ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Bantwal News: ಬಂಟ್ವಾಳದಲ್ಲಿ ಶಾಲಾ ಬಸ್‌ ಮೇಲೆ ಮರ ಬಿದ್ದು ಬಾಲಕಿ ಸಾವು, ನಾಲ್ವರು ಮಕ್ಕಳಿಗೆ ಗಂಭೀರ ಗಾಯ

ಬಂಟ್ವಾಳದಲ್ಲಿ ಶಾಲಾ ಬಸ್‌ ಮೇಲೆ ಮರ ಬಿದ್ದು ಬಾಲಕಿ ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬರಿಮಾರು ಸಮೀಪ ಕಲ್ಲೆಟ್ಟಿ ಘಟನೆ ನಡೆದಿದೆ. ಸಂಜೆ ಮಕ್ಕಳನ್ನು ಬಿಡಲು ಹೋಗುತ್ತಿದ್ದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಂಗ್ಲ ಮಾಧ್ಯಮ ವಿಭಾಗದ ಬಸ್‌ ಮೇಲೆ ಮರ ಉರುಳಿ ಬಿದ್ದು ಬಾಲಕಿ ಮೃತಪಟ್ಟಿದ್ದು, ನಾಲ್ವರು ಮೃತಪಟ್ಟಿದ್ದಾರೆ.

Cauvery Water Dispute: ಕರ್ನಾಟಕಕ್ಕೆ ತಾತ್ಕಾಲಿಕ ರಿಲೀಫ್; ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಯಥಾಸ್ಥಿತಿಗೆ CWMA ಸೂಚನೆ

ತಮಿಳುನಾಡಿಗೆ ಸದ್ಯಕ್ಕಿಲ್ಲ ಕಾವೇರಿ ನೀರು; ಯಥಾಸ್ಥಿತಿಗೆ CWMA ಸೂಚನೆ

ಮಳೆ ಕೊರತೆಯಿಂದ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ನೀರಿನ ಸಂಗ್ರಹ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಪ್ರಸ್ತುತ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಅಗತ್ಯಗಳಿಗೆ ಮಾತ್ರ ಬಳಸಲಾಗುತ್ತಿದ್ದು, ರೈತರ ಕೃಷಿ ಚಟುವಟಿಕೆಗೆ ನೀರು ಹರಿಸಲೂ ಸಾಧ್ಯವಾಗಿಲ್ಲ ಎಂದು ಕರ್ನಾಟಕದ ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ. ಹೀಗಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ.

NEET exam question paper leak scandal: ನೀಟ್ ಹಗರಣಕ್ಕೆ ಕಾಂಗ್ರೆಸ್ ಆಕ್ರೋಶ: ವಿದ್ಯಾರ್ಥಿಗಳ ಭವಿಷ್ಯ ರಕ್ಷಣೆಗೆ ಹೋರಾಟ ಮುಂದುವರಿಕೆ

722 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಬದ್ಧ

"ವಿದ್ಯಾರ್ಥಿಗಳ ಭವಿಷ್ಯವೇ ದೇಶದ ಭವಿಷ್ಯ. ಗುಣಮಟ್ಟದ ಶಿಕ್ಷಣದ ಜೊತೆಗೆ ಉದ್ಯೋಗ ನೀಡುವುದು ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲೇ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಎಸ್‌ಸಿ/ಎಸ್‌ಟಿ ಬ್ಯಾಕ್ಲಾಗ್ ಹುದ್ದೆಗಳನ್ನೂ ಶೀಘ್ರವೇ ಭರ್ತಿ ಮಾಡಲಾಗುವುದು"

"ರೈತರ ನೆರವಿಗೆ ಬೆಳೆ ವಿಮೆ ಕಡ್ಡಾಯ; ನಿರ್ಲಕ್ಷ್ಯ ಸಹಿಸುವುದಿಲ್ಲ": ಬರ ನಿರ್ವಹಣೆ ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿಎಂ ಡಾ.ಜಿ. ಪರಮೇಶ್ವರ್ ಖಡಕ್ ಎಚ್ಚರಿಕೆ

"ರೈತರ ನೆರವಿಗೆ ಬೆಳೆ ವಿಮೆ ಕಡ್ಡಾಯ; ನಿರ್ಲಕ್ಷ್ಯ ಸಹಿಸುವುದಿಲ್ಲ"

ರಾಜ್ಯದಲ್ಲಿ ಕಳೆದ 150 ವರ್ಷಗಳಲ್ಲೇ ಕಂಡು ಕೇಳರಿಯದ ಬರದ ಪರಿಸ್ಥಿತಿ  ಎದುರಾಗಿದ್ದು, ವಾಡಿಕೆ ಯಷ್ಟು ಮಳೆಯಾಗದ ಕಾರಣ ಬಿತ್ತನೆ ಕುಂಠಿತವಾಗಿದೆ. ಇಂತಹ ಸಂದರ್ಭದಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ಎಲ್ಲ ಇಲಾಖೆ ಅಧಿಕಾರಿ ಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಜನರಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಶಾಸಕ ಕೆ.ಎನ್. ರಾಜಣ್ಣ ಸೂಚನೆ

ನಿರಂತರ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ: ಕೆ.ಎನ್. ರಾಜಣ್ಣ

Madhugiri News: ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಸರಬರಾಜು ಮಾಡಿ ಸಾರ್ವಜನಿಕರಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವರೂ ಹಾಗೂ ಶಾಸಕ ಕೆ.ಎನ್. ರಾಜಣ್ಣ ಸೂಚನೆ ನೀಡಿದ್ದಾರೆ.

Gubbi News: ರಸ್ತೆ ವಿವಾದಕ್ಕೆ ತೆರೆ: ತಹಶೀಲ್ದಾರ್ ಭೇಟಿ; ಜಮೀನುಗಳಿಗೆ ರಸ್ತೆ ಸುಗಮ

ರಸ್ತೆ ವಿವಾದಕ್ಕೆ ತೆರೆ: ತಹಶೀಲ್ದಾರ್ ಭೇಟಿ; ಜಮೀನುಗಳಿಗೆ ರಸ್ತೆ ಸುಗಮ

ದಲಿತ ಸಮುದಾಯ ದವರಾದ ಮಂಜುಳಾ, ನರಸಿಂಹಯ್ಯ, ವೆಂಕಟೇಶ್ ಎಂಬುವವರ ಜಮೀನಿಗೆ ದಾರಿ ಬಿಡಲು ತೊಗರಿಘಟ್ಟ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿಯವರು ಅಡ್ಡಿಪಡಿಸು ತ್ತಿದ್ದರು. ಇಂದು ತಹಶೀಲ್ದಾರ್ ರವರ ಸಮ್ಮುಖದಲ್ಲಿ ಗ್ರಾಮಸ್ಥರನ್ನು ಮನವೊಲಿಸಿ ನ್ಯಾಯ ದೊರಕಿಸಿಕೊಡಲಾಗಿದೆ

ಬೆಳಗಾವಿಯಲ್ಲಿ ಹೀನ ಕೃತ್ಯ; ಕೋಚಿಂಗ್ ಸೆಂಟರ್‌ನಲ್ಲಿ ಬಾಲಕಿಯರ ಮೇಲೆ ಶಿಕ್ಷಕನಿಂದಲೇ ಲೈಂಗಿಕ ದೌರ್ಜನ್ಯ!

ಕೋಚಿಂಗ್ ಸೆಂಟರ್‌ನಲ್ಲಿ ಬಾಲಕಿಯರ ಮೇಲೆ ಶಿಕ್ಷಕನಿಂದಲೇ ಲೈಂಗಿಕ ದೌರ್ಜನ್ಯ!

Belagavi News: ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಕೋಚಿಂಗ್ ಸೆಂಟರ್‌ನಲ್ಲಿ ಘಟನೆ ನಡೆದಿದೆ. ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಶಿಕ್ಷಕನೇ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಈ ಕೃತ್ಯ ಖಂಡಿಸಿ ಬಾಲಕಿಯರ ಪೋಷಕರು ಹಾಗೂ ಸ್ಥಳೀಯರು ಉಗ್ರ ಪ್ರತಿಭಟನೆ ನಡೆಸಿದ್ದಾರೆ.

Muddenahalli News: ದೇಶದ ಎಲ್ಲ ರಾಜ್ಯಗಳಿಗೂ ವಿದ್ಯಾರ್ಥಿ ನಿಧಿ ವಿಸ್ತರಣೆಗೆ ಚಿಂತನೆ

ದೇಶದ ಎಲ್ಲ ರಾಜ್ಯಗಳಿಗೂ ವಿದ್ಯಾರ್ಥಿ ನಿಧಿ ವಿಸ್ತರಣೆಗೆ ಚಿಂತನೆ

ಭಾರತ ರಾಷ್ಟ್ರ ನಿರ್ಮಾಣ ವಿದ್ಯಾರ್ಥಿ ನಿಧಿ ಸಮಾವೇಶದ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಅವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಾವಿರಾರು ಮಕ್ಕಳು ಇನ್ನೂ ಈ ಯೋಜನೆಯ ನಿರೀಕ್ಷೆಯಲ್ಲಿದ್ದು, ಅವರಿಗೆ ಶಿಕ್ಷಣದ ನೆರವು ತಲುಪಿಸುವ ಉದ್ದೇಶದಿಂದ ಯೋಜನೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ

Tourism Minister K.J. George: 'ಮಯೂರ ಸನ್‌ರೈಸ್' ರೆಸ್ಟೋರೆಂಟ್ ಲೋಕಾರ್ಪಣೆಗೊಳಿಸಿದ ನಂತರ ಸಚಿವ ಕೆ.ಜೆ. ಜಾರ್ಜ್ ಭರವಸೆ

ನಂದಿಬೆಟ್ಟಕ್ಕೆ ಹೊಸ ಗರಿ; ರೋಪ್‌ವೇಗೆ ವೇಗ ನೀಡಲು ಸರ್ಕಾರದ ಸಂಕಲ್ಪ

ಕರ್ನಾಟಕದ ಪ್ರವಾಸೋದ್ಯಮವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಗುಣಮಟ್ಟದ ಸೇವೆ, ಸ್ವಚ್ಛತೆ ಹಾಗೂ ಆಧುನಿಕ ಸೌಲಭ್ಯಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಕೆಎಸ್‌ಟಿಡಿಸಿ 1971ರಿಂದ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದು, ಇಂದು ದೇಶ-ವಿದೇಶಗಳ ಪ್ರವಾಸಿಗ ರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮಳೆ ಇಲ್ಲದೆ ಬಿತ್ತನೆ ಸ್ಥಗಿತ; ಗಿಡ್ನಹಳ್ಳಿಯಲ್ಲಿ ರೈತರೊಂದಿಗೆ ಡಿಸಿಎಂ ಪರಮೇಶ್ವರ್ ಸಂವಾದ

ಬೆಳೆ ವಿಮೆ ಕಡ್ಡಾಯವಾಗಿ ಮಾಡಿಸಿಕೊಳ್ಳಿ; ಅಧಿಕಾರಿಗಳಿಗೆ ನೋಂದಣಿ ಸೂಚನೆ

ರಾಗಿ ಬಿತ್ತನೆಗಾಗಿ ಜಮೀನನ್ನು ಉಳುಮೆ ಮಾಡಿ ಸಿದ್ಧಪಡಿಸಿದ್ದರೂ ಸಮರ್ಪಕ ಮಳೆಯಾಗದ ಕಾರಣ ಬಿತ್ತನೆ ಸಾಧ್ಯವಾಗಿಲ್ಲ ಎಂದು ರೈತರು ಡಿಸಿಎಂ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ. ಪರಮೇಶ್ವರ್, ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಸ್ಥಳದಲ್ಲಿದ್ದ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚಿಸಿದರು.

‌Sowjanya case: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

‌ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

ಸೌಜನ್ಯ ತಾಯಿ ಕುಸುಮಾವತಿ ಗೌಡ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದ ಕರ್ತವ್ಯ ಲೋಪ ಹಾಗೂ ತನಿಖಾ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿದೆ. ರಾಜ್ಯ ಪೊಲೀಸರು ಸಲ್ಲಿಸಿದ್ದ ವರದಿಯನ್ನೇ ಸಿಬಿಐ ಭಾಷಾಂತರಿಸಿ ಕೋರ್ಟ್‌ಗೆ ಸಲ್ಲಿಸಿದೆಯೇ ವಿನಃ ಆಳವಾದ ತನಿಖೆ ನಡೆಸಿಲ್ಲ ಎಂದು ಕಿಡಿಕಾರಿದೆ.

ನವಜಾತ ಶಿಶುವಿಗೆ ಮರುಜೀವ; ತುಮಕೂರಿನ ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ವೈದ್ಯರ ಸಾಧನೆ

ನವಜಾತ ಶಿಶುವಿಗೆ ಮರುಜೀವ ನೀಡಿದ ಸಿದ್ದಾರ್ಥ ಆಸ್ಪತ್ರೆ ವೈದ್ಯರು

Tumkur News: ನವಜಾತ ಶಿಶುಗಳಲ್ಲಿ ಎದುರಾಗುವ ಕರುಳಿನ ಅಡಚಣೆಯಂತಹ ಅತ್ಯಂತ ಅಪರೂಪದ ಹಾಗೂ ಮಾರಣಾಂತಿಕ ಕಾಯಿಲೆಯನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ತುರ್ತು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ತುಮಕೂರು ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ವೈದ್ಯರ ತಂಡವು ಮಗುವಿಗೆ ಮರುಜೀವ ನೀಡಿದೆ.

ಹಾವೇರಿಯಲ್ಲಿ ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ; ಮೃತರ ಕುಟುಂಬಕ್ಕೆ 50 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ನೀಡಲು ರೈತ ಸಂಘ ಆಗ್ರಹ

ಹಾವೇರಿಯಲ್ಲಿ ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Haveri News: ಬೆಳೆ ವೈಫಲ್ಯ ಮತ್ತು ಸಾಲ ಬಾಧೆಯಿಂದ ಮನನೊಂದು ರೈತರೊಬ್ಬರು ತಮ್ಮ ಹೊಲದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಜರುಗಿದೆ. ಮೃತ ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.

Vijayalakshmi Darshan: ದರ್ಶನ್ ಪತ್ನಿಗೆ ಅಶ್ಲೀಲ ಕಾಮೆಂಟ್ ಪ್ರಕರಣ; 4ನೇ ಆರೋಪಿಗೆ ಜಾಮೀನು ಮಂಜೂರು

ದರ್ಶನ್ ಪತ್ನಿಗೆ ಅಶ್ಲೀಲ ಕಾಮೆಂಟ್; 4ನೇ ಆರೋಪಿಗೆ ಜಾಮೀನು ಮಂಜೂರು

'ಡೆವಿಲ್' ಸಿನಿಮಾ ಪ್ರಚಾರದ ವೇಳೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್ ಮಾಡಿ, ಟ್ರೋಲ್‌ ಮಾಡಲಾಗಿತ್ತು. ಈ ಕುರಿತು ವಿಜಯಲಕ್ಷ್ಮಿ ಅವರು ದೂರು ನೀಡಿದ ಬಳಿಕ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ನಾಲ್ಕನೇ ಆರೋಪಿಗೆ ಜಾಮೀನು ಮಂಜೂರು ಆಗಿದೆ.

ಶಾಸಕರ ಮೇಲೆ ಮೊಟ್ಟೆ ಎಸೆತ; ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರು

ಮೊಟ್ಟೆ ಎಸೆತ; ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬಿಜೆಪಿಯಿಂದ ದೂರು

ಹಿಂಸೆಗೆ ಪ್ರಚೋದನೆ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕವನ್ನು ಗೂಂಡಾ‌ ರಾಜ್ಯದತ್ತ ತಳ್ಳುವ ಪ್ರಯತ್ನವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಸದ್ಯದಲ್ಲೇ ಗೂಂಡಾ ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯದ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.

ಚೆನ್ನಮ್ಮ ಸಮಾಧಿಗೆ ಹಾಲು-ತುಪ್ಪ ಸಮರ್ಪಿಸಿದ ದೇವೇಗೌಡರ ಕುಟುಂಬ

ಚೆನ್ನಮ್ಮ ಸಮಾಧಿಗೆ ಹಾಲು-ತುಪ್ಪ ಸಮರ್ಪಿಸಿದ ದೇವೇಗೌಡರ ಕುಟುಂಬ

ಜುಲೈ 18ರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಚನ್ನಮ ಅವರ ಪಾರ್ಥಿವ ಶರೀರವನ್ನು ಸೋಮವಾರ ಮಾವಿಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿತ್ತು. ಇಂದು ಸಮಾಧಿಗೆ ಹಾಲು-ತುಪ್ಪ ಸಮರ್ಪಣೆ ಮಾಡಲಾಗಿದೆ.

BJP Protest: ಕೆಪಿಸಿಸಿ ಕಚೇರಿಗೆ ಮುತ್ತಿಗೆ; ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದ ಕಾಂಗ್ರೆಸ್‌ ಕಾರ್ಯಕರ್ತರು

ಬಿಜೆಪಿ ಶಾಸಕ ಬಿ.ಪಿ. ಹರೀಶ್‌ಗೆ ಮೊಟ್ಟೆ ಎಸೆದ ಕಾಂಗ್ರೆಸ್‌ ಕಾರ್ಯಕರ್ತರು

Egg thrown: ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿ ಘಟನೆ ನಡೆದಿದೆ. ಶಾಸಕ ಹರೀಶ್‌ ಅವರು ಕಾರಿನಿಂದ ಇಳಿದ ಕೂಡಲೇ ಅಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ. ಈ ವೇಳೆ ಅವರ ತಲೆಗೆ ಮೊಟ್ಟೆ ಬಿದ್ದಿದೆ. ಕೂಡಲೇ ಅಲ್ಲಿದ್ದ ಪೊಲೀಸರು ಬಿಪಿ ಹರೀಶ್‌ ಅವರನ್ನು ರಕ್ಷಿಸಿದ್ದಾರೆ. ಘಟನೆಗೆ ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.

ಚೆನ್ನಮ್ಮನವರ ಸಮಾಧಿಗೆ ಹಾಲು- ತುಪ್ಪ ಸಮರ್ಪಣೆ; ದೇವೇಗೌಡ, ಕುಮಾರಸ್ವಾಮಿ ಸೇರಿ ಕುಟುಂಬಸ್ಥರು ಭಾಗಿ

ಚೆನ್ನಮ್ಮನವರ ಸಮಾಧಿಗೆ ಹಾಲು- ತುಪ್ಪ ಸಮರ್ಪಣೆ

ಮೊನ್ನೆ ನಿಧನರಾದ ಚೆನ್ನಮ್ಮ ಅವರ ಸಮಾಧಿಗೆ ಇಂದು ಕುಟುಂಬ ಸದಸ್ಯರು ಭೇಟಿ ನೀಡಿ ಹಾಲು ತುಪ್ಪ ಸಮರ್ಪಣೆ ಮಾಡಿದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ತುಮಕೂರು – ಬೆಂಗಳೂರು ಹೈವೇಯಲ್ಲಿ ಕೆಮಿಕಲ್ ತುಂಬಿದ್ದ ಲಾರಿ ಪಲ್ಟಿ; ಕ್ಲೋರೈಡ್ ಸೋರಿಕೆ

ಹೈವೇಯಲ್ಲಿ ಕೆಮಿಕಲ್ ತುಂಬಿದ್ದ ಲಾರಿ ಪಲ್ಟಿ; ಕ್ಲೋರೈಡ್ ಸೋರಿಕೆ

ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಲುವನಹಳ್ಳಿ ಗ್ರಾಮದ ಬಳಿ ಕ್ಲೋರೈಡ್ ಕೆಮಿಕಲ್ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಕೆಮಿಕಲ್ ಸೋರಿಕೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಅಪಘಾತದಿಂದ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಕಿಲೋಮೀಟರ್‌ವರೆಗೆ ವಾಹನ ಸಂಚಾರ ದಟ್ಟಣೆ ಉಂಟಾಗಿದೆ.

ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ;  ಕಾರಣವೇನು?

ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ; ಕಾರಣವೇನು?

CM DK Shivakumar: ಕರ್ನಾಟಕ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆಯಾಗಿದೆ. ಹೈಕಮಾಂಡ್ ನಾಯಕರ ಲಭ್ಯತೆ ಕೊರತೆಯಿಂದ ಪ್ರಕ್ರಿಯೆ ಮುಂದಕ್ಕೆ ಸರಿದಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು (ಜುಲೈ 22) ಬೆಂಗಳೂರಿಗೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.

ಶಿವಾಜಿನಗರದಲ್ಲಿ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ಕೇಸ್‌; ಪ್ರಮುಖ ಆರೋಪಿ ಸೇರಿ 11 ಮಂದಿ ಬಂಧನ

ಶಿವಾಜಿನಗರದಲ್ಲಿ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ಕೇಸ್‌; 11 ಮಂದಿ ಬಂಧನ

ಶಿವಾಜಿನಗರದಲ್ಲಿ ಕರ್ತವ್ಯ ನಿರತ ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಅಧಿಕಾರಿಗಳ ಹಾಗೂ ಸಿಬ್ಬಂದಿಯ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಪ್ರಮುಖ ಆರೋಪಿ ಬಸವರಾಜ ಪಡುಕೋಟೆ ಸೇರಿದಂತೆ ಒಟ್ಟು 11 ಮಂದಿಯನ್ನು ಬಂಧಿಸಿದ್ದಾರೆ.

ಕರಾವಳಿ ಸೇರಿ ಕರ್ನಾಟಕದ ಹಲವೆಡೆ ಇನ್ನೆರಡು ದಿನ ಮಳೆ;  ಯೆಲ್ಲೋ ಅಲರ್ಟ್‌ ಘೋಷಣೆ

ಕರಾವಳಿ ಸೇರಿ ಕರ್ನಾಟಕದ ಹಲವೆಡೆ ಇನ್ನೆರಡು ದಿನ ಮಳೆ

Karnataka Weather: ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಜುಲೈ 22 ರಂದು ರಾಜ್ಯದಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಬಿರುಗಾಳಿ ಸಮೇತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬುಧವಾರ ಉತ್ತರ ಒಳನಾಡಿನ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಮಣ್ಣಿನಲ್ಲೇ ಬದುಕು, ಕಲೆಯಲ್ಲೇ ಭಕ್ತಿ: ಜೀವನೋಪಾಯಕ್ಕೆ ನಾನಾವೇಶ ನಾನಾ ಪ್ರದೇಶ

ಕಾಯಕ ಸಮುದಾಯದ ಚೆದುರಿದ ಬದುಕಿಗೆ ಸಮಾಜದ ಬೆಂಬಲ ಅಗತ್ಯ

ಈಗಾಗಲೇ ನಗರ ಹೊಲಯ ಅಗಲಗುರ್ಕಿಗೆ ಹೋಗುವ ರೈಲ್ವೆ ಟ್ರ್ಯಾಕ್ ಸಮೀಪ ನೆಲೆ ನಿಂತಿರುವ ಇವರು ಗಣಪತಿ  ಹಬ್ಬಕ್ಕೂ ಪೂರ್ವದಲ್ಲಿಯೇ ನರಸಿಂಹ ಅವತಾರ, ವರಾಹ ಅವತಾರ ಗಣಪತಿ, ದರ್ಬಾರ್ ಗಣಪತಿ, ಶಿವ ಗಣಪತಿ, ಆಂಜನೇಯ ಗಣಪತಿ, ರಥಾರೂಢ, ಗರುಡವಾಹನ, ಸಿಂಹಾ ರೂಢ, ಗಜಾರೂಢ, ಬಸವಾರೂಡ, ಇಲಿವಾಹನ, ಸರ್ಪಾರೂಢ, ಕೃಷ್ಣ ಗಣಪತಿ ಸೇರಿದಂತೆ ನೂರಕ್ಕೂ ಹೆಚ್ಚು ವಿನ್ಯಾಸಗಳ ಮಾದರಿಗಳನ್ನು ಸಿದ್ಧಪಡಿಸಿರುವ ಇವರ ಕಲಾನೈಪುಣ್ಯ ನೋಡು ಗರ ಗಮನ ಸೆಳೆಯುತ್ತದೆ.

Gubbi News: ಅಂಗನವಾಡಿ ಕೇಂದ್ರಗಳಿಗೆ ಅಲಮಾರು ವಿತರಿಸಿದ ಎಂ.ಎಚ್.ಪಟ್ಟಣ ಗ್ರಾಪಂ

ಅಂಗನವಾಡಿ ಕೇಂದ್ರಗಳಿಗೆ ಅಲಮಾರು ವಿತರಿಸಿದ ಎಂ.ಎಚ್.ಪಟ್ಟಣ ಗ್ರಾಪಂ

ತಾಲ್ಲೂಕಿನ ಕಸಬ ಹೋಬಳಿ ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಒಟ್ಟು 17 ಅಂಗನವಾಡಿ ಕೇಂದ್ರಗಳ ಪೈಕಿ ಬಿಳಿಕಲ್ಲಪಾಳ್ಯ, ಚೌಕೇನಹಳ್ಳಿ, ಬೈಜೇನಹಳ್ಳಿ, ರಂಗನಾಥಪುರ, ಚಿಕ್ಕನೆಟ್ಟಗುಂಟೆ, ರಾಯವಾರ ಇಂದಿರಾನಗರ ಈ ಆರು ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಅಲಮಾರು(ಬೀರು) ವಿತರಿಸಲಾಯಿತು.

Loading...