ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Gold Price Today: ಸ್ವರ್ಣಪ್ರಿಯರಿಗೆ ಮತ್ತೆ ಶಾಕ್‌! ಚಿನ್ನದ ದರದಲ್ಲಿ ಭಾರೀ ಏರಿಕೆ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 1st July 2025: ಇಂದು 22 ಕ್ಯಾರಟ್‌ನ 8 ಗ್ರಾಂ ಚಿನ್ನ 72,160 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 90,200 ರೂ. ಮತ್ತು 100 ಗ್ರಾಂಗೆ 9,02,000 ರೂ. ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನ 78,720 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 98,400 ರೂ. ಮತ್ತು 100 ಗ್ರಾಂಗೆ 9,84,000 ರೂ. ಪಾವತಿಸಬೇಕಾಗುತ್ತದೆ.

UPS blast: ದಾವಣಗೆರೆಯಲ್ಲಿ ಯುಪಿಎಸ್‌ ಸ್ಫೋಟಗೊಂಡು ಇಬ್ಬರು ಸಾವು

ದಾವಣಗೆರೆಯಲ್ಲಿ ಯುಪಿಎಸ್‌ ಸ್ಫೋಟಗೊಂಡು ಇಬ್ಬರು ಸಾವು

ದಾವಣಗೆರೆಯ ಕಾಯಿಪೇಟೆಯಲ್ಲಿ ಯುಪಿಎಸ್ ಸ್ಪೋಟಗೊಂಡ (UPS blast) ಪರಿಣಾಮ ಅಗ್ನಿ ಅವಘಡ (fire accident) ಸಂಭವಿಸಿದ್ದು, ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ವಿದ್ಯುತ್‌ ನಿರ್ವಹಣೆಗೆ ಕಳಪೆ ಯುಪಿಎಸ್‌ಗಳನ್ನು ಬಳಸದಂತೆ ವಿದ್ಯುತ್‌ ಇಲಾಖೆ ಈ ಹಿಂದೆ ಎಚ್ಚರಿಕೆ ನೀಡಿತ್ತು.

Fire Accident: ವಿಕ್ಟೋರಿಯಾ ಆಸ್ಪತ್ರೆಯ ವಾರ್ಡ್‌ನಲ್ಲಿ ಬೆಂಕಿ ಆಕಸ್ಮಿಕ, ರೋಗಿಗಳು ಪಾರು

ವಿಕ್ಟೋರಿಯಾ ಆಸ್ಪತ್ರೆಯ ವಾರ್ಡ್‌ನಲ್ಲಿ ಬೆಂಕಿ ಆಕಸ್ಮಿಕ, ರೋಗಿಗಳು ಪಾರು

Fire Accident: ವಿಕ್ಟೋರಿಯಾ ಆಸ್ಪತ್ರೆಯ ಸ್ವಿಚ್ ಬೋರ್ಡ್​​ನಲ್ಲಿ ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಬರ್ನ್ ವಾರ್ಡ್​​ನ ಸೆಮಿನಾರ್ ಕೋಣೆಯಲ್ಲಿ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಮತ್ತು ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ವೈದ್ಯರು ಕೂಡಲೇ ಎಲ್ಲಾ ರೋಗಿಗಳನ್ನು ಹೆಚ್ ಬ್ಲಾಕ್‌ಗೆ ಶಿಫ್ಟ್ ಮಾಡಿದ್ದಾರೆ.

Toll price hike: ಇಂದಿನಿಂದ ಎಲೆಕ್ಟ್ರಾನಿಕ್‌ ಸಿಟಿ, ಅತ್ತಿಬೆಲೆ ಎಲಿವೇಟೆಡ್‌ ರಸ್ತೆ ಟೋಲ್‌ ದರ ಹೆಚ್ಚಳ

ಇಂದಿನಿಂದ ನಗರದ ಎಲಿವೇಟೆಡ್‌ ರಸ್ತೆಗಳಲ್ಲಿ ಟೋಲ್‌ ದರ ಹೆಚ್ಚಳ

Toll Price Hike: ಬೆಂಗಳೂರಿನ ಎಲಿವೇಟೆಡ್ ಕಾರಿಡಾರ್ ಟೋಲ್​​ಗೆ ಒಳಪಟ್ಟ ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆ ಟೋಲ್​ ಗಳಲ್ಲಿ ನಾಲ್ಕು ಚಕ್ರದ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳು ಒಂದು ಪ್ರಯಾಣಕ್ಕೆ ರೂ.65, ಎರಡು ಕಡೆಗಿನ ಪ್ರಯಾಣಕ್ಕೆ ರೂಪಾಯಿ 95 ಹಾಗೂ ಮಾಸಿಕ ಪಾಸ್‌ಗೆ ₹1,885 ಶುಲ್ಕ ವಿಧಿಸಲಾಗುತ್ತದೆ.

Tigers death: ಹುಲಿಗಳ ಸಾವು, ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ

ಹುಲಿಗಳ ಸಾವು, ಕರ್ತವ್ಯ ಲೋಪ ಎಸಗಿದ 3 ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ

Tigers Death: ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪ ಮೇಲ್ನೋಟಕ್ಕೆ ಕಂಡು ಬಂದಿತ್ತು. ಅದರಂತೆ ಅರಣ್ಯ ಇಲಾಖೆಯು ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ವೈ, ಹನೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಜಾನನ ಹೆಗಡೆ ಮತ್ತು ವಲಯ ಅರಣ್ಯಾಧಿಕಾರಿ ಮಾದೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಆದೇಶಿಸಿದೆ.

Murder Case: ತಾಯಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡವನನ್ನು ಕೊಚ್ಚಿ ಕೊಂದರು

ತಾಯಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡವನನ್ನು ಕೊಚ್ಚಿ ಕೊಂದರು

Murder Case: ಶಿವಮೊಗ್ಗದ ಕುಂಸಿಯ ಮಲ್ಲೇಶಪ್ಪ ಎಂಬವರ ಎರಡನೇ ಪತ್ನಿಯ ಜೊತೆ ಕೊಲೆಯಾದ ವ್ಯಕ್ತಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದರಿಂದ ಮಲ್ಲೇಶಪ್ಪನ ಇಬ್ಬರು ಮಕ್ಕಳು ವ್ಯಗ್ರರಾಗಿದ್ದರು. ನಿನ್ನೆ ಇಬ್ಬರೂ ಸೇರಿಕೊಂಡು ವಸಂತನನ್ನು ಕೊಚ್ಚಿ ಕೊಂದಿದ್ದಾರೆ.

2nd PUC Exam-3 result: ದ್ವಿತೀಯ PUC ಪರೀಕ್ಷೆ-3ರ ಫಲಿತಾಂಶ ಪ್ರಕಟ, ಹೀಗೆ ಚೆಕ್ ಮಾಡಿ

ದ್ವಿತೀಯ PUC ಪರೀಕ್ಷೆ-3ರ ಫಲಿತಾಂಶ ಪ್ರಕಟ, ಹೀಗೆ ಚೆಕ್ ಮಾಡಿ

2nd PUC Exam-3: ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರಲ್ಲಿ ಉತ್ತೀರ್ಣರಾಗದ 82,683 ವಿದ್ಯಾರ್ಥಿಗಳು ಪರೀಕ್ಷೆ-3ಕ್ಕೆ ಹಾಜರಾಗಿದ್ದರು. ಜೂನ್ 9 ರಿಂದ ಜೂನ್ 20, 2025ರವರೆಗೆ ಒಟ್ಟು 262 ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ಅಳವಡಿಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲಾಯಿತು.

Star Fashion 2025: ಬೀಚ್‌ವೇರ್‌ ಕ್ರೊಶೆಟ್‌ ಕೋ ಆರ್ಡ್ ಸೆಟ್‌ನಲ್ಲಿ ನಟಿ ಪಲಕ್‌ ತಿವಾರಿಯ ಹಾಟ್‌ ಲುಕ್‌!

ಬೀಚ್‌ವೇರ್‌ ಕ್ರೊಶೆಟ್‌ ಕೋ ಆರ್ಡ್ ಸೆಟ್‌ನಲ್ಲಿ ನಟಿ ಪಲಕ್‌ ತಿವಾರಿ

Star Fashion 2025: ಗ್ಲಾಮರಸ್‌ ಲುಕ್‌ ನೀಡುವ ಉಲ್ಲನ್‌ನಲ್ಲಿ ಹೆಣೆದಂತಿರುವ, ಟು ಪೀಸ್‌ ಬೀಚ್‌ವೇರ್ ಕ್ರೊಶೆಟ್‌ ಕೋ ಆರ್ಡ್ ಸೆಟ್‌ನಲ್ಲಿ ಬಾಲಿವುಡ್‌ ತಾರೆ ಪಲಕ್‌ ತಿವಾರಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರೆಟಿಗಳ ಹಾಟ್‌ ಫೇವರೆಟ್‌ ಲಿಸ್ಟ್‌ನಲ್ಲಿರುವ ಈ ಕ್ರೊಶೆಟ್‌ ಡ್ರೆಸ್‌ ಕುರಿತಂತೆ ಇಲ್ಲಿದೆ ಇಲ್ಲಿದೆ ವಿವರ.

Bengaluru Stampede: ಕಾಲ್ತುಳಿತ ಎಫೆಕ್ಟ್:‌ ಚಿನ್ನಸ್ವಾಮಿ ಸ್ಟೇಡಿಯಂಗೆ ವಿದ್ಯುತ್‌ ಸಂಪೂರ್ಣ ಕಟ್‌

ಕಾಲ್ತುಳಿತ ಎಫೆಕ್ಟ್:‌ ಚಿನ್ನಸ್ವಾಮಿ ಸ್ಟೇಡಿಯಂಗೆ ವಿದ್ಯುತ್‌ ಸಂಪೂರ್ಣ ಕಟ್‌

ಕಾಲ್ತುಳಿತ (Bengaluru Stampde) ಘಟನೆಯ ನಂತರ, ಕ್ರೀಡಾಂಗಣದ ಸುರಕ್ಷತಾ ವ್ಯವಸ್ಥೆಗಳ ಕುರಿತು ತೀವ್ರ ಚರ್ಚೆ ಆರಂಭವಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್, ಕೆಎಸ್‌ಸಿಎ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸಿತ್ತು. ಇದರ ಜೊತೆಗೆ, ಕ್ರೀಡಾಂಗಣವು ಅಗ್ನಿಸುರಕ್ಷತಾ ಮಾನದಂಡಗಳನ್ನು ಪಾಲಿಸಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

Karnataka Weather: ಇಂದಿನ ಹವಾಮಾನ; ರಾಜ್ಯದ ಈ ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ ಮುನ್ಸೂಚನೆ

ಇಂದಿನ ಹವಾಮಾನ; ರಾಜ್ಯದ ಈ ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ ಮುನ್ಸೂಚನೆ

Karnataka Weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಬಿರುಗಾಳಿ ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30°C ಮತ್ತು 20°C ಇರುವ ಸಾಧ್ಯತೆ ಇದೆ.

ಕೃಷಿ ವಿಜ್ಞಾನದಲ್ಲೂ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಲು ಕಾರ್ಟೆವಾ ಅಗ್ರಿಸೈನ್ಸ್ ಸಹಕಾರ

ಕೃಷಿ ವಿಜ್ಞಾನದಲ್ಲೂ ಮಹಿಳಾ ಪ್ರಾತಿನಿಧ್ಯ: ಕಾರ್ಟೆವಾ ಅಗ್ರಿಸೈನ್ಸ್ ಸಹಕಾರ

ಭಾರತದಲ್ಲಿ ಕೃಷಿ ಕಾರ್ಯಪಡೆಯ ಸುಮಾರು ಶೇ. 75 ರಷ್ಟಿದ್ದರೂ, ಕೃಷಿ ವಿಜ್ಞಾನದಲ್ಲಿ ಮಹಿಳೆಯರು ಗಮನಾರ್ಹವಾಗಿ ಕಡಿಮೆ ಪ್ರಾತಿನಿಧ್ಯ ಹೊಂದಿದ್ದಾರೆ. ಅವರ ಭಾಗವಹಿಸುವಿಕೆ ಹೆಚ್ಚಾಗಿ ಕಾರ್ಮಿಕ-ತೀವ್ರ, ಕಡಿಮೆ-ವೇತನದ ಪಾತ್ರಗಳಿಗೆ ಸೀಮಿತವಾಗಿದೆ. ಲಿಂಗ ಮಾನದಂಡಗಳು, ಮನೆಗಳಲ್ಲಿ ವೇತನ ರಹಿತ ಮತ್ತು ಆರೈಕೆ ಕೆಲಸ, ಮತ್ತು ಸಂಪನ್ಮೂಲ-ನಿರ್ಬಂಧಿತ ಪ್ರದೇಶಗಳಲ್ಲಿ ನೀರು ಮತ್ತು ನೈರ್ಮಲ್ಯವನ್ನು ವ್ಯವಸ್ಥೆ ಮಾಡುವ ಜವಾಬ್ದಾರಿ ಅವರಿಗೆ ಲಭ್ಯವಿರುವ ಅವಕಾಶ ಗಳನ್ನು ಮತ್ತಷ್ಟು ನಿರ್ಬಂಧಿಸಿದೆ.

Heart Attacks: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಳ; ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಿದ ಸರ್ಕಾರ

ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಳ; ತಜ್ಞರ ಸಮಿತಿ ರಚನೆ

Heart Attacks: ಹಾಸನ ಜಿಲ್ಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ 18 ಹೃದಯಾಘಾತಗಳು ಸಂಭವಿಸಿರುವುದನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೃದಯಾಘಾತಗಳು ಹೆಚ್ಚಾಗುತ್ತಿರುವು ಕುರಿತಂತೆ ಜಯದೇವ ಸಂಸ್ಥೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತಜ್ಞರಿಂದ ಅಧ್ಯಯನ ನಡೆಸಿ ವರದಿ ಪಡೆಯುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸೂಚಿಸಿದ್ದಾರೆ.

Pralhad Joshi: ಹುಬ್ಬಳ್ಳಿಯ ಕಿಮ್ಸ್‌ಗೆ 30 ಲಕ್ಷ ರೂ. ವೆಚ್ಚದ ಅತ್ಯಾಧುನಿಕ ಯಂತ್ರ ವಿತರಿಸಿದ ಪ್ರಲ್ಹಾದ್‌ ಜೋಶಿ

ಹುಬ್ಬಳ್ಳಿ ಕಿಮ್ಸ್‌ಗೆ 30 ಲಕ್ಷ ವೆಚ್ಚದ ಅತ್ಯಾಧುನಿಕ ಯಂತ್ರ ವಿತರಿಸಿದ ಜೋಶಿ

Pralhad Joshi: ಚೆನ್ನೈನ ಸಾನುಮ್ ಸ್ಯಾಂಗಿನಿಯಾಸ್ ಸಲೂಶನ್ ಪ್ರೈ.ಲಿ. ಅವರ ಸಿಎಸ್ಆರ್ ಅನುದಾನದಡಿ ಒದಗಿಸಿದ DIGIPLA 90-THERAPEUTIC PLASMA EXCHANGE (TPE) ಯಂತ್ರವನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು, ಸೋಮವಾರ ಸಂಜೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ವಿತರಿಸಿ, ಅದರ ಉದ್ಘಾಟನೆ ನೆರವೇರಿಸಿದರು.‌

Pralhad Joshi: ಕಾಂಗ್ರೆಸ್‌ನಲ್ಲಿ ಮನಮೋಹನ್‌ ಸಿಂಗ್‌, ಖರ್ಗೆ ಸ್ಥಿತಿ ಒಂದೇ: ಪ್ರಲ್ಹಾದ್‌ ಜೋಶಿ

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಕೈಗೊಂಬೆ: ಸಚಿವ ಪ್ರಲ್ಹಾದ್‌ ಜೋಶಿ

Pralhad Joshi: ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೆಸರಿಗೆ ಮಾತ್ರ ಎಐಸಿಸಿ ಅಧ್ಯಕ್ಷ ಸ್ಥಾನದಂತಹ ಹುದ್ದೆ ನೀಡಿದೆ. ಆದರೆ, ಯಾವುದೇ ತೀರ್ಮಾನ ತೆಗೆದುಕೊಳ್ಳುವಂತಹ ಅಧಿಕಾರ ‌ನೀಡದೇ ಅವರನ್ನು ಕೈಗೊಂಬೆಯಂತೆ ನಡೆಸಿಕೊಳ್ಳುತ್ತಿರುವುದು ನಿಜಕ್ಕೂ ದುರಂತ. ಅಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಇಂದು ಮಲ್ಲಿಕಾರ್ಜುನ ಖರ್ಗೆ ಇಬ್ಬರ ಸ್ಥಿತಿಯೂ ಒಂದೇ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

Karnataka Rains: ರಾಜ್ಯದಲ್ಲಿ ಮುಂದಿನ 4 ದಿನ ಜೋರು ಮಳೆ ನಿರೀಕ್ಷೆ; ಯೆಲ್ಲೋ ಅಲರ್ಟ್‌ ಘೋಷಣೆ

ರಾಜ್ಯದಲ್ಲಿ ಮುಂದಿನ 4 ದಿನ ಜೋರು ಮಳೆ ನಿರೀಕ್ಷೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಬಿರುಗಾಳಿ ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30°C ಮತ್ತು 20°C ಇರುವ ಸಾಧ್ಯತೆ ಇದೆ.

2nd PUC Exam 3 result 2025: ನಾಳೆ ಮಧ್ಯಾಹ್ನ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಬಿಡುಗಡೆ

ನಾಳೆ ಮಧ್ಯಾಹ್ನ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಬಿಡುಗಡೆ

2nd PUC Exam: ದ್ವಿತೀಯ ಪಿಯುಸಿ ಪರೀಕ್ಷೆ-3 ಅನ್ನು ಜೂನ್ 9ರಿಂದ 20ರವರೆಗೆ ನಡೆಸಲಾಗಿತ್ತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದೆ. ಹೀಗಾಗಿ ದ್ವಿತೀಯ ಪಿಯುಸಿ ಪರೀಕ್ಷೆ-3 ಹಾಗೂ ಕ್ರೋಡೀಕೃತ ಫಲಿತಾಂಶವನ್ನು ಜುಲೈ 1ರಂದು ಬಿಡುಗಡೆ ಮಾಡುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ

Star Fashion 2025: ಸಿಲ್ಸಿಲಾ ಸೀರೆ ಲುಕ್‌ನಲ್ಲಿ ಕಾಣಿಸಿಕೊಂಡು ಮರು ಟ್ರೆಂಡ್‌ಗೆ ನಾಂದಿ ಹಾಡಿದ ನಟಿ ಆಲಿಯಾ ಭಟ್‌!

ಸಿಲ್ಸಿಲಾ ಸೀರೆ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಲಿಯಾ ಭಟ್‌

Star Fashion 2025: ಹಿರಿಯ ನಟಿ ರೇಖಾ ಅವರ ಸೂಪರ್‌ ಹಿಟ್‌ ಸಿನಿಮಾ ಸಿಲ್ಸಿಲಾ ಸಿನಿಮಾದ ಸೀರೆ ಲುಕ್‌ನಲ್ಲಿ, ನಟಿ ಆಲಿಯಾ ಭಟ್‌ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ. ಮರು ಟ್ರೆಂಡ್‌ಗೆ ನಾಂದಿ ಹಾಡಿದೆ. ಏನಿದು ಸಿಲ್ಸಿಲಾ ಸೀರೆ ಲುಕ್‌? ಈ ಎಲ್ಲದರ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವಿವರ.

Golden Star Ganesh: ಹೊಸ ಫೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಬರ್ತ್‌ಡೇ ಗಿಫ್ಟ್‌ ನೀಡಿದ ಗೋಲ್ಡನ್ ಸ್ಟಾರ್ ಗಣೇಶ್

ಹೊಸ ಲುಕ್​ನಲ್ಲಿ ಅಭಿಮಾನಿಗಳಿಗೆ ಬರ್ತ್‌ಡೇ ಗಿಫ್ಟ್‌ ನೀಡಿದ ನಟ ಗಣೇಶ್

Golden Star Ganesh: ಅಭಿಮಾನಿಗಳ ಜತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಾರಿಯ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗಾಗಿ ವಿಶೇಷ ಉಡುಗೊರೆ ನೀಡಿದ್ದಾರೆ. ಹವ್ಯಾಸಿ ಛಾಯಾಗ್ರಾಹಕ ಹಾಗೂ ಪ್ರಸ್ತುತ ಶಿಲ್ಪಾ ಗಣೇಶ್ ಅವರು ನಿರ್ಮಾಣ ಮಾಡುತ್ತಿರುವ ತುಳು ಚಿತ್ರದ ನಾಯಕ ನಿತ್ಯಪ್ರಕಾಶ್ ಬಂಟ್ವಾಳ ಅವರು ಸೆರೆ ಹಿಡಿದಿರುವ ಗಣೇಶ್ ಅವರ ವಿಶೇಷ ಭಾವಚಿತ್ರಗಳನ್ನು ಗಣೇಶ್‌ ಅವರು ಅಭಿಮಾನಿಗಳ ಜತೆಗೆ ಹಂಚಿಕೊಂಡಿದ್ದಾರೆ.

Karnataka Bank: ಕರ್ಣಾಟಕ ಬ್ಯಾಂಕ್‌ ಎಂಡಿ-ಸಿಇಒ, ಕಾರ್ಯನಿರ್ವಾಹಕ ನಿರ್ದೇಶಕ ರಾಜೀನಾಮೆ; ಷೇರು ಬೆಲೆ ಭಾರಿ ಕುಸಿತ!

ಕರ್ಣಾಟಕ ಬ್ಯಾಂಕ್‌ ಎಂಡಿ-ಸಿಇಒ, ಕಾರ್ಯನಿರ್ವಾಹಕ ನಿರ್ದೇಶಕ ರಾಜೀನಾಮೆ!

Karnataka Bank: ವೈಯಕ್ತಿಕ ಕಾರಣಗಳನ್ನು ನೀಡಿ ಕರ್ಣಾಟಕ ಬ್ಯಾಂಕ್‌ನ ಎಂಡಿ-ಸಿಇಒ ಶ್ರೀಕೃಷ್ಣನ್ ಹರಿಹರ ಶರ್ಮಾ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಅವರು ರಾಜೀನಾಮೆ ನೀಡಿದ್ದಾರೆ. ಎಂಡಿ-ಸಿಇಒ ಮತ್ತು ನಿರ್ದೇಶಕ ಸ್ಥಾನಕ್ಕೆ ಹೊಸಬರನ್ನು ನೇಮಿಸಲು ಬ್ಯಾಂಕ್‌ ಆಡಳಿತ ಮಂಡಳಿಯು ಶೋಧನಾ ಸಮಿತಿಯನ್ನು ರಚಿಸಿದೆ.

STEMI Program: ರಾಜ್ಯಾದ್ಯಂತ ಸ್ಟೆಮಿ ಯೋಜನೆ ವಿಸ್ತರಣೆ; ಇನ್ನುಮುಂದೆ ತಾಲೂಕು ಆಸ್ಪತ್ರೆಗಳಲ್ಲಿ ಹೃದಯಾಘಾತಕ್ಕೆ ಚಿಕಿತ್ಸೆ

ಇನ್ನುಮುಂದೆ ತಾಲೂಕು ಆಸ್ಪತ್ರೆಗಳಲ್ಲಿ ಹೃದಯಾಘಾತಕ್ಕೆ ಚಿಕಿತ್ಸೆ

Heart attack cases: ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಿಗೆ ಸ್ಟೆಮಿ ಯೋಜನೆಯನ್ನು ವಿಸ್ತರಿಸಿ ಸರ್ಕಾರ ಆದೇಶಿಸಿದೆ. ಇದರಿಂದ ಇನ್ನುಮುಂದೆ ತಾಲೂಕು ಆಸ್ಪತ್ರೆಗಳಲ್ಲೇ ಹೃದಯಾಘಾತಕ್ಕೆ ಒಳಗಾದವರಿಗೆ ತುರ್ತು ಚಿಕಿತ್ಸೆ ನೀಡಲು ವ್ಯವಸ್ಥೆಯಾಗಲಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಮಾಹಿತಿ ನೀಡಿದ್ದಾರೆ.

Pravasi Prapancha: ಕೆ.ಮೋಹನ್ ಸುಂದರ್ ಎಂಬ ಕನಸುಗಾರನ ಅಚ್ಚರಿಯ ಸಾಧನೆ! ಜಗತ್ತು ಸುತ್ತುವ ಕನಸಿಗೆ ರೆಕ್ಕೆ ಕಟ್ಟುವ ಟ್ರಾವೆಲ್ ಮಾರ್ಟ್

ಜಗತ್ತು ಸುತ್ತುವ ಕನಸಿಗೆ ರೆಕ್ಕೆ ಕಟ್ಟುವ ಟ್ರಾವೆಲ್ ಮಾರ್ಟ್

Trawel Mart: ಈಗೆಲ್ಲ ವಿದೇಶ ಸುತ್ತುವುದು ಕನಸಾಗಿ ಉಳಿದಿಲ್ಲ. ಕಾಣುವ ಕನಸನ್ನು ನನಸು ಮಾಡಲು ಸಾವಿರಾರು ಪ್ರಯಾಣ ಸಂಸ್ಥೆಗಳು ಎದ್ದು ನಿಂತಿವೆ. ಮಧ್ಯಮ ವರ್ಗದ ಜನರನ್ನೂ ವಿದೇಶ ಪ್ರವಾಸದತ್ತ ಸೆಳೆಯುತ್ತಿರುವ ವಿಶ್ವಾಸಾರ್ಹ ಟ್ರಾವೆಲ್ ಏಜೆನ್ಸಿಯಲ್ಲಿ 'ಟ್ರಾವೆಲ್ ಮಾರ್ಟ್' ಮುಂಚೂಣಿಯಲ್ಲಿದೆ.

Bengaluru Techie: ಲಕ್ಷ ಲಕ್ಷ ತೆರಿಗೆ ಕಟ್ಟುತ್ತಿದ್ದ ವ್ಯಕ್ತಿ ಈಗ ನಿರುದ್ಯೋಗಿ; ಬೆಂಗಳೂರು ಟೆಕ್ಕಿಯ ಕರುಣಾಜನಕ ಸ್ಟೋರಿ!

ಲಕ್ಷ ಲಕ್ಷ ತೆರಿಗೆ ಕಟ್ಟುತ್ತಿದ್ದ ವ್ಯಕ್ತಿ ಈಗ ನಿರುದ್ಯೋಗಿ!

Bengaluru Techie: ಕಳೆದ ಐದು ವರ್ಷಗಳಲ್ಲಿ 30 ಲಕ್ಷ ರೂ. ಗಿಂತಲೂ ಹೆಚ್ಚು ಆದಾಯ ತೆರಿಗೆ ಪಾವತಿಸಿದ್ದ ಬೆಂಗಳೂರಿನ ಟೆಕ್ಕಿಯೊಬ್ಬರು ದಿಢೀರನೆ ಕೆಲಸ ಕಳೆದುಕೊಂಡು, ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾನದಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್‌ ಹಂಚಿಕೊಂಡಿದ್ದಾರೆ.

Madenuru Manu: ಮಡೆನೂರು ಮನುಗೆ ಬಿಗ್ ರಿಲೀಫ್; ಕನ್ನಡ ಚಿತ್ರರಂಗದಿಂದ ವಿಧಿಸಿದ್ದ ನಿಷೇಧ ತೆರವು

ಕನ್ನಡ ಚಿತ್ರರಂಗದಿಂದ ಮಡೆನೂರು ಮನು ಮೇಲೆ ವಿಧಿಸಿದ್ದ ನಿಷೇಧ ತೆರವು

Madenuru Manu: ಅತ್ಯಾಚಾರ ಆರೋಪ ಪ್ರಕರಣ ಹಾಗೂ ದರ್ಶನ್, ಶಿವಣ್ಣ, ಧ್ರುವ ಸರ್ಜಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದಲ್ಲಿ ಮಡೆನೂರು ಮನು ಅವರನ್ನು ಕನ್ನಡ ಕಿರುತೆರೆ, ಹಿರಿ ತೆರೆ ಚಟುವಟಿಕೆಗಳಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬ್ಯಾನ್‌ ಮಾಡಿತ್ತು. ಇದೀಗ ಈ ನಿಷೇಧವನ್ನು ತೆರವು ಮಾಡಲಾಗಿದೆ.

Assault Case: ಗೋರಕ್ಷಣೆ ಮಾಡಿದ ಹಿಂದೂ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ

ಗೋರಕ್ಷಣೆ ಮಾಡಿದ ಹಿಂದೂ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ

Assault Case: ಐವರು ಶ್ರೀರಾಮ ಸೇನೆ ಕಾರ್ಯಕರ್ತರು ಎರಡು ದಿನಗಳ ಹಿಂದೆ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಣೆ ಮಾಡಿದ್ದರು. ನಂತರ ಇಂಗಳಿ ಗ್ರಾಮದ ಯುವಕರ ಗುಂಪೊಂದು, ಶ್ರೀರಾಮ ಸೇನೆ ಸಂಘಟನೆಯ ಐದು ಜನ ಕಾರ್ಯಕರ್ತರನ್ನು ತೆಂಗಿನ ಮರಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿದೆ.