Salman Khan: ಸಲ್ಮಾನ್ ಖಾನ್ ಫಿಟ್ನೆಸ್ಗೆ ಫ್ಯಾನ್ಸ್ ಫಿದಾ; ಅವರಿಗೆ ವಯಸ್ಸೇ ಆಗಲ್ಲ ಎಂದ ನೆಟ್ಟಿಗರು
ಬಾಲಿವುಡ್ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಆಗಾಗ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸಕ್ರಿಯವಾಗಿರುವ ಅವರು ಇತ್ತೀಚೆಗೆ ಲೇಟೆಸ್ಟ್ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೊ, ಅವರ ಫಿಟ್ನೆಸ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Salman Khan


ಇತ್ತೀಚೆಗಷ್ಟೇ ನಟ ಸಲ್ಮಾನ್ ಖಾನ್ ನೆಟ್ಫ್ಲಿಕ್ಸ್ನ ‘ದಿ ಕಪಿಲ್ ಶರ್ಮಾ’ ಶೋಗೆ ಆಗಮಿಸಿದ್ದರು. ಈ ವೇಳೆ ಅವರು ಹಲವು ವೈಯಕ್ತಿಕ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. ಅದೇ ರೀತಿ ಸಲ್ಲು ಭಾಯಿ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ.

ಸಲ್ಮಾನ್ ಪ್ರತಿದಿನ ತಾವು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ʼʼಕಳೆದ ಕೆಲವು ವರ್ಷಗಳಿಂದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದೇನೆ. ಟ್ರೈಜಿಮಿನಲ್ ನರಶೂಲೆ ಎಂಬ ಕಾಯಿಲೆ ಇದೆ. ಅದರ ಹೊರತಾಗಿಯೂ ನಾನು ಕೆಲಸದಲ್ಲಿ ನಿರತನಾಗಿದ್ದೇನೆʼʼ ಎಂದು ಸಲ್ಮಾನ್ ಖಾನ್ ಹೇಳಿಕೊಂಡಿದ್ದಾರೆ.

ಇವೆಲ್ಲದರ ಹೊರತಾಗಿಯೂ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಇನ್ಸ್ಟಾಗ್ರಾಮ್ನಲ್ಲಿ ತನ್ನ ಹೊಸ ಫೋಟೋ ಹಂಚಿಕೊಂಡಿದ್ದು ಅಭಿಮಾನಿಗಳು ಸಲ್ಲು ಸ್ಟೈಲಿಗೆ ಫಿದಾ ಅಗಿದ್ದಾರೆ. ಈ ಫೋಟೋ ಅಭಿಮಾನಿಗಳ ಹೃದಯ ಗೆದ್ದಿದೆ. ಫೋಟೋದಲ್ಲಿ ಸಲ್ಮಾನ್ ಖಾನ್ ಗ್ರೇ ಟೀ ಶರ್ಟ್ ಧರಿಸಿದ್ದು ಕೈಯಲ್ಲಿ ಅವರ ನೆಚಿನ ಬ್ರೆಸ್ಲೇಟ್ ಇದೆ. ಕಪ್ಪು ಗ್ಲಾಸ್ ಧರಿಸಿ ಪೋಸ್ ನೀಡಿದ್ದಾರೆ. ಸಲ್ಮಾನ್ ಅವರ ಯಂಗ್ ಲುಕ್ಗೆ ಅಭಿಮಾನಿಗಳು ಮನಸೋತಿದ್ದಾರೆ.

ಫೋಟೋಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಸಲ್ಲು ಅಭಿಮಾನಿಯೊಬ್ಬರು ʼʼಬೇಗ ಗುಣ ಮುಖರಾಗಲಿ ನನ್ನ ಹೀರೋ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಹ್ಯಾಂಡ್ಸಮ್ ಬಾಯ್ ಇಸ್ ಆಲ್ವೇಸ್ ರಾಕ್” ಎಂದು ಬರೆದುಕೊಂಡಿದ್ದಾರೆ.

ಸಲ್ಮಾನ್ ಖಾನ್ ದೇಶಾದ್ಯಂತ ಅನೇಕ ಅಭಿಮಾನಿಗಳನ್ನ ಹೊಂದಿದ್ದಾರೆ. ಸಲ್ಮಾನ್ ಕೊನೆಯದಾಗಿ ನಟಿಸಿರುವ ಚಿತ್ರ ‘ಸಿಕಂದರ್ʼ ಆಗಿದ್ದು. ಇದರಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದರು. ಆದರೆ ಈ ಸಿನಿಮಾ ನಿರೀಕ್ಷೆ ಮಾಡಿದಷ್ಟು ಹಿಟ್ ಆಗಲಿಲ್ಲ. ಕೆಲವು ವರ್ಷಗಳಿಂದ ಸಲ್ಮಾನ್ ಖಾನ್ ಯಾವ ಚಿತ್ರವೂ ಸೂಪರ್ ಹಿಟ್ ಎನಿಸಿಕೊಂಡಿಲ್ಲ. ಹೀಗಾಗಿ ಬಹುದೊಡ್ಡ ಗೆಲುವುಗಾಗಿ ಅವರು ಕಾಯುತ್ತಿದ್ದಾರೆ.