ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ICC Women’s T20I ranking: 3ನೇ ಸ್ಥಾನಕ್ಕೇರಿದ ಸ್ಮೃತಿ ಮಂಧನಾ

ಮಂಧನಾ ಮಾತ್ರವಲ್ಲದೆ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ, ಮತ್ತು ಹರ್ಲೀನ್ ಡಿಯೋಲ್ ಕೂಡ ತಮ್ಮ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಜಿಗಿತ ಕಂಡಿದ್ದಾರೆ. ಅಕ್ಟೋಬರ್ 2024 ರ ನಂತರ ಮೊದಲ ಬಾರಿಗೆ ಟಿ20 ಅಡಿದ್ದ ಶಫಾಲಿ 13 ನೇ ಸ್ಥಾನದಿಂದ 12 ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇಂಗ್ಲೆಂಡ್‌ ಎದುರಿನ ಮೊದಲ ಪಂದ್ಯದಲ್ಲಿ 23 ಎಸೆತಗಳಿಂದ 43 ರನ್‌ ಬಾರಿಸಿದ್ದ ಹರ್ಲೀನ್ ಡಿಯೋಲ್ 86ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೇರಿದ ಸ್ಮೃತಿ ಮಂಧನಾ

Profile Abhilash BC Jul 1, 2025 3:52 PM

ದುಬೈ: ಇಂಗ್ಲೆಂಡ್‌ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಆಟವಾಡಿ ಶತಕ ಸಿಡಿಸಿದ್ದ ಟೀಮ್‌ ಇಂಡಿಯಾದ ಆರಂಭಿಕ ಎಡಗೈ ಆಟಗಾರ್ತಿ ಸ್ಮೃತಿ ಮಂಧನಾ(Smriti Mandhana) ಅವರು ಐಸಿಸಿ ಮಹಿಳಾ ಟಿ20 ಕ್ರಿಕೆಟ್‌ನ ಬ್ಯಾಟಿಂಗ್ ಶ್ರೇಯಾಂಕದಲ್ಲಿ(ICC Women’s T20I ranking) ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದು ಅವರ ಜೀವನಶ್ರೇಷ್ಠ ಶ್ರೇಯಾಂಕವಾಗಿದೆ. ಅವರು ಒಂದು ಸ್ಥಾನದ ಪ್ರಗತಿ ಸಾಧಿಸಿದರು. ಎರಡನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್‌ನ ಹೇಲಿ ಮ್ಯಾಥ್ಯೂಸ್‌ಗಿಂತ ಕೇವಲ ಮೂರು ಅಂಕಗಳ ಹಿಂದಿದ್ದಾರೆ. ಆಸ್ಟ್ರೇಲಿಯಾದ ಬೆತ್‌ ಮೂನಿ(Beth Mooney) ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಧಾನ ಇಂಗ್ಲೆಂಡ್‌ ವಿರುದ್ಧ ಉಳಿದಿರುವ ನಾಲ್ಕು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದರೆ ವಿಶ್ವದ ನಂ.1 ಬ್ಯಾಟ್ಸ್‌ಮನ್ ಆಗುವ ಅವಕಾಶವನ್ನು ಹೊಂದಿದ್ದಾರೆ. ಅಗ್ರ ಶ್ರೇಯಾಂಕಿತ ಆಸ್ಟ್ರೇಲಿಯಾದ ಬೆತ್ ಮೂನಿ 794 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಮಂಧನಾ 771 ರೇಟೀಂಗ್‌ ಹೊಂದಿದ್ದಾರೆ. ಏಕದಿನ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಮಂಧನಾ ಅಗ್ರಸ್ಥಾನಿಯಾಗಿದ್ದಾರೆ.

ಮಂಧನಾ ಮಾತ್ರವಲ್ಲದೆ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ, ಮತ್ತು ಹರ್ಲೀನ್ ಡಿಯೋಲ್ ಕೂಡ ತಮ್ಮ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಜಿಗಿತ ಕಂಡಿದ್ದಾರೆ. ಅಕ್ಟೋಬರ್ 2024 ರ ನಂತರ ಮೊದಲ ಬಾರಿಗೆ ಟಿ20 ಅಡಿದ್ದ ಶಫಾಲಿ 13 ನೇ ಸ್ಥಾನದಿಂದ 12 ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇಂಗ್ಲೆಂಡ್‌ ಎದುರಿನ ಮೊದಲ ಪಂದ್ಯದಲ್ಲಿ 23 ಎಸೆತಗಳಿಂದ 43 ರನ್‌ ಬಾರಿಸಿದ್ದ ಹರ್ಲೀನ್ ಡಿಯೋಲ್ 86ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಇಂಗ್ಲೆಂಡ್ ವೇಗಿ ಲಾರೆನ್ ಬೆಲ್ ಎರಡು ಸ್ಥಾನಗಳ ಜಿಗಿತದೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ಈ ವೇಳೆ ಅವರು ರೇಣುಕಾ ಠಾಕೂರ್ ಮತ್ತು ಸೋಫಿ ಎಕ್ಲೆಸ್ಟೋನ್ ಅವರನ್ನು ಹಿಂದಿಕ್ಕಿದರು. ಪಾಕಿಸ್ತಾನದ ಸಾದಿಯಾ ಇಕ್ಬಾಲ್ 746 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ದೀಪ್ತಿ ಶರ್ಮ ಒಂದು ಸ್ಥಾನದ ನಷ್ಟ ಕಂಡು ಮೂರನೇ ಸ್ಥಾನಕ್ಕೆ ಜಾರಿದ್ದಾರೆ.

ಇದನ್ನೂ ಓದಿ ಇಂಗ್ಲೆಂಡ್‌ ವಿರುದ್ಧ ಶತಕ ಬಾರಿಸಿ ನೂತನ ಮೈಲುಗಲ್ಲು ಸ್ಥಾಪಿಸಿದ ಸ್ಮೃತಿ ಮಂಧಾನಾ!

ಟಾಪ್‌-5 ಬ್ಯಾಟರ್‌

ಬೆತ್‌ ಮೂನಿ-ಆಸ್ಟ್ರೇಲಿಯಾ

ಹೀಲಿ ಮ್ಯಾಥ್ಯೂಸ್‌-ವೆಸ್ಟ್‌ ಇಂಡೀಸ್‌

ಸ್ಮೃತಿ ಮಂಧನಾ- ಭಾರತ

ತಾಲಿಯಾ ಮೆಕ್‌ಗ್ರಾತ್- ಆಸ್ಟ್ರೇಲಿಯಾ

ಲಾರಾ ವೋಲ್ವಾರ್ಡ್-ದಕ್ಷಿಣ ಆಫ್ರಿಕಾ