Cannes 2025: ಕಾನ್ಸ್ ಫಿಲ್ಮ್ ಫೆಸ್ಟಿವಲ್ ರೆಡ್ ಕಾರ್ಪೆಟ್ನಲ್ಲಿ ಮಿಂಚಿದ ಲಾಪತಾ ಲೇಡೀಸ್ ಖ್ಯಾತಿಯ ನಿತಾಂಶಿ ಗೋಯೆಲ್
Cannes 2025: 17 ವರ್ಷದ ಯುವ ನಟಿ ನಿತಾಂಶಿ ಗೋಯಲ್, 2025ರ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮೊಟ್ಟ ಮೊದಲ ಬಾರಿಗೆ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಈ ನಟಿ ತಮ್ಮ ಆಕರ್ಷಕ ಲುಕ್ನಿಂದ ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲೂ ಅಭಿಮಾನಿಗಳ ಮನಗೆದ್ದಿದ್ದಾರೆ. ಆಕೆಯ ಲುಕ್ನ ಒಂದು ಝಲಕ್ ಇಲ್ಲಿದೆ.

ನಿತಾಂಶಿ ಗೋಯಲ್


17 ವರ್ಷದ ಯುವ ನಟಿ ನಿತಾಂಶಿ ಗೋಯಲ್, 2025ರ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮೊಟ್ಟ ಮೊದಲ ಬಾರಿಗೆ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಈ ನಟಿ ತಮ್ಮ ಆಕರ್ಷಕ ಲುಕ್ನಿಂದ ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲೂ ಅಭಿಮಾನಿಗಳ ಮನಗೆದ್ದಿದ್ದಾರೆ. ಆಕೆಯ ಲುಕ್ನ ಒಂದು ಝಲಕ್ ಇಲ್ಲಿದೆ.

ನಿತಾಂಶಿ ಗೋಯಲ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಇನ್ನೂ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದೇನೆ. ಈ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಸ್ವಲ್ಪವಾದರೂ ಪ್ರತಿನಿಧಿಸಲು ಕೃತಜ್ಞಳಾಗಿದ್ದೇನೆ ಮತ್ತು ಹೆಮ್ಮೆಪಡುತ್ತಿದ್ದೇನೆ. ಕಾನ್ನ ರೆಡ್ ಕಾರ್ಪೆಟ್ನಲ್ಲಿ ನಡೆದದ್ದು ಕನಸಿನಂತಿತ್ತು. ಎಲ್ಲರ ಪ್ರೀತಿಗೆ ಧನ್ಯವಾದಗಳು," ಎಂದು ಬರೆದುಕೊಂಡಿದ್ದಾರೆ.

ಜೇಡ್ ಬೈ ಮೋನಿಕಾ ಮತ್ತು ಕರಿಷ್ಮಾ (MK) ವಿನ್ಯಾಸದ ಅದ್ಭುತವಾದ ಸ್ಟ್ರಾಪ್ಲೆಸ್ ಕಪ್ಪು ಮತ್ತು ಚಿನ್ನದ ಗೌನ್ನ ಧರಿಸಿದ ನಿತಾಂಶಿ ರೆಡ್ ಕಾರ್ಪೆಟ್ನಲ್ಲಿ ಮಿಂಚಿದರು. ನಟಿ ಧರಿಸಿದ್ದ ಗೌನ್ ಕಾರ್ಸೆಟೆಡ್ ರವಿಕೆ ಮತ್ತು ದೊಡ್ಡ ಟ್ಯೂಲ್ ಓವರ್ಲೇ ಅನ್ನು ಹೊಂದಿತ್ತು.

ಗೌನ್ನಲ್ಲಿ ಕಸಾಬ್ ಲೇಸ್ ಕಸೂತಿ ಮತ್ತು ಸೂಕ್ಷ್ಮವಾದ ಮ್ಯಾಕ್ರಮೆ ವಿವರಗಳು ಹೆಣೆದುಕೊಂಡಿದ್ದವು. ಇದರ ಜೊತೆಗೆ ಮರ್ಮೈಡ್-ಶೈಲಿಯ ಸಿಲೂಯೆಟ್ ಫ್ರೇಮ್ ಮತ್ತು ತೆಳುವಾದ ಟ್ಯೂಲ್ ಟ್ರೇನ್ ಆಕರ್ಷಕವಾಗಿತ್ತು.

ಚಂದ್ರನ ಬೆಳಕಿನಲ್ಲಿ ಅರಳುವ ವಸಂತ ಹೂವುಗಳ ಪ್ರಣಯದಿಂದ ಪ್ರೇರಿತವಾದ ಈ ಉಡುಗೆ, ಶಾಂತ ಬಣ್ಣದ ಛಾಯೆ, ಸೌಮ್ಯವಾದ ಹೊಳಪು ಮತ್ತು ಸಂಕೀರ್ಣವಾದ ಕೈಕಸೂತಿಯನ್ನು ಪ್ರತಿಬಿಂಬಿಸಿತು. ನಿತಾಂಶಿ ತಮ್ಮ ಲುಕ್ಗೆ ಸೂಕ್ಷ್ಮವಾದ ಚಿನ್ನದ ಸ್ವಿರ್ಲ್ ಚೋಕರ್, ಸರ್ಪ-ವಿನ್ಯಾಸದ ಕಿವಿಯೋಲೆಗಳು, ಉಂಗುರಗಳು ಮತ್ತು ಎತ್ತರದ ಹೀಲ್ಸ್ಗಳನ್ನು ಧರಿಸಿದ್ದರು

ಲಾಪತಾ ಲೇಡೀಸ್ ಖ್ಯಾತಿಯ ಈ ನಟಿ, ಸೊಗಸಾದ ಉಪ್ಡೋ ಕೇಶವಿನ್ಯಾಸ ಮತ್ತು ಮೃದುವಾದ ಗ್ಲಾಮ್ ಮೇಕಪ್ನೊಂದಿಗೆ, ಹೊಳೆಯುವ ಕೆನ್ನೆಗಳು ಮತ್ತು ಗುಲಾಬಿ ಲಿಪ್ಗ್ಲಾಸ್ನಿಂದ ಕಂಗೊಳಿಸಿದರು. ಪರಿಪೂರ್ಣ ಗ್ಲಾಮ್ ಮತ್ತು ಸೊಬಗಿನೊಂದಿಗೆ, ನಿತಾಂಶಿ ರೆಡ್ ಕಾರ್ಪೆಟ್ನಲ್ಲಿ ರಾಜಕುಮಾರಿಯಂತೆ ಕಾಣಿಸಿದರು. ವಿನ್ಯಾಸಕಿ ಮೋನಿಕಾ ಶಾ ಹೇಳುವಂತೆ, ಸೌಮ್ಯವಾದ ಹೊಳಪಿನಿಂದ ರೊಮ್ಯಾಂಟಿಕ್ ಸಿಲೂಯೆಟ್ಗಳವರೆಗೆ, ಈ ಲುಕ್ ಆಧುನಿಕ ಟಚ್ ನೀಡಿ ಈ ಡ್ರೆಸ್ ಅನ್ನು ವಿನ್ಯಾಸಗೊಳಿಸಲಾಗಿದ್ದು,ರೆಡ್ ಕಾರ್ಪೆಟ್ಗೆ ಹೇಳಿ ಮಾಡಿಸಿದಂತಿದೆ.