್ದೇಕೆ?

ಆಪರೇಷನ್‌ ಸಿಂದೂರ್‌ 2.0 ಮೂಲಕ ಪಾಕ್‌ ವಿರುದ್ದ ತನ್ನ ಸಮರವನ್ನು ಮುಂದುವರಿಸಿದೆ. ಬುಧವಾರ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದಾಗ, ಯಾವುದೇ ಸೇನೆ ನೆಲೆಯ ಮೇಲೆ ದಾಳಿ ನಡೆಸಿಲ್ಲ ಎನ್ನುವುನ್ನು ಭಾರತ ಖಚಿತ ಪಡಿಸಿತ್ತು. ಇದೀಗ ಭಾರತವು ಪಾಕಿಸ್ತಾನದ ಹಲವು ಸ್ಥಳಗಳಲ್ಲಿನ ವಾಯು ರಕ್ಷಣಾ ರಾಡಾರ್‌ಗಳ ಮೇಲೆ ದಾಳಿ ನಡೆಸಿ, ಲಾಹೋರ್‌ನಲ್ಲಿ ಒಂದನ್ನು ನಾಶಪಡಿಸಿದೆ.

ಭಾರತೀಯ ಸೇನೆ ಪಾಕ್‌ನ ಏರ್‌ ಡಿಫೆನ್ಸ್‌ ಸಿಸ್ಟಮ್‌ ಮೇಲೆ ದಾಳಿ ನಡೆಸಿದ್ದೇಕೆ?

Profile Ramesh B May 8, 2025 4:14 PM

ಹೊಸದಿಲ್ಲಿ: ಮೇ 7ರಂದು ಆಪರೇಷನ್‌ ಸಿಂದೂರ್‌ (Operation Sindoor) ಮೂಲಕ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರ ನೆಲೆ ಮೇಲೆ ದಾಳಿ ನಡೆಸಿದ ಭಾರತೀಯ ಸೇನೆ 100ಕ್ಕೂ ಹೆಚ್ಚು ಮಂದಿಯನ್ನು ಹೊಡೆದುರುಳಿಸಿದೆ. ಇದೀಗ ಆಪರೇಷನ್‌ ಸಿಂದೂರ್‌ 2.0 (Operation Sindoor 2.0) ಮೂಲಕ ಪಾಕ್‌ ವಿರುದ್ದ ತನ್ನ ಸಮರವನ್ನು ಮುಂದುವರಿಸಿದೆ. ಬುಧವಾರ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದಾಗ, ಯಾವುದೇ ಸೇನೆ ನೆಲೆಯ ಮೇಲೆ ದಾಳಿ ನಡೆಸಿಲ್ಲ ಎನ್ನುವುನ್ನು ಭಾರತ ಖಚಿತ ಪಡಿಸಿತ್ತು. ಇದೀಗ ಭಾರತವು ಪಾಕಿಸ್ತಾನದ ಹಲವು ಸ್ಥಳಗಳಲ್ಲಿನ ವಾಯು ರಕ್ಷಣಾ ರಾಡಾರ್‌ಗಳ ಮೇಲೆ ದಾಳಿ ನಡೆಸಿ, ಲಾಹೋರ್‌ನಲ್ಲಿ ಒಂದನ್ನು ನಾಶಪಡಿಸಿದೆ.

ಭಾರತೀಯ ಸೇನೆ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್‌ನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದ್ದರೂ ಬುಧವಾರ ರಾತ್ರಿ ಪಾಕಿಸ್ತಾನವು ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್‌, ಅಮೃತಸರ, ಕಪುರ್ಥಾಲಾ, ಜಲಂಧರ್, ಲುಧಿಯಾನ, ಆದಂಪುರ್, ಭಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರ್ಲೈ ಮತ್ತು ಭುಜ್‌ನಲ್ಲಿರುವ ಸೇನಾ ಕೇಂದ್ರಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳೊಂದಿಗೆ ದಾಳಿ ನಡೆಸಲು ಪ್ರಯತ್ನಿಸಿದೆ. ಇದನ್ನು ಭಾರತ ವಿಫಲಗೊಳಿಸಿದೆ.

ಆಪರೇಷನ್‌ ಸಿಂದೂರ್‌ 2.0 ಕಾರ್ಯಾಚರಣೆ ಹೀಗಿತ್ತು:



ಈ ಸುದ್ದಿಯನ್ನೂ ಓದಿ: Operation Sindoor: ಆಪರೇಷನ್‌ ಸಿಂದೂರ್‌ ಮತ್ತೆ ಶುರು; ಲಾಹೋರ್‌ ಏರ್‌ ಡಿಫೆನ್ಸ್‌ ಸಿಸ್ಟಮ್‌ ಸಂಪೂರ್ಣ ನಾಶ

ಈ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. "ಗುರುವಾರ ಬೆಳಗ್ಗೆ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಹಲವು ಸ್ಥಳಗಳಲ್ಲಿದ್ದ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಭಾರತದ ಪ್ರತಿಕ್ರಿಯೆಯು ಪಾಕಿಸ್ತಾನದಷ್ಟೇ ತೀವ್ರತೆಯಿಂದ ಕೂಡಿದೆ. ಲಾಹೋರ್‌ನಲ್ಲಿರುವ ಪಾಕ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ತಟಸ್ಥಗೊಳಿಸಲಾಗಿದೆʼʼ ಎಂದು ಮೂಲಗಳು ತಿಳಿಸಿವೆ.

ಕುಪ್ವಾರಾ, ಬಾರಾಮುಲ್ಲಾ, ಉರಿ, ಪೂಂಚ್, ಮೆಂಧರ್ ಮತ್ತು ರಾಜೌರಿ ವಲಯಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಹಲವಾರು ಭಾಗಗಳ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನ ಫಿರಂಗಿ ದಾಳಿಯನ್ನು ಹೆಚ್ಚಿಸಿದೆ ಎಂದು ಸರ್ಕಾರ ಹೇಳಿದೆ. ಇದರ ವಿರುದ್ಧ ಪ್ರತಿಕ್ರಿಯೆಯಾಗಿ ಭಾರತವು ಪಾಕ್‌ನ ಏರ್‌ ಡಿಫೆನ್ಸ್‌ ಸಿಸ್ಟಮ್‌ ಮೇಲೆ ದಾಳಿ ನಡೆಸಿದೆ. "ಪಾಕಿಸ್ತಾನದ ಗುಂಡಿನ ದಾಳಿಯಿಂದಾಗಿ ಮೂವರು ಮಹಿಳೆಯರು ಮತ್ತು ಐವರು ಮಕ್ಕಳು ಸೇರಿದಂತೆ 16 ಮಂದಿ ಅಮಾಯಕರು ಮೃತಪಟ್ಟಿದ್ದಾರೆ. ಇದಕ್ಕೆ ಇದೀಗ ಪ್ರತ್ಯುತ್ತರ ನೀಡಲಾಗಿದೆʼʼ ಎಂದು ವರದಿ ಹೇಳಿದೆ.

ಭಾರತೀಯ ಸೇನೆ ಮತ್ತೆ ಎರಡನೇ ಬಾರಿಗೆ ದಾಳಿ ಪ್ರಾರಂಭಿಸಿದೆ. ಲಾಹೋರ್ ಮತ್ತು ಕರಾಚಿ ಮೇಲಿನ ದಾಳಿ ಬಳಿಕ ಇದೀಗ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಹೊಸ ಸ್ಫೋಟಗಳು ವರದಿಯಾಗಿವೆ. ಪಾಕಿಸ್ತಾನದ ಮಿಲಿಟರಿ ಪ್ರಧಾನ ಕಚೇರಿ ಬಳಿ ಸ್ಪೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾವಲ್ಪಿಂಡಿಯ ಹೊರತಾಗಿ, ಗುಜ್ರಾನ್‌ವಾಲಾ, ಚಕ್ವಾಲ್, ಅಟ್ಟಾಕ್, ಬಹಾವಲ್ಪುರ್, ಮಿಯಾನೋ ಮತ್ತು ಚೋರ್‌ಗಳಲ್ಲಿಯೂ ಸ್ಫೋಟಗಳು ವರದಿಯಾಗಿವೆ. ರಾವಲ್ಪಂಡಿ ಕ್ರಿಕೆಟ್‌ ಮೈದಾನದ ಬಳಿಯೇ ಸ್ಪೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಸಿಯಾಲ್‌ಕೋಟ್ ಮತ್ತು ಲಾಹೋರ್‌ನಲ್ಲಿರುವ ಪಾಕಿಸ್ತಾನ ಸೇನೆಯ ವಾಯು ರಕ್ಷಣಾ ಘಟಕದ ಮೇಲೆ ಭಾರತ ಮತ್ತೆ ದಾಳಿ ನಡೆಸಿದೆ. ಭಾರತದ 15 ನಗರಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಪ್ಲ್ಯಾನ್ ಮಾಡಿದ್ದು, ಆದರೆ ಭಾರತೀಯ ಸೇನೆಯು ಇದನ್ನು ವಿಫಲಗೊಳಿಸಿದೆ.