ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Chikkaballapur News: ಮೊಬೈಲ್ ಮೋಹಕ್ಕೆ ಒಳಗಾದವರಿಗೆ ಖಂಡಿತವಾಗಿ ಭವಿಷ್ಯವಿಲ್ಲ: ಪ್ರೊ.ಡಾ.ಶಂಕರ್ ಅಭಿಮತ

ಮೊಬೈಲ್ ಮೋಹಕ್ಕೆ ಒಳಗಾದವರಿಗೆ ಖಂಡಿತವಾಗಿ ಭವಿಷ್ಯವಿಲ್ಲ

ಪದವಿ ಶಿಕ್ಷಣ ಎಂಬುದು ಕೇವಲ ಡಿಗ್ರಿ ಮಾತ್ರವಲ್ಲ ಬದಲಿಗೆ ಬದುಕು ಕಟ್ಟಿಕೊಳ್ಳಲು ಇಡುವ ಮಹತ್ವದ ಹೆಜ್ಜೆಯಾಗಿದೆ. ಒಂದು ದಿನವೂ ಗೈರುಹಾಜರಾಗದೆ ತರಗತಿಗಳಿಗೆ ಬರಬೇಕು. ಮನವಿಟ್ಟು ಉಪನ್ಯಾಸ ಕೇಳಬೇಕು. ಯಾರೋ ಕೊಡುವ ನೋಟ್ಸ್ ಮೇಲೆ ಅವಲಂಬಿತ ರಾಗಬೇಡಿ.

ಕೆಐಎಡಿಬಿ ವಿರುದ್ಧ ರೈತರ ರಣಕಹಳೆ: ಜೂ.4ರಿಂದ ಬೀದಿಗಿಳಿಯಲಿರುವ ಅನ್ನದಾತರು!

ಜೂ.4ರಿಂದ ಬೀದಿಗಿಳಿಯಲಿರುವ ಅನ್ನದಾತರು!

ಜೂ.4ರಿಂದ ಪಂಜಿನ ಮೆರವಣಿಗೆ, ಜೂ.5 ರಿಂದ 13 ಹಳ್ಳಿಗಳ ರೈತ ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭವಾಗಲಿದೆ. ಈ ಹೋರಾಟಕ್ಕೆ ತಾಲ್ಲೂಕಿನ ಎಲ್ಲಾ ಪಕ್ಷಾತೀತ, ಜಾತೀತ, ದಲಿತ ಪರ ಹಾಗೂ ಕನ್ನಡ ಪರ ಸಂಘಟನೆಗಳು ಮತ್ತು ರೈತ ಬಾಂಧವರು ಬೆಂಬಲ ನೀಡಿ ಭಾಗವಹಿಸಬೇಕಾಗಿ ಕೋರಿದರು.

ಜೂ.4, 5 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾಕೂಟ

ಜೂ.4, 5 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾಕೂಟ

ಜೂ.4ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ. 08, 10, 12, 14, 16 ವಯೋಮಾನದ ಬಾಲಕ ಬಾಲಕಿಯರ ಕ್ರೀಡಾಕೂಟ ನಡೆಯುತ್ತಿದ್ದು, ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ಜೂ.4ರ ಬೆಳಿಗ್ಗೆ ೬ ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕಿದೆ.

World Milk Day: 1 ಲಕ್ಷ 50 ಸಾವಿರ ಲೀಟರ್ ಹಾಲು ಉತ್ಪಾದನೆಯ ಶ್ರೇಯ ಶ್ರಮಜೀವಿ ಮಹಿಳೆಯರಿಗೆ ಸಲ್ಲಬೇಕು : ಊಲವಾಡಿ ಅಶ್ವತ್ಥನಾರಾಯಣ

ಮಹಿಳೆಯರಿಗೆ ಹಾಲು ಉತ್ಪಾದನೆಯ ಶ್ರೇಯ ಸಲ್ಲಬೇಕು

ಆಸ್ಪತ್ರೆಯ ಒಳರೋಗಿಗಳಿಗೆ ಹಾಲು ವಿತರಿಸಿ ಮಾತನಾಡಿದ ಚಿಮುಲ್ ನಿರ್ದೇಶಕರಾದ ಊಲವಾಡಿ ಅಶ್ವಥನಾರಾಯಣಬಾಬು ಮಾತನಾಡಿ ಜೂನ್ ಒಂದನೇ ದಿನಾಂಕವನ್ನು ವಿಶ್ವ ಹಾಲು ದಿನವನ್ನಾಗಿ ಘೋಷಿಸಿರುವದರಿಂದ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮೊಟ್ಟ ಮೊದಲನೆಯದಾಗಿ ಇಂದು ವಿಶ್ವಹಾಲು ದಿನಾಚರಣೆಯನ್ನು ಸರ್ಕಾರಿ ಆಸ್ಪತ್ರೆ ಯಲ್ಲಿ ಬಡ ರೋಗಿಗಳಿಗೆ ಆಚರಣೆ ಮಾಡುತ್ತಿರುವುದಾಗಿ ಹೇಳಿದರು

Siddaramaiah: ಸಿದ್ದರಾಮಯ್ಯಗೆ ಎಐಸಿಸಿಯಲ್ಲಿ ಮಹತ್ವದ ಹುದ್ದೆ ನೀಡಿದ ಕಾಂಗ್ರೆಸ್ ಹೈಕಮಾಂಡ್

ಸಿದ್ದರಾಮಯ್ಯಗೆ ಎಐಸಿಸಿಯಲ್ಲಿ ಮಹತ್ವದ ಹುದ್ದೆ ನೀಡಿದ ಹೈಕಮಾಂಡ್

ನವದೆಹಲಿಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿದ್ದರಾಮಯ್ಯ ಅವರು ಮಂಗಳವಾರ ಭೇಟಿಯಾದ ಬಳಿಕ ಈ ತೀರ್ಮಾನ ಪ್ರಕಟವಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರಿಗೆ ಎಐಸಿಸಿಯಲ್ಲಿ ಸ್ಥಾನ ದೊರೆತಿದೆ.

Chinthamani News: ಜೂ.5 ರಂದು ರೈತ ಸಂಘದಿಂದ ವಿಧಾನ ಸೌಧ ಮುತ್ತಿಗೆ

ಜೂ.5 ರಂದು ರೈತ ಸಂಘದಿಂದ ವಿಧಾನ ಸೌಧ ಮುತ್ತಿಗೆ

ರೈತರಿಗೆ ಮಾರಕ ವಾದ ಭೂಸ್ವಾಧೀನ ಕಾಯ್ದೆಯನ್ನು ಕೇಂದ್ರ ಸರ್ಕಾರವು ವಾಪಸ್ ಪಡೆಯಿತು. ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೆ ತಂದಿದ್ದು ವಾಪಸ್ ಪಡೆಯಲಿಲ್ಲ.ಅಂದಿನ ವಿರೋಧಪಕ್ಷದಲ್ಲಿದ್ದ ಇಂದಿನ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಭರವಸೆ ನೀಡಿದ್ದರು

CM oath ceremony: ನಾಳೆ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ ಹಿನ್ನೆಲೆ ನೆಲಮಂಗಲದಲ್ಲಿ 10 ಲಕ್ಷ ಲಾಡು ತಯಾರಿ!

ಡಿಕೆಶಿ ಪ್ರಮಾಣ ವಚನ ಹಿನ್ನೆಲೆ ನೆಲಮಂಗಲದಲ್ಲಿ 10 ಲಕ್ಷ ಲಾಡು ತಯಾರಿ!

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವ ಸಂತಸದಲ್ಲಿ ತಾಲೂಕಿನ ಪ್ರತಿ ಮನೆಗೂ ಸಿಹಿ ಹಂಚಲು ಉದ್ದೇಶಿಸಲಾಗಿದೆ. ನೆಲಮಂಗಲದಲ್ಲಿ ಲಾಡುಗಳ ತಯಾರಿಕೆಯನ್ನು ಶಾಸಕ ಶ್ರೀನಿವಾಸ್ ಮಂಗಳವಾರ ಪರಿಶೀಲನೆ ನಡೆಸಿದರು. ಪ್ರತಿ ಮನೆಗೆ ಮುಕ್ಕಾಲು ಕೆಜಿ ಸಿಹಿ ಬಾಕ್ಸ್‌ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Eshwar Khandre: ಈಶ್ವರ ಖಂಡ್ರೆಗೆ ಉಪಮುಖ್ಯ ಮಂತ್ರಿ ಸ್ಥಾನ ನೀಡಬೇಕೆಂದು ವೀರಶೈವ ಮಹಾಸಭಾ ಮುಖಂಡರ ಆಗ್ರಹ

ಈಶ್ವರ ಖಂಡ್ರೆಗೆ ಡಿಸಿಎಂ ಸ್ಥಾನ ನೀಡಲು ಆಗ್ರಹ

ಬಿಜೆಪಿ ಸರ್ಕಾರದಲ್ಲಿ ನಮ್ಮ ಸಮುದಾಯವನ್ನು ಗೌರವದಿಂದ ನಡೆಸಿಕೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲೂ ಕೂಡ ಇದೇ ರೀತಿ ಈಶ್ವರ್ ಖಂಡ್ರೆ ಅವರನ್ನು ಉಪಮುಖ್ಯಮಂತ್ರಿ, ಉಳಿದ ನಾಲ್ಕು ಮಂದಿಗೆ ಸಚಿವ ಸ್ಥಾನ ನೀಡಬೇಕು ಆ ಮೂಲಕ ಅತ್ಯಂತ ಬಲಾಢ್ಯ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿದಂತಾಗುತ್ತದೆ

World Environment Day: ವಿಶ್ವ ಪರಿಸರ ದಿನದ ಅಂಗವಾಗಿ ಜಾಲಾರಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಈಶ ಸ್ವಯಂಸೇವಕರಿಂದ ಸ್ವಚ್ಛತಾ ಅಭಿಯಾನ

ದೇವಸ್ಥಾನದಲ್ಲಿ ಈಶ ಸ್ವಯಂಸೇವಕರಿಂದ ಸ್ವಚ್ಛತಾ ಅಭಿಯಾನ

ಬೆಟ್ಟದ ಮೇಲಿರುವ ದೇವಾಲಯದ ಆವರಣ, ಬೆಟ್ಟದ ತಪ್ಪಲು ಹಾಗೂ ದೇವಸ್ಥಾನಕ್ಕೆ ಹೋಗುವ ಹಾದಿಯನ್ನು ಒಳಗೊಂಡಿತ್ತು. ಒಟ್ಟು ಸುಮಾರು 95 ಸ್ವಯಂ ಸೇವಕರು ಇದರಲ್ಲಿ ಭಾಗವಹಿಸಿದ್ದು, ಈ ಪ್ರದೇಶದಿಂದ 40ಕ್ಕೂ ಹೆಚ್ಚು ಚೀಲಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು.

ಕರ್ನಾಟಕದಲ್ಲಿ ಹೊಸ ಯುವ ಯುಗ ಆರಂಭವಾಗಲಿದೆ: ಡಿ.ಕೆ. ಶಿವಕುಮಾರ್

ಕರ್ನಾಟಕದಲ್ಲಿ ಹೊಸ ಯುವ ಯುಗ ಆರಂಭವಾಗಲಿದೆ: ಡಿ.ಕೆ. ಶಿವಕುಮಾರ್

DK Shivakumar: ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ನಾನು ತುಂಬಾ ಬದ್ಧನಾಗಿದ್ದೇನೆ ಮತ್ತು ನಾನು ಬಹಳಷ್ಟು ಕಷ್ಟಪಟ್ಟು ಕೆಲಸ ಮಾಡಿ ಎಲ್ಲರ ಆಶೋತ್ತರಗಳನ್ನು ಈಡೇರಿಸುತ್ತೇನೆ. ದಾರಿ ಅಷ್ಟು ಸುಲಭವಾಗಿಲ್ಲ. ಆದರೂ ಇದನ್ನು ನಿರ್ವಹಿಸಬೇಕು. ನಾನು ನನ್ನ ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ, ಸಮರ್ಪಣಾಭಾವದಿಂದ ಮಾಡುತ್ತೇನೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಡಿಕೆಶಿ ಸಂಪುಟದಲ್ಲಿ ಪುಟ್ಟರಂಗಶೆಟ್ಟಿಗೆ ಮಂತ್ರಿಗಿರಿ ನೀಡಿ: ರಾಜ್ಯ ಉಪ್ಪಾರ ಸಂಘ ಒತ್ತಾಯ

ಸಿ. ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಿ: ಉಪ್ಪಾರ ಸಂಘ ಒತ್ತಾಯ

Chikkanayakanahalli News: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಡಿ.ಕೆ. ಶಿವಕುಮಾರ್‌ ಅವರ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ಉಪ್ಪಾರ ಸಂಘದ ಉಪಾಧ್ಯಕ್ಷ ಕಲ್ಲೇಶ್ ಒತ್ತಾಯಿಸಿದ್ದಾರೆ.

ನಾಳೆ ಸರ್ವ ಧರ್ಮ ಗುರುಗಳ ಸಮ್ಮುಖದಲ್ಲಿ ಸಿಎಂ ಆಗಿ ಡಿಕೆಶಿ ಪದಗ್ರಹಣ; ರೈತರಿಂದ ಹಿಡಿದು ಹೈಕಮಾಂಡ್‌ ನಾಯಕರವರೆಗೆ, ಆಹ್ವಾನಿತರ ಪಟ್ಟಿ ಇಲ್ಲಿದೆ

ನಾಳೆ ನೂತನ ಸಿಎಂ ಪದಗ್ರಹಣ; ವಿದ್ಯಾರ್ಥಿಗಳು, ರೈತರಿಗೂ ಡಿಕೆಶಿ ಆಹ್ವಾನ

CM oath-taking ceremony: ಡಿ.ಕೆ.ಶಿವಕುಮಾರ್‌ ಅವರು ನೂತನ ಸಿಎಂ ಆಗಿ ನಾಳೆ ಲೋಕಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾಳಿನ ಕಾರ್ಯಕ್ರಮಕ್ಕೆ ಸಾಮಾನ್ಯರಿಂದ ಹಿಡಿದು ಹೈಕಮಾಂಡ್‌ ಮಟ್ಟದ ನಾಯಕರವರೆಗೆ ಆಹ್ವಾನ ನೀಡಿರುವುದು ವಿಶೇಷವಾಗಿದೆ. ಯಾರೆಲ್ಲಾ ಭಾಗಿಯಾಗಲಿದ್ದಾರೆ ಎಂಬ ಪಟ್ಟಿ ಇಲ್ಲಿ ನೀಡಲಾಗಿದೆ.

Shidlaghatta News: ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ: ಪುಟ್ಟು ಅಂಜಿನಪ್ಪ

ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ

ಡಿ.ಕೆ. ಶಿವಕುಮಾರ್(D K Shivakumar) ಅವರ ಪ್ರಮಾಣವಚನ ರಾಜ್ಯದ ರಾಜಕೀಯ ಇತಿಹಾಸ ದಲ್ಲಿ ಮಹತ್ವದ ಘಟ್ಟವಾಗಿದೆ ಎಂದು ಹೇಳಿದರು. ಸಾಮಾನ್ಯ ಕಾರ್ಯಕರ್ತರಾಗಿ ರಾಜಕೀಯ ಜೀವನ ಆರಂಭಿಸಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಮ್ಮೆಯ ವಿಷಯವಾಗಿದೆ

Chikkaballapu News: ಮಲಿನವಾದ ಮನಸ್ಸಿನಲ್ಲಿ ಶುದ್ಧ ಚೈತನ್ಯರೂಪದ ಆತ್ಮದರ್ಶನ ಸಾಧ್ಯವಿಲ್ಲ : ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್

ಮಲಿನ ಮನಸ್ಸಿನಲ್ಲಿ ಶುದ್ಧ ಚೈತನ್ಯರೂಪದ ಆತ್ಮದರ್ಶನ ಸಾಧ್ಯವಿಲ್ಲ

ತನ್ನನ್ನು ತಾನು ಅರಿಯಬೇಕು ಎಂದು ಎಲ್ಲಾ ಸಂತರು ಉಪದೇಶ ಮಾಡಿದ್ದಾರೆ. ತನ್ನನ್ನು ತಾನು ಅರಿಯುವುದೇ ಮೋಕ್ಷ. ದುರ್ಗುಣಗಳನ್ನು ಒಳಗೊಂಡಿರುವ ಮನಸ್ಸು ಈ ಸಾಧನೆ ಮಾಡಲು ಬಿಡುವುದಿಲ್ಲ. ಮನಸ್ಸು ಕನ್ನಡಿಯ ಹಾಗೆ. ಧೂಳು ಮುಚ್ಚಿದ ಕನ್ನಡಿಯಲ್ಲಿ ಪ್ರತಿಬಿಂಬವೂ ಮಲಿನವಾಗಿ ಕಾಣುವಂತೆ, ದುರ್ಗುಣಗಳಿಂದ ಕೂಡಿ, ಮಲಿನವಾದ ಮನಸ್ಸಿ ನಲ್ಲಿ ಶುದ್ಧ ಚೈತನ್ಯರೂಪದ ಆತ್ಮದರ್ಶನ ಸಾಧ್ಯವಿಲ್ಲ

Karnataka's New Cabinet: ದೆಹಲಿಯಲ್ಲಿ ರಾಹುಲ್‌ ಗಾಂಧಿ ಜತೆ ಡಿಕೆಶಿ, ಸಿದ್ದರಾಮಯ್ಯ ಮಹತ್ವದ ಸಭೆ; ಸಚಿವರ ಪಟ್ಟಿ ಫೈನಲ್‌, ಯಾರಿಗೆಲ್ಲಾ ಸ್ಥಾನ?

ಡಿ.ಕೆ.ಶಿವಕುಮಾರ್‌ ನೇತೃತ್ವದ ಸಂಪುಟ ಫೈನಲ್‌, ಯಾರಿಗೆಲ್ಲಾ ಸ್ಥಾನ?

ನಾಳೆ ಸಂಜೆ 4 ಗಂಟೆಗೆ ಬೆಂಗಳೂರಿನ ಲೋಕ ಭವನದಲ್ಲಿ ನೂತನ ಸಿಎಂ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಇಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಬೃಹತ್‌ ಬ್ಯಾನರ್‌, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಜೊತೆ ಶ್ರೀರಾಮ್ ಫೈನಾನ್ಸ್ ಮೈತ್ರಿ!

ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಜೊತೆ ಶ್ರೀರಾಮ್ ಫೈನಾನ್ಸ್ ಮೈತ್ರಿ!

ಶ್ರೀರಾಮ್ ಗ್ರೂಪ್‌ನ ಪ್ರಮುಖ ಸಂಸ್ಥೆ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ (SFL), ಭಾರತದ ತಳಮಟ್ಟದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಉದ್ದೇಶ ದೊಂದಿಗೆ ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ (PSB) ಜೊತೆ ಪ್ರಸ್ತುತ ಪ್ರಾಯೋಜಕ ರಾಗಿ ಕಾರ್ಯತಂತ್ರದ ಮೈತ್ರಿಯನ್ನು ಘೋಷಿಸಿದೆ.

Bengaluru traffic restrictions: ನೂತನ ಸಿಎಂ ಪ್ರಮಾಣ ವಚನ; ನಾಳೆ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ನಾಳೆ ಬೆಂಗಳೂರಿನ ಈ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಬುಧವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಕಬ್ಬನ್‌ಪಾರ್ಕ್‌ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಲೋಕಭವನದ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭವನ್ನು ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ.

Belagavi News: ಬೆಳಗಾವಿಯಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ 13 ಆರೋಪಿಗಳು ಅರೆಸ್ಟ್‌

ಬೆಳಗಾವಿಯಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ 13 ಆರೋಪಿಗಳು ಅರೆಸ್ಟ್‌

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದ್ದ ಕೊಲೆ ಕೇಸ್‌ನ ತನಿಖೆ ನಡೆಸುತ್ತಿದ್ದ ವೇಳೆ ಪೊಲೀಸರಿಗೆ ಕಂಟ್ರಿ ಪಿಸ್ತೂಲ್‌ನಿಂದ ಹತ್ಯೆ ಮಾಡಿರುವುದು ಗೊತ್ತಾಗಿತ್ತು. ಬಳಿಕ ಕಂಟ್ರಿ ಪಿಸ್ತೂಲ್ ಮೂಲ ಬೆನ್ನುಬಿದ್ದ ಪೊಲೀಸರು, ಪಿಸ್ತೂಲ್ ತಯಾರಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Ex MLC Kidnap: ಆನೇಕಲ್‌ನಲ್ಲಿ ಮಾಜಿ ಎಂಎಲ್‌ಸಿ ಕಿಡ್ನ್ಯಾಪ್; ಗನ್ ತೋರಿಸಿ 3 ಕೋಟಿಗೆ ಬೇಡಿಕೆ!

ಆನೇಕಲ್‌ನಲ್ಲಿ ಮಾಜಿ ಎಂಎಲ್‌ಸಿ ಕಿಡ್ನ್ಯಾಪ್; 3 ಕೋಟಿಗೆ ಬೇಡಿಕೆ!

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹಿಲಲಿಯಲ್ಲಿರುವ ಗೋಲ್ಡ್ ಕಾಯಿನ್ ಕ್ಲಬ್‌ನಿಂದ ಮನೆಗೆ, ಕಾರಿನಲ್ಲಿ ಹೊರಟಿದ್ದ ಮಾಜಿ ಎಂಎಲ್‌ಸಿ ದಯಾನಂದ ರೆಡ್ಡಿ ಅವರನ್ನು ಕಿಡ್ನ್ಯಾಪ್‌ ಮಾಡಲಾಗಿದೆ. ದುಷ್ಕರ್ಮಿಗಳು ಗನ್‌ ತೋರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

Medical Negligency: ತಾಲೂಕು ಆಸ್ಪತ್ರೆಯಲ್ಲಿ ಒಂದೇ ಸಿರೆಂಜಿನಲ್ಲಿ ಹಲವಾರು ಜನರಿಗೆ ಚುಚ್ಚುಮದ್ದು : ವೈದ್ಯಕೀಯ ಲೋಪ ಎಸಗಿದ ಸಿಬ್ಬಂದಿ !

ವೈದ್ಯಕೀಯ ಲೋಪ ಎಸಗಿದ ಸಿಬ್ಬಂದಿ !

ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಾರ, ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕ ಮತ್ತು ಹೊಸ ಸಿರಿಂಜ್ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂಬ ಕಾನೂನು ಇದೆ ಆದರೆ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಮಲ್ಲಿಕಾರ್ಜುನ ಎಂಬ ಯುವಕ ಸಣ್ಣಪುಟ್ಟ ಗಾಯಗಳಾ ಗಿದ್ದು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಹೋಗಿದ್ದಾನೆ ಈ ವೇಳೆ ಕರ್ತವ್ಯದಲ್ಲಿದ್ದ ಸ್ಟಾಪ್ ನರ್ಸ್ ಕೇವಲ ಸೂಜಿ ಬದಲಿಸಿ ಹಳೆಯ ಸಿರೇಂಜ್ ಬಳಸಿ ಚುಚ್ಚುಮದ್ದು ನೀಡಿದ್ದಾನೆ.

Karnataka cabinet: ಹಾವೇರಿ ಜಿಲ್ಲೆಯ ಕೈ ಶಾಸಕರಲ್ಲಿ ಸಚಿವ ಸ್ಥಾನಕ್ಕೆ ಪೈಪೋಟಿ; ಸಂಪುಟ ಸೇರಲು ನಾನಾ ಕಸರತ್ತು

ಹಾವೇರಿ ಜಿಲ್ಲೆಯ ಕೈ ಶಾಸಕರಲ್ಲಿ ಸಚಿವ ಸ್ಥಾನಕ್ಕೆ ಪೈಪೋಟಿ

Haveri Congress: ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಘೋಷಿಸಿಕೊಂಡಿದ್ದ ಕಾಂಗ್ರೆಸ್ ಶಾಸಕರ ನಡುವೆಯೇ ಈಗ ಸಚಿವ ಸ್ಥಾನಕ್ಕಾಗಿ ಜಟಾಪಟಿ ಶುರುವಾಗಿದೆ. ಈ ಬಾರಿ ನಮ್ಮ ಜಿಲ್ಲೆಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಶಾಸಕರು ಹೈ ಕಮಾಂಡ್‌ಗೆ ದುಂಬಾಲು ಬಿದ್ದಿದ್ದಾರೆ.

ಮೇಲ್ನೋಟಕ್ಕೆ ಪುಸ್ತಕ ಮಾರಾಟ; ಹಿಂಬಾಗಿಲಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿ: ಬೆಳಗಾವಿ, ಉತ್ತರ ಕನ್ನಡದ 13 ಶಂಕಿತರ ಬಂಧನ

ಅಕ್ರಮ ಶಸ್ತ್ರಾಸ್ತ್ರ ತಯಾರಿ: 13 ಮಂದಿಯ ಬಂಧನ

ಅಕ್ರಮ ಶಸ್ತ್ರಾಸ್ತ್ರ ತಯಾರಿಸುತ್ತಿದ್ದ ಆರೋಪದಲ್ಲಿ ಕರ್ನಾಟಕ ಪೊಲೀಸರು ಪುಸ್ತಕ ಮಾರಾಟಗಾರನೊಬ್ಬ ಸೇರಿದಂತೆ ಒಟ್ಟು 13 ಶಂಕಿತರನ್ನು ಬಂಧಿಸಿದ್ದಾರೆ. ಈ ಮೂಲಕ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಂದೂಕು ಸರಬರಾಜು ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಇವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರಿನ ವಿದ್ಯಾರ್ಥಿನಿಗೆ  ಫೋರ್ಬ್ಸ್ 30ರ ಪಟ್ಟಿಯಲ್ಲಿ ಸ್ಥಾನ

ಫೋರ್ಬ್ಸ್ 30ರಲ್ಲಿ ಬೆಂಗಳೂರಿನ ವಿದ್ಯಾರ್ಥಿನಿ

30 ವರ್ಷದೊಳಗಿನ ಏಷ್ಯಾ ಫೋರ್ಬ್ಸ್ 30ರ 2025 ಪಟ್ಟಿಯಲ್ಲಿ ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬಳು ಸ್ಥಾನ ಪಡೆದಿದ್ದಾಳೆ. ಸಾಮಾಜಿಕ ಪರಿಣಾಮ ವಿಭಾಗದಲ್ಲಿ ಈ ಸಾಧನೆ ಮಾಡಿರುವುದು 17 ವರ್ಷದ ದಿವಾ ಉತ್ಕರ್ಷ. ಇವರು ಬಸವೇಶ್ವರ ನಗರದ ನ್ಯಾಷನಲ್ ಅಕಾಡೆಮಿ ಫಾರ್ ಲರ್ನಿಂಗ್‌ನಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಅಮೆರಿಕದಲ್ಲಿ ಕೈಗಾರಿಕಾ ಎಂಜಿನಿಯರಿಂಗ್ ಅಧ್ಯಯನ ಮಾಡುವ ಯೋಜನೆ ಮಾಡಿಕೊಂಡಿದ್ದಾರೆ. ಇವರು ಮಾಡಿರುವ ಸಾಧನೆ ವಿವರ ಇಲ್ಲಿದೆ.

ಮದುವೆಯಾಗುವುದಾಗಿ ನಂಬಿಸಿ  ಮಹಿಳೆಗೆ ಆನ್‌ಲೈನ್ ನಲ್ಲಿ 23 ಲಕ್ಷ ರೂ  ವಂಚನೆ

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ಆನ್‌ಲೈನ್‌ನಲ್ಲಿ ಲಕ್ಷ ರೂ ವಂಚನೆ

ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ, ತಮಗೆ ಆನ್ ಲೈನ್‌ನಲ್ಲಿ 23 ಲಕ್ಷ ವಂಚನೆ ಮಾಡಿರುವುದಾಗಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಮಹಿಳೆ ವೈವಾಹಿಕ ವೇದಿಕೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಇದರಿಂದ ಸ್ಕಾಟ್ಲೆಂಡ್ ನಲ್ಲಿ ಕೆಲಸ ಮಾಡುತ್ತಿರುವ ಡಾ. ವಿಹಾನ್ ಮಿಶ್ರಾ ಹೆಸರಿನ ವ್ಯಕ್ತಿ ಸಂಪರ್ಕಿಸಿದ್ದಾರೆ.

Loading...