ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಅಡ್ಡಡ್ಡ ಅನುಮಾನ
ರಾಜ್ಯ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ದೋಸ್ತಿಗಳು ಕಣಕ್ಕಿಳಿಸಿದ್ದ ಹೆಚ್ಚುವರಿ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಹೆಚ್ಚುವರಿ ಅಭ್ಯರ್ಥಿ ಜಯ ಸಾಧಿಸಿದ್ದು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಅಡ್ಡ ಮತದಾನ ಮಾಡಿರುವ ಈಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ, ಅಷ್ಟೇ ಅಲ್ಲಇದು ರಾಜ್ಯದಲ್ಲಿ ಮುಂದಾಗುವ ರಾಜಕೀಯ ಬದಲಾವಣೆಯ ಸೂಚನೆಯನ್ನೂ ತಿಳಿಸುವ ದಿಕ್ಸೂಚಿಯಾಗಲಿದೆ