KL Rahul: ಕನ್ನಡ, ತಮಿಳು ಸೇರಿದಂತೆ ಬಹುಭಾಷಾ ಕೌಶಲ ಪ್ರದರ್ಶನ ಮಾಡಿದ ರಾಹುಲ್!
ವೈರಲ್ ಆಗಿರುವ ವಿಡಿಯೊದಲ್ಲಿ, ರಾಹುಲ್ ತಮಿಳು ಭಾಷೆಯಲ್ಲಿ ಸುದರ್ಶನ್ ಅವರನ್ನು ಮಾತನಾಡಿಸುತ್ತಿರುವುದು ಕೇಳಿ ಬಂದಿದೆ. ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ವೇಳೆ ರಾಹುಲ್ ಅವರು ಸಾಯಿ ಸುದರ್ಶನ್‌ಗೆ 'ಮಚ್ಚಿ, ನಲ್ಲ ಬೌನ್ಸ್ ಇರಿಕ್ಕ್..' (ಟ್ರ್ಯಾಕ್‌ನಲ್ಲಿ ತುಂಬಾ ಒಳ್ಳೆಯ ಬೌನ್ಸ್ ಇದೆ) ಹೇಳಿರುವುದು ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದೆ. ಇದೇ ವೇಳೆ ಕರುಣ್ ನಾಯರ್ ಜತೆ ಮಗ ಜಾಗ್ರತೆಯಾಗಿ ಆಡು ಎಂದು ಹೇಳಿದ್ದರು.


ಲಂಡನ್: ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್(IND vs ENG) ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು ಬಹುಭಾಷಾ ಕೌಶಲ ಪ್ರದರ್ಶನ(rahul multiple languages) ಮಾಡಿ ಗಮನ ಸೆಳೆದಿದಾರೆ. ಸಾಯಿ ಸುದರ್ಶನ್ ಜತೆ ತಮಿಳಿನಲ್ಲಿ, ಕನ್ನಡಿಗರಾದ ಕರುಣ್ ನಾಯರ್ ಮತ್ತು ಪ್ರಸಿದ್ಧ್ ಕೃಷ್ಣ ಅವರೊಂದಿಗೆ ಕನ್ನಡದಲ್ಲಿ, ದೆಹಲಿಯ ರಿಷಬ್ ಪಂತ್ ಜತೆ ಹಿಂದಿಯಲ್ಲಿ ಮಾತನಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದು. ರಾಹುಲ್ ಅವರ ಬಹುಭಾಷಾ ಪಾಂಡಿತ್ಯಕ್ಕೆ(rahul multiple languages) ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ, ರಾಹುಲ್ ತಮಿಳು ಭಾಷೆಯಲ್ಲಿ ಸುದರ್ಶನ್ ಅವರನ್ನು ಮಾತನಾಡಿಸುತ್ತಿರುವುದು ಕೇಳಿ ಬಂದಿದೆ. ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ವೇಳೆ ರಾಹುಲ್ ಅವರು ಸಾಯಿ ಸುದರ್ಶನ್‌ಗೆ 'ಮಚ್ಚಿ, ನಲ್ಲ ಬೌನ್ಸ್ ಇರಿಕ್ಕ್..' (ಟ್ರ್ಯಾಕ್‌ನಲ್ಲಿ ತುಂಬಾ ಒಳ್ಳೆಯ ಬೌನ್ಸ್ ಇದೆ) ಹೇಳಿರುವುದು ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದೆ. ಇದೇ ವೇಳೆ ಕರುಣ್ ನಾಯರ್ ಜತೆ ಮಗ ಜಾಗ್ರತೆಯಾಗಿ ಆಡು ಎಂದು ಹೇಳಿದ್ದರು.
ಇಂಗ್ಲೆಂಡ್ ಚೇಸಿಂಗ್ ವೇಳೆ ವೇಗಿ ಪ್ರಸಿದ್ಧ್ ಕೃಷ್ಣ ಜತೆ ಕನ್ನಡದಲ್ಲೇ ಮಾತನಾಡಿದ ರಾಹುಲ್, 'ಮಗ ಪ್ರಸಿದ್ಧ್ ಚೆನ್ನಾಗಿ ಹೋಗ್ತಾ ಇದೆ..ಹೀಗೆ ಇರಲಿ..' ಎಂದು ಹೇಳುವುದು ಕೇಳಿದೆ. ಇನ್ನೊಂದೆಡೆ ಪ್ರಸಿದ್ಧ್ ಕೂಡ ರಾಹುಲ್ ಜೊತೆ ಕನ್ನಡದಲ್ಲಿಯೇ ಮಾತನಾಡಿದ್ದು ದಾಖಲಾಗಿದೆ. ರಿಷಭ್ ಪಂತ್ ಬ್ಯಾಟಿಂಗ್ ನಡೆಸುವಾಗಲೂ ಆ ಬಳಿಕ ಜಡೇಜಾ ಸೇರಿ ಸಹ ಆಟಗಾರರೊಂದಿಗೆ ಹಿಂದಿಯಲ್ಲಿ ರಾಹುಲ್ ಮಾತನಾಡುತ್ತಿದ್ದರು. ಪಂದ್ಯ ಮುಗಿದ ಬಳಿಕ ರಾಹುಲ್, ನಿರೂಪಕರ ಜತೆ ಇಂಗ್ಲೀಷ್‌ನಲ್ಲಿ ಸುಲಲಿತವಾಗಿ ಮಾತನಾಡಿದರು. ಒಟ್ಟಾರೆ ರಾಹುಲ್ ಪಂದ್ಯವೊಂದರಲ್ಲಿ ನಾಲ್ಕು ಭಾಷೆ ಮಾತನಾಡಿ ಗಮನಸೆಳೆದರು.
❤️ KL Rahul Kannada with Prasidh Krishna ❤️#INDvsENGTest #INDvsEND #KLRahul #ENGvsIND #ENGvIND #Kannada @KLRahulFans #RishabhPant @klrahul @SonySportsNetwk pic.twitter.com/b4p6UwtYIJ
— Bhat (@Anamika0072) June 24, 2025
ಸ್ಕೈ ಸ್ಪೋರ್ಟ್ಸ್‌ನಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ದಿನೇಶ್ ಕಾರ್ತಿಕ್, ರಾಹುಲ್ ತೋರಿದ ಬಹುಮುಖ ಪ್ರತಿಭೆಯಿಂದ ಪ್ರಭಾವಿತರಾದರು. "ಅವರು ಸಾಯಿ ಸುದರ್ಶನ್ ಗೆ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದಾರೆ, ರಿಷಭ್ ಜೊತೆ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ ಮತ್ತು ಈಗ ಅವರು ಕರುಣ್ ನಾಯರ್, ಪ್ರಸಿದ್ಧ್ ಜತೆ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಭಾಷೆಗಳಲ್ಲೂ ಬಹುಮುಖ ಪ್ರತಿಭೆ" ಎಂದು ಕಾರ್ತಿಕ್ ಹೇಳಿದರು