ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

MLC Election: ಅಡ್ಡ ಮತದಾನ; ಬಿಜೆಪಿ ರಾಜ್ಯಾಧ್ಯಕ್ಷರಿಗೆ ಆಂತರಿಕ ತನಿಖಾ ವರದಿ ಸಲ್ಲಿಸಿದ ಸಿ.ಟಿ.ರವಿ

ಅಡ್ಡ ಮತದಾನ; ಬಿಜೆಪಿ ರಾಜ್ಯಾಧ್ಯಕ್ಷರಿಗೆ ತನಿಖಾ ವರದಿ ಸಲ್ಲಿಸಿದ ಸಿ.ಟಿ.ರವಿ

Cross voting: ಅಡ್ಡ ಮತದಾನ ಆಗಿರುವುದು ಕಾಂಗ್ರೆಸ್ ಮೇಲಿನ ಅಭಿಮಾನಕ್ಕೆ ಅಂತ ಕಾಂಗ್ರೆಸ್ ನಾಯಕರು ಭಾವಿಸಬಾರದು. ಬೇರೆ ರಾಜ್ಯಗಳಲ್ಲಿ ಅಡ್ಡಮತದಾನ ಆದಾಗ ಕಾಂಗ್ರೆಸ್‍ನವರು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ ಅಂತ ಉಪದೇಶ ಮಾಡ್ತಾರೆ. ಆದರೆ ಈಗ ಅಡ್ಡಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಅಪಮೌಲ್ಯಗೊಳಿಸಿದ್ದಾರೆ. ಅವರಿಗೆ ಅಡ್ಡ ಮತದಾನ ಆದರೆ ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಟೀಕಿಸಿದ್ದಾರೆ.

Tumkur News: ಪ್ರೇಯಸಿಯ ಜತೆ ಗಲಾಟೆ; ಕಾರಿನಲ್ಲೇ ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ!

ಕಾರಿನಲ್ಲೇ ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ!

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ಅವಘಡ ನಡೆದಿದೆ. ಯುವಕ ಮತ್ತು ಯುವತಿ ಕಾರಿನಲ್ಲಿ ಬೆಂಗಳೂರಿನಿಂದ ಅಂಕೋಲಗೆ ತೆರಳುತ್ತಿದ್ದರು. ಈ ವೇಳೆ ಇಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಈ ವೇಳೆ ಯುವಕ ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಗೆ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಅಘಾತಕಾರಿ ಘಟನೆ: ಬೈಕ್ ಸವಾರಿ ಮಾಡುವಾಗ ಮರದ ಕೊಂಬೆ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ!

ಮರದ ಕೊಂಬೆ ಬಿದ್ದು ಬೈಕ್ ಸವಾರ ಗಂಭೀರ: ಸಿಸಿಟಿವಿ ದೃಶ್ಯ ವೈರಲ್!

Viral Video: ಮರದ ಕೊಂಬೆಯೊಂದು ಬಿದ್ದ ಪರಿಣಾಮ 53 ವರ್ಷದ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಇವರು ಖಾಸಗಿ ಹಣಕಾಸು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಲದ ಕಂತುಗಳನ್ನು ವಸೂಲಿ ಮಾಡುವುದ್ದಕ್ಕಾಗಿ ಸಂಜೆ 5 ಗಂಟೆಯ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಆದರೆ ಹೆಲ್ಮೆಟ್ ಧರಿಸಿರಿಲಿಲ್ಲ‌. ಈ ವೇಳೆ ರಸ್ತೆ ಬದಿಯ ಮರದಿಂದ ಬೃಹತ್ ಗಾತ್ರದ ಒಣಗಿದ ಕೊಂಬೆ ದಿಢೀರನೆ ಮುರಿದು ನೇರವಾಗಿ ಅವರ ತಲೆಯ ಮೇಲೆಯೇ ಬಿದ್ದಿದೆ...

Koppal Accident: ಕೊಪ್ಪಳದಲ್ಲಿ ಭೀಕರ ಅಪಘಾತ; ಓಮ್ನಿ ಕಾರಿಗೆ ಲಾರಿ ಡಿಕ್ಕಿ, ಮಂತ್ರಾಲಯಕ್ಕೆ ತೆರಳುತ್ತಿದ್ದ ಐವರು ದುರ್ಮರಣ

ಕೊಪ್ಪಳದಲ್ಲಿ ಭೀಕರ ಅಪಘಾತ; ಮಂತ್ರಾಲಯಕ್ಕೆ ಹೋಗುತ್ತಿದ್ದ ಐವರ ಸಾವು

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ರಸ್ತೆ ಅಪಘಾತ ನಡೆದಿದೆ. ಸರಕು ತುಂಬಿದ ಲಾರಿ ರಸ್ತೆ ವಿಭಜಕ ದಾಟಿ ಓಮಿನಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ದುರಂತ ಸಂಭವಿಸಿದೆ. ಘಟನೆಯಲ್ಲಿ ಐವರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.

ನಿರ್ಮಾಪಕ ಭಾ.ಮಾ. ಹರೀಶ್‌ ಪುತ್ರ ಹೃದಯಾಘಾತದಿಂದ ನಿಧನ; ಟ್ರೆಕ್ಕಿಂಗ್‌ ವೇಳೆ ಕೊಡಚಾದ್ರಿಯಲ್ಲಿ ಅವಘಡ

ನಿರ್ಮಾಪಕ ಭಾ.ಮಾ. ಹರೀಶ್‌ ಪುತ್ರ ಹೃದಯಾಘಾತದಿಂದ ನಿಧನ

Ullas Gowda Passed Away: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಹಿರಿಯ ನಿರ್ಮಾಪಕ ಭಾ.ಮಾ. ಹರೀಶ್‌ ಅವರ ಪುತ್ರ ಉಲ್ಲಾಸ್‌ ಗೌಡ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು. ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋದ ವೇಳೆ ಹೃದಯಘಾತವಾಗಿದೆ ಎಂದು ಮೂಲಗಳು ತಿಳಿಸಿವೆ.

Gold Price Today On 27th June 2026: ಗ್ರಾಹಕರ ಕೈ ಸುಟ್ಟ ಚಿನ್ನ; ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ

ಆಭರಣ ಗ್ರಾಹಕರ ಪಾಲಿಗೆ ಕಹಿ ವೀಕೆಂಡ್‌; ಚಿನ್ನದ ದರದಲ್ಲಿ ಭಾರಿ ಹೆಚ್ಚಳ

Gold Silver Price Today: ಚಿನ್ನದ ದರ ಶನಿವಾರ (ಜೂನ್‌ 27) ಮತ್ತೆ ಭಾರಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 110 ರುಪಾಯಿ ಏರಿಕೆಯಾಗಿದ್ದು, 13,195 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 120 ರುಪಾಯಿ ಹೆಚ್ಚಾಗಿದ್ದು, 14,395 ರುಪಾಯಿ ಆಗಿದೆ.

Vishwavani Impact: ಪಿಡಿಒ ಅಮಾನತು: ನೀರು ಪೂರೈಕೆಗೆ ಕ್ರಮ

ಪಿಡಿಒ ಅಮಾನತು: ನೀರು ಪೂರೈಕೆಗೆ ಕ್ರಮ

ಬೀರನೂರು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ 80ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕಚೇರಿ ಸ್ಪಂದಿಸಿದೆ. ಜೂ.15ರಂದು ಬೀರನೂರು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ 80ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದ ಕುರಿತು ಜೂ.18ರಂದು ವಿಶ್ವವಾಣಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡಿತ್ತು

International Pineapple Day: ಇಂದು ಅಂತಾರಾಷ್ಟ್ರೀಯ ಅನಾನಸ್ ದಿನ

ಇಂದು ಅಂತಾರಾಷ್ಟ್ರೀಯ ಅನಾನಸ್ ದಿನ

ಪ್ರತಿವರ್ಷ ಜೂ.27ರಂದು ಆಚರಿಸಲಾಗುವ ‘ಅಂತಾರಾಷ್ಟ್ರೀಯ ಅನಾನಸ್ ದಿನ"ವು ಈ ಜನಪ್ರಿಯ ಹಣ್ಣಿನ ಸಾಂಸ್ಕೃತಿಕ, ಆರ್ಥಿಕ ಮತ್ತು ಪೌಷ್ಟಿಕಾಂಶದ ಮಹತ್ವವನ್ನು ಸಾರುವ ವಿಶೇಷ ದಿನವಾಗಿದೆ. ಕೇವಲ ಸಿಹಿ ಮತ್ತು ಹುಳಿಯ ಸಮತೋಲನ ಹೊಂದಿರುವ ರುಚಿಕರ ಹಣ್ಣು ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಅನಾನಸ್ ಅಪಾರ ಪ್ರಯೋಜನಗಳನ್ನು ಹೊಂದಿದೆ. ಈ ಹಣ್ಣಿನ ಮೂಲ ದಕ್ಷಿಣ ಅಮೆರಿಕಾಗಳಾಗಿದ್ದು, ಅಲ್ಲಿಂದ ಇದು ಜಗತ್ತಿನಾದ್ಯಂತ ಹರಡಿ, ಉಷ್ಣವಲಯದ ದೇಶಗಳಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆದಿದೆ.

Kartavya App: ನೌಕರರಿಗೆ ತಲೆನೋವಾದ 'ಕರ್ತವ್ಯ App'

ನೌಕರರಿಗೆ ತಲೆನೋವಾದ 'ಕರ್ತವ್ಯ App'

ಸರಕಾರದ ಅಧೀನದ ಇಲಾಖೆಗಳು ಮತ್ತು ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಮೊಬೈಲ್ ಮೂಲಕ ಹಾಜರಾತಿ ದಾಖಲಿಸುವ ವ್ಯವಸ್ಥೆ ಮೇ 1 ಜಾರಿಗೆ ಬಂದಿದೆ. ಅದರನ್ವಯ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿನಿತ್ಯ ಬೆಳಗ್ಗೆ 10 ಗಂಟೆಗೆ ಬಂದಾಗ ಚೆಕ್‌ಇನ್‌ನಲ್ಲಿ ಹಾಗೂ ಸಂಜೆ ಕಚೇರಿಯಿಂದ ತೆರಳುವಾಗ ಚೆಕ್‌ಔಟ್‌ನಲ್ಲಿ ತಪ್ಪದೆ ಹಾಜರಾತಿ ದಾಖಲಿಸಬೇಕು. ಆದರೆ, ಹೊಸ ವ್ಯವಸ್ಥೆಗೆ ಮೊದಲು ಪೊಲೀಸ್ ಇಲಾಖೆಯಿಂದ ಅಪಸ್ವರ ವ್ಯಕ್ತವಾಯಿತು.

ಭರವಸೆಯಲ್ಲೇ ಉಳಿದ ಹಲಗೆವಡೇರಹಳ್ಳಿ ಕೆರೆ ಅಭಿವೃದ್ಧಿ

ಭರವಸೆಯಲ್ಲೇ ಉಳಿದ ಹಲಗೆವಡೇರಹಳ್ಳಿ ಕೆರೆ ಅಭಿವೃದ್ಧಿ

ನಗರೀಕರಣದ ಒತ್ತಡದಿಂದ ಬೆಂಗಳೂರಿನ ಅನೇಕ ಕೆರೆಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಉಳಿದಿರುವ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಂದಾ ಗಿದ್ದರು. ರಾಜರಾಜೇಶ್ವರಿ ನಗರದ ಹಲಗೆವಡೇರಹಳ್ಳಿ ಕೆರೆಯ ಅಭಿವೃದ್ಧಿ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿಳಂಬದಿಂದ ಸ್ಥಗಿತಗೊಂಡಂತಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Shidlaghatta Crime: ಅಕ್ರಮವಾಗಿ ಸಾಗಿಸುತ್ತಿದ್ದ ಗೋಧಿ ಕ್ಯಾಂಟರ್ ಸೆರೆ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಅಕ್ರಮವಾಗಿ ಸಾಗಿಸುತ್ತಿದ್ದ ಗೋಧಿ ಕ್ಯಾಂಟರ್ ಸೆರೆ

ತಾಲೂಕಿನ ಜಂಗಮಕೋಟೆ ಸಮೀಪ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 250ಕ್ಕೂ ಅಧಿಕ ಗೋಧಿ ಚೀಲಗಳನ್ನು ತುಂಬಿದ್ದ ಕ್ಯಾಂಟರ್ ವಾಹನವನ್ನು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ದಿಢೀರ್ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Dr M C Sudhakar: ಆಜಾದ್‌ಚೌಕ ಮತ್ತು ಪಾಲಿಟೆಕ್ನಿಕ್ ಕಾಲೇಜಿ ನಲ್ಲಿ ವೇಗವಾಗಿ ಸಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ಡಾ.ಎಂ.ಸಿ.ಸುಧಾಕ‌ರ್

ಸಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ವೀಕ್ಷಿಸಿದ ಡಾ.ಎಂ.ಸಿ.ಸುಧಾಕ‌ರ್

ನಗರದ ಹೃದಯ ಭಾಗದಲ್ಲಿರುವ ಆಜಾದ್ ಚೌಕದಲ್ಲಿ ನಿರ್ಮಾಣ ಗೊಂಡಿರುವ ಉದ್ಯಾನವನಕ್ಕೆ ನೆರೆಯ ಆಂಧ್ರಪ್ರದೇಶದ ರಾಜಮಂಡ್ರಿಯಿಂದ ವಿವಿಧ ರೀತಿಯ ವಿಶಿಷ್ಟ ಗಿಡಗಳನ್ನು ತರಿಸಿ ಅವುಗಳನ್ನು ನೆಡುವಂತೆ ಮಾಡಿ ನಗರದ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಪರಿಸರದಲ್ಲಿ ಗಿಡಗಳ ಮಹತ್ವದ ಕುರಿತು ಹಾಗೂ ಈ ಸ್ಥಳದಲ್ಲಿರುವ ದೇವಾಲಯಕ್ಕೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುವ ವಾತಾವರಣ ನಿರ್ಮಾಣ ಮಾಡು ವಲ್ಲಿ ನೆರವಾಗಲಿದೆ.

Chinthamani News: ಮಾವಿನ ಬೆಲೆ ಕುಸಿತ:ಬೆಂಬಲ ಬೆಲೆಗೆ ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ

ಮಾವಿನ ಬೆಲೆ ಕುಸಿತ:ಬೆಂಬಲ ಬೆಲೆಗೆ ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ

ಸರ್ಕಾರ ಪ್ರಸ್ತುತ ಘೋಷಿಸಿರುವ ಟನ್‌ಗೆ 4,370 ರೂ.ಗಳ ಬೆಂಬಲ ಬೆಲೆ ತೀರಾ ಕಡಿಮೆಯಾಗಿದೆ. ರೈತರ ಹಿತದೃಷ್ಟಿಯಿಂದ ಕನಿಷ್ಠ 8,000 ರೂ. ದಿಂದ 12,000 ರೂ. ವರೆಗೆ ಬೆಂಬಲ ಬೆಲೆಯನ್ನು ಪರಿಷ್ಕರಿಸ ಬೇಕು ಎಂದು ಹೇಳಿದ ಅವರು ಮಾವು ಬೆಳೆಗಾರರಿಗೆ ವೈಜ್ಞಾನಿಕವಾಗಿ ಸೂಕ್ತ ಬೆಲೆ ಸಿಗುವಂತೆ ಮಾಡಲು ಉಭಯ ಜಿಲ್ಲೆಗಳ ಜಿಲ್ಲಾಡಳಿತ,ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮ ಕೈಗೊಳ್ಳಬೇಕು

Chikkaballapur News: ಕೂಡಲೇ ನಿವೇಶನ ವಾಪಸ್ ಪಡೆಯಲು ಕುಡಾ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಒತ್ತಾಯ

ಸಿಎ ನಿವೇಶನ ಪಡೆದ ಶಾಸಕರ ಕ್ರಮಕ್ಕೆ ಖಂಡನೆ

ಮೂರು ನಿವೇಶನ ಪಡೆಯಲು ಶಾಸಕರು ಮುಂದಾಗಿದ್ದಾರೆ. ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ನಿವೇಶನ ಮಂಜೂರು ಮಾಡಲಾಗಿದೆ. ಅರ್ಜಿ ಸಲ್ಲಿಸಿದ 15 ದಿನದೊಳಗೆ ನಿವೇಶನ ಮಂಜೂರು ಮಾಡಿದ್ದಾರೆ. ಇವರಿಗಿಂತ ಮೊದಲೇ ಅರ್ಜಿ ಸಲ್ಲಿಸಿದವರಿಗೆ ಯಾಕೆ ನಿವೇಶನ ನೀಡಿಲ್ಲ, ಬಡವರು ಸಿಎ ನಿವೇಶನ ಪಡೆಯಬಾರದೇ, ಕ್ಷೇತ್ರದ ಜನರು ಇದಕ್ಕೇನಾ ನಿಮಗೆ ಮತ ಹಾಕಿರುವುದು, ಪ್ರಾಧಿ ಕಾರದ ಸಮಿತಿಯ ಗಮನಕ್ಕೂ ಬಾರದೆ ನಿವೇಶನ ಮಂಜೂರು ಮಾಡಲಾಗಿದೆ

B N Ravikumar: "2028ರಲ್ಲಿ ಪ್ರದೀಪ್ ಗೆದ್ದರೆ ಅವರ ಮನೆಗೆ ವಾಚ್‌ಮನ್ ಆಗುತ್ತೇನೆ; ಸೋತರೆ ಕುಮಾರಣ್ಣ ಮನೆ ಮುಂದೆ ಕಾವಲು ಕಾಯಲಿ": ಬಿ.ಎನ್.ರವಿಕುಮಾರ್ ಬಹಿರಂಗ ಸವಾಲ್

"ಗೆದ್ದರೆ ವಾಚ್‌ಮನ್, ಸೋತರೆ ಕುಮಾರಣ್ಣ ಮನೆಗೆ ಕಾವಲು"

ಕುಮಾರಸ್ವಾಮಿ ಅವರು ಕೇವಲ ನ್ಯಾಯಾಲಯದ ನೋಟಿಸ್‌ನ್ನು ಪಕ್ಷದ ಸಾಮಾಜಿಕ ಜಾಲತಾಣ ದಲ್ಲಿ ಹಂಚಿಕೊAಡಿದ್ದಾರೆ ಹೊರತು, ಎಲ್ಲಿಯೂ ಪ್ರದೀಪ್ ಈಶ್ವರ್ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಅವರು ದೇವೇಗೌಡ ಹಾಗೂ ಕುಮಾರಸ್ವಾಮಿ ಕುಟುಂಬದ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡಿದ್ದು ಸರಿಯಲ್ಲ

MLA S.R. Vishwanath: 'ನಮ್ಮ ಒಬ್ಬ ಮುಖಂಡರನ್ನು ಮುಟ್ಟಿದರೆ ನಿಮ್ಮ ಕಡೆಯಿಂದ ಇಬ್ಬರನ್ನು ಕರೆತರುತ್ತೇನೆ'

ಸಂಸದರ ವಿರುದ್ಧ ಶಾಸಕ ಎಸ್.ಆರ್. ವಿಶ್ವನಾಥ್ ಗುಡುಗು

"ಒಡೆದು ಆಳುವ ನೀತಿ ಯಲಹಂಕದಲ್ಲಿ ನಡೆಯುವುದಿಲ್ಲ. ನಮ್ಮ ಬುಡಕ್ಕೆ ಬಂದರೆ ನಾವು ಕೂಡ ಚಿಕ್ಕಬಳ್ಳಾಪುರದಲ್ಲಿ ನಿಮ್ಮ ಬುಡಕ್ಕೆ ಬರುತ್ತೇವೆ. ಇನ್ನು ಮುಂದೆ ಪ್ರತಿ ತಿಂಗಳು ಚಿಕ್ಕಬಳ್ಳಾಪುರಕ್ಕೆ ಬಂದು ಪಕ್ಷ ಸಂಘಟನೆ ಮಾಡುತ್ತೇನೆ" ಈ ಜಿಲ್ಲೆಯಲ್ಲಿ ನಾನು ಉಸ್ತುವಾರಿಯಾಗಿ ಕೆಲಸ ಮಾಡಿದ್ದು ಎಲ್ಲರ ಸಂಪರ್ಕ ಚೆನ್ನಾಗಿದೆ. ಸಂಘಟನೆ ಮಾಡುವುದು ಗೊತ್ತಿದೆ ಎಂದರು.

Karnataka Weather: ಇಂದು ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಅಬ್ಬರಿಸಲಿದ್ದಾನೆ ವರುಣ!

ಇಂದು ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಅಬ್ಬರಿಸಲಿದೆ ಮಳೆ!

Weather Report: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಒಂದು ಅಥವಾ ಎರಡು ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುತ್ತತ್ತಿಯ ಕಾವೇರಿ ನದಿಯಲ್ಲಿ ಸರಣಿ ಸಾವು; ಜೀವಹಾನಿ ತಡೆಗೆ ಕ್ರಮ ಕೈಗೊಳ್ಳಲು ಗೃಹ ಸಚಿವ ಪ್ರಿಯಾಂಕ್‌ ಖರ್ಗೆಗೆ ಎಚ್‌ಡಿಕೆ ಪತ್ರ

ಮುತ್ತತ್ತಿಯಲ್ಲಿ ಜೀವಹಾನಿ ತಡೆಗೆ ಕ್ರಮ ಕೈಗೊಳ್ಳಿ: ಎಚ್‌ಡಿಕೆ ಆಗ್ರಹ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿರುವ ಮುತ್ತತ್ತಿಯ ಕಾವೇರಿ ನದಿಯಲ್ಲಿ ಫೋಟೊ ತೆಗೆಸಿಕೊಳ್ಳಲು ಹೋಗಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪತ್ರ ಬರೆದಿದ್ದು, ಮುತ್ತತ್ತಿಯಲ್ಲಿ ಪ್ರಾಣಹಾನಿ ತಡೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಅನಿವಾಸಿ ಕನ್ನಡಿಗರಿಂದ NRI ಸಚಿವಾಲಯಕ್ಕಾಗಿ ಅಭಿಯಾನ; Xನಲ್ಲಿ ಟ್ರೆಂಡ್‌ ಆಯ್ತು ಕನ್ನಡಿಗರ ಧ್ವನಿ

ಅನಿವಾಸಿ ಕನ್ನಡಿಗರಿಂದ NRI ಸಚಿವಾಲಯಕ್ಕಾಗಿ ಅಭಿಯಾನ

ಕನ್ನಡಿಗ ಸಮಸ್ಯೆಗೆ ಸ್ಪಂದಿಸಲು ಕರ್ನಾಟಕ ಅನಿವಾಸಿ ಒಕ್ಕೂಟದ ವತಿಯಿಂದ ಎನ್‌ಆರ್‌ಐ ಸಚಿವಾಲಯವನ್ನು ತಕ್ಷಣ ಜಾರಿಗೆ ತರಬೇಕು ಹಾಗೂ ಡಾ. ಆರತಿ ಕೃಷ್ಣ ಅವರನ್ನು ಎನ್‌ಆರ್‌ಐ ಸಚಿವರಾಗಿ ನೇಮಕ ಮಾಡಬೇಕೆಂದು ಆಗ್ರಹಿಸಿ ಟ್ವಿಟರ್‌ನಲ್ಲಿ ಅಭಿಯಾನ ನಡೆಸಲಾಗುತ್ತಿದೆ.

Davangere News: ದಾವಣಗೆರೆಯಲ್ಲಿ ಮದ್ಯದ ನಶೆಯಲ್ಲಿ ಯುವತಿ ರಂಪಾಟ; ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ, ವಿಡಿಯೊ ವೈರಲ್!

ದಾವಣಗೆರೆಯಲ್ಲಿ ಮದ್ಯದ ನಶೆಯಲ್ಲಿ ಯುವತಿ ರಂಪಾಟ; ವಿಡಿಯೊ ವೈರಲ್!

ದಾವಣಗೆರೆಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ಪರಿಶೀಲನೆ ವೇಳೆ ಪೊಲೀಸರು ಯುವತಿಯನ್ನು ತಡೆದಿದ್ದಾರೆ. ಈ ವೇಳೆ ಬ್ರೆಥಲೈಜರ್ ಮೂಲಕ ಆಲ್ಕೋಹಾಲ್‌ ಸೇವನೆ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಆದರೆ, ಗಾಳಿ ಊದುವುದು ಬಿಟ್ಟು, ಉಸಿರು ಒಳಗೆಳೆದು ಯುವತಿ ನಾಟಕವಾಡಿದ್ದಾಳೆ. ನಂತರ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ರಸ್ತೆಯಲ್ಲಿ ಹೈಡ್ರಾಮಾ ಮಾಡಿದ್ದಾಳೆ.

Pavagada News: ಪಾವಗಡದಲ್ಲಿ ಶ್ರದ್ಧಾ-ಭಕ್ತಿಯಿಂದ ಮೊಹರಂ ಆಚರಣೆ

ಪಾವಗಡದಲ್ಲಿ ಶ್ರದ್ಧಾ-ಭಕ್ತಿಯಿಂದ ಮೊಹರಂ ಆಚರಣೆ

Pavagada News: ಹಿಂದೂ-ಮುಸ್ಲಿಮರ ಭಾವೈಕ್ಯತೆ, ಸೌಹಾರ್ದತೆ ಮತ್ತು ಸಹಬಾಳ್ವೆಯ ಪ್ರತೀಕವಾಗಿರುವ ಮೊಹರಂ ಹಬ್ಬವನ್ನು ಪಟ್ಟಣದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಂಜಾಗಳ ಮೆರವಣಿಗೆ, ಸಾಂಪ್ರದಾಯಿಕ ವಾದ್ಯಗಳ ನಾದ ಹಾಗೂ ಭಕ್ತರ ಜಯಘೋಷಗಳು ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸಿವೆ.

ತಾಕತ್ತಿದ್ರೆ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ: ಎಸ್.ಟಿ. ಸೋಮಶೇಖರ್‌ಗೆ ಎಸ್. ಹರೀಶ್ ಸವಾಲು

ಎಸ್.ಟಿ. ಸೋಮಶೇಖರ್‌ಗೆ ತಾಕತ್ತಿದ್ರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿ

S Harish: ಎಸ್‌.ಟಿ. ಸೋಮಶೇಖರ್ 10 ಸಾರಿ ಗೆದ್ದರೂ ಸಚಿವರಾಗುತ್ತಿರಲಿಲ್ಲ. ಇವರು ನಮ್ಮ ಪಕ್ಷಕ್ಕೆ ಬಂದುದರಿಂದ ಸಚಿವರಾಗಿದ್ದಾರೆ. ಕಾಂಗ್ರೆಸ್ಸಿನಲ್ಲಿ ಇನ್ನು 10 ಸಾರಿ ಗೆದ್ದರೂ ಸಚಿವರಾಗುವುದೂ ಇಲ್ಲ ಎಂದು ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಎಸ್. ಹರೀಶ್ ಹೇಳಿದ್ದಾರೆ.

Bengaluru Metro: ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ವೇಳೆ ವಿದ್ಯುತ್‌ ಸ್ಪರ್ಶಿಸಿ ಕಾರ್ಮಿಕ ಸಾವು

ಮೆಟ್ರೋ ಕಾಮಗಾರಿ ವೇಳೆ ವಿದ್ಯುತ್‌ ಸ್ಪರ್ಶಿಸಿ ಕಾರ್ಮಿಕ ಸಾವು

ಬೆಂಗಳೂರಿನ ಟ್ರಿನಿಟಿ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿರುವ ಪಿಲ್ಲರ್ ಸಂಖ್ಯೆ 153ರ ಸಮೀಪ ಅರ್ಥ್ ಪಿಟ್ ಕಾಮಗಾರಿ ನಡೆಸುತ್ತಿದ್ದ ವೇಳೆ ವಿದ್ಯುತ್ ತಗುಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ದುರ್ಘಟನೆಗೆ ನಿಖರವಾದ ಕಾರಣವೇನು ಮತ್ತು ಸುರಕ್ಷತಾ ಕ್ರಮಗಳಲ್ಲಿ ಏನಾದರೂ ಲೋಪಗಳಿದ್ದವೇ ಎಂಬುದರ ಬಗ್ಗೆ ತಿಳಿಯಲು ಅಧಿಕಾರಿಗಳು ಸಮಗ್ರ ತನಿಖೆ ಆರಂಭಿಸಿದ್ದಾರೆ.

ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯಾರನ್ನೂ ಸಹಿಸಲ್ಲ; ಅಧಿಕಾರಿಗಳಿಗೆ ಸಿಎಂ ಖಡಕ್‌ ಎಚ್ಚರಿಕೆ

ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯಾರನ್ನೂ ಸಹಿಸಲ್ಲ: ಸಿಎಂ

ಬೆಂಗಳೂರಿನ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ನಡೆದ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ. ನೀವುಗಳು ಘನತೆ ಉಳಿಸಿಕೊಂಡರೆ ಇಲಾಖೆಯ ಘನತೆ ಉಳಿಯುತ್ತದೆ. ಇಲಾಖೆ ಘನತೆ ಉಳಿದರೆ ಸರ್ಕಾರದ ಘನತೆ ಹೆಚ್ಚುತ್ತದೆ ಎಂದು ಅಧಿಕಾರಿಗಳಿಗೆ ಸಿಎಂ ಸಲಹೆ ನೀಡಿದ್ದಾರೆ.

Loading...