RCB vs KKR: ಕೆಕೆಆರ್ ಮಣಿಸಿ ಪ್ಲೇ-ಆಫ್‌ಗೇರಲು ಆರ್‌ಸಿಬಿ ಸಜ್ಜು; ನಾಳೆ ಚಿನ್ನಸ್ವಾಮಿಯಲ್ಲಿ ಕಾದಾಟ
ಆರ್‌ಸಿಬಿ ಸದ್ಯ 8 ಗೆಲುವುಗಳೊಂದಿಗೆ 16 ಅಂಕ ಗಳಿಸಿರುವ ಆರ್‌ಸಿಬಿ ಈ ಪಂದ್ಯ ಗೆದ್ದರೆ ಮೊದಲ ತಂಡವಾಗಿ ಪ್ಲೇ-ಆಫ್‌ಗೇರಲಿದೆ(IPL playoffs spot). ಇನ್ನೆಂದೆಡೆ ಕೆಕೆಆರ್ ಟೂರ್ನಿಯಿಂದ ಹೊರಬೀಳಲಿದೆ. ಒಂದು ವಾರ ಬಿಡುವ ಸಿಕ್ಕ ಕಾರಣ ಆಟಗಾರರ ಪ್ರದರ್ಶನದಲ್ಲಿಯೂ ಏರಿಳಿತ ಸಂಭವಿಸುವ ಸಾಧ್ಯತೆ ಇದೆ.


ಬೆಂಗಳೂರು: ಭಾರತ-ಪಾಕಿಸ್ತಾನ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ಒಂದು ವಾರಗಳ ಕಾಲ ಮುಂದೂಡಲ್ಪಟ್ಟಿದ್ದ ಐಪಿಎಲ್(IPL 2025) 18ನೇ ಆವೃತ್ತಿಯ ಪಂದ್ಯಾವಳಿಗೆ ಶನಿವಾರ(ಮೇ 17) ಮತ್ತೆ ಚಾಲನೆ ಸಿಗಲಿದೆ. ಎಂ ಚಿನ್ನಸ್ವಾಮಿ(M. Chinnaswamy) ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಆರ್‌ಸಿಬಿ, ಹಾಲಿ ಚಾಂಪಿಯನ್ ಕೆಕೆಆರ್(RCB vs KKR) ತಂಡದ ಸವಾಲು ಎದುರಿಸಲಿದೆ. ಆರ್‌ಸಿಬಿ ಸದ್ಯ 8 ಗೆಲುವುಗಳೊಂದಿಗೆ 16 ಅಂಕ ಗಳಿಸಿರುವ ಆರ್‌ಸಿಬಿ ಈ ಪಂದ್ಯ ಗೆದ್ದರೆ ಮೊದಲ ತಂಡವಾಗಿ ಪ್ಲೇ-ಆಫ್‌ಗೇರಲಿದೆ(IPL playoffs spot). ಇನ್ನೆಂದೆಡೆ ಕೆಕೆಆರ್ ಟೂರ್ನಿಯಿಂದ ಹೊರಬೀಳಲಿದೆ. ಒಂದು ವಾರ ಬಿಡುವ ಸಿಕ್ಕ ಕಾರಣ ಆಟಗಾರರ ಪ್ರದರ್ಶನದಲ್ಲಿಯೂ ಏರಿಳಿತ ಸಂಭವಿಸುವ ಸಾಧ್ಯತೆ ಇದೆ.
ಚೇತರಿಸಿಕೊಂಡ ನಾಯಕ ಪಾಟೀದಾರ್
ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದ ನಾಯಕ ರಜತ್ ಪಾಟೀದಾರ್ ಕನಿಷ್ಠ 3 ಪಂದ್ಯಗಳಿಂದ ಹೊರಬೀಳುವ ಆತಂಕದಲ್ಲಿದ್ದರು. ಆದರೆ ಐಪಿಎಲ್ ಸ್ಥಗಿತಗೊಂಡ ಕಾರಣ ಅವರಿಗೆ ಚೇತರಿಸಿಕೊಳ್ಳಲು ಸಮಯ ದೊರೆಯಿತು. ಗುರುವಾರ ರಜತ್ ನೆಟ್ಸ್‌ನಲ್ಲಿ ಬಹಳ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಆದರೂ, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರು ಆಡುವ ಬಗ್ಗೆ ತಂಡದ ವೈದ್ಯರು ಶನಿವಾರ ಬೆಳಗ್ಗೆ ನಿರ್ಧರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಯುದ್ಧದ ಆತಂಕದಿಂದ ತಮ್ಮ ತಮ್ಮ ದೇಶಗಳಿಗೆ ಹಿಂದಿರುಗಿದ್ದ ಇಂಗ್ಲೆಂಡ್ ಆಟಗಾರರಾದ ಫಿಲ್ ಸಾಲ್ಟ್, ಜೇಕಬ್ ಬೆತೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಆಸ್ಟ್ರೇಲಿಯಾದ ಟಿಮ್ ಡೇವಿಡ್, ವೆಸ್ಟ್‌ಇಂಡೀಸ್‌ನ ರೊಮಾರಿಯೋ ಶೆಫರ್ಡ್, ದ.ಆಫ್ರಿಕಾದ ಲುಂಗಿ ಎನ್‌ಗಿಡಿ ಮತ್ತೆ ಮರಳಿ ಆರ್‌ಸಿಬಿ ತಂಡ ಸೇರಿರುವ ಕಾರಣ ತಂಡಕ್ಕೆ ಯಾವುದೇ ಆಟಗಾರನ ಅನುಪಸ್ಥಿತಿ ಕಾಡಿಲ್ಲ.
We're back at it, and so are the mandatory 𝒎𝒆𝒆𝒕-𝒖𝒑𝒔 and all the good vibes! 🤩🤝
— Royal Challengers Bengaluru (@RCBTweets) May 15, 2025
Can we fast forward to the show already? 👀⏩ pic.twitter.com/RE5jlGJBz7
ಗಾಯದಿಂದಾಗಿ ಈ ಬಾರಿ ಐಪಿಎಲ್‌ನಿಂದಲೇ ಹೊರಬಿದ್ದಿರುವ ದೇವದತ್ ಪಡಿಕ್ಕಲ್ ಸ್ಥಾನಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಮತ್ತೋರ್ವ ಆಟಗಾರ ಮಯಾಂಕ್ ಅಗರ್ವಾಲ್ ಈ ಪಂದ್ಯದಲ್ಲಿ ಕಣಕಿಳಿಯುವ ಸಾಧ್ಯತೆ ಇದೆ.
ಇದನ್ನೂ ಓದಿ IPL 2025: ಪ್ಲೇ ಆಫ್ ಪಂದ್ಯಕ್ಕೆ ಗುಜರಾತ್ ಟೈಟಾನ್ಸ್ ಸೇರಿದ ಕುಸಲ್ ಮೆಂಡಿಸ್
ಕೆಕೆಆರ್‌ಗೆ ಮಸ್ಟ್ ವಿನ್ ಗೇಮ್
ಪ್ಲೇ ಆಫ್‌ನ ಕ್ಷೀಣ ಅವಕಾಶ ಹೊಂದಿರುವ ಕೆಕೆಆರ್ ತಂಡ ಈ ಪಂದ್ಯದಲ್ಲಿ ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ತಂಡಕ್ಕೆ ಉಳಿದ ಎಲ್ಲ ಪಂದ್ಯ ಗೆದ್ದರೂ ಗರಿಷ್ಠ 15 ಅಂಕ ತಲುಪಬಹುದು. ಆಗ ಆಗ ತಂಡದ ಭವಿಷ್ಯ ಬೇರೆ ಫಲಿತಾಂಶಗಳ ಮೇಲೆ ಅವಲಂಬಿತಗೊಳ್ಳಲಿದೆ. ಡೆಲ್ಲಿ, ಮುಂಬೈ ಮತ್ತು ಪಂಜಾಬ್ ತಂಡಗಳ ಪೈಕಿ ಎರಡು ತಂಡಗಳು ಎಲ್ಲ ಪಂದ್ಯ ಸೋತರೆ ಕೆಕೆಆರ್‌ಗೆ ಅವಕಾಶ ಸಿಗಬಹುದು. ಈ ಲೆಕ್ಕಾಚಾರದಲ್ಲಿ ಕೆಕೆಆರ್‌ಗೆ ಆರ್‌ಸಿಬಿಯ ವಿರುದ್ಧ ಗೆಲುವು ಅತ್ಯಗತ್ಯ. ಹಾಲಿ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಕೆಕೆಆರ್ ತಂಡ ಆರ್‌ಸಿಬಿ ವಿರುದ್ಧ ತವರಿನಲ್ಲಿ ಸೋಲು ಕಂಡಿತ್ತು.