ವೀಕೆಂಡ್ನಲ್ಲಿ ಯುಗಾದಿ-ರಂಜಾನ್ ಶಾಪಿಂಗ್ ಮೇನಿಯಾ
Ugadi-Ramzan Shopping: ವೀಕೆಂಡ್ ಆರಂಭವಾಗಿಲ್ಲ! ಆಗಲೇ ಮುಂಬರುವ ಯುಗಾದಿ- ರಂಜಾನ್ ಹಬ್ಬಗಳ ಶಾಪಿಂಗ್ ಎಲ್ಲೆಡೆ ಆರಂಭವಾಗಿದೆ. ಯಾವ್ಯಾವ ಬಗೆಯವು ಈ ಹಬ್ಬದ ಸೀಸನ್ನಲ್ಲಿ ಬಂದಿವೆ? ಯಾವುದಕ್ಕೆ ಬೇಡಿಕೆ ಹೆಚ್ಚಿದೆ? ಈ ಕುರಿತಂತೆ ಇಲ್ಲಿದೆ ವರದಿ.
ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ಘಟನೆ ನಡೆದಿದೆ. ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಗೆ ಲವ್ ಮಾಡುವಂತೆ ಸಹಪಾಠಿ ಚುಡಾಯಿಸುತ್ತಿದ್ದ. ಪ್ರೀತಿಸುವಂತೆ ಒತ್ತಡ ಹಾಕಿದ್ದರಿಂದ ಶಾಲಾ ಕಟ್ಟಡದ ಮೇಲಿಂದ ಜಿಗಿದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ.
BY Vijayendra: ಬಜೆಟ್ನಲ್ಲಿ ಮುಖ್ಯಮಂತ್ರಿಗಳು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿ ಕೈ ತೊಳೆದುಕೊಳ್ಳುವ ಕುತಂತ್ರಕ್ಕೆ ಈ ಬಜೆಟ್ಟನ್ನು ಸೀಮಿತ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಕಂಪನಿಯು ಕ್ಯೂ3ಎಫ್ವೈ26ನಲ್ಲಿ ಬಲವಾದ ವೇಗವನ್ನು ಕಂಡಿತು. ಇದರ ವೈಯಕ್ತಿಕ ಎಪಿಇ ವರ್ಷದಿಂದ ವರ್ಷಕ್ಕೆ 38% ರಷ್ಟು ಬೆಳೆದಿದೆ, ಇದು ಉದ್ಯಮದ ಸರಾಸರಿಗಿಂತ ಹೆಚ್ಚಿನದಾಗಿದೆ. ಎಫ್ವೈ26 ರಲ್ಲಿ, ಕಂಪನಿಯು ಸುಮಾರು 650 ಕೋಟಿ ರೂ.ಗಳ ಹೊಸ ವ್ಯವಹಾರ ಮತ್ತು ಸುಮಾರು 2400 ಕೋಟಿ ರೂ.ಗಳ ಒಟ್ಟು ಪ್ರೀಮಿಯಂ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ.
LPG Cylinder Shortage: ಈ ಇಂಧನ ಬೆಲೆ ಏರಿಕೆಯಿಂದ ಜನ ಪರದಾಡುತ್ತಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರ ಏನೂ ಮಾಡಲು ಆಗುವುದಿಲ್ಲ. ಕೇಂದ್ರ ಸರ್ಕಾರ ಇದಕ್ಕೆ ಹೊಣೆ. ಕೇಂದ್ರ ಸರ್ಕಾರ ವಿದೇಶಾಂಗ ನೀತಿ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
BESCOM: ಗೃಹ ಬಳಕೆಗೆ ಪಡೆದ (ಎಲ್ಟಿ 1) ವಿದ್ಯುತ್ ಸಂಪರ್ಕವನ್ನು ಕೆಲವು ಗ್ರಾಹಕರು ಅಂಗಡಿ-ಮುಂಗಟ್ಟು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಅತಿಥಿ ಗೃಹಗಳು, ಮೆಸ್, ಸರ್ವೀಸ್ ಅಪಾರ್ಟ್ಮೆಂಟ್, ಪೇಯಿಂಗ್ ಗೆಸ್ಟ್, ಕಚೇರಿ ಮುಂತಾದ ಉದ್ದೇಶಗಳಿಗೆ (ಎಲ್ಟಿ 1 ಸಂಪರ್ಕ) ಅನಧಿಕೃತವಾಗಿ ಬಳಸುತ್ತಿರುವುದು ಬೆಸ್ಕಾಂ ಗಮನಕ್ಕೆ ಬಂದ್ದಿದ್ದು, ಇಂತಹ ಸಂಪರ್ಕಗಳನ್ನು ತಕ್ಷಣವೇ ಕಡಿತಗೊಳಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆಸ್ಕಾಂ ಎಚ್ಚರಿಸಿದೆ.
ಮೈಸೂರು ರೇಷ್ಮೆ ಹೆಸರಿನಲ್ಲಿ ಮೈಸೂರಿನಲ್ಲಿ ಕುತಂತ್ರಿಗಳ ದೊಡ್ಡ ಜಾಲವೊಂದು ಕೆಲಸ ಮಾಡುತ್ತಿದೆ. ಅದರ ಪರಿಣಾವೇ ಮೈಸೂರಿನ ಕೆಲ ಖಾಸಗಿ ಸೀರೆ ಮಳಿಗೆಗಳ ಮೇಲೆ ಕೆಎಸ್ ಐಸಿ ಪದ ಬಳಕೆಯ ದುರುಪಯೋಗ ಆಗಿದೆ. ಮೈಸೂರು ರೇಷ್ಮೆ ಸೀರೆ ಮಾದರಿ ಹೋಲುವ ಚೀನಾ ರೇಷ್ಮೆ ಸೀರೆಗಳನ್ನೇ ಮೈಸೂರು ರೇಷ್ಮೆ ಸೇರೆ ಎಂದು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ, ಆದರೆ ಇದನ್ನು ಪ್ರಶ್ನಿಸಬೇಕಾದ ಮಂದಿ ಜಾಣ ಕುರುಡರಾಗಿರುವುದು ನಿಜಕ್ಕೂ ಕಳವಳಕಾರಿ ಸಂಗತಿ.
ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳನ್ನು ಮೊಬೈಲ್ ಫೋನ್ನಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ (ಐಟಿ) ಅಪರಾಧವಾಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಕೇರಳದ ತ್ರಿಶೂರು ಜಿಲ್ಲೆಯ ಚೊಟ್ಟೂರುಪುರ ಕಿಲ್ಲನೂರಿನ ಪಿ.ಜೆ.ಬಿನೋಜ್ ಎಂಬಾತ ಪ್ರಕರಣದ ಕುರಿತು ಅರ್ಜಿ ಸಲ್ಲಿಸಿದ್ದ.
Health Tips: ಇಂದಿನ ಯುವಕರಲ್ಲಿ ಸದಾ ಕಾಲ ಅಬ್ಸೆಂಟ್ ಮೈಂಡ್, ಸಣ್ಣ ಪುಟ್ಟ ವಿಷಯಗಳನ್ನು ಸಹ ಬಹುಬೇಗ ಮರೆತು ಬಿಡುತ್ತಾರೆ. ಇದಕ್ಕೆ ಕಾರಣ ಏನು? ಚಿಕ್ಕ ವಯಸ್ಸಿನ ಯಾವ ಸಂಗತಿಗಳು ಸಣ್ಣ ವಯಸ್ಸಿನಲ್ಲೇ ಮರೆವಿನ ಸಮಸ್ಯೆಗೆ ಕಾರಣವಾಗುತ್ತದೆ? ಎನ್ನುವ ವಿಚಾರಗಳನ್ನು ಪ್ರೊ. ಸುತ್ತೂರು ಮಾಲಿನಿ ಅವರು ಮಾಹಿತಿ ನೀಡಿದ್ದಾರೆ..
ಬೆಂಗಳೂರಿನ ಅದಮ್ಯಚೇತನ, ಇಸ್ಕಾನ್ನ ಅಕ್ಷ ಯಪಾತ್ರ, ಸಿದ್ದಗಂಗಾ ಮಠ, ಧರ್ಮಸ್ಥಳ ದಂತಹ ಕ್ಷೇತ್ರದಲ್ಲಿ ನಿತ್ಯ ಲಕ್ಷಾಂತರ ಜನರಿಗೆ ಅನ್ನಪ್ರಸಾದ ವನ್ನು ಸಿದ್ಧಪಡಿಸಲಾಗುತ್ತದೆ. ಆದರೆ ಈ ಎಲ್ಲ ಕಡೆ ಸೋಲಾರ್, ಹಬೆಯಾಧಾರಿತ ಆಹಾರ ತಯಾರಿಕಾ ಕ್ರಮ ಅಥವಾ ಸೋಲಾರ್ ಬಳಸುವುದರಿಂದ ವಾಣಿಜ್ಯ ಸಿಲಿಂಡರ್ಗಳ ಕೊರತೆ ಯಾದರೂ ಚಿಂತಿಸುತ್ತಿಲ್ಲ.
ಭಾರತದ ಜೀವನಕ್ರಮದಲ್ಲಿಯೇ ಸಹೋದರತೆ, ಭ್ರಾತೃತ್ವ, ಸಹಿಷ್ಣುತೆ, ಧರ್ಮಜಾಗೃತಿ ಜೀವನ ಪಾಠವನ್ನು ಕಲಿಸಲಾಗಿದೆ.ಹೀಗಾಗಿಯೇ ನಮ್ಮ ಸಂವಿಧಾನದ ಹೃದಯವಾದ ಪೀಠಿಕೆಯಲ್ಲಿ ಭಾರತದ ಪ್ರೆಜೆಗಳಾದ ನಾವು ಭಾರತವನ್ನು ಒಂದು ಸರ್ವತಂತ್ರ ಸ್ವತಂತ್ರ, ಸಾರ್ವಭೌಮ, ಜಾತ್ಯಾತೀತ ಗಣರಾಜ್ಯವನ್ನಾಗಿ ರೂಪಿಸಲು ನಾವು ಕಟಿಬದ್ಧರಾಗಿದ್ದೇವೆ ಎಂದ ತಿಳಿಸಿದೆ
ಅಪರಾಧಿಕ ರಾಜಿಯೋಗ್ಯ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗ ಸಂಬಂಧಿತ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನ ಪ್ರಕರಣಗಳು, ಗ್ರಾಹಕರ ವೇದಿಕೆ ಸಂಬಂಧಿತ ವ್ಯಾಜ್ಯಗಳು, ರಿಯಲ್ ಎಸ್ಟೇಟ್ ಪ್ರಕರಣಗಳು, ಸಾಲ ವಸೂಲಾತಿ, ಚೆಕ್ ಅಮಾ ನತ್ತು ಪ್ರಕರಣಗಳು, ಭೂಸ್ವಾಧೀನ, ವೇತನ ಭತ್ಯೆ ಹಾಗೂ ಪಿಂಚಣಿ ಪ್ರಕರಣಗಳು ಸೇರಿದಂತೆ ಸಾರ್ವಜನಿಕ ಉಪಯುಕ್ತ ಸೇವೆಗಳ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸ ಬಹುದು
ಮೂರು ತಿಂಗಳು ಕಳೆದರೂ ಅಧಿಕಾರಿಗಳು ರಮ್ಯಾ ವಿರುದ್ಧ ಕ್ರಮ ಕೈಗೊಂಡಿಲ್ಲ, ಕಾನೂನು ಕ್ರಮ ಜರುಗಿಸಬೇಕು. ನಮಗೆ ನ್ಯಾಯ ದೊರಕಿಸಿಕೊಡಬೇಕು ಇಲ್ಲಿಯವರೆಗೂ ಹಣ ಕಳೆದು ಕೊಂಡವರಿಗೆ ಪರಿಹಾರ ನೀಡಿಲ್ಲ, ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಗ್ರಾಮೀಣ ಸೇವಕಿಯಾಗಿ ಕೆಲಸ ಮಾಡುತ್ತಿರುವ ರಮ್ಯ ವಂಚನೆಯ ಕೃತ್ಯ ಎಸಗಿದ್ದಾಳೆ
ದೇಶಾದ್ಯಂತ ಈಗ ವಿವಾಹೇತರ ಸಂಬಂಧಗಳು ಹೆಚ್ಚಾಗುತ್ತಿದೆ. ಇದಕ್ಕೆ ವೇದಿಕೆ ನಿರ್ಮಿಸಿಕೊಟ್ಟಿರುವುದು ವಿವಾಹೇತರ ಡೇಟಿಂಗ್ ಅಪ್ಲಿಕೇಶನ್. ಸುಮಾರು 40 ಲಕ್ಷ ಭಾರತೀಯರು ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ ಬಳಸುತ್ತಿದ್ದು, ಇದರಲ್ಲಿ ಹೆಚ್ಚಿನ ಪುರುಷರು 25 ರಿಂದ 30 ವರ್ಷ ವಯಸ್ಸಿನ ಮಹಿಳೆಯರನ್ನು ಹುಡುಕಲು ಒಲವು ತೋರುತ್ತಿರುವುದು ಅದೇ ರೀತಿ ಮಹಿಳೆಯರು 30 ರಿಂದ 40 ವರ್ಷ ವಯಸ್ಸಿನ ಪುರುಷರನ್ನು ಹುಡುಕುತ್ತಿರುವುದನ್ನು ಅಂಕಿ ಅಂಶಗಳು ಬಹಿರಂಗ ಪಡಿಸಿವೆ.
ಭಾರತದ ನಗರ ಪ್ರದೇಶದ ಮನೆಗಳಲ್ಲಿ ಹಳದಿ ಕಲೆಗಳು, ಉಪ್ಪುನೀರಿನ ಪಾಚಿಯಂತಹ ಪದರ (Limescale) ಮತ್ತು ತುಕ್ಕಿನಂತಹ ಕಠಿಣ ಕಲೆಗಳು ದೊಡ್ಡ ಸಮಸ್ಯೆಯಾಗಿವೆ. ಕಾಲಾನಂತರ ದಲ್ಲಿ, ಇಂತಹ ಕಲೆಗಳನ್ನು ತೆಗೆಯುವುದು ಅಸಾಧ್ಯವೆಂದು ಗ್ರಾಹಕರು ನಂಬತೊಡಗಿದ್ದಾರೆ ಮತ್ತು ಸೂಕ್ತ ಪರಿಹಾರವಿಲ್ಲದೆ ಡಿಟರ್ಜೆಂಟ್, ಬ್ಲೀಚ್ ಅಥವಾ ಫಿನೈಲ್ನಂತಹ ಸಾಮಾನ್ಯ ವಸ್ತುಗಳ ಮೇಲೆ ಅವಲಂಬಿತರಾಗಿದ್ದಾರೆ.
LPG Crisis: ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಎಲ್ಪಿಜಿ ಅಭಾವವು ಇದೀಗ ರಾಜ್ಯಕ್ಕೂ ತಟ್ಟಿದೆ. ಕೆಲವು ಹೋಟೆಲ್ಗಳು ಬಂದ್ ಆಗುವ ಭೀತಿ ಎದುರಿಸುತ್ತಿದ್ದರೆ, ಇನ್ನು ಕೆಲವು ಕಡೆ ವೆರೈಟಿ ಮೆನುಗೆ ಕತ್ತರಿ ಹಾಕಿ ಕೆಲವೇ ಕೆಲವು ಐಟಂಗಳನ್ನಷ್ಟೇ ನೀಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್, ಶಾಲೆಗಳ ಮಧ್ಯಾಹ್ನ ಬಿಸಿಯೂಟ ಬಂದ್ ಆಗುವ ಆತಂಕ ಎದುರಿಸುತ್ತಿವೆ.
MLA Dr. Chandru Lamani: ಗುತ್ತಿಗೆದಾರನಿಂದ 5 ಲಕ್ಷ ರುಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದು ಬಂಧನಕ್ಕೊಳಗಾಗಿದ್ದ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಜಾಮೀನು ಮಂಜೂರಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.