ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ತಂಡದ ಪ್ಲೇಯಿಂಗ್‌ xiನಲ್ಲಿ ಒಂದು ಬದಲಾವಣೆಯನ್ನು ಸೂಚಿಸಿದ ಸರಣ್‌ದೀಪ್‌ ಸಿಂಗ್‌!

Sarandeep Singh's Advice For The Second Test: ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆಯನ್ನು ಮಾಡಬೇಕೆಂದು ಬಿಸಿಸಿಐ ಮಾಜಿ ಸೆಲೆಕ್ಟರ್‌ ಸರಣ್‌ದೀಪ್‌ ಸಿಂಗ್‌ ಸಲಹೆ ನೀಡಿದ್ದಾರೆ. ಜುಲೈ 2 ರಂದು ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಎರಡನೇ ಟೆಸ್ಟ್‌ ಆರಂಭವಾಗಲಿದೆ.

ಭಾರತದ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ತರಬೇಕೆಂದ ಮಾಜಿ ಸೆಲೆಕ್ಟರ್‌!

ಶಾರ್ದುಲ್‌ ಠಾಕೂರ್‌ ಬರಲು ಕುಲ್ದೀಪ್‌ ಯಾದವ್‌ ಪ್ಲೇಯಿಂಗ್‌ XIನಲ್ಲಿ ಆಡಬೇಕೆಂದ ಸರಣ್‌ದೀಪ್‌ ಸಿಂಗ್‌.

Profile Ramesh Kote Jul 1, 2025 3:46 PM

ನವದೆಹಲಿ: ಮೊದಲನೇ ಟೆಸ್ಟ್‌ ಪಂದ್ಯದಲ್ಲಿ(IND vs ENG) ಸೋಲು ಅನುಭವಿಸಿದ್ದ ಭಾರತ ತಂಡ ಇದೀಗ ಜುಲೈ 2ರಂದು ಬರ್ಮಿಂಗ್‌ಹ್ಯಾಮ್‌ಗೆ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಆರಂಭವಾಗುವ ಎರಡನೇ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗುತ್ತಿದೆ. ಎರಡನೇ ಪಂದ್ಯವನ್ನು ಗೆದ್ದು ಆಂಡರ್ಸನ್‌-ತೆಂಡೂಲ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಸಾಧಿಸಲು ಪ್ರಯತ್ನಿಸಲಿದೆ. ಅಂದ ಹಾಗೆ ಎರಡನೇ ಟೆಸ್ಟ್‌ಗೆ ಭಾರತ ತಂಡದ ಪ್ಲೇಯಿಂಗ್‌ XI (IND Playing XI) ಯಾವ ರೀತಿ ಇರಲಿದೆ ಎಂಬ ಬಗ್ಗೆ ತೀವ್ರ ಕುತೂಹಲ ಕೆರಳಿದೆ. ಆದರೆ, ಬಿಸಿಸಿಐ ಮಾಜಿ ಸೆಲೆಕ್ಟರ್‌ ಸರಣ್‌ದೀಪ್‌ ಸಿಂಗ್‌ (Sarandeep Singh) ಅವರು ಭಾರತ ತಂಡದಲ್ಲಿ ಒಂದು ಬದಲಾವಣೆಯನ್ನು ಸೂಚಿಸಿದ್ದಾರೆ. ಪ್ರಸಿಧ್‌ ಕೃಷ್ಣ ಅವರನ್ನು ಉಳಿಸಿಕೊಂಡು ಬೇರೆ ಯಾರಾದರೂ ಒಬ್ಬರನ್ನು ತಂಡಿದಿಂದ ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.

ಟೈಮ್ಸ್‌ ನೌ ಜೊತೆ ಮಾತನಾಡಿದ ಸರಣ್‌ದೀಪ್‌ ಸಿಂಗ್‌, ಎರಡನೇ ಟೆಸ್ಟ್‌ ಪಂದ್ಯದ ನಿಮಿತ್ತ ಭಾರತ ತಂಡದಲ್ಲಿ ಹೆಚ್ಚಿನ ಬದಲಾವಣೆಯನ್ನು ತರಬಾರದು. ಜಸ್‌ಪ್ರೀತ್‌ ಬುಮ್ರಾ ಸಂಪೂರ್ಣ ಫಿಟ್‌ ಇದ್ದರೆ, ಅವರನ್ನು ಆಡಿಸಬೇಕು. ಭಾರತ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ಪ್ರಸಿಧ್‌ ಕೃಷ್ಣ ಅವರನ್ನು ಬೆಂಬಲಿಸಬೇಕು. ಶಾರ್ದುಲ್‌ ಠಾಕೂರ್‌ ಅವರ ಸ್ಥಾನಕ್ಕೆರ ಕುಲ್ದೀಪ್‌ ಯಾದವ್‌ ಅವರನ್ನು ಕರೆತರಬೇಕೆಂದು ಅವರು ಸಲಹೆ ನೀಡಿದ್ದಾರೆ.

IND vs ENG 2nd Test: ಭಾರತ-ಇಂಗ್ಲೆಂಡ್‌ ದ್ವಿತೀಯ ಟೆಸ್ಟ್‌ಗೆ ಮಳೆ ಭೀತಿ; ಪಿಚ್‌ ರಿಪೋರ್ಟ್‌ ಹೇಗಿದೆ?

"ಭಾರತ ತಂಡ ತನ್ನ ಪ್ಲೇಯಿಂಗ್‌ xiನಲ್ಲಿ ಜಾಸ್ತಿ ಬದಲಾವಣೆಯನ್ನು ಮಾಡಿಕೊಳ್ಳಬಾರದು. ಒಂದು ವೇಳೆ ಜಸ್‌ಪ್ರೀತ್‌ ಬುಮ್ರಾ ಫಿಟ್‌ ಆಗಿದ್ದರೆ, ಅವರನ್ನು ಆಡಿಸಬೇಕು. ಆದರೆ, ನಾನು ಒಂದು ಬದಲಾವಣೆಯನ್ನು ಸೂಚಿಸುತ್ತೇನೆ. ಶಾರ್ದುಲ್‌ ಠಾಕೂರ್‌ ಅವರನ್ನು ಕೈ ಬಿಟ್ಟು, ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅವರನ್ನು ಆಡುವ ಬಳಗಕ್ಕೆ ತರಬೇಕು. ಕುಲ್ದೀಪ್‌ ಯಾದವ್‌ ಆಡಿದರೆ, ಭಾರತ ತಂಡಕ್ಕೆ ದೊಡ್ಡ ಸಹಾಯ ಸಿಗಲಿದೆ. ಇದು ಐದು ಪಂದ್ಯಗಳ ಟೆಸ್ಟ್‌ ಸರಣಿಯಾಗಿದ್ದು, ಈಗ ಸೋತಿರುವುದು ಒಂದೇ ಒಂದು ಪಂದ್ಯ ಮಾತ್ರ. ಹಾಗಾಗಿ ಎಲ್ಲರೂ ಸಕಾರಾತ್ಮಕವಾಗಿ ಇರಬೇಕು," ಎಂದು ಸರಣ್‌ದೀಪ್‌ ಸಿಂಗ್‌ ಹೇಳಿದ್ದಾರೆ.

ಪ್ರಸಿಧ್‌ ಕೃಷ್ಣಗೆ ಸರಣ್‌ದೀಪ್‌ ಸಿಂಗ್‌ ಬೆಂಬಲ

ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಪ್ರಸಿಧ್‌ ಕೃಷ್ಣ ಹೆಚ್ಚಿನ್‌ ರನ್‌ಗಳನ್ನು ಬಿಟ್ಟಕೊಟ್ಟಿದ್ದರು. ಈ ಕಾರಣದಿಂದ ಅವರನ್ನು ಎರಡನೇ ಟೆಸ್ಟ್‌ನಿಂದ ಕೈ ಬಿಡಬೇಕೆಂದು ಹಲವರು ಆಗ್ರಹಿಸಿದ್ದಾರೆ. ಆದರೆ, ಮಾಜಿ ಸೆಲೆಕ್ಟರ್‌ ಸರಣ್‌ದೀಪ್‌ ಸಿಂಗ್‌ ಕರ್ನಾಟಕ ವೇಗಿಯನ್ನು ಬೆಂಬಲಿಸಿದ್ದಾರೆ.

IND vs ENG 2nd Test Preview: ಎಜ್‌ಬಾಸ್ಟನ್‌ನಲ್ಲಿ ಇತಿಹಾಸ ಬರೆಯಲು ಭಾರತ ಸಜ್ಜು!

"ನೀವು ಪ್ರಸಿಧ್‌ ಕೃಷ್ಣ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು. ಹೌದು, ಅವರು ದುಬಾರಿ ಬೌಲರ್ ಆಗಿದ್ದರು, ಆದರೆ ಅವರಿಗೆ ವಿಕೆಟ್‌ಗಳು ಸಹ ಸಿಕ್ಕಿವೆ. ಅವರು ಉತ್ತಮ ವೇಗವನ್ನು ಹೊಂದಿದ್ದಾರೆ ಹಾಗೂ ಬೌನ್ಸರ್‌ಗಳನ್ನು ಕೂಡ ಹಾಕಬಲ್ಲರು. ಆದ್ದರಿಂದ ಅವರನ್ನು ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನಿಂದ ಕೈಬಿಡಬಾರದು. ಅವರು ಉತ್ತಮ ವೇಗದ ಬೌಲರ್ ಆಗಿರುವುದರಿಂದ ಅವರಿಗೆ ಆತ್ಮವಿಶ್ವಾಸ ಬೇಕು. ಭಾರತ ಖಂಡಿತವಾಗಿಯೂ ಬಲವಾಗಿ ಮರಳುತ್ತದೆ. ಪಿಚ್‌ ಮೇಲೆ ಹುಲ್ಲು ಇದ್ದರೆ, ಪ್ರಸಿಧ್‌ ಅವರ ಎತ್ತರ, ವೇಗ ಮತ್ತು ಬೌನ್ಸ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೆಚ್ಚು ನೆರವಾಗಲಿದೆ," ಎಂದು ಸರಣ್‌ದೀಪ್‌ ಸಿಂಗ್‌ ಹೇಳಿದ್ದಾರೆ.