ರೈತರ ಸಮಸ್ಯೆ ಕೇಳುವವರೇ ಇಲ್ಲ: ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
ಸಿಬ್ಬಂದಿ ಕೊರತೆಯ ಕಾರಣ ಕೇಳಿ ಕೇಳಿ ರೈತರು ರೋಸಿ ಹೋಗಿದ್ದಾರೆ. ಇತ್ತೀಚೆಗೆ ಭಾರಿ ಮಳೆ ಸುರಿದ ಹಿನ್ನೆಲೆ ಸರಿಯಾದ ಬೆಳೆ ಹಾನಿ ಅಂದಾಜನ್ನೇ ಮಾಡಿಲ್ಲ. ಇದರಿಂದ ಸಾಕಷ್ಟು ರೈತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಹೊರಗುತ್ತಿಗೆ ಮೇಲಿರುವ ನೌಕರರು ಸೇರಿದಂತೆ ಇಲಾಖೆ ನೌಕರರು ಸರಿಯಾಗಿ ಸ್ಪಂದಿಸುತ್ತಿಲ್ಲ. ಬಿತ್ತನೆ, ರಸಗೊಬ್ಬರ, ಬೆಳೆ ನಿರ್ವಹಣೆ ಹೀಗೆ ಹಲವು ವಿಷಯಗಳಲ್ಲಿ ರೈತರಿಗೆ ಸೂಕ್ತ ಮಾಹಿತಿ ಸಿಗುತ್ತಿಲ್ಲ