Terror attacks: ಉರಿ ಟು ನೀರಜಾ- ನೈಜ ಉಗ್ರ ದಾಳಿ ಆಧಾರಿತ ಟಾಪ್ 7 ಸಿನಿಮಾಗಳು- ಇವುಗಳನ್ನು ಎಲ್ಲಿ ವೀಕ್ಷಿಸಬಹುದು?
Terror attacks inspired Movies:ನಿಜ ಜೀವನದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗಳನ್ನು ಚಿತ್ರಿಸುವ 7 ಮನಮುಟ್ಟುವ ಚಲನಚಿತ್ರಗಳು ಇಲ್ಲಿವೆ. ಈ ಸಿನಿಮಾಗಳ ಮೂಲಕ ದಾಳಿಯಲ್ಲಿ ಸಾವನ್ನಪ್ಪಿದ ಸಂತ್ರಸ್ತರು, ಯೋಧರ ಶೌರ್ಯ, ಬಲಿದಾನವನ್ನು ಸ್ಮರಿಸುವ ಪ್ರಯತ್ನ ಮಾಡಲಾಗಿದೆ. ಹಾಗಿದ್ದರೆ ಆ ಸಿನಿಮಾಗಳು ಯಾವುವು? ಅವುಗಳನ್ನು ಎಲ್ಲಿ ವೀಕ್ಷಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ



ಬೆಲ್ ಬಾಟಮ್: ನೈಜ ಘಟನೆಗಳಿಂದ ಪ್ರೇರಿತವಾದ ಬೆಲ್ ಬಾಟಮ್, 80 ರ ದಶಕದಲ್ಲಿ ನಡೆದ ವಿಮಾನ ಹೈಜಾಕ್ ಘಟನೆಯನ್ನು ಆಧರಿಸಿದೆ. ಇಂಡಿಯನ್ ಏರ್ಲೈನ್ಸ್ ವಿಮಾನದಿಂದ ಒತ್ತೆಯಾಳುಗಳನ್ನು ರಕ್ಷಿಸುವ ಭಾರತ ಸರ್ಕಾರದ ಮೇಲೆ ಕೇಂದ್ರೀಕರಿಸುವ ಸ್ಪೈ ಥ್ರಿಲ್ಲರ್ ಕಥೆಯನ್ನು ಇದಾಗಿದೆ. ಅಕ್ಷಯ್ ಕುಮಾರ್ ರಾ ಏಜೆಂಟ್ ಆಗಿ ನಟಿಸಿರುವ ಈ ಚಿತ್ರವು ಸಕತ್ ಥ್ರಿಲ್ಲರ್ ಆಗಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.

ಹೊಟೇಲ್ ಮುಂಬೈ : ಇದು 2008 ರ ಮುಂಬೈ ಭಯೋತ್ಪಾದಕ ದಾಳಿಯ ಭಯಾನಕ ಘಟನೆಯನ್ನು ಆಧಾರಿತ ಸಿನಿಮಾವಾಗಿದೆ. ತಾಜ್ ಮಹಲ್ ಹೋಟೆಲ್ ದಾಳಿಯನ್ನು ಇದರಲ್ಲಿ ಚಿತ್ರೀಕರಿಸಲಾಗಿದೆ. ಆಂಥೋನಿ ಮಾರಸ್ ನಿರ್ದೇಶಿಸಿದ ಈ ಚಿತ್ರದಲ್ಲಿ ದೇವ್ ಪಟೇಲ್, ಆರ್ಮಿ ಹ್ಯಾಮರ್ ಮತ್ತು ನಜಾನಿನ್ ಬೊನಿಯಾಡಿ ನಟಿಸಿದ್ದಾರೆ. ಜೀ 5ನಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದು.

ಬ್ಲ್ಯಾಕ್ ಫ್ರೈಡೇ: ಅನುರಾಗ್ ಕಶ್ಯಪ್ ನಿರ್ದೇಶನದ ಬ್ಲ್ಯಾಕ್ ಫ್ರೈಡೇ 1993 ರಲ್ಲಿ ಸಂಭವಿಸಿದ ಭಯಾನಕ ಬಾಂಬೆ ಸರಣಿ ಬಾಂಬ್ ಸ್ಫೋಟಗಳನ್ನು ಆಧರಿಸಿದೆ. ಈ ಚಿತ್ರದಲ್ಲಿ ಕೇ ಕೇ ಮೆನನ್, ಪವನ್ ಮಲ್ಹೋತ್ರಾ, ಆದಿತ್ಯ ಶ್ರೀವಾಸ್ತವ, ಕಿಶೋರ್ ಕದಮ್ ಮತ್ತು ಜಾಕಿರ್ ಹುಸೇನ್ ನಟಿಸಿದ್ದಾರೆ. ಯೂಟ್ಯೂಬ್ನಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದು.

9/11 ಅಟ್ಯಾಕ್: ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಈ ಚಿತ್ರವು 2008 ರ ಮುಂಬೈ ದಾಳಿಯ ಸುತ್ತಲಿನ ಘಟನೆಗಳ ಮೇಲೆ ಕೇಂದ್ರೀಕರಿಸುತ್ತದೆ. ಮುಂಬೈ ದಾಳಿಯ ನಂತರ ಉಗ್ರರನ್ನು ಹೇಗೆ ಮಟ್ಟಹಾಕಲಾಯಿತು?ಭಯೋತ್ಪಾದಕರು ನಗರದ ಹಲವಾರು ಸ್ಥಳಗಳ ಮೇಲೆ ಸಂಘಟಿತ ದಾಳಿಗಳನ್ನು ಹೇಗೆ ನಡೆಸಿದರು ಎಂಬ ಕಥೆಯನ್ನು ಒಳಗೊಂಡಿದೆ. ಪೊಲೀಸ್ ಆಯುಕ್ತರಾಗಿ ನಾನಾ ಪಾಟೇಕರ್ ನಟಿಸಿದ್ದಾರೆ. ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದು.

ನೀರಜಾ: ರಾಮ್ ಮಾಧ್ವಾನಿ ನಿರ್ದೇಶನದ ಮತ್ತು ಸೋನಮ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ನೀರಜಾ, ಸೆಪ್ಟೆಂಬರ್ 5, 1986 ರಂದು ಕರಾಚಿಯಲ್ಲಿ ಪ್ಯಾನ್ ಆಮ್ ಫ್ಲೈಟ್ 73 ಅಪಹರಣದ ಸಮಯದಲ್ಲಿ ಪ್ರಯಾಣಿಕರನ್ನು ರಕ್ಷಿಸಿದ ಧೈರ್ಯಶಾಲಿ ಫ್ಲೈಟ್ ಅಟೆಂಡೆಂಟ್ ನೀರಜಾ ಭಾನೋಟ್ ಜೀವನಾಧಾರಿತ ಸಿನಿಮಾವಾಗಿದೆ. ಇದನ್ನು ಜಿಯೋ ಹಾಟ್ ಸ್ಟಾರ್ನಲ್ಲಿ ವೀಕ್ಷಿಸಬಹುದು.

ಉರಿ: ದಿ ಸರ್ಜಿಕಲ್ ಸ್ಟ್ರೈಕ್: ಉರಿಯಲ್ಲಿ ಭಾರತೀಯ ಸೇನೆಯ ಮೇಲೆ ನಡೆದ ಮಾರಕ ದಾಳಿಯ ನಂತರ LOC ಯಾದ್ಯಂತ ಭಯೋತ್ಪಾದಕ ಗುಂಪುಗಳ ವಿರುದ್ಧ ಭಾರತೀಯ ಸೇನೆಯು 2016 ರಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ಗಳನ್ನು ಆಧರಿಸಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ವಿಕ್ಕಿ ಕೌಶಲ್, ಯಾಮಿ ಗೌತಮ್, ಪರೇಶ್ ರಾವಲ್, ಕೀರ್ತಿ ಕುಲ್ಹಾರಿ ಮತ್ತು ಮೋಹಿತ್ ರೈನಾ ನಟಿಸಿದ್ದಾರೆ. ಎಲ್ಲಿ ವೀಕ್ಷಿಸಬೇಕು- ಜೀ 5 ನಲ್ಲಿ ಸಿನಿಮಾ ವೀಕ್ಷಿಸಬಹುದು.

ನ್ಯೂಯಾರ್ಕ್: ಅಮೆರಿಕದಲ್ಲಿ ಅವಳಿ ಕಟ್ಟಡಗಳ ಮೇಲೆ ನಡೆದ ಬಾಂಬ್ ದಾಳಿ ಘಟನೆಯನ್ನು ಆಧಾರಿತ ಚಿತ್ರ ಇದಾಗಿದೆ. ಕಬೀರ್ ಖಾನ್ ನಿರ್ದೇಶನದ ಮತ್ತು ಆದಿತ್ಯ ಚೋಪ್ರಾ ನಿರ್ಮಾಣದ ಈ ಚಿತ್ರದಲ್ಲಿ ಜಾನ್ ಅಬ್ರಹಾಂ, ನೀಲ್ ನಿತಿನ್ ಮುಖೇಶ್, ಕತ್ರಿನಾ ಕೈಫ್ ಮತ್ತು ಇರ್ಫಾನ್ ಖಾನ್ ನಟಿಸಿದ್ದಾರೆ. ಇದನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು