ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 2nd Test: ಭಾರತ-ಇಂಗ್ಲೆಂಡ್‌ ದ್ವಿತೀಯ ಟೆಸ್ಟ್‌ಗೆ ಮಳೆ ಭೀತಿ; ಪಿಚ್‌ ರಿಪೋರ್ಟ್‌ ಹೇಗಿದೆ?

ಭಾರತ ತಂಡ ಈ ಪಂದ್ಯಕ್ಕೆ ಎರಡು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸುಳಿವು ಸಿಕ್ಕಿದೆ. ಇದನ್ನು ಸಹಾಯಕ ಕೋಚ್‌ ಟೆನ್‌ ಡೋಶೆಟ್‌ ಸೋಮವಾರ ಖಚಿತಪಡಿಸಿದ್ದರು. ಹೀಗಾಗಿ ರವೀಂದ್ರ ಜಡೇಜಾ ಜತೆ ಕುಲ್‌ದೀಪ್‌ ಯಾದವ್‌ ಆಡುವುದು ಖಚಿತ. ಒಂದೊಮ್ಮೆ ಜಡೇಜಾ ಅವರನ್ನು ಹೊರಗಿಟ್ಟರೆ ಆಗ ವಾಷಿಂಗ್ಟನ್‌ ಸುಂದರ್‌ ಮತ್ತು ಕುಲ್‌ದೀಪ್‌ ಆಡಬಹುದು.

ENG vs IND: ದ್ವಿತೀಯ ಟೆಸ್ಟ್‌ಗೆ ಮಳೆ ಭೀತಿ; ಪಿಚ್‌ ರಿಪೋರ್ಟ್‌ ಹೇಗಿದೆ?

Profile Abhilash BC Jul 1, 2025 3:11 PM

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡಿರುವ ಭಾರತ(ENG vs IND), ಇದೀಗ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದ್ದು ಮತ್ತೆ ಪುಟಿದೇಳುವ ಗುರಿಯನ್ನು ಹೊಂದಿದೆ. ಇತ್ತಂಡಗಳ ನಡುವಿನ ಈ ಟೆಸ್ಟ್‌(IND vs ENG 2nd Test) ಪಂದ್ಯ ಜುಲೈ 2 ರಿಂದ ಬರ್ಮಿಂಗ್‌ಹ್ಯಾಮ್‌ನ(Birmingham) ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ(Edgbaston) ಆರಂಭವಾಗಲಿದೆ. ಕೊನೆಯ ಎದರು ದಿನ ಮಳೆ ಭೀತಿ(Edgbaston weather report) ಕೂಡ ಎದುರಾಗಿದೆ. ಇಲ್ಲಿನ ಪಿಚ್‌ ಬ್ಯಾಟರ್‌ಗಳಿಗೆ(Edgbaston pitch report ಸತ್ವಪರೀಕ್ಷೆ ಒಡ್ಡುವ ಸಾಧ್ಯತೆ ಇದೆ.

ಪಿಚ್‌ ರಿಪೋರ್ಟ್‌

ಎಡ್ಜ್‌ಬಾಸ್ಟನ್ ಮೈದಾನದ ಪಿಚ್‌ ಸಾಂಪ್ರದಾಯಿಕವಾಗಿ ಬೌಲಿಂಗ್‌ ಸ್ನೇಹಿ ಪಿಚ್‌ ಆಗಿದೆ. ಈಗಾಗಲೇ ಪಿಚ್‌ನ ಫೋಟೊ ನೋಡುವಾಗ ಹಸಿರಾಗಿ ಕಂಡು ಬಂದಿದೆ. ಇದು ಬ್ಯಾಟರ್‌ಗಳಿಗೆ ಸರ್ವಪರೀಕ್ಷೆ ಒಡ್ಡುವ ನಿರೀಕ್ಷೆ ಇದೆ. ಇಲ್ಲಿ ಮೊದಲ ಇನಿಂಗ್ಸ್‌ನಲ್ಲಿ 300 ಪ್ಲಸ್‌ ಪೇರಿಸಿದರೆ ಬೃಹತ್‌ ಮೊತ್ತವೆಂದು ಪರಿಗಣಿಸಲಾಗುತ್ತದೆ. ಜತೆಗೆ ಪಂದ್ಯವನ್ನು ಗೆಲ್ಲುವ ಸಾಧ್ಯತೆಯೂ ಅಧಿಕ ಎನ್ನಬಹುದು. ಆದರೆ ಇತ್ತೀಚ್ಚಿನ ವರ್ಷಗಳಲ್ಲಿ ಇಲ್ಲಿ ನಡೆದ ಟೆಸ್ಟ್‌ ಪಂದ್ಯದ ಫಲಿತಾಂಶ ನೋಡುವುದಾದರೆ ಪಿಚ್‌ ಬ್ಯಾಟಿಂಗ್‌ ಸ್ನೇಹಯಾಗಿ ಬದಲಾಗಿದೆ. ಮೊದಲ ಎರಡು ದಿನ ವೇಗದ ಬೌಲರ್‌ಗಳಿಗೆ ನೆರವಾಗುವ ಪಿಚ್‌ನಲ್ಲಿ ಟಾಸ್‌ ಗೆದ್ದ ತಂಡ ಬೌಲಿಂಗ್‌ ಆಯ್ದುಕೊಂಡರೆ ಉತ್ತಮ. ಒಟ್ಟಾರೆ ಇದೊಂದು ಸ್ಪರ್ಧಾತ್ಮಕ ಪಿಚ್‌ ಆಗಲಿದೆ ಎನ್ನಲಾಗುತ್ತಿದೆ.

ಮಳೆ ಭೀತಿ

ಪಂದ್ಯಕ್ಕೆ ಮಳೆ ಭೀತಿ ಕೂಡ ಎದುರಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಪಂದ್ಯದ ಮೊದಲ ಎರಡು ದಿನ ಬಿಸಿಲು ಇರಲಿದ್ದು. ಕೊನೆಯ ಎರಡು ದಿನಗಳಲ್ಲಿ ಮಳೆ ಅಡ್ಡಿಪಡ್ಡಿಸುವ ಸಾಧ್ಯತೆ ಅಧಿಕವಾಗಿದೆ. ಅರದಲ್ಲೂ ಪಂದ್ಯದ 4ನೇ ದಿನ ಮಳೆ ಜೋರಾಗಿ ಕಾಡುವ ಭೀತಿ ಇದೆ. ಅಂತಿಮ ದಿನ ಸಂಜೆಯ ವೇಳೆ ಮಳೆ ಅಡಚಣೆ ಮುನ್ಸೂಚನೆ ಇದೆ.

ಭಾರತ ತಂಡ ಈ ಪಂದ್ಯಕ್ಕೆ ಎರಡು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸುಳಿವು ಸಿಕ್ಕಿದೆ. ಇದನ್ನು ಸಹಾಯಕ ಕೋಚ್‌ ಟೆನ್‌ ಡೋಶೆಟ್‌ ಸೋಮವಾರ ಖಚಿತಪಡಿಸಿದ್ದರು. ಹೀಗಾಗಿ ರವೀಂದ್ರ ಜಡೇಜಾ ಜತೆ ಕುಲ್‌ದೀಪ್‌ ಯಾದವ್‌ ಆಡುವುದು ಖಚಿತ. ಒಂದೊಮ್ಮೆ ಜಡೇಜಾ ಅವರನ್ನು ಹೊರಗಿಟ್ಟರೆ ಆಗ ವಾಷಿಂಗ್ಟನ್‌ ಸುಂದರ್‌ ಮತ್ತು ಕುಲ್‌ದೀಪ್‌ ಆಡಬಹುದು.

ಇದನ್ನೂ ಓದಿ IND vs ENG 2nd Test Preview: ಎಜ್‌ಬಾಸ್ಟನ್‌ನಲ್ಲಿ ಇತಿಹಾಸ ಬರೆಯಲು ಭಾರತ ಸಜ್ಜು!