ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Davanagere news: ಕೋಟಿ ಮೌಲ್ಯದ ಆಸ್ತಿಪಾಸ್ತಿ ತೊರೆದು ಸನ್ಯಾಸ ಸ್ವೀಕರಿಸಿದ ಇಂಜಿನಿಯರಿಂಗ್‌ ವಿದ್ಯಾರ್ಥಿನಿ

ಆಸ್ತಿಪಾಸ್ತಿ ತೊರೆದು ಸನ್ಯಾಸ ಸ್ವೀಕರಿಸಿದ ಇಂಜಿನಿಯರಿಂಗ್‌ ವಿದ್ಯಾರ್ಥಿನಿ

ದಾವಣಗೆರೆಯ BIET ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಟಾಪರ್ ಸ್ಟೂಡೆಂಟ್ ಆಗಿದ್ದ ಆಂಚಲ್‌ಕುಮಾರಿ, ಇತ್ತೀಚೆಗೆ ಆಧ್ಯಾತ್ಮದ ಕಡೆಗೆ ಒಲವು ಹೊಂದಿದ್ದರು. ಸಂಸಾರದ ಸುಖಕ್ಕಿಂತ ಸನ್ಯಾಸತ್ವದ ಸುಖ ಶಾಶ್ವತವಾದುದು ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆಂಚಲ್ ಅವರು ದಾವಣಗೆರೆ ಚೌಕಿಪೇಟೆಯ ಚಿನ್ನದ ವ್ಯಾಪಾರಿ ಮುಕೇಶ್ ಹಾಗೂ ಸುನಿತಾ ಅವರ ಪುತ್ರಿಯಾಗಿದ್ದಾರೆ.

Bangla immigrants: ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ನೂರಾರು ಶೆಡ್‌ ಬೆಂಕಿಗಾಹುತಿ

ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ನೂರಾರು ಶೆಡ್‌ ಬೆಂಕಿಗಾಹುತಿ

ಅಕ್ರಮ ಬಾಂಗ್ಲಾ ವಲಸಿಗರ ಶೆಡ್‌ಗಳು ಹಾಗು ಸ್ಕ್ರಾಪ್ ವಸ್ತುಗಳು ಬೆಂಕಿಗಾಹುತಿಯಾಗಿದೆ. ಹೈ ಟೆನ್ಷನ್‌ ವಯರ್‌ ತುಂಡಾಗಿ ಬಿದ್ದು ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Grama Panchayat Election: ಇವಿಎಂಗೆ ಖೊಕ್‌, ಗ್ರಾಮ ಪಂಚಾಯತ್‌ ಚುನಾವಣೆಗೆ ಬ್ಯಾಲೆಟ್‌ ಪೇಪರ್‌ ಬಳಕೆ

ಇವಿಎಂಗೆ ಖೊಕ್‌, ಗ್ರಾಮ ಪಂಚಾಯತ್‌ ಚುನಾವಣೆಗೆ ಬ್ಯಾಲೆಟ್‌ ಪೇಪರ್‌ ಬಳಕೆ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ 5 ಪಾಲಿಕೆಗಳ ಮಾದರಿಯಲ್ಲೇ ಗ್ರಾಮ ಪಂಚಾಯತ್‌, ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಚುನಾವಣೆಯಲ್ಲೂ ಎಲೆಕ್ಟ್ರಾನಿಕ್‌ ಮತಯಂತ್ರ (EVM) ಬದಲಿಗೆ ಮತಪತ್ರ (ಬ್ಯಾಲೆಟ್‌ ಪೇಪರ್‌) ಬಳಕೆಗೆ ಅವಕಾಶ ಕಲ್ಪಿಸುವ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ತಿದ್ದುಪಡಿ ಮಸೂದೆ-2026’ಕ್ಕೆ ಸಂಪುಟ ಅನುಮೋದನೆ ನೀಡಿದೆ.

Karnataka Weather: ರಾಜ್ಯಾದ್ಯಂತ ಮುಂದುವರಿದ ಚಳಿ, ಒಣ ಹವೆ

ರಾಜ್ಯಾದ್ಯಂತ ಮುಂದುವರಿದ ಚಳಿ, ಒಣ ಹವೆ

ಗರಿಷ್ಠ ತಾಪಮಾನದಲ್ಲಿ (Temperature) ಹೆಚ್ಚಳವಾಗುತ್ತಿದ್ದು, ಕರ್ನಾಟಕದ ವಿವಿಧ ಭಾಗಗಳಲ್ಲಿ ಮಧ್ಯಾಹ್ನದ ವೇಳೆ ಬಿಸಿಲು ಅಲ್ಪ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಉಳಿದಂತೆ ಕರ್ನಾಟಕದಾದ್ಯಂತ ಬಹುತೇಕ ಒಣ ಹವೆ ಮುಂದುವರಿದಿದೆ. ದೂಳಿನ ಸಮಸ್ಯೆ ಮುಂದಿನ ದಿನಗಳಲ್ಲಿ ಹೆಚ್ಚಲಿದೆ. ರಾಜ್ಯದ ಜನತೆ ಬೆಚ್ಚಗಿರಲು ಸೂಚಿಸಲಾಗಿದೆ.

Bus fire accident: ಮತ್ತೊಂದು ಖಾಸಗಿ ಬಸ್‌ ಧಗಧಗ, ನೆಲಮಂಗಲದಲ್ಲಿ 40 ಪ್ರಯಾಣಿಕರಿದ್ದ ಬಸ್‌ ಬೆಂಕಿಗಾಹುತಿ

ನೆಲಮಂಗಲದಲ್ಲಿ 40 ಪ್ರಯಾಣಿಕರಿದ್ದ ಖಾಸಗಿ ಬಸ್‌ ಬೆಂಕಿಗಾಹುತಿ

ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಂಜನಾ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ಹೊತ್ತಿ ಉರಿದಿದೆ. ಬಸ್‌ನಲ್ಲಿ 40 ಪ್ರಯಾಣಿಕರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹನುಮಂತಪುರ ಗೇಟ್ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ.

Lokayukta Raid: ಮೈಸೂರಿನಲ್ಲಿ 7 ಕಡೆ ಲೋಕಾಯುಕ್ತ ದಾಳಿ, ಲಕ್ಷಾಂತರ ಹಣ ಪತ್ತೆ

ಮೈಸೂರಿನಲ್ಲಿ 7 ಕಡೆ ಲೋಕಾಯುಕ್ತ ದಾಳಿ, ಲಕ್ಷಾಂತರ ಹಣ ಪತ್ತೆ

ಮೈಸೂರು ಮಹಾನಗರ ಪಾಲಿಕೆ ಹಾಗೂ ಟಿ.ನರಸೀಪುರ ಪುರಸಭೆ ಜೆ.ಇ. ಕೆ.ಆರ್.ಚಂದ್ರಶೇಖರ್ ಮನೆ ಹಾಗೂ ಕಚೇರಿಯಲ್ಲಿ ದಾಳಿ ನಡೆಸಲಾಗಿದೆ. ಚಂದ್ರಶೇಖರ್‌ಗೆ ಸಂಬಂಧಿಸಿದ ಮೈಸೂರಿನ ವಿಜಯ ನಗರದ ನಿವಾಸ, ಕೆಜಿ ಕೊಪ್ಪಲು ನಿವಾಸ ಹಾಗೂ ಟಿ.ನರಸೀಪುರ ಕಚೇರಿ ಏರಿ 4 ಕಡೆ ಏಕಕಾಲದಲ್ಲಿ ದಾಳಿ ನಡೆಸಿ 60 ಲಕ್ಷ ಹಣ ಪತ್ತೆ ಮಾಡಿದ್ದಾರೆ.

Namma Metro fare hike: ನಮ್ಮ ಮೆಟ್ರೋ ಪ್ರಯಾಣ ದರ ಯಾರಿಗೆ ಎಷ್ಟು ಹೆಚ್ಚಳ? ಕಂಪ್ಲೀಟ್‌ ಡೀಟೇಲ್ಸ್

ನಮ್ಮ ಮೆಟ್ರೋ ಪ್ರಯಾಣ ದರ ಯಾರಿಗೆ ಎಷ್ಟು ಹೆಚ್ಚಳ? ಕಂಪ್ಲೀಟ್‌ ಡೀಟೇಲ್ಸ್

ಮೊದಲು 1 ಕಿ.ಮೀ ಪ್ರಯಾಣದ ದರಕ್ಕೆ 10 ರೂಪಾಯಿ ಇತ್ತು, ಅದೀಗ 1 ರೂಪಾಯಿ ಹೆಚ್ಚಾಗಿದೆ. ಹೀಗಾಗಿ ಹೊಸ ಕನಿಷ್ಟ ಬೆಲೆ 11 ರೂ. ಹಾಗೆಯೇ ಹೊಸ ಗರಿಷ್ಠ ಬೆಲೆ 5 ರೂ. ಹೆಚ್ಚಾಗಿ 95 ರೂಪಾಯಿ ಆಗಿದೆ. ಸ್ಮಾರ್ಟ್ ಕಾರ್ಡ್ ಮತ್ತು ಡಿಜಿಟಲ್ ಪಾವತಿಗಳಿಗೆ ಇರುವ ರಿಯಾಯಿತಿಗಳು (ಪೀಕ್ ಮತ್ತು ಪೀಕ್ ಅಲ್ಲದ ಸಮಯಗಳಲ್ಲಿ) ಮೊದಲಿನಂತೆಯೇ ಮುಂದುವರಿಯುತ್ತವೆ.

ಭಾರತೀಯ ಆಂತರಿಕೆ ಸೇವೆ ಗುರುತಿಸಿ ಕೊಡ ಮಾಡುವ ಪ್ರತಿಷ್ಠಿತ "ಎಫ್‌ಐಸಿಪಿ" ಪ್ರಶಸ್ತಿಗೆ ಡಾ. ದರ್ಶನ ರೆಡ್ಡಿ ಭಾಜನ

"ಎಫ್‌ಐಸಿಪಿ" ಪ್ರಶಸ್ತಿಗೆ ಡಾ. ದರ್ಶನ ರೆಡ್ಡಿ ಭಾಜನ

ಭಾರತೀಯ ಆಂತರಿಕ ಔಷಧ ಸೇವೆಯನ್ನು ಗುರುತಿಸಿ "ಭಾರತೀಯ ವೈದ್ಯರ ಸಂಘ" ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ "ಇಂಡಿಯನ್ ಕಾಲೇಜ್ ಆಫ್ ಫಿಸಿಶಿಯನ್ಸ್‌ ಫೆಲೋ ಶಿಪ್" (ಎಫ್‌ಐಸಿಪಿ)ಗೆ ಈ ಬಾರಿ ಬೆಂಗಳೂರಿನ ಆಲ್ಟಿಯಸ್ ಆಸ್ಪತ್ರೆ ಆಂತರಿಕ ವೈದ್ಯಕೀಯ ವಿಭಾಗದ ಎಂ.ಡಿ. ಡಾ. ದರ್ಶನ ರೆಡ್ಡಿ ಭಾಜನರಾಗಿದ್ದಾರೆ.

ಉಕ್ಕಿನ ಸಚಿವಾಲಯದಿಂದ ಗ್ರೀನ್ ಸ್ಟೀಲ್ ಪ್ರಮಾಣೀಕರಣ ಪಡೆದ ಮೊದಲ ಉಕ್ಕು ಉತ್ಪಾದಕ ಕಂಪನಿ ಎಂಎಂ/ಎನ್‌ಎಸ್‌ ಇಂಡಿಯಾ

ಪ್ರಮಾಣೀಕರಣ ಪಡೆದ ಮೊದಲ ಉಕ್ಕು ಉತ್ಪಾದಕ ಕಂಪನಿ ಎಂಎಂ/ಎನ್‌ಎಸ್‌ ಇಂಡಿಯಾ

ಉಕ್ಕು ಉತ್ಪಾದನೆ ಮಾಡುವ ಜೊತೆಗೆ, ಉತ್ಪಾದನೆಯ ಕ್ರಮವೂ ನಮ್ಮ ಪರಿಸರಕ್ಕೆ ಹೊಂದಿಕೆಯಾಗ ಬೇಕು. ಉಕ್ಕು ಉತ್ಪಾದನೆಯ ಹೆಸರಿನಲ್ಲಿ ಸಾಕಷ್ಟು ಹೊಗೆ ಉಗುಳುವುದು, ಕಲುಷಿತ ನೀರು ಉತ್ಪಾದನೆ ಮಾಡುವುದರಿಂದ ನಮ್ಮ ಪರಿಸರದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಹೀಗಾಗಿ ನಮ್ಮ ಎಎಂಎನ್‌ ಎಸ್‌ ಪ್ರತಿ ಉಕ್ಕಿಗೆ 2.2 ಟನ್‌ಗಳಿಗಿಂತ ಕಡಿಮೆ CO₂ ಸಮಾನವಾಗಿ ಬಿಡುಗಡೆ ಮಾಡುತ್ತಿದೆ.

ಫೆ.6ರಿಂದ 8ರವರೆಗೆ ಬೆಂಗಳೂರಿನ ಇಂಡಿಯನ್ ಇನ್ಸ್‌ ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಕ್ರಾಫ್ಟನ್ ಇಂಡಿಯಾದ ಕಾಲೇಜ್ ಕ್ಯಾಂಪಸ್ ಟೂರ್

ಫೆ.6ರಿಂದ 8ರವರೆಗೆ ಕ್ರಾಫ್ಟನ್ ಇಂಡಿಯಾದ ಕಾಲೇಜ್ ಕ್ಯಾಂಪಸ್ ಟೂರ್

ಇದು ಸಂಸ್ಥೆಯ ಪ್ರಮುಖ ತಳಮಟ್ಟದ ಯೋಜನೆಗಳಲ್ಲಿ ಒಂದಾಗಿದ್ದು, ಈ ವರ್ಷ ಎರಡನೇ ಆವೃತ್ತಿ ನಡೆಯುತ್ತಿದೆ. ಈ ಕಾರ್ಯಕ್ರಮವು ವೃತ್ತಿಪರ ಶೈಲಿಯ ಟೂರ್ನಮೆಂಟ್‌ ಗಳನ್ನು ನೇರವಾಗಿ 'ಪ್ರವೇಗ-12' ಕಾರ್ಯಕ್ರಮದೊಂದಿಗೆ ಸಂಯೋಜಿಸಲಿದ್ದು, ಈ ಮೂಲಕ ವಿದ್ಯಾರ್ಥಿಗಳಿಗೆ ಸಂಘಟಿತ ಮತ್ತು ಸ್ಪರ್ಧಾ ತ್ಮಕ ವಾತಾವರಣದಲ್ಲಿ ಸ್ಪರ್ಧಿಸುವ ಅವಕಾಶವನ್ನು ಒದಗಿಸಲಿದೆ.

Bagepally News: 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ; ಬೆಂಬಲಕ್ಕೆ ಮನವಿ

12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ; ಬೆಂಬಲಕ್ಕೆ ಮನವಿ

29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಸಂಹಿತೆಗಳ ಮೂಲಕ ಯೂನಿಯನ್‌ ರಹಿತ ವಾತಾ ವರಣ ನಿರ್ಮಿಸಲು ಯತ್ನಿಸಲಾಗುತ್ತಿದೆ. ಇದರ ಪರಿಣಾಮವಾಗಿ ಶೇ. 90 ರಷ್ಟು ಕಾರ್ಮಿಕರು ವೇತನ, ಇಎಸ್‌ಐ, ಪಿಎಫ್, ಗ್ರಾಚ್ಯುಟಿ, ಬೋನಸ್ ಸೇರಿದಂತೆ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ

Chikkaballapur News: ಜನಸೇವೆಗಾಗಿ 2028ರ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲುವುದು ಖಚಿತ: ಸಂದೀಪ್‌ರೆಡ್ಡಿ ಘೋಷಣೆ

ಜನಸೇವೆಗಾಗಿ 2028ರ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲುವುದು ಖಚಿತ

ಯುವಪಡೆ ಸಂದೀಪ್ ಅವರ ಜತೆಗಿದೆ ಎಂದು ಎಲ್ಲರೂ ಹೇಳುತ್ತಾರೆ. ನನಗೆ ಗೊತ್ತಿಲ್ಲ ಪಡೆ ಕಟ್ಟುವುದು ಹೇಗೆ? ರಾಜಕೀಯ ಮಾಡುವುದು ಹೇಗೆ ಎಂಬುದು ಗೊತ್ತಿಲ್ಲ. ಸುಮರು 7-8 ವರ್ಷಗಳ ಹಿಂದೆ ಕಟ್ಟಿದ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಕಟ್ಟಿಕೊಂಡು ಸಣ್ಣ ಸಣ್ಣ ಕನಸುಗಳನ್ನು ಕ್ಷೇತ್ರದಲ್ಲಿ ಬಿತ್ತುತ್ತಾ ಪ್ರಾಮಾಣಿಕವಾಗಿ ಜನಸೇವೆ ಮಾಡಿಕೊಂಡು ಬಂದವನು ನಾನು. ಈ ಟ್ರಸ್ಟ್ ಬೆಳೆದು ಇಂದು ಲಕ್ಷಾಂತರ ಮಂದಿಯ ಹೃದಯ ಗೆದ್ದಿರುವುದನ್ನು ನೋಡಿದರೆ ಹೃದಯ ತುಂಬಿ ಬಂದಿದೆ

MP Dr.K.Sudhakar: ಸಂಸದ ಡಾ.ಕೆ.ಸುಧಾಕರ್ ಅವರಿಗೆ ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶವಿದೆ : ಎಸ್.ಆರ್.ವಿಶ್ವನಾಥ್

ಸಂಸದ ಡಾ.ಕೆ.ಸುಧಾಕರ್ ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶವಿದೆ

ಮುಂದಿನ ಸಾರಿ ಹೈಕಮಾಂಡ್ ಸುಧಾಕರ್ ಅವರಿಗೆ ಕೊಟ್ಟರೆ ನಾವು ದೂಸರಾ ಮಾತನಾಡುವು ದಿಲ್ಲ. ಅವರನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳಿಸುತ್ತೇವೆ. ಕೇಂದ್ರದಲ್ಲಿ ಅವರಿಗೆ ಭವಿಷ್ಯವಿದ್ದು ಮಂತ್ರಿಯಾಗುವ ಅವಕಾಶಗಳೂ ಇವೆ.ಅವರು ಮಂತ್ರಿಯಾದರೆ ಇಲ್ಲಿ ಸಂದೀಪ್‌ರೆಡ್ಡಿ ಅವರಂತಹ ಯುವಕರನ್ನು ಬೆಳೆಸುವ ಕೆಲಸ ಮಾಡುವರು ಎಂಬ ವಿಶ್ವಾಸವಿದೆ

ಮಹಿಳಾ ಅಧಿಕಾರಿ ಮನೆಯಲ್ಲಿ ಸೀಕ್ರೆಟ್‌ ಕ್ಯಾಮೆರಾ ಇಟ್ಟು ಖಾಸಗಿ ವಿಡಿಯೊ ಚಿತ್ರೀಕರಣ; ಬ್ಲ್ಯಾಕ್‌ಮೇಲ್‌ ಮಾಡಿದ 3 ಯೂಟ್ಯೂಬರ್‌ಗಳ ಅರೆಸ್ಟ್‌

ಮಹಿಳಾ ಅಧಿಕಾರಿಯ ಖಾಸಗಿ ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್‌

ಮನೆಯಲ್ಲಿ ಮಹಿಳಾ ಅಧಿಕಾರಿಯು ಸ್ನೇಹಿತನೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೊ ಮಾಡಿಕೊಂಡಿದ್ದ ಯೂಟ್ಯೂಬರ್‌ಗಳು, ಅವುಗಳನ್ನು ತೋರಿಸಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು. ಹೀಗಾಗಿ ಅಧಿಕಾರಿ ನೀಡಿದ ದೂರಿನ ಮೇರೆಗೆ ಮೂವರ ಬಂಧನವಾಗಿದೆ.

Chikkaballapur News: ಗ್ರಾಮ ಸ್ವರಾಜ್ಯದ ಸಾಕಾರ ಕೇಂದ್ರವೇ ಗ್ರಾಮಪಂಚಾಯಿತಿ : ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತೀಕ್ ಪಾಷ

ಗ್ರಾಮ ಸ್ವರಾಜ್ಯದ ಸಾಕಾರ ಕೇಂದ್ರವೇ ಗ್ರಾಮಪಂಚಾಯಿತಿ

ಜಿಲ್ಲಾಡಳಿತ ಭವನದಲ್ಲಿ ಕೂಡ ಇಲಾಖೆಗಳಿಗೆ ಇಷ್ಟೊಂದು ಉತ್ತಮವಾದ ಕಚೇರಿ ಇಲ್ಲ. ಆಧುನಿಕತೆಗೆ ತಕ್ಕಂತೆ ಗ್ರಾಮಸೌಧ ಕಟ್ಟಡ ನಿರ್ಮಾಣವಾಗಿದೆ.ಗ್ರಾಮ ಸೌಧದ ಕಟ್ಟಡದಂತೆ ಇಲ್ಲಿನ ಆಡಳಿತವೂ ಕೂಡ ಜನಪರವಾಗಿರಲಿ, ಭವಿಷ್ಯದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾ ಅಭಿವೃದ್ಧಿ ಕಾಣಲಿ ಎಂದು ಶುಭ ಹಾರೈಸಿದರು

Cabinet Meeting: ಬ್ಯಾಲೆಟ್ ಪೇಪರ್‌ನಲ್ಲೇ ಗ್ರಾಮ ಪಂಚಾಯಿತಿಗಳ ಚುನಾವಣೆ; ಸಚಿವ ಸಂಪುಟ ಮಹತ್ವದ ನಿರ್ಧಾರ

ಗ್ರಾಪಂಗಳ ಚುನಾವಣೆಯನ್ನು ಬ್ಯಾಲೆಟ್ ಪೇಪರ್‌ನಲ್ಲೇ ನಡೆಸಲು ಸಂಪುಟ ಒಪ್ಪಿಗೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರ, ವಿವಿಧ ಮಹಾನಗರ ಪಾಲಿಕೆಗಳು ಸೇರಿ ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಮತಪತ್ರಗಳನ್ನು ಬಳಸುವ ಮಹತ್ವದ ನಿರ್ಧಾರವನ್ನು ರಾಜ್ಯ ಚುನಾವಣಾ ಆಯೋಗ ಇತ್ತೀಚೆಗೆ ಕೈಗೊಂಡಿತ್ತು. ಇದೀಗ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲೂ ಬ್ಯಾಲೆಟ್‌ ಪೇಪರ್‌ ಮೂಲಕವೇ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಹಾಸನ ಮೆಗಾ ಡೇರಿ ವಿಸ್ತರಣೆಗೆ 150 ಕೋಟಿ ಸಾಲ ನೀಡಲು ಕೇಂದ್ರ ಸಮ್ಮತಿ; ಎಚ್‌ಡಿಕೆ ಮನವಿಗೆ ಸ್ಪಂದಿಸಿದ ಹೈನುಗಾರಿಕೆ ಸಚಿವ

ಹಾಸನ ಮೆಗಾ ಡೇರಿ ವಿಸ್ತರಣೆಗೆ 150 ಕೋಟಿ ಸಾಲ ನೀಡಲು ಕೇಂದ್ರ ಸಮ್ಮತಿ

HD Kumaraswamy: ಹಾಸನ ಮೆಗಾ ಡೇರಿ ವಿಸ್ತರಣಾ ಯೋಜನೆಗೆ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (NDDB) ಮೂಲಕ 150 ಕೋಟಿ ಸಾಲ ಸೌಲಭ್ಯ ಕೊಡಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ತಮ್ಮ ಮನವಿಗೆ ಸ್ಪಂದಿಸಿದ ಹೈನುಗಾರಿಕೆ ಸಚಿವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೃತಜ್ಞತೆ ಸಲ್ಲಿಸಿದ್ದಾರೆ.

ಮದ್ದೂರು ರೈಲು ನಿಲ್ದಾಣ ಮೇಲ್ದರ್ಜೆಗೆ, ಚಾಮುಂಡಿ ಎಕ್ಸ್ ಪ್ರೆಸ್ ಸಾಮರ್ಥ್ಯ ಹೆಚ್ಚಿಸಿ: ರೈಲ್ವೆ ಸಚಿವರಿಗೆ ಎಚ್‌ಡಿಕೆ ಮನವಿ

ಮಂಡ್ಯ ಜಿಲ್ಲೆ ರೈಲು ಯೋಜನೆ ಬಗ್ಗೆ ರೈಲ್ವೆ ಸಚಿವರ ಜತೆ ಎಚ್‌ಡಿಕೆ ಚರ್ಚೆ

HD Kumaraswamy: ಬೆಂಗಳೂರು, ಮಂಡ್ಯ, ಮೈಸೂರು ರೈಲು ಮಾರ್ಗದ ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ, ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಬೆಂಗಳೂರು-ಮಂಗಳೂರು - ಮುರುಡೇಶ್ವರ ನಡುವೆ ಸಂಚರಿಸುವ ರೈಲು (ರೈಲು ಸಂಖ್ಯೆ 16585) ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ಮಂಡ್ಯದಲ್ಲಿ ನಿಲುಗಡೆ ನೀಡುವ ಬಗ್ಗೆ ಸಚಿವರು ಚರ್ಚಿಸಿದರು.

ಬೆಂಗಳೂರು-ಹೈದರಾಬಾದ್ ಹೈ-ಸ್ಪೀಡ್ ರೈಲ್ವೆ ಕಾರಿಡಾರ್ ಬೀದರ್‌ವರೆಗೆ ವಿಸ್ತರಿಸಿ; ಕೇಂದ್ರಕ್ಕೆ ಎಚ್.ಡಿ. ದೇವೇಗೌಡರ ಮನವಿ

ಬೆಂಗಳೂರು-ಹೈದರಾಬಾದ್ ಹೈ-ಸ್ಪೀಡ್ ರೈಲು ಬೀದರ್‌ವರೆಗೆ ವಿಸ್ತರಿಸಿ

ಹೈ ಸ್ಪೀಡ್‌ ರೈಲ್ವೆ ಕಾರಿಡಾರ್‌ಗಳು ದೇಶಾದ್ಯಂತದ ಪ್ರಮುಖ ನಗರ, ಕೈಗಾರಿಕಾ ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ಸಂಪರ್ಕಿಸುತ್ತವೆ. ಹೀಗಾಗಿ ಬೆಂಗಳೂರು-ಹೈದರಾಬಾದ್ ಹೈ-ಸ್ಪೀಡ್ ರೈಲ್ವೆ ಕಾರಿಡಾರ್ ಅನ್ನು ಬೀದರ್‌ವರೆಗೆ ವಿಸ್ತರಿಸಬೇಕು. ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮನವಿ ಸಲ್ಲಿಸಿದ್ದಾರೆ.

Landlord Movie: ಲ್ಯಾಂಡ್ ಲಾರ್ಡ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ; ಇಂದಿನಿಂದಲೇ ಜಾರಿ

ಲ್ಯಾಂಡ್ ಲಾರ್ಡ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ

ಸಂವಿಧಾನವು ಪ್ರತಿಪಾದಿಸುವ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿರುವ ಲ್ಯಾಂಡ್‌ ಲಾರ್ಡ್‌ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ.

Abu Dhabi Big Ticket: ಉಡುಪಿ ಯುವಕನಿಗೆ ಒಲಿದ ಅದೃಷ್ಟ; ಅಬುಧಾಬಿ ಲಾಟರಿಯಲ್ಲಿ ಸಿಕ್ತು 49 ಕೋಟಿ ಬಹುಮಾನ!

ಅಬುಧಾಬಿ ಲಾಟರಿಯಲ್ಲಿ 49 ಕೋಟಿ ರೂ. ಗೆದ್ದ ಉಡುಪಿ ಯುವಕ!

Shantanu Shetty: ಉಡುಪಿ ಜಿಲ್ಲೆ ಕಾಪು ತಾಲೂಕು ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿ ಎಂಬ ಯುವಕನಿಗೆ ಅಬುಧಾಬಿ ಬಿಗ್‌ ಟಿಕೆಟ್‌ ಡ್ರಾನಲ್ಲಿ 49 ಕೋಟಿ ರೂ. ಬಹುಮಾನ ಸಿಕ್ಕಿದೆ. ಸ್ನೇಹಿತನೊಟ್ಟಿಗೆ ಟಿಕೆಟ್‌ ಖರೀದಿಸಿದ್ದರಿಂದ, ಅರ್ಧ ಹಣವಾದ 24.5 ಕೋಟಿ ರೂ.ಗಳನ್ನು ಸ್ನೇಹಿತನಿಗೆ ನೀಡುವುದಾಗಿ ಯುವಕ ತಿಳಿಸಿದ್ದಾರೆ.

Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಫೆ.7ರಂದು ವಿದ್ಯುತ್‌ ವ್ಯತ್ಯಯ

ಬೆಂಗಳೂರಿನ ಈ ಏರಿಯಾಗಳಲ್ಲಿ ಫೆ.7ರಂದು ವಿದ್ಯುತ್‌ ವ್ಯತ್ಯಯ

BESCOM News: ಆರ್.ಎಂ.ವಿ. ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ವಿಭಾಗದ ಸಿ 6 ಉಪ ವಿಭಾಗದ ಹಲವೆಡೆ ಫೆ.7ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Malur Vote Recount: ಮಾಲೂರು ಕ್ಷೇತ್ರದ ಮರು ಮತ ಎಣಿಕೆ; ಕಾಂಗ್ರೆಸ್‌ ಶಾಸಕ ಕೆ.ವೈ. ನಂಜೇಗೌಡ ಆಯ್ಕೆ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ಮಾಲೂರು ಮರು ಮತ ಎಣಿಕೆಯಲ್ಲೂ ಕೈ ಶಾಸಕ ಕೆ.ವೈ. ನಂಜೇಗೌಡ ಗೆಲುವು

ಮತ ಎಣಿಕೆ ಪ್ರಕ್ರಿಯೆ ಕಾನೂನುಬದ್ದವಾಗಿ ನಡೆದಿಲ್ಲ ಎಂದು ಆರೋಪಿಸಿ ಮಾಲೂರು ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠವು ನಂಜೇಗೌಡ ಆಯ್ಕೆಯನ್ನು 2025ರ ಸೆಪ್ಟೆಂಬರ್‌ನಲ್ಲಿ ಅಸಿಂಧುಗೊಳಿಸಿತ್ತು. ಇದನ್ನು ಪ್ರಶ್ನೆ ಮಾಡಿ ಶಾಸಕ ನಂಜೇಗೌಡ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಇದೀಗ ಮರು ಮತ ಎಣಿಕೆಯ ಫಲಿತಾಂಶ ಹೊರಬಿದ್ದಿದೆ.

Chartered Co-op Bank Recruitment 2026: ಬೆಂಗಳೂರಿನ ಚಾರ್ಟರ್ಡ್‌ ಸಹಕಾರಿ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ; ಪದವೀಧರರು ಅಪ್ಲೈ ಮಾಡಿ

ಚಾರ್ಟರ್ಡ್‌ ಸಹಕಾರಿ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ

ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಜೂನಿಯರ್ ಅಸಿಸ್ಟೆಂಟ್ ಹಾಗೂ ಡ್ರೈವರ್ ಕಮ್ ಅಟೆಂಡರ್ ಸೇರಿ ಒಟ್ಟು 9 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 18.

Loading...