ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ICC Women’s T20I rankings: ಅಗ್ರ 10ರೊಳಗೆ ಮರಳಿದ ಶಫಾಲಿ

ಬ್ಯಾಟಿಂಗ್‌ ಶ್ರೇಯಾಂಕದ ಅಗ್ರ 5 ಸ್ಥಾನದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಈ ಹಿಂದಿನಂತೆ ಬೆತ್‌ ಮೂನಿ ಅಗ್ರಸ್ಥಾನ ಕಾಯ್ದುಕೊಂಡರೆ, ಹೀಲಿ ಮ್ಯಾಥ್ಯೂಸ್‌, ಸ್ಮೃತಿ ಮಂಧನಾ ಮತ್ತು ತಾಲಿಯಾ ಮೆಕ್‌ಗ್ರಾತ್ ಕ್ರಮವಾಗಿ 2, 3 ಮತ್ತು ನಾಲ್ಕನೇ ಸ್ಥಾನ ಪಡೆದಿದ್ದಾರೆ. ಲಾರಾ ವೋಲ್ವಾರ್ಡ್ 5ನೇ ಸ್ಥಾನಿಯಾಗಿದಾರೆ.

ಟಿ20 ಬ್ಯಾಟಿಂಗ್‌ ಶ್ರೇಯಾಕಂದಲ್ಲಿ ಅಗ್ರ 10ರೊಳಗೆ ಮರಳಿದ ಶಫಾಲಿ

Profile Abhilash BC Jul 15, 2025 3:30 PM

ದುಬೈ: ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ(Shafali Verma) ಮಂಗಳವಾರ ಬಿಡುಗಡೆಯಾದ ನೂತನ ಐಸಿಸಿ ಮಹಿಳಾ ಟಿ20 ಶ್ರೇಯಾಂಕದಲ್ಲಿ(ICC Women’s T20I rankings) ಟಾಪ್ 10 ಬ್ಯಾಟರ್‌ಗಳ ಪಟ್ಟಿಯಲ್ಲಿ ಮತ್ತೆ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶಫಾಲಿ 158.56 ಸ್ಟ್ರೈಕ್ ರೇಟ್‌ನಲ್ಲಿ 176 ರನ್ ಗಳಿಸಿದರು. ಇದು ಅವರ ಶ್ರೇಯಾಂಕ ಪ್ರಗತಿಗೆ ಕಾರಣವಾಯಿತು. 655 ಅಂಕಗಳೊಂದಿಗೆ ನಾಲ್ಕು ಸ್ಥಾನಗಳ ಜಿಗಿತ ಕಂಡು ಪ್ರಸ್ತುತ ಒಂಬತ್ತನೇ ಸ್ಥಾನಕ್ಕೆ ತಲುಪಿದ್ದಾರೆ. ಸೋಫಿಯಾ ಡಂಕ್ಲಿ ಬ್ಯಾಟಿಂಗ್ ಶ್ರೇಯಾಂಕದಲ್ಲಿ 19 ನೇ ಸ್ಥಾನಕ್ಕೆ ತಲುಪಿದ್ದಾರೆ.

ಬ್ಯಾಟಿಂಗ್‌ ಶ್ರೇಯಾಂಕದ ಅಗ್ರ 5 ಸ್ಥಾನದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಈ ಹಿಂದಿನಂತೆ ಬೆತ್‌ ಮೂನಿ ಅಗ್ರಸ್ಥಾನ ಕಾಯ್ದುಕೊಂಡರೆ, ಹೀಲಿ ಮ್ಯಾಥ್ಯೂಸ್‌, ಸ್ಮೃತಿ ಮಂಧನಾ ಮತ್ತು ತಾಲಿಯಾ ಮೆಕ್‌ಗ್ರಾತ್ ಕ್ರಮವಾಗಿ 2, 3 ಮತ್ತು ನಾಲ್ಕನೇ ಸ್ಥಾನ ಪಡೆದಿದ್ದಾರೆ. ಲಾರಾ ವೋಲ್ವಾರ್ಡ್ 5ನೇ ಸ್ಥಾನಿಯಾಗಿದಾರೆ.

ಭಾರತ ತಂಡವು ಇಂಗ್ಲೆಂಡ್‌ ವಿರುದ್ಧ 3-2 ಅಂತರದಿಂದ ಸರಣಿ ಜಯ ಸಾಧಿಸಿದ್ದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅರುಂಧತಿ ರೆಡ್ಡಿ, ಬೌಲಿಂಗ್ ಶ್ರೇಯಾಂಕದಲ್ಲಿ ನಾಲ್ಕು ಸ್ಥಾನಗಳ ಏರಿಕೆ ಕಂಡು 39 ನೇ ಸ್ಥಾನಕ್ಕೆ ಮತ್ತು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 26 ಸ್ಥಾನಗಳ ಏರಿಕೆ ಕಂಡು 80 ನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡ್ ಸ್ಪಿನ್ನರ್ ಚಾರ್ಲಿ ಡೀನ್ ಎಂಟು ಸ್ಥಾನಗಳ ಜಿಗಿತವನ್ನು ಕಂಡು ನಶ್ರಾ ಸಂಧು ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ಅವರೊಂದಿಗೆ ಜಂಟಿ ಆರನೇ ಸ್ಥಾನವನ್ನು ಹಂಚಿಕೊಂಡರು.

ಇದನ್ನೂ ಓದಿ ICC Test Rankings: ಟೆಸ್ಟ್‌ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ 15 ಸ್ಥಾನಗಳ ಜಿಗಿತ ಕಂಡ ಶುಭಮನ್‌ ಗಿಲ್‌

ಲಿನ್ಸೆ ಸ್ಮಿತ್ ಕೂಡ ಒಂಬತ್ತು ಸ್ಥಾನಗಳ ಏರಿಕೆ ಕಂಡು 38 ನೇ ಸ್ಥಾನಕ್ಕೆ ತಲುಪಿದ್ದರೆ, ವೇಗಿ ಇಸ್ಸಿ ವಾಂಗ್ ಏಳು ಸ್ಥಾನಗಳ ಏರಿಕೆ ಕಂಡು 50 ನೇ ಸ್ಥಾನಕ್ಕೆ ತಲುಪಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಪರ ಪದಾರ್ಪಣೆ ಮಾಡಿದ ಎಮಿಲಿ ಆರ್ಲಾಟ್ 15 ಸ್ಥಾನಗಳ ಏರಿಕೆ ಕಂಡು 67 ನೇ ಸ್ಥಾನಕ್ಕೆ ತಲುಪಿದ್ದಾರೆ.