ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Hospet News: ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಮಾಮ್ ನಿಯಾಜಿ ನೇಮಿಸಲು ಮನವಿ

ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಿಯಾಜಿ ನೇಮಿಸಲು ಮನವಿ

ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಗೆ‌ ಆಗಮಿಸಿದ್ದ ತೆಲಂಗಾಣ ಸರ್ಕಾರದ ಸಲಹೆಗಾರರು ( ಪ್ರೋಟಾಕಾಲಾ & ಪಬ್ಲಿಕ್ ರಿಲೇಷನ್ ) ಹಾಗೂ ಎಐಸಿಸಿ ವೀಕ್ಷಕರಾದ ಹರಕಾರ್ ವೇಣುಗೋಪಾಲ್ ರಾವ್ ವೀಕ್ಷಕರಿಗೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಅವರು ತಮ್ಮನ್ನು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡುವಂತೆ ಮನವಿ ಸಲ್ಲಿಸಿದರು.

ಸಿಎಂಆರ್ ವಿಶ್ವವಿದ್ಯಾಲಯದಲ್ಲಿ 'ಸಿಇಒ ಕಾನ್‌ಕ್ಲೇವ್ 2026'; ಭವಿಷ್ಯದ ಉದ್ಯೋಗ, ಕೌಶಲ್ಯಗಳು ಮತ್ತು ತಂತ್ರಜ್ಞಾನ ಕುರಿತು ವಿಚಾರಗೋಷ್ಠಿ

ಸಿಎಂಆರ್ ವಿಶ್ವವಿದ್ಯಾಲಯದಲ್ಲಿ 'ಸಿಇಒ ಕಾನ್‌ಕ್ಲೇವ್ 2026'

​ಗೋಷ್ಠಿಯಲ್ಲಿ ಮಾತನಾಡಿದ ಉದ್ಯಮ ತಜ್ಞರು, "ಮುಂದಿನ ದಿನಗಳಲ್ಲಿ ಉದ್ಯೋಗಕ್ಷೇತ್ರದಲ್ಲಿ ಹೊಂದಾಣಿಕೆಯ ಗುಣ, ವಿವಿಧ ಕ್ಷೇತ್ರಗಳ ಜ್ಞಾನ, ಸಂವಹನ ಕೌಶಲ್ಯ ಮತ್ತು ಕೃತಕ ಬುದ್ಧಿಮತ್ತೆ 'ಎಐ' ಸಾಕ್ಷರತೆ ಅತ್ಯಂತ ನಿರ್ಣಾಯಕವಾಗಲಿವೆ. ಎಐ ಮಾನವನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಯಾದರೂ, ವಿಮರ್ಶಾತ್ಮಕ ಚಿಂತನೆ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ವಿಷಯಾಧಾರಿತ ಪರಿಣತಿಯ ಸ್ಥಾನವನ್ನು ಅದು ಎಂದಿಗೂ ತಲುಪಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟರು.

ಮುಸ್ಲಿಂ ವ್ಯಕ್ತಿಯ ಮೊದಲ ಮದುವೆ ರದ್ದಾಗದಿದ್ರೆ 2ನೇ ವಿವಾಹವಾಗುವಂತಿಲ್ವಾ? ಹೈಕೋರ್ಟ್‌ ಆದೇಶವೇನು?

ಮುಸ್ಲಿಂ ವ್ಯಕ್ತಿಯ ಮೊದಲ ಮದುವೆ ರದ್ದಾಗದಿದ್ರೆ 2ನೇ ವಿವಾಹವಾಗುವಂತಿಲ್ವಾ?

ಮುಸ್ಲಿಂ ವ್ಯಕ್ತಿಯ ಮೊದಲ ವಿವಾಹ ಅನೂರ್ಜಿತವಾಗಿಲ್ಲದಿದ್ದರೆ ಅಥವಾ ರದ್ದಾಗಿಲ್ಲವಾದರೆ ವಿಶೇಷ ವಿವಾಹ ಕಾಯಿದೆಯಡಿ ಎರಡನೇ ವಿವಾಹ ಮಾಡಿಕೊಂಡರೆ ಅದು ಅನೂರ್ಜಿತವಾಗುತ್ತದೆ ಎಂದು ಹೈಕೋರ್ಟ್‌ ಆದೇಶಿಸಿದೆ. ಮುಸ್ಲಿಂ ವೈಯಕ್ತಿಕ ಕಾನೂನು ಪುರುಷರು ಬಹು ವಿವಾಹ ಮಾಡಿಕೊಳ್ಳಲು ಅವಕಾಶ ನೀಡಿದೆ, ಆದ್ರೂ ವೈಯಕ್ತಿಕ ಕಾನೂನಿನಡಿ ವಿವಾಹಗಳು ಶಾಸ್ತ್ರೋಕ್ತವಾಗಿ ನಡೆದ್ರೆ ಮಾತ್ರ ಈ ಕಾನೂನು ಸ್ಥಾನವು ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಿದೆ.

ಹಿರಿಯ ನಾಗರಿಕರ ಆರೈಕೆಗೆ ಅನ್ವಯ ಹೊಸ ಹೆಜ್ಜೆ: 10ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮೂರು ಹೊಸ ಸೇವೆಗಳು ಬಿಡುಗಡೆ

10ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮೂರು ಹೊಸ ಸೇವೆಗಳು ಬಿಡುಗಡೆ

ಕಳೆದ ದಶಕದಿಂದ ದೇಶದ 38ಕ್ಕೂ ಹೆಚ್ಚು ನಗರಗಳಲ್ಲಿ 1.5 ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರಿಗೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯು, ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಹಿರಿಯ ನಾಗರಿಕರ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವ ಕ್ಯುರಾಪಾಡ್, 3000 ಬಿಸಿ ಥೆರಾಪ್ಯೂಟಿಕ್ಸ್ ಮತ್ತು ಪುಣ್ಯಕ ಎಂಬ ಹೊಸ ಸೇವೆಗಳನ್ನು ಬಿಡುಗಡೆ ಮಾಡಿದೆ.

Actress Ramya: ʼಬೆಸ್ಟ್‌ ನ್ಯೂಸ್‌ ಎವೆರ್‌ʼ; ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ನಟಿ ರಮ್ಯಾ ಸಂತಸ, ವಿದ್ಯಾರ್ಥಿಗಳ ಹೋರಾಟಕ್ಕೆ ಮೆಚ್ಚುಗೆ

ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ನಟಿ ರಮ್ಯಾ ಖುಷ್‌; ಪೋಸ್ಟ್‌ ವೈರಲ್‌

Dharmendra Pradhan's resignation: ದೆಹಲಿಯಲ್ಲಿ ಸಿಜೆಪಿ ನೇತೃತ್ವದ ವಿದ್ಯಾರ್ಥಿಗಳ ಬೃಹತ್‌ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ.

ಬಾಲ್ಯದಲ್ಲೇ ಆರ್‌ಎಸ್‌ಎಸ್‌ಗೆ ಎಂಟ್ರಿ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಿ ಕ್ರಾಂತಿ: ನೂತನ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿಯ ಅಪರೂಪದ ಪಾಲಿಟಿಕಲ್‌ ಜರ್ನಿ ಇದು

ಕೇಂದ್ರ ಶಿಕ್ಷಣ ಸಚಿವ ರಾಜ್ಯದ ಪ್ರಲ್ಹಾದ್‌ ಜೋಶಿಯ ಪಾಲಿಟಿಕಲ್‌ ಜರ್ನಿ

Pralhad Joshi: ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ ಜೋಶಿ ಆಯ್ಕೆಯಾಗಿದ್ದಾರೆ. ಈಗಾಗಲೇ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾಗಿರುವಚ ಅವರಿಗೆ ಹೆಚ್ಚುವರಿಯಾಗಿ ಶಿಕ್ಷನ ಖಾತೆ ನೀಡಲಾಗಿದೆ. ಅವರ ರಾಜಕೀಯ ಜರ್ನಿಯ ವಿವರ ಇಲ್ಲಿದೆ.

ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಪೆನ್‌ಡ್ರೈವ್‌ ಹಂಚಿದವರಿಗೆ ಸಂಕಷ್ಟ;  8 ಆರೋಪಿಗಳಿಗೆ ಕೋರ್ಟ್ ಸಮನ್ಸ್

ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಪೆನ್‌ಡ್ರೈವ್‌ ಹಂಚಿದವರಿಗೆ ಸಂಕಷ್ಟ

Prajwal Revanna case: 2024ರ ಚುನಾವಣೆ ಸಂದರ್ಭದ ವೇಳೆ ಹಾಸನದಲ್ಲಿ ಅಶ್ಲೀಲ ಪೆನ್​​ಡ್ರೈವ್​ ಹಂಚಿಕೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಎಸ್‌ಐಟಿ ಕಳೆದ ಮಾರ್ಚ್​ನಲ್ಲಿ ಹಾಸನ ಸಿವಿಲ್ ಕೋರ್ಟ್‌ಗೆ ಬರೋಬ್ಬರಿ 13,712 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿತ್ತು. ಇದೀಗ ಪೆನ್​ ಡ್ರೈವ್ ಹಂಚಿದವರಿಗೆ​ ಸಂಕಷ್ಟ ಎದುರಾಗಿದೆ.

ರೊಬೋಟ್ ನೆರವಿನಿಂದ ಹೃದಯ ಬೈಪಾಸ್, ಹರ್ನಿಯಾ ಹಾಗೂ ಸುನ್ನತಿಯ ಯಶಸ್ವಿ ಶಸ್ತ್ರಚಿಕಿತ್ಸೆ

ವಿಶ್ವದಲ್ಲಿಯೇ ಮೊದಲ ಬಾರಿಗೆ ರೊಬೋಟ್ ನೆರವಿನಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ತುಂಬ ಸಂಕೀರ್ಣಮಯವಾಗಿದ್ದ ಈ ಶಸ್ತ್ರಚಿಕಿತ್ಸೆಗಳನ್ನು ಆಸ್ಪತ್ರೆಯ ವಿವಿಧ ವೈದ್ಯಕೀಯ ವಿಭಾಗಗಳ ಸಮನ್ವಯದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಇದರಿಂದಾಗಿ 81 ವರ್ಷದ ರೋಗಿಯು ಮೂರು ಪ್ರತ್ಯೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾದ ಅನಿವಾರ್ಯತೆ ತಪ್ಪಿದೆ. ಶಸ್ತ್ರಚಿಕಿತ್ಸೆಯ ನೋವು, ದೀರ್ಘಕಾಲ ಆಸ್ಪತ್ರೆಯಲ್ಲಿ ಉಳಿಯುವ ಅವಶ್ಯಕತೆ, ಸೋಂಕಿನ ಸಾಧ್ಯತೆ ಹಾಗೂ ಚೇತರಿಕೆಯ ಅವಧಿ ಗಣನೀಯವಾಗಿ ಕಡಿಮೆಯಾಗಿದೆ.

Cabinet expansion: ಮಂದಿನ ವಾರ ಸಚಿವ ಸಂಪುಟ ವಿಸ್ತರಣೆ: ಸಿಎಂ ಡಿ.ಕೆ.ಶಿವಕುಮಾರ್‌

ಮಂದಿನ ವಾರ ಸಚಿವ ಸಂಪುಟ ವಿಸ್ತರಣೆ: ಸಿಎಂ ಡಿ.ಕೆ.ಶಿವಕುಮಾರ್‌

ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಶನಿವಾರ ನಡೆದ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಬಳಿಕ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿದ್ದಾರೆ. ದೆಹಲಿಯಲ್ಲಿ ನಡೆದ ಕೆಲ ರಾಜಕೀಯ ಬೆಳವಣಿಗೆಗಳು ಹಾಗೂ ಪ್ರತಿಭಟನೆಗಳಿಂದಾಗಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ವಿಳಂಬವಾಗಿತ್ತು. ಹೀಗಾಗಿ ಮುಂದಿನ ವಾರದಲ್ಲಿ ಕ್ಯಾಬಿನೆಟ್‌ ವಿಸ್ತರಣೆ ಸಾಧ್ಯತೆ ಇದೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ; ಇದು ದೇಶದ ವಿದ್ಯಾರ್ಥಿ-ಯುವಜನತೆಯ ಗೆಲುವು ಎಂದ ಸಿದ್ದರಾಮಯ್ಯ

ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವವರೆಗೆ ವಿರಮಿಸಬಾರದು: ಸಿದ್ದರಾಮಯ್ಯ

Dharmendra Pradhan Resignation: ಕಾಂಗ್ರೆಸ್ ಪಕ್ಷ ಕಾಲದ ಕರೆಗೆ ಓಗೊಟ್ಟು ಒಂದು ಜವಾಬ್ದಾರಿಯುತ ವಿರೋಧ ಪಕ್ಷದ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದೆ. ಸಕಾಲದಲ್ಲಿ ದೃಢಚಿತ್ತದ ನಾಯಕತ್ವ ನೀಡಿ ಹೋರಾಟವನ್ನು ಮುನ್ನಡೆಸಿದ ರಾಹುಲ್ ಗಾಂಧಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Tiptur News: ಕೇಂದ್ರ ಸರ್ಕಾರದಿಂದ ಸರ್ವಾಧಿಕಾರಿ ಧೋರಣೆ: ಟುಡಾ ಶಶಿಧರ್ ಆರೋಪ

ಕೇಂದ್ರ ಸರ್ಕಾರದಿಂದ ಸರ್ವಾಧಿಕಾರಿ ಧೋರಣೆ: ಟುಡಾ ಶಶಿಧರ್ ಆರೋಪ

Tiptur News: ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಧ್ವನಿಯೆತ್ತಿದವರ ಮೇಲೆ ಲಾಟಿ ಪ್ರಹಾರ ನಡೆಸುತ್ತಿದೆ, ಹತ್ತು ಹನ್ನೆರಡು ವರ್ಷಗಳಿಂದಲೂ ಪ್ರಶ್ನೆ ಪತ್ರಿಕೆ ಸೋರಿಕೆ ನಿರಂತರವಾಗಿ ನಡೆಯುತ್ತಲೇ ಇದೆ. ನೀಟ್ ಪ್ರಶ್ನೆ ಪತ್ರಿಕೆಯನ್ನು ಮಾರಿಕೊಂಡು ಹಣ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಜನಸ್ಪಂದನ ಟ್ರಸ್ಟ್‌ನ ಅಧ್ಯಕ್ಷ ಟುಡಾ ಶಶಿಧರ್ ಆರೋಪಿಸಿದ್ದಾರೆ.

Pavagada News: ಉತ್ತಮ ಹುದ್ದೆ ತಲುಪಿದಾಗ ಸಮಾಜಕ್ಕೆ ನೆರವಾಗುವ ಮನೋಭಾವ ಬೆಳೆಸಿಕೊಳ್ಳಿ: ಗಾಯತ್ರಿಬಾಯಿ

ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ: ಗಾಯತ್ರಿಬಾಯಿ

Pavagada News: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಯಶಸ್ಸು ವೈಯಕ್ತಿಕ ಸಾಧನೆಗೆ ಮಾತ್ರ ಸೀಮಿತವಾಗದೆ ಸಮಾಜದ ಅಭಿವೃದ್ಧಿಗೂ ಕಾರಣವಾಗಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗಾಯತ್ರಿಬಾಯಿ ತಿಳಿಸಿದ್ದಾರೆ.

ಜಪಾನ್‌ ಪ್ರವಾಸದ ಅಪೂರ್ವ ಅನುಭವಕ್ಕೆ ಅಡಿಗಾಸ್‌ ಯಾತ್ರಾ ಸಾಥ್

ಜಪಾನ್‌ ಪ್ರವಾಸದ ಅಪೂರ್ವ ಅನುಭವಕ್ಕೆ ಅಡಿಗಾಸ್‌ ಯಾತ್ರಾ ಸಾಥ್!

Adigas Yatra: ಜಪಾನ್ ಎಂದರೆ ಕೇವಲ ಒಂದು ದೇಶವಲ್ಲ, ಅದೊಂದು ವಿಸ್ಮಯ ಲೋಕ. ಪ್ರಾಚೀನ ಸಂಪ್ರದಾಯಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಇಲ್ಲಿ ಕೈಕೈ ಹಿಡಿದು ಸಾಗುತ್ತವೆ. ಜಪಾನ್‌ನ ಸಾಂಸ್ಕೃತಿಕ ಮತ್ತು ಆಹಾರ ವೈವಿಧ್ಯದ ರಾಜಧಾನಿ ಎಂಬ ಹೆಗ್ಗಳಿಕೆಗೆ ಒಸಾಕಾ ಪಾತ್ರವಾಗಿದೆ. ಜಪಾನ್‌ನಲ್ಲಿ ನೀವು ನೋಡಬೇಕಾದ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ತಿಳಿಯೋಣ.

Question Paper Leak: ಪಶ್ನೆ ಪತ್ರಿಕೆ ಸೋರಿಕೆಯಾದ್ರೆ ಜಿಲ್ಲಾಧಿಕಾರಿಗಳೇ ಹೊಣೆ: ಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ

ಪಶ್ನೆ ಪತ್ರಿಕೆ ಸೋರಿಕೆಯಾದ್ರೆ ಜಿಲ್ಲಾಧಿಕಾರಿಗಳೇ ಹೊಣೆ: ಸಿಎಂ ಎಚ್ಚರಿಕೆ

ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಶನಿವಾರ ನಡೆದ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ. ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪರೀಕ್ಷಾ ಅಕ್ರಮಗಳ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. .

Haveri Hostels: ಹಾವೇರಿ ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ಅವ್ಯವಸ್ಥೆ; ಸಿಬ್ಬಂದಿಗೆ ಅಡುಗೆಗಿಂತ ಅಧಿಕಾರಿಗಳ ಮನೆ ಕೆಲಸವೇ ಹೆಚ್ಚು!

ಹಾವೇರಿ ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ಅವ್ಯವಸ್ಥೆ; ಅಧಿಕಾರಿಗಳ ನಿರ್ಲಕ್ಷ್ಯ

ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಅಡುಗೆಯವರು ಹಾಗೂ ಅಡುಗೆ ಸಹಾಯಕರಿಗೆ ನಿಗದಿತ ಕರ್ತವ್ಯದ ಅವಧಿಗಿಂತ ಹೆಚ್ಚಿನ ಸಮಯ ಕೆಲಸ ಮಾಡಿಸಲಾಗುತ್ತಿದೆ ಎಂಬ ಆರೋಪವಿದೆ. ಈ ಆರೋಪಗಳ ಕುರಿತು ಸಂಬಂಧಿಸಿದ ಇಲಾಖೆಗಳು ಪಾರದರ್ಶಕ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿಜಯೇಂದ್ರ ಸಮರ್ಥನೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಸಮರ್ಥಿಸಿಕೊಂಡ ವಿಜಯೇಂದ್ರ!

Dharmendra Pradhan's resignation: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಅತ್ಯಂತ ದುರದೃಷ್ಟಕರ ಬೆಳವಣಿಗೆಗಳಾಗಿದ್ದು, ಧರ್ಮೇಂದ್ರ ಪ್ರಧಾನ್ ಅವರು ವಿದ್ಯಾರ್ಥಿಗಳ ಭಾವನೆಗಳಿಗೆ ಬೆಲೆ ಕೊಟ್ಟು, ಅವರ ಹೋರಾಟವನ್ನು ಗೌರವಿಸಿ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

Tiptur News: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ; ತಿಪಟೂರಿನಲ್ಲಿ ಎಬಿವಿಪಿ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

Tiptur News: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಸಂಘಟನೆಯ ನೇತೃತ್ವದಲ್ಲಿ ಶನಿವಾರ ತಿಪಟೂರು ನಗರದ ಐಬಿ ಸರ್ಕಲ್ ಬಳಿ ನೂರಾರು ವಿದ್ಯಾರ್ಥಿಗಳೊಂದಿಗೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ʼವಿಕಸಿತ್ ವೈಬ್ರಂಟ್‌ ವಿಲೇಜ್‌-2026ʼ; ಜು.26ರ ಸಂಜೆ 4.30ಕ್ಕೆ ಯುವ ಜನರೊಂದಿಗೆ ಪ್ರಧಾನಿ ಮೋದಿ ಸಂವಾದ

ಜು.26ಕ್ಕೆ ಯುವ ಜನರೊಂದಿಗೆ ಪ್ರಧಾನಿ ಮೋದಿ ಸಂವಾದ

ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಜು.26ರಂದು "ವಿಕಸಿತ್ ವೈಬ್ರಂಟ್‌ ವಿಲೇಜ್‌-2026" ವಿಶಿಷ್ಠ ಕಾರ್ಯಕ್ರಮ ಮುಖೇನ ಯುವಜನರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Nelamangala News: ಕರ್ತವ್ಯದ ವೇಳೆಯೇ ಪಿಡಿಒಗಳ ಎಣ್ಣೆ ಪಾರ್ಟಿ; ಕ್ಯಾಮೆರಾ ನೋಡ್ತಿದ್ದಂಗೆ ಕಾಲ್ಕಿತ್ತ ಅಧಿಕಾರಿಗಳು! Watch Video

ಕರ್ತವ್ಯದ ವೇಳೆಯೇ ಪಿಡಿಒಗಳ ಎಣ್ಣೆ ಪಾರ್ಟಿ; ವಿಡಿಯೊ ವೈರಲ್!

ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿಯ ಸಿದ್ದರಬೆಟ್ಟದಲ್ಲಿ ಅಧಿಕಾರಿಗಳು ಮೋಜು ಮಸ್ತಿಯಲ್ಲಿ ತೋಡಗಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಸ್ಥಳೀಯರು ವಿಡಿಯೊ ಮಾಡುತ್ತಿದ್ದಂತೆ ಸ್ಥಳದಿಂದ ಅಧಿಕಾರಿಗಳು ಪರಾರಿಯಾಗಿದ್ದಾರೆ. ಧಾರ್ಮಿಕ ಸ್ಥಳದಲ್ಲಿ ಅಧಿಕಾರಿಗಳು ಈ ರೀತಿಯ ವರ್ತನೆ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕ ಕಾರಣವಾಗಿದೆ.

ಮನೆ ಕಟ್ಟಲು 15 ಲಕ್ಷ ಸಾಲ; ಫೈನಾನ್ಸ್‌ನವರ ಕಾಟಕ್ಕೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಸಾಲಬಾಧೆಗೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಕೋಲಾರ ತಾಲೂಕು ಛತ್ರಕೋಡಿಹಳ್ಳಿಯಲ್ಲಿ ಘಟನೆ ನಡೆದಿದೆ. ಮನೆಯ ಮೇಲೆ 15 ಲಕ್ಷ ಸಾಲ ಮಾಡಿದ ಹಿನ್ನೆಲೆಯಲ್ಲಿ ಸಾಲಗಾರರ ಕಾಟಕ್ಕೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಸಿದ್ಧ ಮ್ಯಾಂಡೋಲಿನ್ ವಾದಕ ಎನ್.ಎಸ್. ಪ್ರಸಾದ್ ಹೃದಯಾಘಾತದಿಂದ ನಿಧನ

ಪ್ರಸಿದ್ಧ ಮ್ಯಾಂಡೋಲಿನ್ ವಾದಕ ಎನ್.ಎಸ್. ಪ್ರಸಾದ್ ಹೃದಯಾಘಾತದಿಂದ ನಿಧನ

ಪ್ರಸಿದ್ಧ ಮ್ಯಾಂಡೋಲಿನ್ ವಾದಕ ಎನ್‌. ಪ್ರಸಾದ್‌ (66) ಹೃದಯಾಘಾತದಿಂದ ಇಂದು ವಿಧಿವಶರಾದರು. ಇಂದು ಬೆಳಗ್ಗೆ 10.30 ರ ಸುಮಾರಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಮ್ಯಾಂಡೋಲಿನ್ ಪ್ರಸಾದ್ ಎಂದೇ ಪ್ರಸಿದ್ಧರಾಗಿದ್ದ ಅವರು ಕನ್ನಡ ಚಲನಚಿತ್ರ ರಂಗ ಹಾಗೂ ಸುಗಮ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

ಮಾಜಿ ಸಚಿವ ಸಿ.ವೀರಣ್ಣ ನಿಧನ; ಗಣ್ಯರಿಂದ ಸಂತಾಪ

ಮಾಜಿ ಸಚಿವ ಸಿ.ವೀರಣ್ಣ ನಿಧನ; ಗಣ್ಯರಿಂದ ಸಂತಾಪ

ಕರ್ನಾಟಕ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಹಾಗೂ ಮಾಜಿ ಉಪಸಭಾಪತಿ ಸಿ.ವೀರಣ್ಣ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಕೊರಟಗೆರೆ (Koratagere) ತಾಲೂಕಿನ ಬುಕ್ಕ ಪಟ್ಟಣದ ನಿವಾಸದಲ್ಲಿದ್ದರು.

ಕರಾವಳಿಯಲ್ಲಿ ಭಾರಿ ಮಳೆ; ಉಡುಪಿ, ದಕ್ಷಿಣ ಕನ್ನಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಕರಾವಳಿಯಲ್ಲಿ ಭಾರಿ ಮಳೆ; ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Weather Report: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. . ಕರಾವಳಿ ಹಾಗೂ ಮಲೆನಾಡಿನ ಪ್ರಮುಖ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.

Chikkaballapur News: ಶ್ರದ್ಧೆ ಮತ್ತು ಪರಿಶ್ರಮವೇ ವಿದ್ಯಾರ್ಥಿ ಜೀವನಕ್ಕೆ ಸೋಪಾನ, ಮೊಬೈಲ್, ಮಾದಕ ವ್ಯಸನದಿಂದ ದೂರವಿರಿ : ನಿವೃತ್ತ ಪ್ರಾಂಶುಪಾಲ ಬಿ.ವಿ.ಕೃಷ್ಣ

ಮೊಬೈಲ್, ಮಾದಕ ವ್ಯಸನದಿಂದ ದೂರವಿರಿ

ಇಂದಿನ ವಿದ್ಯಾರ್ಥಿಗಳು ಮೊಬೈಲ್ ಮತ್ತು ಮಾದಕ ವ್ಯಸನದಿಂದ ದೂರವಿರುವುದು ಅತ್ಯಗತ್ಯ. ಮೊಬೈಲ್ ಬಳಕೆ ಅಗತ್ಯಕ್ಕೆ ಸೀಮಿತವಾಗಿರಬೇಕು. ಅದು ಚಟವಾಗಿ ಬದಲಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಯಾವುದೇ ಶಿಕ್ಷಣದಲ್ಲೂ ಮನಸ್ಸಿಟ್ಟು ಅಭ್ಯಾಸ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯ. ವಿದ್ಯಾರ್ಥಿ ಜೀವನವೆಂಬ ಸುವರ್ಣಾವಕಾಶವನ್ನು ನಿರ್ಲಕ್ಷಿಸಿದರೆ ಭವಿಷ್ಯಕ್ಕೆ ತುಕ್ಕು ಹಿಡಿದಂತಾಗುತ್ತದೆ

Loading...