ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

MLA Nayana Motamma: ಕಾಡಾನೆಗಳ ಸ್ಥಳಾಂತರಕ್ಕೆ ವಿರೋಧ; ಶಾಸಕಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಯನಾ ಮೋಟಮ್ಮ!

ಶಾಸಕಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಯನಾ ಮೋಟಮ್ಮ

ಹಾಸನದ ಬೇಲೂರು ಭಾಗದಿಂದ ಮೂಡಿಗೆರೆ ಮಾರ್ಗವಾಗಿ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಅಟ್ಟುತ್ತಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕಾಡಂಚಿನ ಜನರು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ನಿರ್ಧಾರ ವಿರೋಧಿಸಿ ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.

Asha workers protest: ನಮ್ಮ ಮುಖ್ಯಮಂತ್ರಿಗಳದ್ದು ಹೂವಿನಂತ ಹೃದಯ, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುತ್ತಾರೆ: ಎಚ್‌ಡಿಕೆ

ನಮ್ಮ ಸಿಎಂದು ಹೂವಿನಂತ ಹೃದಯ, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುತ್ತಾರೆ

ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ನುಡಿದಂತೆ ನಡೆದಿದ್ದೇವೆ ಅಂತ ಜಪ ಮಾಡುತ್ತಿದ್ದಾರೆ. ಇವರು ಪ್ರಣಾಳಿಕೆಯಲ್ಲಿ 15 ಸಾವಿರ ಘೋಷಣೆ ಮಾಡಿದ್ದರು. ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಗೌರವ ಧನ ಹೆಚ್ಚಳ ಮಾಡಿ ಎಂದು ಆಶಾ ಕಾರ್ಯಕರ್ತೆಯರು ಆಗ್ರಹಿಸುತ್ತಿದ್ದಾರೆ. ಕೊಟ್ಟ ಮಾತಿನಂತೆ ಇವರು ನಡದುಕೊಳ್ಳಲಿ ಎಂದು ರಾಜ್ಯ ಸರ್ಕಾರವನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Bengaluru Power Cut: ನ.25ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ನ.25ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

BESCOM: ಪದ್ಮನಾಭನಗರ ಉಪಕೇಂದ್ರ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ನ.25ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಗಳವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ನಕಲಿ ಔಷಧಿ ದಂಧೆ ಕಿಂಗ್‌ಪಿನ್‌ ಪ್ರಶಾಂತ್ ಬಾಬು ದೆಹಲಿ ಪೊಲೀಸರ ಕಸ್ಟಡಿಗೆ;  ಬಯಲಾಯ್ತು ಇನ್ನಷ್ಟು ಸತ್ಯ

ನಕಲಿ ಔಷಧಿ ದಂಧೆ ಕಿಂಗ್‌ಪಿನ್‌ ಪ್ರಶಾಂತ್ ಬಾಬು ದೆಹಲಿ ಪೊಲೀಸರ ಕಸ್ಟಡಿಗೆ

ದೇಶಾದ್ಯಂತ ಸಂಚಲನ ಮೂಡಿಸಿದ್ದ ನಕಲಿ ಕ್ಯಾನ್ಸರ್ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ಪ್ರಮುಖ ಸೂತ್ರಧಾರ ಆರ್. ಪ್ರಶಾಂತ್ ಬಾಬು ಎಂಬಾತನನ್ನು ದೆಹಲಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಔಷಧಿ ಪೂರೈಸುವುದಾಗಿ ನಂಬಿಸಿ ದೆಹಲಿ ಮೂಲದ ಉದ್ಯಮಿಯೊಬ್ಬರಿಗೆ 2 ಕೋಟಿ ರೂ. ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ.

57ನೇ ಐಎಫ್ಎಫ್ಐನಲ್ಲಿ 'ರೂಬಿ-ಕ್ಯೂಬ್' ಕಂಪು: ನೈಜ ಬದುಕಿನ ಸಂಬಂಧಗಳ ಅನಾವರಣ ಎಂದ ಚಿತ್ರತಂಡ

57ನೇ ಐಎಫ್ಎಫ್ಐನಲ್ಲಿ 'ರೂಬಿ-ಕ್ಯೂಬ್' ಕಂಪು

57ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ಅಂಗವಾಗಿ ಇಂದು ಗೋವಾದ ಪಣಜಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಚಲನಚಿತ್ರ ‘ರೂಬಿ-ಕ್ಯೂಬ್’ ತಂಡವು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿತು. ಈ ಚಿತ್ರವು ತನ್ನ ಪಾತ್ರಗಳ ಬದುಕಿನ ಮೂಲಕ ಮಾನವ ಜೀವನದ ಹಲವು ಸಮಸ್ಯೆಗಳು ಮತ್ತು ಸವಾಲುಗಳನ್ನು ಅನಾವರಣಗೊಳಿಸುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಂದುವರಿದ ಒಣ ಹವೆ: ಉತ್ತರ, ದಕ್ಷಿಣ ಒಳನಾಡಿನಲ್ಲಿ ತೀವ್ರ ಚಳಿ; ನಾಳೆಯಿಂದ ಮಳೆ ಸಾಧ್ಯತೆ

ಉತ್ತರ, ದಕ್ಷಿಣ ಒಳನಾಡಿನಲ್ಲಿ ತೀವ್ರ ಚಳಿ; ನಾಳೆಯಿಂದ ಮಳೆ ಸಾಧ್ಯತೆ

ರಾಜ್ಯದಾದ್ಯಂತ ಇಂದು (ಸೋಮವಾರ) ಒಣ ಹವೆ ಮುಂದುವರಿಯಲಿದ್ದು, ಮುಂಜಾನೆ ಹಾಗೂ ರಾತ್ರಿ ವೇಳೆ ಚಳಿಯ ಪ್ರಮಾಣ ತೀವ್ರವಾಗಿರಲಿದೆ. ಆದರೆ, ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ವ್ಯತ್ಯಾಸದಿಂದಾಗಿ ನಾಳೆಯಿಂದ (ನ.24) ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆಯಿದೆ

Chikkaballapur News: ರಾಜಕಾರಣಿಗಳಲ್ಲಿ ನಾಲ್ಕೇ ದಿನಗಳಲ್ಲಿ ಗಮನಾರ್ಹ ಬದಲಾವಣೆ ತರಬಲ್ಲೆ: ಸದ್ಗುರು

ತಮ್ಮನ್ನು ತಾವು ನಿರ್ವಹಿಸಿಕೊಳ್ಳಲಾಗದಿರುವುದೇ ಒತ್ತಡಕ್ಕೆ ಮೂಲ

ವ್ಯಕ್ತಿಗಳು ತಮ್ಮ ದೇಹ, ಆಲೋಚನೆಗಳು, ಭಾವನೆಗಳು ಮತ್ತು ಶಕ್ತಿಯನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲರಾದಾಗ ಒತ್ತಡ, ಆತಂಕ ಹಾಗೂ ದುಃಖ ಎದುರಾಗುತ್ತವೆ. ನಮ್ಮದೇ ಬುದ್ಧಿವಂತಿಕೆ ನಮಗೆ ಪೂರಕವಾಗಿ ಕೆಲಸ ಮಾಡುವ ಬದಲು ವಿರುದ್ಧವಾಗಿ ತಿರುಗಿರುವುದೇ ಇಂತಹ ಸ್ಥಿತಿಗಳಿಗೆ ಕಾರಣ. ಅದನ್ನು ನಮ್ಮ ಒಳಿತಿಗಾಗಿ ಬಳಸಿಕೊಳ್ಳುವ ಕಲೆಯನ್ನು ಅರಿತುಕೊಳ್ಳಬೇಕು

Chikkaballapur News: 53 ಗ್ರಾಮಗಳ ಜನರಿಗೆ ತುರ್ತು ಚಿಕಿತ್ಸೆ ಮರೀಚಿಕೆ: ಕೂಡಲೇ ವೈದ್ಯರ ನೇಮಕಕ್ಕೆ ರೈತ ಸಂಘ ಆಗ್ರಹ

ರಾತ್ರಿ ವೈದ್ಯರಿಲ್ಲದೆ ಕೈವಾರ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

ಅನಿವಾರ್ಯವಾಗಿ ಸುಮಾರು 50 ಕಿ.ಮೀ. ದೂರದ ಕೋಲಾರ ಜಿಲ್ಲಾಸ್ಪತ್ರೆ ಅಥವಾ 100 ಕಿ.ಮೀ. ದೂರದ ಬೆಂಗಳೂರಿಗೆ ತೆರಳಬೇಕಾದ ದುಸ್ಥಿತಿ ಇದೆ. ಬಡ ಕುಟುಂಬಗಳಿಗೆ ತುರ್ತು ಸಂದರ್ಭದಲ್ಲಿ ದೂರದ ಊರುಗಳಿಗೆ ತೆರಳಲು ಹಣ ಹಾಗೂ ವಾಹನ ಸೌಲಭ್ಯವೂ ಇಲ್ಲದೆ ರೋಗಿಗಳ ಜೀವಕ್ಕೆ ಅಪಾಯ ಎದುರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

Engineering student dies: ಡೆತ್‌ನೋಟ್ ಬರೆದಿಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ: ‘ಮುಂದಿನ ಜನ್ಮದಲ್ಲೂ ನಿಮ್ಮ ಮಗನಾಗಿಯೇ ಹುಟ್ಟುತ್ತೇನೆ’ ಎಂದು ಪೋಷಕರಿಗೆ ಭಾವುಕ ಸಂದೇಶ

ಡೆತ್‌ನೋಟ್ ಬರೆದಿಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಚಿಂತಾಮಣಿ ತಾಲೂಕಿನ ಬತ್ತಲಹಳ್ಳಿ ಗ್ರಾಮದ ಶ್ರೀನಿವಾಸ್ ಮತ್ತು ಕುಸುಮ ದಂಪತಿಯ ಪುತ್ರ ಮಿಥುನ್ (21) ಮೃತ ವಿದ್ಯಾರ್ಥಿ. ನಗರದ ಎಸ್‌ಜೆಸಿಐಟಿ ಕಾಲೇಜಿನಲ್ಲಿ ಬಿಇ ತೃತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ, ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ತೀವ್ರ ಆಘಾತ ಮೂಡಿಸಿದೆ.

Sadguru Sri Madhusudan Sai: ಪ್ರೇಮದ ಮೂಲಕವೇ ನಿಜವಾದ ಸೇವೆ ಸಾಧ್ಯ: ಸದ್ಗುರು ಶ್ರೀ ಮಧುಸೂದನ ಸಾಯಿ

ನಿಸ್ವಾರ್ಥ ಪ್ರೇಮವೇ ಎಲ್ಲ ಸೇವಾ ಕಾರ್ಯಗಳ ಮೂಲ

ಎಲ್ಲ ಶಕ್ತಿಗಳಿದ್ದರೂ ನಿಸ್ವಾರ್ಥ ಪ್ರೇಮವನ್ನೇ ಆಯ್ಕೆ ಮಾಡಿಕೊಳ್ಳುವುದಾಗಿ ಭಗವಾನ್ ಸತ್ಯಸಾಯಿ ಬಾಬಾ ಹೇಳುತ್ತಿದ್ದರು. ಪ್ರೇಮದ ಮೂರ್ತರೂಪವಾಗಿರುವ ಗುರುವಿನಿಂದ ಮಾತ್ರ ಇಂತಹ ಉನ್ನತ ಮೌಲ್ಯಗಳನ್ನು ಕಲಿಯಲು ಸಾಧ್ಯ. 'ವಸುಧೈವ ಕುಟುಂಬಕಂ' ಎಂಬ ಉದಾತ್ತ ಆದರ್ಶದಿಂದ ಅನೇಕರು ಈ ಸಂಸ್ಥೆಯತ್ತ ಆಕರ್ಷಿತರಾಗಿದ್ದಾರೆ. ಅದಕ್ಕೆ ಪ್ರಮುಖ ಕಾರಣ ನಿಸ್ವಾರ್ಥ ಪ್ರೇಮ ಮತ್ತು ಸೇವಾ ಮನೋಭಾವ

Kapu Beach Tragedy: ಕಾಪು ಬೀಚ್‌ನಲ್ಲಿ ದುರಂತ; ಪ್ರವಾಸಕ್ಕೆ ಬಂದಿದ್ದ ಇಬ್ಬರು ಸಮುದ್ರ ಪಾಲು, ಒಬ್ಬರ ರಕ್ಷಣೆ

ಕಾಪು ಬೀಚ್‌ನಲ್ಲಿ ದುರಂತ; ಪ್ರವಾಸಕ್ಕೆ ಬಂದಿದ್ದ ಇಬ್ಬರು ಸಮುದ್ರ ಪಾಲು

ದಾವಣಗೆರೆ ಮೂಲದ ಒಂದೇ ಕುಟುಂಬದ 10 ರಿಂದ 12 ಸದಸ್ಯರು ಕಾಪು ಬೀಚ್‌ಗೆ ಆಗಮಿಸಿದ್ದರು. ಸಂಜೆ ಸಮುದ್ರದ ನೀರಿನಲ್ಲಿ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಮೂವರು ಅಲೆಗಳ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಒಬ್ಬ ಬಾಲಕನನ್ನು ರಕ್ಷಿಸಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ.

Shivamogga Accident: ಶಿವಮೊಗ್ಗದಲ್ಲಿ ಭೀಕರ ಅಪಘಾತ; ಮದುವೆಯಾದ ಒಂದೂವರೆ ತಿಂಗಳಲ್ಲೇ ನವದಂಪತಿ ದುರ್ಮರಣ!

ಶಿವಮೊಗ್ಗದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನವದಂಪತಿ ದುರ್ಮರಣ!

ಶಿವಮೊಗ್ಗ ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಕೇವಲ 45 ದಿನಗಳ ಹಿಂದಷ್ಟೇ ಹೊಸ ಜೀವನ ಆರಂಭಿಸಿತ್ತು. ಮದುವೆಯಾಗಿ ಹೊಸ ಬದುಕಿನ ಕನಸು ಕಂಡಿದ್ದ ಜೋಡಿಯ ದುರಂತ ಅಂತ್ಯ ಎಲ್ಲರ ಮನಕಲಕುವಂತಿದೆ.

Sumalatha Ambareesh: ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಮಾಜಿ ಸಂಸದೆ ಸುಮಲತಾ ಬೆಂಬಲ; ಬೇಡಿಕೆ ಈಡೇರಿಸುವಂತೆ ಸಿಎಂ ಡಿಕೆಶಿಗೆ ಪತ್ರ

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸುಮಲತಾ ಬೆಂಬಲ; ಸಿಎಂಗೆ ಪತ್ರ

ASHA Workers Protest: ಬೆಂಗಳೂರಿನಲ್ಲಿ ಮಾಸಿಕ ಗೌರವಧನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅಂಬರೀಶ್‌ ಅವರು, ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ವೈಯಕ್ತಿಕವಾಗಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

Bengaluru Power Cut: ತುರ್ತು ನಿರ್ವಹಣಾ ಕಾಮಗಾರಿ; ನ.24ರಂದು ಬೆಂಗಳೂರಿನ ಹಲವಡೆ ವಿದ್ಯುತ್‌ ವ್ಯತ್ಯಯ

ನವೆಂಬರ್ 24ರಂದು ಬೆಂಗಳೂರಿನ ಹಲವಡೆ ವಿದ್ಯುತ್‌ ವ್ಯತ್ಯಯ ‌

ಜಾಲಹಳ್ಳಿ ವಿಭಾಗದ ಸಿ- 3 ಉಪ ವಿಭಾಗ ಹಾಗೂ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

KAS Prelims Result 2026: ಕೆಎಎಸ್‌ ಪೂರ್ವಭಾವಿ ಪರೀಕ್ಷೆ ತಾತ್ಕಾಲಿಕ ಫಲಿತಾಂಶ ಪ್ರಕಟ

ಕೆಎಎಸ್‌ ಪೂರ್ವಭಾವಿ ಪರೀಕ್ಷೆ ತಾತ್ಕಾಲಿಕ ಫಲಿತಾಂಶ ಪ್ರಕಟ

Gazetted Probationers Recruitment 2026: 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿಯಿಂದ ನಡೆಸಲಾದ ಪೂರ್ವಭಾವಿ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗೆ ನ.15ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು.

MLA K H Puttaswamy Gowda: ರೈತರ ಆರ್ಥಿಕ ಪ್ರಗತಿಗೆ ಹೈನುಗಾರಿಕೆ ಆಸರೆ: ಶಾಸಕ ಪುಟ್ಟಸ್ವಾಮಿಗೌಡ

ರೈತರ ಆರ್ಥಿಕ ಪ್ರಗತಿಗೆ ಹೈನುಗಾರಿಕೆ ಆಸರೆ: ಶಾಸಕ ಪುಟ್ಟಸ್ವಾಮಿಗೌಡ

ಸಹಕಾರ ಸಂಘಗಳು ರೈತರಿಂದ ಹಾಲು ಸಂಗ್ರಹಿಸುವುದಕ್ಕೆ ಮಾತ್ರ ಸೀಮಿತವಾಗದೆ, ಹಾಲು ಉತ್ಪಾದಕರಿಗೆ ಅಗತ್ಯ ಮಾಹಿತಿ, ತಾಂತ್ರಿಕ ಮಾರ್ಗದರ್ಶನ ಹಾಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಬೇಕು. ಸಂಘಗಳ ಮೂಲಕ ರೈತರಿಗೆ ಉತ್ತಮ ಸೇವೆ ದೊರೆತಾಗ ಹೈನುಗಾರಿಕೆ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.

MLA B N Ravikumar: ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಆದ್ಯತೆ: ಶಾಸಕ ರವಿಕುಮಾರ್

ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಆದ್ಯತೆ

ಉಪವಿಭಾಗಾಧಿಕಾರಿ ಶೋಭಿತ ಮಾತನಾಡಿ, ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿ ಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಅವರ ಊರಿನಲ್ಲಿಯೇ ಸಮಸ್ಯೆಗಳನ್ನು ಪರಿಹರಿಸುವುದು ಪ್ರಜಾ ಸೇವಾ ಆಂದೋಲನದ ಪ್ರಮುಖ ಉದ್ದೇಶವಾಗಿದೆ. ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಐಪಿಜಿಎಸ್ ಪೋರ್ಟಲ್‌ನಲ್ಲಿ ದಾಖಲಿಸಿದಾಗ ಮಾತ್ರ ಅವು ಅಧಿಕೃತವಾಗಿ ಪರಿಗಣನೆಯಾಗುತ್ತವೆ

Vishwavani Impact: ಮೂರು ವಿಶೇಷ ರೈಲುಗಳಿಗೆ ಮಧ್ಯ ರೈಲ್ವೆಯಿಂದ ವಾಣಿಜ್ಯ ನಿಲುಗಡೆಗೆ ಸೂಚನೆ: ವಿಶೇಷ ರೈಲುಗಳಿಗೆ ಕಲಬುರಗಿಯಲ್ಲಿ ನಿಲುಗಡೆ

Vishwavani Impact: ವಿಶೇಷ ರೈಲುಗಳಿಗೆ ಕಲಬುರಗಿಯಲ್ಲಿ ನಿಲುಗಡೆ

ಬೆಂಗಳೂರಿನಿಂದ ನವದೆಹಲಿಗೆ ಸಂಚರಿಸುವ 04005 ವಿಶೇಷ ರೈಲು ನ.24ರಂದು ಕಲಬುರಗಿ ನಿಲ್ದಾಣಕ್ಕೆ ರಾತ್ರಿ 9.37ಕ್ಕೆ ಆಗಮಿಸಿ 9.40ಕ್ಕೆ ನಿರ್ಗಮಿಸಲಿದೆ. ಅದೇ ರೀತಿ, ನ.21ರಂದು ಚರ್ಲಪಲ್ಲಿಯಿಂದ ಪ್ರತಾಪ ನಗರಕ್ಕೆ ತೆರಳುವ 07087 ವಿಶೇಷ ರೈಲು ಕಲಬುರಗಿಯಲ್ಲಿ ರಾತ್ರಿ 9.40ರಿಂದ 9.43ರವರೆಗೆ ನಿಲುಗಡೆ ಹೊಂದಲಿದೆ. ನ.22ರಂದು ಪ್ರತಾಪನಗರದಿಂದ ಚರ್ಲಪಲ್ಲಿಗೆ ತೆರಳುವ 07088 ವಿಶೇಷ ರೈಲು ಮಧ್ಯಾಹ್ನ 2.37ರಿಂದ 2.40ರವರೆಗೆ ಕಲಬುರಗಿಯಲ್ಲಿ ನಿಲ್ಲಲಿದೆ.

ಕಲಬುರಗಿಯ ಮೂವರಿಗೆ ಅಧ್ಯಕ್ಷ ಸ್ಥಾನ: ರಾಯಚೂರಿಗೆ ಪ್ರತಿಷ್ಠಿತ ಕೆಕೆಆರ್‌ಡಿಬಿ ಚುಕ್ಕಾಣಿ

ರಾಯಚೂರಿಗೆ ಪ್ರತಿಷ್ಠಿತ ಕೆಕೆಆರ್‌ಡಿಬಿ ಚುಕ್ಕಾಣಿ

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಾವಿರಾರು ಕೋಟಿ ರುಪಾಯಿ ಅನುದಾನ ನಿರ್ವಹಿಸುವ ಕೆಕೆಆರ್ ಡಿಬಿ ಅಧ್ಯಕ್ಷ ಸ್ಥಾನ ಸಾಮಾನ್ಯ ರಾಜಕೀಯ ಹುದ್ದೆಯಲ್ಲ. ಪ್ರಾದೇಶಿಕ ಅಸಮಾನತೆ ನಿವಾರಣೆ, ಶಿಕ್ಷಣ, ಆರೋಗ್ಯ, ರಸ್ತೆ, ಕುಡಿಯುವ ನೀರು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಯಂತಹ ಪ್ರಮುಖ ಕ್ಷೇತ್ರಗಳ ಯೋಜನೆಗಳಿಗೆ ಮಂಡಳಿ ಅನುದಾನ ಒದಗಿಸುತ್ತದೆ.

Anjali Ambiger murder case: ಹುಬ್ಬಳ್ಳಿಯ ಅಂಜಲಿ ಕೊಲೆ ಪ್ರಕರಣ; ಆರೋಪಿ ಗಿರೀಶ್ ದೋಷಿ ಎಂದು ಕೋರ್ಟ್‌ ತೀರ್ಪು, ನ.25ಕ್ಕೆ ಶಿಕ್ಷೆ ಪ್ರಕಟ

ಅಂಜಲಿ ಕೊಲೆ ಪ್ರಕರಣ; ಆರೋಪಿ ಗಿರೀಶ್ ದೋಷಿ ಎಂದು ಕೋರ್ಟ್‌ ತೀರ್ಪು

2024ರ ಮೇನಲ್ಲಿ ನಡೆದಿದ್ದ ಅಂಜಲಿ ಬರ್ಬರ ಕೊಲೆ ಪ್ರಕರಣದಲ್ಲಿ ಸುಮಾರು ಒಂದೂವರೆ ವರ್ಷದ ಬಳಿಕ ನ್ಯಾಯಾಲಯದಿಂದ ಮಹತ್ವದ ತೀರ್ಪು ಹೊರಬಿದ್ದಿದೆ. ನ.25ರಂದು ಪ್ರಕಟವಾಗಲಿರುವ ಶಿಕ್ಷೆಯ ಪ್ರಮಾಣದತ್ತ ಅಂಜಲಿ ಕುಟುಂಬಸ್ಥರು ಸೇರಿ ಸಾರ್ವಜನಿಕರ ಚಿತ್ತ ನೆಟ್ಟಿದೆ.

R Rajendra Rajanna: ನಂಜನಗೂಡು ದೇವಾಲಯದ ಮಾದರಿಯಲ್ಲಿ ಮಲ್ಲೇಶ್ವರ ಹಾಗೂ ವೆಂಕಟರಮಣ  ದೇವಸ್ಥಾನಗಳ ಗೋಪುರಗಳಿಗೆ ಬಣ್ಣ: ಆರ್. ರಾಜೇಂದ್ರ

ಕೆ.ಎನ್.ರಾಜಣ್ಣ ಮಾರ್ಗದರ್ಶನದಲ್ಲಿ ಮಧುಗಿರಿ ಅಭಿವೃದ್ಧಿ

ಇಲ್ಲಿನ ಪುರಾತನ ದೇವಾಲಯಗಳು ಜನರ ಧಾರ್ಮಿಕ ನಂಬಿಕೆ ಮತ್ತು ಸಂಸ್ಕೃತಿಯ ಪ್ರತೀಕಗಳಾಗಿವೆ. ಇಂತಹ ದೇವಾಲಯಗಳನ್ನು ಸಂರಕ್ಷಿಸುವುದರ ಜೊತೆಗೆ ಅವುಗಳ ಸೌಂದರ್ಯವನ್ನು ಹೆಚ್ಚಿಸು ವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಲ್ಲೇಶ್ವರ ಸ್ವಾಮಿ ಮತ್ತು ವೆಂಕಟರಮಣ ಸ್ವಾಮಿ ದೇವಾಲಯಗಳ ಅಭಿವೃದ್ಧಿಗೆ ಆಧ್ಯತೆ ನೀಡಲಾಗಿದೆ, ಈ ದೇವಾಲಯಗಳ ಅಭಿವೃದ್ಧಿಗೆ ಭಕ್ತಾಧಿಗಳು ಕೂಡ ಮನವಿ ಮಾಡಿದ್ದಾರೆ.

ಸಿಎಂ ಎಚ್ಚರಿಕೆ ಬೆನ್ನಲ್ಲೇ ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಮನೆಗಳ ಮೇಲೆ ಪೊಲೀಸರ ದಾಳಿ

ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಮನೆಗಳ ಮೇಲೆ ಪೊಲೀಸರ ದಾಳಿ

ರಾಜ್ಯ ರಾಜಧಾನಿಯಲ್ಲಿ ಅಪರಾಧ ಕೃತ್ಯ ಹಾಗೂ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ನಗರದ ವಿವಿಧೆಡೆ ರೌಡಿಶೀಟರ್‌ಗಳ ಮನೆಗಳ ಮೇಲೆ ಸಿಸಿಬಿ ರೌಡಿ ಸ್ಕ್ವಾಡ್ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

Ravi Hunj: ಕ್ರಿಮಿನಲ್ ಪ್ರಕರಣ ದಾಖಲಿಸಿರುವ ರಾಜ್ಯ ಸರಕಾರದ ಕ್ರಮದ ಬಗೆ ಆಕ್ಷೇಪ: ಅಮೆರಿಕ ರಾಯಭಾರ ಕಚೇರಿಗೆ ಲೇಖಕ ರವಿ ಹಂಜ್‌ ಮನವಿ

ಅಮೆರಿಕ ರಾಯಭಾರ ಕಚೇರಿಗೆ ಲೇಖಕ ರವಿ ಹಂಜ್‌ ಮನವಿ

ಐತಿಹಾಸಿಕ ದಾಖಲೆಗಳು, ಧಾರ್ಮಿಕ ಗ್ರಂಥಗಳು ಹಾಗೂ ಪ್ರಕಟಿತ ಸಾಹಿತ್ಯದ ಆಧಾರದಲ್ಲಿ ಸಂಶೋ ಧನಾತ್ಮಕ ಚರ್ಚೆ ನಡೆಸುವುದು ತಮ್ಮ ಕೃತಿಯ ಉದ್ದೇಶವಾಗಿದ್ದು, ಯಾವುದೇ ಧಾರ್ಮಿಕ ಸಮುದಾಯ ಅಥವಾ ವ್ಯಕ್ತಿಗೆ ಅವಮಾನ ಮಾಡುವ ಉದ್ದೇಶವಿಲ್ಲ ಎಂದು ರವಿ ಹಂಜ್ ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯ ವರ್ಗಕ್ಕೆ 2 ಲಕ ರು., ಪರಿಶಿಷ್ಟರಿಗೆ 3 ಲಕ ರು. ಸಹಾಯಧನ: ಐದು ಲಕ್ಷ ವಸತಿ ನಿವೇಶನ: ಅರ್ಜಿ ಪ್ರಕ್ರಿಯೆಗೆ ಚಾಲನೆ

ಐದು ಲಕ್ಷ ವಸತಿ ನಿವೇಶನ: ಅರ್ಜಿ ಪ್ರಕ್ರಿಯೆಗೆ ಚಾಲನೆ

ರಾಜ್ಯದ ವಸತಿ ರಹಿತ ಮತ್ತು ಭೂರಹಿತ ಕುಟುಂಬಗಳಿಗೆ ಸ್ವಂತ ಸೂರು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯಾದ್ಯಂತ 15 ಲಕ್ಷ ಉಚಿತ ವಸತಿ ನಿವೇಶನ ಗಳನ್ನು ಹಂಚಿಕೆ ಮಾಡಲು ಹಾಗೂ 2026-27ನೇ ಸಾಲಿನಲ್ಲಿ 2241 ಕೋಟಿ ರು. ವೆಚ್ಚದಲ್ಲಿ ಒಂದು ಲಕ್ಷ ಹೊಸ ಮನೆಗಳನ್ನು ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

Loading...