IPL 2025: ಆರ್‌ಸಿಬಿಗೆ ಆಘಾತ, ಇನ್ನುಳಿದ ಪ್ರಮುಖ ಪಂದ್ಯಗಳಿಗೆ ಜಾಶ್ ಹೇಝಲ್‌ವುಡ್ ಅನುಮಾನ!
Josh Hazlewood injury: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಜಾಶ್ ಹೇಝಲ್‌ವುಡ್ ಅವರ ಗಾಯದ ಭೀತಿ ಎದುರಾಗಿದೆ. ಭುಜದ ಗಾಯದಿಂದ ಬಳಲುತ್ತಿರುವ ಹೇಝಲ್‌ವುಡ್ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಹಾಗಾಗಿ ಐಪಿಎಲ್ ಟೂರ್ನಿಯ ಇನ್ನುಳಿದ ಭಾರತಕ್ಕೆ ಆಸೀಸ್ ವೇಗಿ ಲಭ್ಯವಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ.

2025ರ ಐಪಿಎಲ್ ಇನ್ನುಳಿದ ಭಾಗಕ್ಕೆ ಜಾಶ್ ಹೇಝಲ್‌ವುಡ್ ಅನುಮಾನ.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವೇಗದ ಬೌಲರ್ ಜಾಶ ಹೇಝಲ್‌ವುಡ್ (Josh Hazlewood) ಅವರು ಭುಜದ ಗಾಯದಿಂದ ಬಳಲುತ್ತಿದ್ದಾರೆ ಹಾಗೂ ಅವರು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಈ ಹಿನ್ನೆಲೆಯಲ್ಲಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಇನ್ನುಳಿದ ಪಂದ್ಯಗಳು ಆರಂಭವಾದರೂ ಜಾಶ್ ಹೇಝಲ್‌ವುಡ್ ಆರ್‌ಸಿಬಿಗೆ ಲಭ್ಯರಾಗುವುದು ಅನಮಾನ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ನಡೆದರೆ ಚೊಚ್ಚಲ ಕಪ್ ಗೆಲ್ಲುವ ವಿಶ್ವಾಸದಲ್ಲಿರುವ ಬೆಂಗಳೂರು ತಂಡಕ್ಕೆ ನಿರ್ಣಾಯಕ ಹಂತದಲ್ಲಿ ಭಾರಿ ಹಿನ್ನಡೆಯಾಗಲಿದೆ.
ಗಾಯದ ಸಮಸ್ಯೆಯಿಂದ ಮೇ 3 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯಕ್ಕೂ ಜಾಶ್ ಹೇಝಲ್‌ವುಡ್ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಇವರ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಎನ್‌ಗಿಡಿ ಆಡಿದ್ದರು. ಇವರು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಅಂದ ಹಾಗೆ ಸ್ಥಗಿತಗೊಂಡಿರುವ ಐಪಿಎಲ್ ಟೂರ್ನಿಯ ಮೇ 16 ಅಥವಾ 17 ರಂದು ಆರಂಭವಾದರೆ ಜಾಶ ಹೇಝಲ್‌ವುಡ್ ಆರ್‌ಸಿಬಿಗೆ ಪ್ಲೇಯಿಂಗ್ XI ಆಯ್ಕೆಗೆ ಲಭ್ಯರಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ.
IPL 2025: ಮೇ 16 ರಂದು ಪಂದ್ಯಗಳ ಆರಂಭ, 30ಕ್ಕೆ ಫೈನಲ್ ಹಣಾಹಣಿ! ವರದಿ
ಕ್ರಿಕ್‌ಇನ್ಪೋ ವರದಿಯ ಪ್ರಕಾರ, ಸ್ಥಗಿತಗೊಂಡಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಒಮ್ಮೆ ಆರಂಭವಾದರೆ, ಗಾಯಾಳು ಜಾಶ್ ಹೇಝಲ್‌ವಿಡ್ ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.
ಗಾಯದ ಕಾರಣ ಜಾಶ್ ಹೇಝಲ್‌ವುಡ್ ಅವರು ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ, ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅಲಭ್ಯರಾಗಿದ್ದರು. ಇತ್ತೀಚೆಗೆ ಗುಣಮುಖರಾಗಿದ್ದ ಹೇಝಲ್‌ವುಡ್, ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು. ಆದರೆ, ಐಪಿಎಲ್ ಟೂರ್ನಿಯ ವೇಳೆ ಅವರು ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ.
IPL 2025: ಬೆಂಗಳೂರಿಗೆ ಸುರಕ್ಷಿತವಾಗಿ ಆಗಮಿಸಿದ ಆರ್‌ಸಿಬಿ ಆಟಗಾರರು!
ಮೇ 16ರಿಂದ ಟೂರ್ನಿ ಆರಂಭಿಸುವ ಸಾಧ್ಯತೆ
ನಿಂತಿರುವ ಐಪಿಎಲ್ ಟೂರ್ನಿಯನ್ನು ಮೇ 16 ಅಥವಾ 17 ರಂದು ಪುನರಾರಂಭಗೊಳಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಪ್ರಯತ್ನಿಸುತ್ತಿದೆ. ಈ ಬಗ್ಗೆ ಎಲ್ಲಾ ಫ್ರಾಂಚೈಸಿಗಳು, ಪ್ರಾಯೋಜಕರು, ಸರ್ಕಾರದ ಅಧಿಕಾರಿಗಳ ಬಳಿಕ ಬಿಸಿಸಿಐ ಚರ್ಚೆ ನಡೆಸುತ್ತಿದೆ. ಸೋಮವಾರ ಈ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳನ್ನು ನಾಲ್ಕು ಸ್ಥಳಗಳಲ್ಲಿ ಆಡಿಸಲಾಗುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಟೈಮ್ಸ್ ನೌಗೆ ಮಾಹಿತಿ ನೀಡಿದ್ದಾರೆ. ಯಾವ ಕ್ರೀಡಾಂಗಣಗಳೆಂದು ಅತಿ ಶೀಘ್ರದಲ್ಲಿಯೇ ಮಾಹಿತಿಯನ್ನು ಬಿಸಿಸಿಐ ನೀಡಲಿದೆ. ಪ್ಲೇಆಫ್ಸ್, ಎಲಿಮಿನೇಟರ್ ಹಾಗೂ ಫೈನಲ್ ಪಂದ್ಯಗಳು ನಿಗದಿಪಡಿಸಿರುವ ಸ್ಥಳಗಳಲ್ಲಿಯೇ ನಡೆಯಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳ ನಡುವಣ ಪಂದ್ಯದ ಮೂಲಕ ಟೂರ್ನಿ ಪುನರಾರಂಭವಾಗಬಹುದು.
IPL 2025: ʻಒಂದು ವಾರದ ಬಳಿಕ ಐಪಿಎಲ್ ಪಂದ್ಯಗಳು ಪುನಾರಂಭʼ-ಬಿಸಿಸಿಐ ಸ್ಪಷ್ಟನೆ!
ಎರಡನೇ ಸ್ಥಾನದಲ್ಲಿ ಆರ್‌ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 11 ಪಂದ್ಯಗಳಿಂದ 8ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿಆರ್‌ಸಿಬಿ ಎರಡನೇ ಸ್ಥಾನದಲ್ಲಿದೆ.