IPL 2025: ಮೇ 16 ರಂದು ಪಂದ್ಯಗಳ ಆರಂಭ, 30ಕ್ಕೆ ಫೈನಲ್ ಹಣಾಹಣಿ! ವರದಿ
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇನ್ನುಳಿದ ಭಾಗವನ್ನು ಮುಂದೂಡಲಾಗಿತ್ತು. ಇದೀಗ ಪಂದ್ಯಗಳು ಮೇ 16 ರಂದು ಪ್ರಾರಂಭವಾಗುವ ಸಾಧ್ಯತೆಯಿದೆ. ಫೈನಲ್ ಪಂದ್ಯ ಮೇ 30 ರಂದು ನಡೆಯಬಹುದು. ಇನ್ನುಳಿದ ಪಂದ್ಯಗಳನ್ನು ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಆಡಿಸಬಹುದು.

2025ರ ಐಪಿಎಲ್ ವೇಳಾಪಟ್ಟಿ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ (IND vs PAK War) ನಡುವಿನ ಉದ್ವಿಗ್ನತೆಯ ಕಾರಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಇನ್ನುಳಿದ ಭಾಗವನ್ನು ಒಂದು ವಾರ ಮುಂದೂಡಲಾಗಿದೆ. ಆದರೆ ಇದೀಗ ಬೆಳವಣಿಗೆಗಳ ಪ್ರಕಾರ, ಮೇ 16 ರಂದು ಪಂದ್ಯಗಳನ್ನು ಪುನರಾರಂಭಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ಮೊದಲು ಮೇ 25 ರಂದು ನಿಗದಿಪಡಿಸಲಾಗಿದ್ದ ಫೈನಲ್ ಪಂದ್ಯವನ್ನು ಮೇ 30ಕ್ಕೆ ಬದಲಾವಣೆ ಮಾಡಲಾಗಿದೆ. ಇನ್ನುಳಿದ ಲೀಗ್ ಪಂದ್ಯಗಳನ್ನು ಮೇ 16 ರಿಂದ ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಆಡಿಸಬಹುದು. ಈ ಋತುವಿನ ಹೊಸ ವೇಳಾಪಟ್ಟಿಯನ್ನು ತಂಡಗಳು ಭಾನುವಾರ ರಾತ್ರಿಯೊಳಗೆ ಪಡೆಯಬಹುದಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ತಿಳಿಸಿದೆ.
ಭಾನುವಾರ ರಾತ್ರಿಯೊಳಗೆ ಎಲ್ಲಾ ತಂಡಗಳಿಗೆ ನೂತನ ವೇಳಾಪಟ್ಟಿಯನ್ನು ಕಳುಹಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಋತುವಿನಲ್ಲಿ ಇನ್ನೂ 12 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ಸ್ ಪಂದ್ಯಗಳು ಉಳಿದಿವೆ. ಟೂರ್ನಿಯನ್ನು ಮುಗಿಸಲು ಇನ್ನು ಎರಡು ವಾರಗಳು ಮಾತ್ರ ಬಾಕಿ ಇವೆ. ಆದ್ದರಿಂದ ಹೆಚ್ಚಿನ ಡಬಲ್ ಹೆಡರ್ ಪಂದ್ಯಗಳನ್ನು ಆಡಿಸಬಹುದು. ಈ ಲೀಗ್‌ನಲ್ಲಿ ಇದುವರೆಗೆ 58 ಪಂದ್ಯಗಳು ನಡೆದಿವೆ. 58ನೇ ಪಂದ್ಯವನ್ನು ಅರ್ಧದಲ್ಲೇ ನಿಲ್ಲಿಸಲಾಗಿದೆ. ಈ ಪಂದ್ಯವನ್ನು 11ನೇ ಓವರ್‌ನಿಂದ ಮುಂದುವರಿಸಲಾಗುತ್ತದೆಯೇ? ಅಥವಾ ಹೊಸದಾಗಿ ಆಡಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
IPL 2025: ಬೆಂಗಳೂರಿಗೆ ಸುರಕ್ಷಿತವಾಗಿ ಆಗಮಿಸಿದ ಆರ್‌ಸಿಬಿ ಆಟಗಾರರು!
ಪ್ಲೇಆಫ್ ರೇಸ್‌ನಿಂದ ಔಟ್ ಆಗಿರುವ ಮೂರು ತಂಡಗಳು
ಟೂರ್ನಿಯ ಅಂಕಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ ಮೊದಲ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಸ್ಥಾನದಲ್ಲಿದೆ. ಎರಡೂ ತಂಡಗಳು 16-16 ಅಂಕಗಳನ್ನು ಹೊಂದಿವೆ. ಆದರೆ, ಆರ್‌ಸಿಬಿಗಿಂತ ಉತ್ತಮ ರನ್‌ರೇಟ್ ಹೊಂದಿರುವ ಕಾರಣ ಜಿಟಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಇನ್ನು ಸೂರ್ಯಕುಮಾರ್ ಯಾದವ್ ಆರೆಂಜ್ ಕ್ಯಾಪ್ ಮತ್ತು ಪ್ರಸಿದ್ಧ್ ಕೃಷ್ಣ ಪರ್ಪಲ್ ಕ್ಯಾಪ್ ಹೊಂದಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ಮತ್ತು ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಿಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಈ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ಅಭಿಯಾನ ಅಂತ್ಯವಾಗಿದೆ.
RCB vs LSG: ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ, ಲಖನೌ ಪಂದ್ಯ ಆಡಲಿರುವ ಸ್ಟಾರ್ ವೇಗಿ!
ಫೈನಲ್ ಪಂದ್ಯ ಸ್ಥಳಾಂತರ?
2025ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವನ್ನು ಮೇ 25 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಇನ್ನುಳಿದ ನಾಕ್‌ಔಟ್ ಪಂದ್ಯಗಳು ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆದರೆ, ಫೈನಲ್ ಪಂದ್ಯದ ಸ್ಥಳವನ್ನು ಬದಲಾಯಿಸಲಾಗುತ್ತದೆ. ಈ ಹಿಂದಿನ ಋತುವಿನ ವಿಜೇತ ತಂಡದ ತವರು ಅಂಗಣದಲ್ಲಿ ಫೈನಲ್ ಹಣಾಹಣಿಯಲ್ಲಿ ನಡೆಸಲಾಗುತ್ತದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಿದ್ದವು. ಫೈನಲ್‌ನಲ್ಲಿ ಎಸ್‌ಆರ್‌ಎಚ್ ತಂಡವನ್ನು ಮಣಿಸಿ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.