ವಿಶ್ವ ಟೆಸ್ಟ್ ಫೈನಲ್ ಇದ್ದರೂ ಆಸೀಸ್ಗೆ ಲಾರ್ಡ್ಸ್ ಮೈದಾನದಲ್ಲಿ ಅಭ್ಯಾಸಕ್ಕೆ ಅನುಮತಿ ನಿರಾಕರಣೆ
WTC Final 2025: ಭಾರತ ತಂಡವು ಜೂನ್ 20ರಂದು ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ಇದಲ್ಲದೆ ಭಾರತ ಈ ಪಂದ್ಯವನ್ನು ಆಡುತ್ತಿರುವುದು ಲೀಡ್ಸ್ನ ಹೆಡಿಂಗ್ಲಿಯಲ್ಲಿ. ಹಾಗಿದ್ದರೂ ಆಸ್ಟ್ರೇಲಿಯಾಕ್ಕೆ ಅಭ್ಯಾಸಕ್ಕೆ ಅನುಮತಿ ನೀಡದ್ದು ಅಚ್ಚರಿಗೆ ಕಾರಣವಾಗಿದೆ. ಸದ್ಯ ಈ ಸಮಸ್ಯೆ ಬಗೆ ಹರಿದಿದ್ದು ಸೋಮವಾರದಿಂದ ಆಸೀಸ್ ಆಟಗಾರರು ಲಾರ್ಡ್ಸ್ನಲ್ಲಿ ಅಭ್ಯಾಸ ಶುರು ಮಾಡಿದ್ದಾರೆ.


ಲಾರ್ಡ್ಸ್: ಜೂನ್ 11 ರಿಂದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಈಗಾಗಲೇ ಲಂಡನ್ ತಲುಪಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ಆರಂಭಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಇಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಅಭ್ಯಾಸ ನಡೆಸುತ್ತಿರುವುದು ಎನ್ನಲಾಗಿದೆ.
ಭಾರತಕ್ಕೆ ಲಾರ್ಡ್ಸ್ನಲ್ಲಿರುವ ತರಬೇತಿ ಸೌಲಭ್ಯಗಳನ್ನು ಬಳಸಲು ಪ್ರವೇಶ ನೀಡಿದ್ದರಿಂದ ಆಸ್ಟ್ರೇಲಿಯಾ ತಂಡವನ್ನು ವಾಪಸ್ ಕಳುಹಿಸಲಾಗಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿದೆ. ಅಲ್ಲದೆ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ತಂಡವು ಪರ್ಯಾಯ ತರಬೇತಿ ಸ್ಥಳವನ್ನು ಹುಡುಕಲು ಮೂರು ಗಂಟೆಗಳ ಪ್ರಯಾಣ ಮಾಡಬೇಕಾಯಿತು ಎಂದು ತಿಳಿಸಿದೆ.
ಭಾರತ ತಂಡವು ಜೂನ್ 20ರಂದು ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ಇದಲ್ಲದೆ ಭಾರತ ಈ ಪಂದ್ಯವನ್ನು ಆಡುತ್ತಿರುವುದು ಲೀಡ್ಸ್ನ ಹೆಡಿಂಗ್ಲಿಯಲ್ಲಿ. ಹಾಗಿದ್ದರೂ ಆಸ್ಟ್ರೇಲಿಯಾಕ್ಕೆ ಅಭ್ಯಾಸಕ್ಕೆ ಅನುಮತಿ ನೀಡದ್ದು ಅಚ್ಚರಿಗೆ ಕಾರಣವಾಗಿದೆ. ಸದ್ಯ ಈ ಸಮಸ್ಯೆ ಬಗೆ ಹರಿದಿದ್ದು ಸೋಮವಾರದಿಂದ ಆಸೀಸ್ ಆಟಗಾರರು ಲಾರ್ಡ್ಸ್ನಲ್ಲಿ ಅಭ್ಯಾಸ ಶುರು ಮಾಡಿದ್ದಾರೆ. ಶನಿವಾರ ಮತ್ತು ಭಾನುವಾರ ಭಾರತ ತಂಡದ ಆಟಗಾರರು ಅಭ್ಯಾಸ ನಡೆಸಿದ್ದರು.
ಫೈನಲ್ ಪಂದ್ಯಕ್ಕೆ ಉಭಯ ತಂಡಗಳು
ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಸ್ಯಾಮ್ ಕಾನ್ಸ್ಟನ್ಸ್, ಮ್ಯಾಥ್ಯೂ ಕುಹ್ನೆಮನ್, ಮಾರ್ನಸ್ ಲ್ಯಾಬುಶೇನ್, ನಾಥನ್ ಲಿಯಾನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್ಸ್ಟರ್, ಬ್ರಾಂಡನ್ ಡೋಗೆಟ್ (ಪ್ರಯಾಣ ಮೀಸಲು).
ದಕ್ಷಿಣ ಆಫ್ರಿಕಾ: ಟೋನಿ ಜೋರ್ಜಿ, ಐಡೆನ್ ಮಾರ್ಕ್ರಮ್, ರಿಯನ್ ರಿಕೆಲ್ಟನ್, ಟ್ರಿಸ್ಟಿನ್ ಸ್ಟಬ್ಸ್, ತೆಂಬಾ ಬವುಮಾ(ನಾಯಕ), ಡೇವಿಡ್ ಬೆಡ್ರಿಗ್ಯಾಂ, ಕೈಲ್ ವೆರಿಯೆನ್ನೆ, ವಿಯಾನ್ ಮುಲ್ಡರ್, ಶೆನುರನ್ ಮುತ್ತುಸ್ವಾಮಿ, ಕೇಶವ್ ಮಹಾರಾಜ್, ಮಾರ್ಕೊ ಯಾನ್ಸನ್, ಕಾರ್ಬಿನ್ ಬೋಷ್, ಕಗಿಸೋ ರಬಾಡ, ಲುಂಗಿ ಎಂಗಿಡಿ, ಡೇನ್ ಪ್ಯಾಟರ್ಸನ್.